Anusha Rai: ಮಹಾ ಕುಂಭಮೇಳದಲ್ಲಿ ಅನುಷಾ ರೈ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಬಿಗ್ ಬಾಸ್ ಸ್ಪರ್ಧಿ
ಅನುಷಾ ರೈ ಮಹಾಕುಂಭ ಮೇಳಕ್ಕೆ ತೆರಳಿ ಸುದ್ದಿಯಲ್ಲಿದ್ದಾರೆ. ಹೌದು, ನಟಿ ಅನುಷಾ ರೈ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ.

Anusha Rai Mahakumbh

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳು ಶೋ ಮುಗಿದ ಬಳಿಕ ಸಖತ್ ಬ್ಯುಸಿಯಾಗಿದ್ದಾರೆ. ಕೆಲವರು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದರೆ ಇನ್ನೂ ಕೆಲವರು ಕೆಲ ಸಮಾರಂಭದಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ನಿಂದ ಎಲಿಮಿನೇಟ್ ಆದ ಬಳಿಕ ಅಷ್ಟೇನು ಸುದ್ದಿಯಲ್ಲಿರದ ಅನುಷಾ ರೈ ಇದೀಗ ಶೋ ಮುಗಿದ ಬಳಿಕ ಪ್ರತಿದಿನ ಟಾಕ್ನಲ್ಲಿದ್ದಾರೆ. ಇತ್ತೀಚೆಗಷ್ಟೆ ತ್ರಿವಿಕ್ರಮ್ ಜೊತೆ ಅನುಷಾ ರೈ ತಮ್ಮ ಹುಟ್ಟೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ರೋಡ್ ಶೋ ಮಾಡಿದ್ದರು. ಬಳಿಕ ಪ್ರಮೋದ್ ಹಾಗೂ ಪೃಥ್ವಿ ಅಂಬಾರ್ ನಟನೆಯ ಭುವನಂ ಗಗನಂ ಚಿತ್ರದ ಪ್ರಮೋಷನ್ನಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ಅನುಷಾ ರೈ ಮಹಾಕುಂಭ ಮೇಳಕ್ಕೆ ತೆರಳಿ ಸುದ್ದಿಯಲ್ಲಿದ್ದಾರೆ. ಹೌದು, ನಟಿ ಅನುಷಾ ರೈ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇದು ಕೊನೆಗೊಳ್ಳಲಿದ್ದು.ಹೀಗಾಗಿ ದೇಶ, ವಿದೇಶದಿಂದ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗಲು ಜನ ಪ್ರಯಾಗ್ ರಾಜ್ಗೆ ಆಗಮಿಸುತ್ತಿದ್ದಾರೆ.
ಅನೇಕ ಸೆಲೆಬ್ರಿಟಿಗಳು ಸಹ ಈಗಾಗಲೇ ಮಹಾಕುಂಭಕ್ಕೆ ಬಂದು ಪುಣ್ಯ ಸ್ನಾನ ಮಾಡಿದ್ದಾರೆ. ಈ ಹಿಂದೆ ನಟಿ, ನಿರೂಪಕಿ ಅನುಶ್ರೀ, ರಾಜ್ ಬಿ ಶೆಟ್ಟಿ, ಕಿರಣ್ ರಾಜ್, ಶ್ರೀನಿಧಿ ಶೆಟ್ಟಿ, ಕಾರುಣ್ಯಾ ರಾಮ್, ಸೇರಿ ಕನ್ನಡದ ಹಲವು ನಟ ನಟಿಯರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಇದೀಗ ನಟಿ ಅನುಷಾ ರೈ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪುಣ್ಯ ಸ್ನಾನ ಮಾಡಿದ್ದಾರೆ. ಈ ಕುರಿತು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
‘‘ಆ ವಿಡಿಯೋ ಜೊತೆಗೆ ಪ್ರಯಾಗ್ ರಾಜ್ನ ಮಹಾ ಕುಂಭಮೇಳ ನೋಡುತ್ತಲೇ ಹಾಕಿತ್ತು ಹೃದಯ ತಾಳ. ಗಂಗಾ ಯಮುನಾ ಸರಸ್ವತಿಯ ತ್ರಿವೇಣಿ ಸಂಗಮ ಒಮ್ಮೆ ಮುಳುಗೆದ್ದರೆ ಮನದಲ್ಲಿ ಮಹಾ ಸಂಭ್ರಮ, ಜೊತೆಯಲ್ಲಿ ಕೋಟ್ಯಾಂತರ ಭಕ್ತರ ಸಮಾಗಮ. ಬೆಳಗಲಿ ನಮ್ಮ ಹಿಂದೂ ಧರ್ಮ, ಕಳೆಯಲಿ ಎಲ್ಲ ಪಾಪ ಕರ್ಮ, ಕಡೆಗೂ ಆಯ್ತು ಪುಣ್ಯ ಸ್ನಾನ, ಎದೆಯಲ್ಲಿ ಸದಾ ಶಿವನದ್ದೇ ಧ್ಯಾನ’’ ಎಂದು ಬರೆದುಕೊಂಡಿದ್ದಾರೆ.
ದೋಣಿಯಲ್ಲಿ ಕುಳಿತು ತ್ರೀವೇಣಿ ಸಂಗಮಕ್ಕೆ ತೆರಳಿ ನೀರಿನಲ್ಲಿ ಮುಳುಗಿ ಎದ್ದಿದ್ದಾರೆ ಅನುಷಾ. ಇದೊಂದು ಮಹಾ ಸಂಭ್ರಮ ಎಂದು ಸಹ ಹೇಳಿದ್ದಾರೆ. ನಟಿಯ ವಿಡಿಯೋ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಮಹಾ ಕುಂಭಮೇಳ ಜನವರಿ 13ರಂದು ಆರಂಭಗೊಂಡಿತ್ತು. ಫೆಬ್ರವರಿ 3 ರಂದು ಕೊನೆಯ ಅಮೃತ ಸ್ನಾನ ನಡೆದಿತ್ತು. ಇದೀಗ ಮಹಾ ಕುಂಭಮೇಳದ ಕೊನೆಯ ಪುಣ್ಯ ಸ್ನಾನ ಫೆಬ್ರವರಿ 26ರಂದು ಮಹಾಶಿವರಾತ್ರಿಯಂದು ನಡೆಯಲಿದೆ.
Bhagya Lakshmi Serial: ತನ್ವಿಗೆ ಐಫೋನ್ ಗಿಫ್ಟ್ ಕೊಟ್ಟ ತಾಂಡವ್, ಭಾಗ್ಯಾಳ ಗಿಫ್ಟ್ಗೆ ಬೆಲೆಯೇ ಇಲ್ಲ