Bhagya Lakshmi Serial: ಭಾಗ್ಯಾಗೆ ಇನ್ನೂ ಸಿಕ್ಕಿಲ್ಲ ಫುಡ್ ಲೈಸನ್ಸ್: ಕನ್ನಿಕಾ ಪ್ಲ್ಯಾನ್ ವರ್ಕ್ ಆಯ್ತಾ?
ಭಾಗ್ಯ ಫುಡ್ ಲೈಸನ್ಸ್ಗೆ ಅರ್ಜಿ ಸಲ್ಲಿಸಿ ಮನೆಗೆ ಹಿಂತಿರುಗಿದ್ದಾಳೆ. ಮನೆಯವರೆಲ್ಲ ನಾಳೆ ಲೈಸನ್ಸ್ ಸಿಕ್ಕೇ ಸಿಗುತ್ತೆ ಎಂಬ ಭರವಸೆಯಲ್ಲಿದ್ದಾರೆ. ಭಾಗ್ಯ ತಂಗಿ, ನಮ್ಮ ಅಕ್ಕ ಮಾಡಿದ ಅಡುಗೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ ಎಂದು ಕಾನ್ಫಿಡೆನ್ಸ್ನಲ್ಲಿ ಇರುತ್ತಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಳ ಹಾದಿಗೆ ಕನ್ನಿಕಾ ಮತ್ತೊಮ್ಮೆ ಕಂಟಕವಾಗಿ ಬಂದಿದ್ದಾಳೆ. ಭಾಗ್ಯಾಳ ಕನಸಿವ ಫುಡ್ ಬ್ಯುಸಿಸೆನ್ ಕೈ ತುತ್ತು ಈಗ ಸ್ಟಾಪ್ ಆಗಿದೆ. ತಾಂಡವ್-ಶ್ರೇಷ್ಠಾ ಜೊತೆಗೆ ಭಾಗ್ಯಾಳ ಫುಡ್ ಬ್ಯುಸಿನೆಸ್ ಮುಗಿಸಲು ಕನ್ನಿಕಾ ಮಾಡಿದ ಮಾಸ್ಟರ್ ಪ್ಲ್ಯಾನ್ ಈ ಬಾರಿ ವರ್ಕ್ ಆದಂತೆ ಕಾಣುತ್ತಿದೆ. ಭಾಗ್ಯಾಳನ್ನು ಸೋಲಿಸಲು ಈ ಮೂವರು ಸೇರಿ ಮಾಡಿದ ಮಾಸ್ಟರ್ ಪ್ಲ್ಯಾನ್ಗೆ ಭಾಗ್ಯ ಬಲಿಯಾಗಿದ್ದಾಳೆ. ಸದ್ಯ ಭಾಗ್ಯ ಫುಡ್ ಬ್ಯುಸಿನೆಸ್ ಮುಂದುವರೆಸಲು ಲೈಸನ್ಸ್ಗೋಸ್ಕರ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾಗ್ಯಾಳನ್ನು ಹೇಗಾದರು ಮಾಡಿ ಸೋಲಿಸಬೇಕೆಂದು ತಾಂಡವ್-ಶ್ರೇಷ್ಠಾ ಇಬ್ಬರೂ ಪಣತೊಟ್ಟಿದ್ದರು. ಒಂದು ಪ್ಲ್ಯಾನ್ ಫ್ಲಾಫ್ ಆದ ಬೆನ್ನಲ್ಲೇ ಮತ್ತೊಂದು ದೊಡ್ಡ ಪ್ಲ್ಯಾನ್ ಮಾಡಿದ್ದಾರೆ. ಹೋಟೆಲ್ ಒಂದರಲ್ಲಿ ಶ್ರೇಷ್ಠಾ-ತಾಂಡವ್ ಹಾಗೂ ಕನ್ನಿಕಾ ಭೇಟಿ ಆಗಿದ್ದಾರೆ. ಇಲ್ಲಿ ಭಾಗ್ಯಾಳ ಬ್ಯುಸಿನೆಸ್ ನಡಿಬಾರದು, ಅವಳು ಬೀದಿಗೆ ಬರಬೇಕು.. ಅದಕ್ಕೆ ನಾನು ವ್ಯವಸ್ಥೆ ಮಾಡ್ತೇನೆ.. ಇನ್ಮುಂದೆ ಭಾಗ್ಯ ಫುಡ್ ಬ್ಯುಸಿನೆಸ್ ನಡಿಯಲ್ಲ ಎಂದು ಕನ್ನಿಕಾ ಹೇಳುತ್ತಾಳೆ.
ಕನ್ನಿಕಾಳ ಆದೇಶದಂತೆ ಆಹಾರ ಇಲಾಖೆಯ ಅಧಿಕಾರಿಗಳು ಬಂದು ಭಾಗ್ಯಳ ಮನೆ ಬಾಗಿಲು ಬಡಿದಿದ್ದಾರೆ. ನಾವು ಫುಡ್ ಇನ್ಸ್‌ಪೆಕ್ಟರ್, ನೀವು ಲೈಸನ್ಸ್ ಇಲ್ಲದೇ ಊಟ ತಯಾರಿಸಿ ಕೊಡುತ್ತಿದ್ದೀರಿ, ಇದಕ್ಕೆಲ್ಲಾ ಅನುಮತಿ ಪಡೆದುಕೊಳ್ಳಬೇಕು, ಇಲ್ಲವಾದರೆ ಊಟದ ಸರ್ವಿಸ್ ನೀಡುವ ಹಾಗಿಲ್ಲ ಎಂದು ಹೇಳಿ, ಇನ್ನು ಮುಂದೆ ಹೀಗೆ ಮಾಡುವಂತಿಲ್ಲ ಎಂದು ಹೇಳಿ ಭಾಗ್ಯ ತಯಾರಿಸಿದ್ದ ಅಡುಗೆಯನ್ನು ಸೀಜ್ ಮಾಡಿ ಕ್ವಾಲಿಟಿ ಚೆಕ್ ಮಾಡಬೇಕು ಎಂದು ಅಲ್ಲಿಂದ ಫುಡ್ ತೆಗೆದುಕೊಂಡು ಹೋಗಿದ್ದಾರೆ.
ಅವರು ಹೋದ ಬೆನ್ನಲ್ಲೇ ಭಾಗ್ಯ ಮನೆಯಲ್ಲಿ ಊಟ ತಯಾರಿಸಿ, ಅದನ್ನು ಫುಡ್ ಇನ್ಸ್‌ಪೆಕ್ಟರ್ ಬಳಿ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾಳೆ. ಅಲ್ಲಿ ಅವಳು ಹೋದಾಗ, ಮನೆಯಲ್ಲಿ ಸೀಜ್ ಮಾಡಿಕೊಂಡು ಅಧಿಕಾರಿಗಳು ತೆಗೆದುಕೊಂಡು ಬಂದಿದ್ದ ಊಟದ ಡಬ್ಬಿಯನ್ನು ಅಲ್ಲಿನ ಸಿಬ್ಬಂದಿ ಸವಿಯುತ್ತಿರುವುದು ಕಾಣಿಸುತ್ತದೆ. ಭಾಗ್ಯಳ ಊಟವನ್ನು ಅಲ್ಲಿನ ಸಿಬ್ಬಂದಿ ಬಾಯಿತುಂಬಾ ತಿಂದು ಹೊಗಳುತ್ತಾರೆ. ಇದನ್ನು ಪರೀಕ್ಷೆ ಮಾಡದೆಯೇ ಲೈಸನ್ಸ್ ಕೊಡಬಹುದು, ಈ ಊಟದಲ್ಲಿ ಯಾವುದೇ ತಪ್ಪಾಗಿಲ್ಲ ಎಂದು ಹೇಳುತ್ತಾರೆ.
ಆಗ ಅಧಿಕಾರಿ ಕೋಪದಿಂದ, ನನ್ನ ಕೆಲಸ ನೀವು ಮಾಡುವುದು ಬೇಡ, ನನಗೆ ಬುದ್ದಿ ಹೇಳುವುದು ಕೂಡ ಬೇಡ, ನಿಮ್ಮ ಕೆಲಸ ನೀವು ಮಾಡಿ ಎಂದು ಗದರುತ್ತಾನೆ. ಅಲ್ಲದೆ, ಭಾಗ್ಯ ಕೊಟ್ಟ ಊಟದ ಡಬ್ಬವನ್ನು ಇವತ್ತು ಹಾಗೇ ಉಳಿಸಿಕೊಂಡಿರಿ, ಪರೀಕ್ಷೆಗೆ ಕಳುಹಿಸಬೇಡಿ, ನಾಳೆ ಕೊಡೋಣ ಆಗ ಅದು ಹಾಳಾಗಿರುತ್ತದೆ, ರಿಪೋರ್ಟ್ ಚೆನ್ನಾಗಿಲ್ಲ ಎಂದು ಬರುತ್ತೆ.. ಅದರಿಂದ ಲೈಸನ್ಸ್ ಸಿಗುವುದಿಲ್ಲ, ನನಗೂ ಅದೇ ಬೇಕಾಗಿರುವುದು ಎಂದು ಹೇಳುತ್ತಾನೆ.
ಮತ್ತೊಂದೆಡೆ ಭಾಗ್ಯ ಫುಡ್ ಲೈಸನ್ಸ್ಗೆ ಅರ್ಜಿ ಸಲ್ಲಿಸಿ ಮನೆಗೆ ಹಿಂತಿರುಗಿದ್ದಾಳೆ. ಮನೆಯವರೆಲ್ಲ ನಾಳೆ ಲೈಸನ್ಸ್ ಸಿಕ್ಕೇ ಸಿಗುತ್ತೆ ಎಂಬ ಭರವಸೆಯಲ್ಲಿದ್ದಾರೆ. ಭಾಗ್ಯ ತಂಗಿ, ನಮ್ಮ ಅಕ್ಕ ಮಾಡಿದ ಅಡುಗೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ ಎಂದು ಕಾನ್ಫಿಡೆನ್ಸ್ನಲ್ಲಿ ಇರುತ್ತಾಳೆ. ಆದರೆ, ಅತ್ತ ಕನ್ನಿಕಾ ಲೈಸನ್ಸ್ ಸಿಗಬಾರದು ಎಂದು ಪಣ ತೊಟ್ಟಿದ್ದಾಳೆ. ಸದ್ಯ ಭಾಗ್ಯಾಘೆ ಫುಡ್ ಲೈಸನ್ಸ್ ಸಿಗುತ್ತ?, ಸಿಕ್ಕಲ್ಲ ಅಂದ್ರೆ ಏನು ಮಾಡ್ತಾಳೆ?, ಈ ಬ್ಯುಸಿನೆಸ್ ಬಿಟ್ಟು ಮನೆಯ ಸಾಲ, ಮಕ್ಕಳ ಫೀಸ್ ಕಟ್ಟಲು ಇನ್ನೇನು ಕೆಲಸ ಮಾಡುತ್ತಾಳೆ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Bhavya Gowda: ಕರ್ಣ ಧಾರಾವಾಹಿ ಶೂಟಿಂಗ್ ಮಧ್ಯೆ ಥೈಲ್ಯಾಂಡ್ ತೆರಳಿದ ಭವ್ಯಾ ಗೌಡ: ಫೋಟೋ ವೈರಲ್