ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vasudeva Kutumba Serial: ವಸುದೇವ ಕುಟುಂಬ ಧಾರಾವಾಹಿ ಹೇಗಿದೆ ಕೇಳಿದ ಅವಿನಾಶ್: ಮೊದಲ ಎಪಿಸೋಡ್ಗೆ ವೀಕ್ಷಕರು ಫಿದಾ

ಕಳೆದ ಸೋಮವಾರದಿಂದ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಾರಂಭವಾಗಿದೆ. ಇದೀಗ ಅವಿನಾಶ್ ಅವರು ವಿಡಿಯೋ ಮೂಲಕ ಧಾರಾವಾಹಿಯ ಮೊದಲ ಎಪಿಸೋಡ್ ಹೇಗಿತ್ತು?, ಕಮೆಂಟ್ ಮೂಲಕ ತಿಳಿಸಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ವೀಕ್ಷಕರು ಕಮೆಂಟ್ ಮಾಡಿದ್ದು, ಮೊದಲ ಎಪಿಸೋಡ್ ಅದ್ಭುತವಾಗಿ ಮೂಡಿಬಂದಿದೆ ಎಂದು ಕೊಂಡಾಡಿದ್ದಾರೆ.

Avinash Vasudeva Kutumba

ಸ್ಯಾಂಡಲ್​ವುಡ್​ನ ಖ್ಯಾತ ನಟ ಅವಿನಾಶ್ (Avinash) ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಬಹುಭಾಷಾ ನಟರಾಗಿರುವ ಅವಿನಾಶ್ 'ವಸುದೇವ ಕುಟುಂಬ' ಧಾರಾವಾಹಿಯಲ್ಲಿ ವಸುದೇವ ಎಂಬ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕೋರಮಂಗಲ ಟಾಕೀಸ್ ಸಂಸ್ಥೆಯಡಿ ಅನಿಲ್ ಕೋರಮಂಗಲ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿರುವ ಧಾರಾವಾಹಿಗೆ ಒಂದೇ ಬೇರು, ಕವಲು ನೂರು ಎಂಬ ಅರ್ಥಪೂರ್ಣ ಅಡಿಬರಹವಿದೆ.

ಅವಿನಾಶ್ ಅವರು ಈ ಧಾರಾವಾಹಿಯಲ್ಲಿ ಕುಟುಂಬದ ಯಜಮಾನ ವಸುದೇವ ಹಾಗೂ ಮುದ್ದಿನ ನಾಲ್ಕು ಹೆಣ್ಣು ಮಕ್ಕಳ ತಂದೆಯಾಗಿ ಅಭಿನಯಿಸುತ್ತಿದ್ದಾರೆ. ಪತ್ನಿಯಾಗಿ ಹಿರಿಯ ನಟಿ ಅಂಜಲಿ, ಪುತ್ರಿಯರಾಗಿ ಭಾವನಾ ಪಾಟೀಲ್, ಚೈತ್ರಾತೋಟದ್, ಬೃಂದಾ ಕಶ್ಯಪ್, ಆರಾಧ್ಯ ಇದ್ದಾರೆ. ಇವರೊಂದಿಗೆ ಹಂಸ, ಭಗತ್, ಆರ್.ಜಿ. ಅನೂಪ ಸೇರಿದಂತೆ ಅನೇಕ ಅನುಭವಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ವಸುದೇವನ ಕುಟುಂಬವು ಸಮಾಜದಲ್ಲಿ ಅಪಾರ ಪ್ರೀತಿ, ಗೌರವವನ್ನು ಪಡೆದಿರುತ್ತೆ. ಹಳ್ಳಿಯಲ್ಲಿ ಊರ ಹಬ್ಬದ ಸಡಗರ ಜೊತೆಗೆ ಹಿರಿಮಗಳ ಮದುವೆ ಸಿದ್ಧತೆಯು ವಿಜೃಂಭಣೆಯಿಂದ ಸಾಗುತ್ತಿರುತ್ತದೆ. ಆದರೆ ಸಂತೋಷದಿಂದ ತುಂಬಿದ್ದ ಈ ಕುಟುಂಬದಲ್ಲಿ ಆಕಸ್ಮಿಕವಾಗಿ ಸಂಭವಿಸುವಂತಹ ಆ ಒಂದು ದುರ್ಘಟನೆಯು ಎಲ್ಲರ ಜೀವನವನ್ನು ತಲೆಕೆಳಗಾಗಿಸುವಂತೆ ಮಾಡುತ್ತದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತದೆ ಈ ವಸುದೇವ ಕುಟುಂಬ.. ಈ ರೀತಿಯ ಕಥೆ ಇದರಲ್ಲಿದೆ.

ಕಳೆದ ಸೋಮವಾರದಿಂದ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಾರಂಭವಾಗಿದೆ. ಇದೀಗ ಅವಿನಾಶ್ ಅವರು ವಿಡಿಯೋ ಮೂಲಕ ಧಾರಾವಾಹಿಯ ಮೊದಲ ಎಪಿಸೋಡ್ ಹೇಗಿತ್ತು?, ಕಮೆಂಟ್ ಮೂಲಕ ತಿಳಿಸಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ವೀಕ್ಷಕರು ಕಮೆಂಟ್ ಮಾಡಿದ್ದು, ಮೊದಲ ಎಪಿಸೋಡ್ ಅದ್ಭುತವಾಗಿ ಮೂಡಿಬಂದಿದೆ ಎಂದು ಕೊಂಡಾಡಿದ್ದಾರೆ. ‘ಒಳ್ಳೆಯ ಕುಟುಂಬ ಸಮೇತ ನೋಡುವ ಧಾರಾವಾಹಿ. ಹೀರೋಯಿನ್ ನಟನೆ ಅದ್ಭುತ. ಇವರಿಗೆ ಸ್ಯೂಟ್ ಆಗುವ ಚೆನ್ನಾಗಿರುವ ಹೀರೋ ಬರಬೇಕು, ಅದಕ್ಕಾಗಿ ಕಾಯುತ್ತ ಇದ್ದೇವೆ. ಕುಮಾರ್ ಕ್ಯಾರೆಕ್ಟರ್ ಚೆನ್ನಾಗಿದೆ. ಮೇಘಾ ಜೋಡಿ ಅದ್ಭುತ’ ಎಂದು ಹಲವು ಕಮೆಂಟ್ ಮಾಡಿದ್ದಾರೆ.



ಅಂದಹಾಗೆ ಈ ಧಾರಾವಾಹಿಯಲ್ಲಿ ಅವಿನಾಶ್ ಅವರದ್ದು ಕ್ಯಾಮಿಯೋ ರೋಲ್‌ ಅಷ್ಟೇ. ಸುಮಾರು ಹದಿನೈದು ಎಪಿಸೋಡ್‌ ಇವರು ಇರುತ್ತಾರಷ್ಟೆ.

BBK 12 Contestant: ಬಿಗ್ ಬಾಸ್ ಸೀಸನ್ 12ರ 18 ಕಂಟೆಸ್ಟೆಂಟ್​ಗಳ ಹೆಸರು ಲೀಕ್?: ಇಲ್ಲಿದೆ ಪಟ್ಟಿ