BBK 12: ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಮಲ್ಲಮ್ಮ: ಯಾರಿವರು?, ಹಿನ್ನಲೆ ಏನು?
ಹಳ್ಳಿಯಿಂದ ಬಿಗ್ ಮನೆಗೆ ಸ್ಪರ್ಧಿಯಾಗಿ ಸೋಶಿಯಲ್ ಮೀಡಿಯಾದ ವೈರಲ್ ಸ್ಟಾರ್ ಮಲ್ಲಮ್ಮ ಪ್ರವೇಶಿಸಿದ್ದಾರೆ. ಮಾತಿನ ಮಲ್ಲಿ ಎಂದೇ ಫೇಮಸ್ ಆಗಿರುವ ಮಲ್ಲಮ್ಮ ಉತ್ತರ ಕರ್ನಾಟಕದವರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಫ್ಯಾಶನ್ ಡಿಸೈನ್ ಶಾಪ್‌ನಲ್ಲಿ ಸಹಾಯಕಿಯಾಗಿ ಮಲ್ಲಮ್ಮ ಕೆಲಸ ಮಾಡುತ್ತಾರೆ.

Bigg Boss Mallamma -

ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಶುರುವಾಗಿದ್ದು, ದೊಡ್ಮನೆಯೊಳಗೆ ಸ್ಪರ್ಧಿಗಳು ಒಬ್ಬೊಬ್ಬರಾಗಿ ಕಾಲಿಡುತ್ತಿದ್ದಾರೆ. ಕಿಚ್ಚ ಸುದೀಪ್ ಪ್ರತಿ ಸ್ಪರ್ಧಿಯನ್ನು ಸ್ಟೇಜ್ಗೆ ಕರೆಸಿ ವೆಲ್ಕಂ ಮಾಡಿ ಮನೆಯೊಳಗೆ ಕಳುಹಿಸುತ್ತಿದ್ದಾರೆ. ಇದೀಗ ಮತ್ತೋರ್ವ ಕಂಟೆಸ್ಟೆಂಟ್ ಆಗಿ ಮಲ್ಲಮ್ಮ ಎಂಟ್ರಿ ಕೊಟ್ಟಿದ್ದಾರೆ. ಹಾಗಾದರೆ ಯಾರು ಈ ಮಲ್ಲಮ್ಮ, ಇವರ ಹಿನ್ನಲೆ ಏನು?, ಇಲ್ಲಿದೆ ನೋಡಿ ಮಾಹಿತಿ.
ಹಳ್ಳಿಯಿಂದ ಬಿಗ್ ಮನೆಗೆ ಮೂರನೇ ಸ್ಪರ್ಧಿಯಾಗಿ ಸೋಶಿಯಲ್ ಮೀಡಿಯಾದ ವೈರಲ್ ಸ್ಟಾರ್ ಮಲ್ಲಮ್ಮ ಪ್ರವೇಶಿಸಿದ್ದಾರೆ. ಮಾತಿನ ಮಲ್ಲಿ ಎಂದೇ ಫೇಮಸ್ ಆಗಿರುವ ಮಲ್ಲಮ್ಮ ಉತ್ತರ ಕರ್ನಾಟಕದವರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಫ್ಯಾಶನ್ ಡಿಸೈನ್ ಶಾಪ್‌ನಲ್ಲಿ ಸಹಾಯಕಿಯಾಗಿ ಮಲ್ಲಮ್ಮ ಕೆಲಸ ಮಾಡುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಇವರು, ರೀಲ್ಸ್ ಮೂಲಕ ಇನ್ನೊಸೆಂಟ್ ಇನ್‌ಫ್ಲುಯೆನ್ಸರ್ ಎಂದು ಫೇಮಸ್. ತಮ್ಮ ಸರಳ ಜೀವನಶೈಲಿ, ಹಾಸ್ಯಮಯ ರೀಲ್ಸ್ ಮತ್ತು ಹಳ್ಳಿ ಸಂಸ್ಕೃತಿಯನ್ನ ಪ್ರತಿಬಿಂಬಿಸುವ ವಿಡಿಯೋಗಳ ಮೂಲಕ ಫೇಮಸ್ ಆಗಿದ್ದಾರೆ. ಸದ್ಯ ಇನ್‌ಸ್ಟಾಗ್ರಾಂನಲ್ಲಿ ಮಲ್ಲಮ್ಮ ಅವರು 170ಕೆ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.