ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯದ ಬಳಿಕ ರಜತ್ ಕಿಶನ್ ಹೆಚ್ಚಾಗಿ ಸುದ್ದಿಯಲ್ಲಿದ್ದಾರೆ. ಒಂದಲ್ಲ ಒಂದು ವಿಚಾರದ ಮೂಲಕ ಇವರು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಬಾಯ್ಸ್ Vs ಗರ್ಲ್ಸ್ ರಿಯಾಲಿಟಿ ಶೋನಲ್ಲೂ ಇವರು ಮಿಂಚುತ್ತಿದ್ದಾರೆ. ಇವರ ಪಂಚಿಂಗ್ ಡೈಲಾಗ್ಗೆಂದೇ ಅಭಿಮಾನಿ ಬಳಗ ಹುಟ್ಟುಕೊಂಡಿದೆ. ಮೊನ್ನೆಯಷ್ಟೆ ಇವರು ಶರ್ಟ್ ಮೇಲೆ ಡಿ ಬಾಸ್ ಎಂದು ಬರೆದು ಲಾಂಗ್ ಹಿಡಿದು ರೀಲ್ಸ್ ಮಾಡಿದ್ದು ವೈರಲ್ ಆಗಿತ್ತು. ಇದೀಗ ರಜತ್ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಭರ್ಜರಿ ಆಗಿ ಆಚರಿಸಿ ಸುದ್ದಿಯಲ್ಲಿದ್ದಾರೆ.
ರಜತ್ ಕಿಶನ್ ಅವರು ಪತ್ನಿ ಅಕ್ಷಿತಾ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಭಾಗಿಯಾಗಿ ಅಕ್ಷಿತಾಗೆ ಶುಭಕೋರಿದ್ದಾರೆ. ಬರ್ತ್‌ಡೇ ಪಾರ್ಟಿಗೆ ಭವ್ಯಾ ಗೌಡ, ವಿನಯ್ ಗೌಡ, ಮೋಕ್ಷಿತಾ ಪೈ, ಧನರಾಜ್ ಆಚಾರ್, ಶಿಶಿರ್ ಶಾಸ್ತ್ರಿ, ಉಗ್ರಂ ಮಂಜು, ನಿವೇದಿತಾ ಗೌಡ ಹಾಜರಾಗಿ ಅಕ್ಷಿತಾಗೆ ವಿಶಸ್ ತಿಳಿಸಿದರು. ಈ ಬರ್ತ್ ಡೇ ಪಾರ್ಟಿಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಹುಟ್ಟುಹಬ್ಬದ ಪ್ರಯುಕ್ತ ರಜತ್ ಕಿಶನ್ ತಮ್ಮ ಪತ್ನಿ ಅಕ್ಷಿತಾಗೆ ಸರ್ಪ್ರೈಸ್ ಕೂಡ ಕೊಟ್ಟಿದ್ದಾರೆ. ಸದಾ ತಮ್ಮ ಪತ್ನಿಗೆ ಸಿಐಡಿ ಎಂದು ಕರೆಯುವ ರಜತ್, ಅದೇ ಥೀಮ್‌ನಲ್ಲೇ ಬರ್ತ್‌ಡೇ ಆಯೋಜಿಸಿ ಸಖತ್ ಆಗಿ ಸರ್ಪ್ರೈಸ್ ಕೊಟ್ಟಿದ್ದಾರೆ. ಪತ್ನಿಗಾಗಿ ಸಿಐಡಿ ಎಂದು ಬರೆದಿರುವ ಕೇಕ್ ರೆಡಿ ಮಾಡಿಸಿದ್ದರು ರಜತ್ ಕಿಶನ್.
ಬಿಗ್ ಬಾಸ್ ಕನ್ನಡ 11 ರಲ್ಲಿ ಯಾರೂ ಊಹಿಸದಂತೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ರಜತ್ ಇತರೆ ಸ್ಪರ್ಧಿಗಳಿಗೆ ಸಖತ್ ಆಗಿ ಠಕ್ಕರ್ ಕೊಟ್ಟಿದ್ದರು. ವೈಲ್ಡ್ ಕಾರ್ಡ್ ಮೂಲಕ ಬಂದರೂ ಫಿನಾಲೆಯಲ್ಲಿ 2ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಸದ್ಯ ಇವರು ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಸ್ಪರ್ಧಿಯಾಗಿದ್ದು, ಸಖತ್ ಮನರಂಜನೆ ನೀಡುತ್ತಿದ್ದಾರೆ.
Karna Serial: ಭವ್ಯಾ, ಮೋಕ್ಷಿತಾ, ರಂಜನಿಯೂ ಅಲ್ಲ: ಕಿರಣ್ ರಾಜ್ ಕರ್ಣ ಧಾರಾವಾಹಿಯ ನಾಯಕಿ ಯಾರು..?