ಬಿಗ್ ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಯಾವಾಗಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ನೀರಿನಲ್ಲಿ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿ 9 ದಿನಗಳ ಕಾಲ ಜೈಲುವಾಸ ಅನುಭವಿಸಿ ಹೊರಬಂದಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಟಾಕ್ನಲ್ಲಿದ್ದರು. ಸದ್ಯ ಡ್ರೋನ್ ಪ್ರತಾಪ್ ಕುರಿತ ಹೊಸ ವಿಚಾರ ಏನಂದ್ರೆ, ಇವರು ಕಿರುತೆರೆಯಲ್ಲಿ ಮತ್ತೆ ಮಿಂಚಿಲು ಸಜ್ಜಾಗಿದ್ದಾರೆ. ಝೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಇಂದಿನಿಂದ ಶುರುವಾಗಲಿದ್ದು, ಇದರಲ್ಲಿ ಡ್ರೋನ್ ಪ್ರತಾಪ್ ಕೂಡ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಪ್ರತಾಪ್ ತುಂಬಾನೇ ಡಿಫರೆಂಟ್ ಆಗಿ ಇಡೀ ಕರ್ನಾಟಕದ ಜನತೆಯ ಮನ ಗೆದ್ದರು. ದೊಡ್ಮನೆಯಲ್ಲಿ ಸದಾ ಜಗಳವಾಡುತ್ತಿದ್ದ ಕಂಟೆಸ್ಟೆಂಟ್‌ಗಳ ಮಧ್ಯೆ ಇವರು ಸೈಲೆಂಟ್ ಆಗಿ ಕಾಣಿಸಿಕೊಂಡು ಕೊನೆವರೆಗೂ ಇದ್ದು, ರನ್ನರ್ ಅಪ್ ಕೂಡ ಆಗಿದ್ದರು. ಆನಂತರ ಗಿಚ್ಚಿ ಗಿಲಿಗಿಲಿ ಸೀಸನ್ 3 ರಲ್ಲೂ ಪ್ರೇಕ್ಷಕರನ್ನು ರಂಜಿಸಿ ತಮ್ಮಲ್ಲಿರುವ ಕಾಮಿಡಿ ಆ್ಯಂಗಲ್ ಅನ್ನು ಪ್ರೇಕ್ಷಕರಿಗೆ ತೋರಿಸಿದ್ದರು. ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ಶೋಗೆ ಪ್ರತಾಪ್ ಭರ್ಜರಿ ಆಗಿ ಕಾಲಿಟ್ಟಿದ್ದಾರೆ.
ನಮಗೂ ಒಂದು ಕನ್ಯೆ ಇದ್ರೇ ಹೇಳಿ ಎಂದು ಸ್ಮಾರ್ಟ್ ಆಗಿ ಡ್ರೋನ್ ಮೇಲಿಂದ ವೇದಿಕೆಗೆ ಖದರ್ ಆಗಿ ಬಂದಿದ್ದಾರೆ. ಇನ್ನೂ, ಭರ್ಜರಿ ಬ್ಯಾಚುಲರ್ಸ್ ವೇದಿಕೆಗೆ ಡ್ರೋನ್ ಪ್ರತಾಪ್ ಬರುತ್ತಿದ್ದಂತೆ ಡಿಂಪಲ್ ಕ್ವೀನ್ಗೆ ಶಾಕ್ ಕೊಟ್ಟಿದ್ದಾರೆ. ಪ್ರತಾಪ್‌ಗೆ ನಟಿ ರಚಿತಾ ರಾಮ್ ಯಾರಾದ್ರೂ ಪ್ರಪೋಸ್ ಮಾಡಿದ್ದಾರಾ ಅಂತ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಡ್ರೋನ್, ಎರಡು ಮ್ಯಾರೇಜ್ ಪ್ರಪೋಸಲ್ ಬಂದಿದೆ ಎಂದಿದ್ದಾರೆ. ಇದೇ ಮಾತಿಗೆ ರಚಿತಾ ರಾಮ್ ಹಾಗೂ ಉಳಿದ ಸ್ಪರ್ಧಿಗಳು ಶಾಕ್ ಆಗಿದ್ದಾರೆ.
ಮುಂದುವರೆದು ನಿರೂಪಕ ನಿರಂಜನ್ ದೇಶಪಾಂಡೆ, ಪ್ರತಾಪ್ ಆ ಕಡೆ ಸುಂದಿಯರಿದ್ದಾರೆ, ಸ್ವಲ್ಪ ಆ ಕಡೆ ಹೋಗಿ ಅಂತಿದ್ದಂತೆ, ಸುಂದರಿಯರನ್ನು ನೋಡಿ ಪ್ರತಾಪ್ ನಾಚಿ ನೀರಾಗಿದ್ದಾರೆ. ಹೇಗೋ ಹರಸಾಹಸ ಮಾಡಿ ಡ್ರೋನ್ ಪ್ರತಾಪ್, ಭರ್ಜರಿ ಬ್ಯಾಚುಲರ್ಸ್ನ ಸುಂದರಿಯರ ಬಳಿ ಹೋಗಿ "ಮೇಡಂ" ಎಂದಾಗ, "ಇಲ್ಲಿ H2SO4 ಎಲ್ಲಾ ವರ್ಕ್ ಆಗುವುದಿಲ್ಲ. ಇಲ್ಲಿ ಏನಿದ್ದರೂ 143 ಅಷ್ಟೇ ವರ್ಕ್ ಆಗುವುದು" ಅಂತ ಪ್ರತಾಪ್‌ಗೆ ಗಗನ ಕಾಲೆಳೆದಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಕಾಣಲಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಜಡ್ಜ್ ಆಗಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಜೊತೆಗೆ ಈ ಶೋನಲ್ಲಿ ರಕ್ಷಕ್ ಬುಲೆಟ್ ಕೂಡ ಕಾಣಿಸಿಕೊಂಡಿದ್ದಾರೆ.
Anusha Rai: ಮಹಾ ಕುಂಭಮೇಳದಲ್ಲಿ ಅನುಷಾ ರೈ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಬಿಗ್ ಬಾಸ್ ಸ್ಪರ್ಧಿ