ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಮೊದಲ ವಾರವೇ ಬಿಗ್ ಬಾಸ್ ಮನೆಯಲ್ಲಿ 8 ಮಂದಿ ನಾಮಿನೇಟ್: ಯಾರೆಲ್ಲ?

BBK 12 Nomination: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಮಲ್ಲಮ್ಮ, ಧನುಷ್, ಕಾಕ್ರೋಚ್ ಸುಧಿ ಹಾಗೂ ಚಂದ್ರಪ್ರಭ-ಸತೀಶ್ ಮೊದಲ ಫೀನಾಲೆ ಕಂಟೆಂಡರ್ ಆಗಿದ್ದಾರೆ. ಇದರ ಮಧ್ಯೆ ಮನೆಯಲ್ಲಿ ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಒಟ್ಟು 8 ಮಂದು ನಾಮಿನೇಟ್ ಆಗಿದ್ದಾರೆ.

BBK 12 Nomination

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಮೊದಲ ವಾರದಲ್ಲೇ ಕಾವೇರಿದೆ. ಬಿಗ್ ಬಾಸ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತ ಸ್ಪರ್ಧಿಗಳಿಗೆ ಪ್ರತಿದಿನ ನಡುಕ ಹುಟ್ಟಿಸುತ್ತಿದ್ದಾರೆ. ಈಗಾಗಲೇ ಮೂರನೇ ವಾರದಲ್ಲೇ ಮೊದಲ ಫಿನಾಲೆ ನಡೆಯಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಸ್ಪರ್ಧಿಗಳು ಪೈಪೋಟಿಗೆ ಬಿದ್ದಂತೆ ಸೇವ್ ಆಗಲು ಆಡುತ್ತಿದ್ದಾರೆ. ಸದ್ಯ ಮಲ್ಲಮ್ಮ, ಧನುಷ್, ಕಾಕ್ರೋಚ್ ಸುಧಿ ಹಾಗೂ ಚಂದ್ರಪ್ರಭ-ಸತೀಶ್ ಫೀನಾಲೆ ಕಂಟೆಂಡರ್ ಆಗಿದ್ದಾರೆ. ಇದರ ಮಧ್ಯೆ ಮನೆಯಲ್ಲಿ ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಒಟ್ಟು 8 ಮಂದು ನಾಮಿನೇಟ್ ಆಗಿದ್ದಾರೆ.

ನಾಮಿನೇಷನ್​ನಲ್ಲಿ ಈ ವಾರದ ಟಾರ್ಗೆಟ್ ಧನುಷ್ ಹಾಗೂ ಕಾಕ್ರೋಚ್ ಸುಧಿ ಆಗಿದ್ದರು. ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟಾಸ್ಕ್ ಮಧ್ಯೆ ಜಗಳ, ಏರು ಧ್ವನಿಯಲ್ಲಿ ಮಾತನಾಡಿದ್ದು ಇವರಿಬ್ಬರಿಗೆ ಮುಳುವಾಗಿ ಪರಿಣಮಿಸಿದೆ. ಹೀಗಾಗಿ ಚಂದ್ರಪ್ರಭ ಧನುಷ್ ಅವರನ್ನು ನಾಮಿನೇಟ್ ಮಾಡಿದರು. ನಾನು ಧನು ಅವರ ಹೆಸರು ತೆಗೆದುಕೊಳ್ಳುತ್ತೇನೆ ಎಂದು ಚಂದ್ರಪ್ರಭ ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಅವರು, ಅವರಿಗೆ ಅವರೇ ಹೀರೋ ಅಂತ ಅಂದುಕೊಂಡುಬಿಟ್ಟಿದ್ದಾರೆ ಎಂದು ಹೇಳಿದರು. ಅಲ್ಲದೆ ಇವರಿಬ್ಬರ ಮಧ್ಯೆ ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಜಗಳ ನಡೆದಿದೆ. ಬೆರಳು ಎಲ್ಲ ತೋರಿಸಿಕೊಂಡು ಮಾತಾಡೋದು ಬೇಡ ಎಂದು ಚಂದ್ರಪ್ರಭ ಹೇಳಿದ್ದಾರೆ.

ಇನ್ನು ಜಾನ್ವಿ ಅವರು ಕಾಕ್ರೋಚ್ ಸುಧಿ ಅವರನ್ನು ನಾಮಿನೇಟ್ ಮಾಡಿದ್ದಾರೆ. ಅವರು ತಮ್ಮ ನಿರ್ಧಾರಕ್ಕೆ ಸ್ಟಿಕ್-ಆನ್ ಆಗಿರಲ್ಲ ಎಂಬ ಕಾರಣ ನೀಡಿದ್ದಾರೆ. ಆದರೆ, ಸುಧಿ ನಾಮಿನೇಷನ್​ನಿಂದ ಬಚಾವ್ ಆದರು. ಅತ್ತ ಜಂಟಿಗಳ ತಂಡದಿಂದ ಆರ್​ಜೆ ಅಮಿತ್, ಬಾಡಿ ಬಿಲ್ಡರ್ ಕರಿಬಸಪ್ಪ, ಕಾವ್ಯಾ ಶೈವ, ಗಿಲ್ಲಿ ನಟ, ಅಶ್ವಿನಿ, ಅಭಿಷೇಕ್ ಅವರನ್ನು ನಾಮಿನೇಟ್ ಮಾಡಲಾಗಿದೆ. ಆರ್ಜೆ ಅಮಿತ್ ಮತ್ತು ಕರಿಬಸಪ್ಪ ಅವರು ಎಲ್ಲರ ಜೊತೆ ಹೆಚ್ಚು ಬೆರೆಯುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ನಾಮಿನೇಟ್ ಮಾಡಲಾಗಿದೆ. ಪದೇಪದೇ ನಿಯಮ ಉಲ್ಲಂಘನೆ ಮಾಡಿದ್ದರಿಂದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರು ನಾಮಿನೇಟ್ ಆಗಿದ್ದಾರೆ.

ಮಲ್ಲಮ್ಮ ಅವರು ಕೂಡ ನಾಮಿನೇಟ್ ಆಗಿದ್ದಾರೆ. ಮಂಜು ಭಾಷಿಣಿ ಅವರು ಮಲ್ಲಮ್ಮನ ಹೆಸರು ತೆಗೆದುಕೊಂಡು, ಇವರು ತುಂಬ ಮುಗ್ಧರಾಗಿದ್ದು, ಮುಂದಿನ ದಿನಗಳಲ್ಲಿ ಪೈಪೋಟಿ ಹೆಚ್ಚಿದಾಗ ಅವರು ಈ ಆಟಕ್ಕೆ ಹೊಂದಿಕೊಳ್ಳುವುದು ಕಷ್ಟ ಆಗಬಹುದು ಎಂಬ ಕಾರಣಕ್ಕೆ ನಾಮಿನೇಟ್ ಮಾಡಿದರು.



ಸದ್ಯ ಮೊದಲ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಧನುಷ್, ಮಲ್ಲಮ್ಮ, ಆರ್​ಜೆ ಅಮಿತ್, ಕರಿಬಸಪ್ಪ, ಕಾವ್ಯಾ ಶೈವ, ಗಿಲ್ಲಿ ನಟ, ಅಶ್ವಿನಿ, ಅಭಿಷೇಕ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಮನೆಯಿಂದ ಹೊರಹೋಗುತ್ತಾರೆ?, ಒಂದು ಎಲಿಮಿನೇಷನ್ ಇದೆಯಾ ಅಥವಾ ಬಿಗ್ ಬಾಸ್ ಹೇಳಿದಂತೆ ಗ್ರೂಪ್ ಎಲಿಮಿನೇಷನ್ ಇದೆಯಾ? ಎಂಬುದು ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ತಿಳಿಯಬೇಕಿದೆ.

BBK 12: ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಬೆಂಕಿ: ಧನುಷ್ ಟಾರ್ಗೆಟ್?