ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಮನೆಗೆ ಬಂದ ಕನ್ನಿಕಾಳ ಮೈಚಳಿ ಬಿಡಿಸಿದ ಭಾಗ್ಯ

ಭಾಗ್ಯ ಮನೆಗೆ ಕನ್ನಿಕಾಳ ಎಂಟ್ರಿ ಆಗಿದೆ. ಬಂದು ಸೋಫಾ ಮೇಲೆ ಕುಳಿತು, ಹೇಗಿದ್ದೀಯಾ ಭಾಗ್ಯ, ತುಂಬಾ ಸಮಯವಾಯಿತು, ನಿನ್ನನ್ನು ನೋಡಿಕೊಂಡು ಹೋಗೋಣ ಎಂದು ಬಂದೆ.. ಏನೋ ಲೈಸನ್ಸ್ ಇಲ್ಲ ಅಂತ ಪ್ರಾಬ್ಲಂ ಆಯಿತಂತೆ.. ಸರಿ ಆಯ್ತಾ? ಎಂದು ಹೀಯಾಳಿಸುತ್ತ ಕೇಳಿದ್ದಾಳೆ.

ಮನೆಗೆ ಬಂದ ಕನ್ನಿಕಾಳ ಮೈಚಳಿ ಬಿಡಿಸಿದ ಭಾಗ್ಯ

Bhagya Lakshmi Serial

Profile Vinay Bhat Apr 18, 2025 11:59 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Serial) ಭಾಗ್ಯಾಳಿಗೆ ಪ್ರತಿದಿನ ಒಂದಲ್ಲ ಒಂದು ಕಷ್ಟ ಬರುತ್ತದೆ. ಹೇಗಾದರೂ ಮಾಡಿ ಮನೆಯ ಸಾಲವನ್ನು ತೀರಿಸಬೇಕು, ಎಲ್ಲವನ್ನು ಎದುರಿಸಬೇಕು ಎಂದು ಅವಳು ನಿತ್ಯವೂ ಕಷ್ಟಪಡುತ್ತಿದ್ದಾಳೆ. ಮಾಜಿ ಪತಿ ತಾಂಡವ್‌, ಕನ್ನಿಕಾ, ಶ್ರೇಷ್ಠಾಳಿಂದ ನಿತ್ಯವೂ ಕಷ್ಟ ಎದುರಾಗುತ್ತಲಿದೆ. ಇವರಿಗೆಲ್ಲ ಸೆಡ್ಡು ಹೊಡೆದು ಭಾಗ್ಯ ಮುಂದೆ ಸಾಗುತ್ತಲೇ ಇದ್ದಾಳೆ. ಈಗ ಹೊಸ ಸಂಕಷ್ಟ ಭಾಗ್ಯಾಗೆ ಬಂದೊದಗಿದ್ದು, ಇದರಿಂದ ಹೇಗೆ ಪಾರಾಗುತ್ತಾಳೆ ಎಂಬುದು ರೋಚಕತೆ ಸೃಷ್ಟಿಸಿದೆ.

ಸದ್ಯ ಭರ್ಜರಿ ಯಶಸ್ವಿಯಾಗಿ ನಡೆಯುತ್ತಿದ್ದ ಭಾಗ್ಯಾಳ ಫುಡ್ ಬ್ಯುಸಿನೆಸ್ ಕೈ ತುತ್ತು ಬಂದ್ ಆಗಿದೆ. ತಾಂಡವ್-ಶ್ರೇಷ್ಠಾ ಜೊತೆಗೆ ಭಾಗ್ಯಾಳ ಫುಡ್ ಬ್ಯುಸಿನೆಸ್ ಮುಗಿಸಲು ಕನ್ನಿಕಾ ಮಾಡಿದ ಮಾಸ್ಟರ್ ಪ್ಲ್ಯಾನ್ ಈ ಬಾರಿ ವರ್ಕ್ ಆಗಿದೆ. ಕನ್ನಿಕಾಳ ಆದೇಶದಂತೆ ಆಹಾರ ಇಲಾಖೆಯ ಅಧಿಕಾರಿಗಳು ಬಂದು ಭಾಗ್ಯಳ ಮನೆಗೆ ಬಂದು ಫುಡ್ ಇಲ್ಲದೆ ಇದೆಲ್ಲ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಭಾಗ್ಯಾಳ ಮನೆಯಿಂದ ತೆಗೆದುಕೊಂಡು ಹೋಗಿದ್ದ ಊಟದ ರಿಸಲ್ಟ್ ಚೆನ್ನಾಗಿಲ್ಲ ಎಂದು ಬರಬೇಕು ಎಂದು ಕನ್ನಿಕಾ ಅಧಿಕಾರಿಗಳಿಗೆ ಆರ್ಡರ್ ಮಾಡಿದ್ದಾಳೆ.

ಮತ್ತೊಂದೆಡೆ ಭಾಗ್ಯ ಫುಡ್ ಲೈಸನ್ಸ್​ಗೆ ಅರ್ಜಿ ಸಲ್ಲಿಸಿ ಮನೆಗೆ ಹಿಂತಿರುಗಿದ್ದಾಳೆ. ಆದರೆ, ಫುಡ್ ಡಿಪಾರ್ಟ್​ಮೆಂಟ್​ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಕಾಲ್ ಮಾಡಿ ಇಲಾಖೆಯ ಇನ್ಸ್‌ಪೆಕ್ಟರ್‌ಗೆ ವಿಚಾರಿಸಿದ್ದಾಳೆ. ಅವರು ಭಾಗ್ಯಳ ಕರೆ ಸ್ವೀಕರಿಸಿಲ್ಲ, ನಂತರ ಆಫೀಸ್‌ ನಂಬರ್‌ಗೆ ಕರೆ ಮಾಡಿದ್ದಾಳೆ. ಆಗ ಅಲ್ಲಿನ ಅಧಿಕಾರಿ ಲೈಸನ್ಸ್ ಕೊಡಲು ಇನ್ನೂ ತಡವಾಗುತ್ತದೆ ಎಂದಿದ್ದಾರೆ. ಲೈಸನ್ಸ್ ಸಿಕ್ಕಾಗ ಹೇಳುತ್ತೇವೆ, ಪದೇ ಪದೇ ಫೋನ್ ಮಾಡಬೇಡಿ ಎಂದು ಕರೆ ಕಟ್ ಮಾಡಿದ್ದಾರೆ.

ಅಷ್ಟರಲ್ಲಿ ಭಾಗ್ಯ ಮನೆಗೆ ಕನ್ನಿಕಾಳ ಎಂಟ್ರಿ ಆಗಿದೆ. ಬಂದು ಸೋಫಾ ಮೇಲೆ ಕುಳಿತು, ಹೇಗಿದ್ದೀಯಾ ಭಾಗ್ಯ, ತುಂಬಾ ಸಮಯವಾಯಿತು, ನಿನ್ನನ್ನು ನೋಡಿಕೊಂಡು ಹೋಗೋಣ ಎಂದು ಬಂದೆ.. ಏನೋ ಲೈಸನ್ಸ್ ಇಲ್ಲ ಅಂತ ಪ್ರಾಬ್ಲಂ ಆಯಿತಂತೆ.. ಸರಿ ಆಯ್ತಾ? ಎಂದು ಹೀಯಾಳಿಸುತ್ತ ಕೇಳಿದ್ದಾಳೆ. ಆಗ ಭಾಗ್ಯ ಮತ್ತು ಮನೆಯವರಿಗೆ ಇದು ಕನ್ನಿಕಾಳ ಕುತಂತ್ರ ಎಂಬುದು ತಿಳಿಯುತ್ತೆ. ಇದರಿಂದ ಭಾಗ್ಯಾಗೆ ಕೋಪ ಬಂದರೂ ತೋರಿಸಿಕೊಳ್ಳದೆ ನಯವಾಗಿಯೇ ಕನ್ನಿಕಾಳ ಮೈಚಳಿ ಬಿಡಿಸುತ್ತಾಳೆ.



ಭಾಗ್ಯ ಜೋರಾಗಿ ನಗುತ್ತಾ.. ನೀನು ಒಳ್ಳೆಯ ಕೆಲಸವನ್ನೇ ಮಾಡಿದ್ದೀ, ನಿನ್ನಿಂದಾಗಿ ನನಗೆ ಈ ಪ್ರಕ್ರಿಯೆ, ಲೈಸನ್ಸ್ ಎಲ್ಲ ತಿಳಿಯಿತು. ಎಲ್ಲವೂ ನಿನ್ನಂತಹ ಹಿತಶತ್ರುಗಳ ಆಶೀರ್ವಾದ, ನಿನ್ನಿಂದಾಗಿ ನಾನು ಇದೆಲ್ಲಾ ಮಾಡುವಂತಾಯಿತು, ನನಗಂತೂ ಇದರಿಂದ ಪ್ರಯೋಜನವೇ ಆಗುತ್ತಿದೆ, ನೀನು ಮಾತ್ರ ಕೆಟ್ಟದ್ದು ಬಯಸಿದ್ದು, ನನಗೆ ಒಳ್ಳೆಯದೇ ಆಗಿದೆ. ನಾನು ನ್ಯಾಯವಾದ ದಾರಿಯಲ್ಲಿ ಹೋಗೋತರ ಮಾಡಿದ್ದೀಯ.. ಥ್ಯಾಂಕ್ಯು ಸೋ ಮಚ್.. ನನ್ನ ವ್ಯಾಪಾರ ಏನಾದ್ರು ದೊಡ್ಡ ಮಟ್ಟದಲ್ಲಿ ಬೆಳೆದಾಗ ಈರೀತಿ ಆಗಿದ್ರೆ ನನ್ನ ಬ್ಯುಸಿನೆಸ್​ಗೆ ದೊಡ್ಡ ಹೊಡೆತ ಬಿದ್ದಿರೋದು, ಆದ್ರೆ ಈಗ ನೀನು ಸ್ಟಾರ್ಟಿಂಗ್​ನಲ್ಲೇ ಹೇಳಿ ಒಳ್ಳೆ ಕೆಲಸ ಮಾಡಿದೆ ಎಂದು ಹೇಳುತ್ತಾಳೆ.

ಭಾಗ್ಯಾಗೆ ಶಾಕ್ ನೀಡಬೇಕೆಂದು ಭಾಗ್ಯ ಮನೆಗೆ ಬಂದ ಕನ್ನಿಕಾಗೇ ಆಘಾತ ಉಂಟಾಗಿದೆ. ಭಾಗ್ಯ ಸರಿಯಾಗಿ ತಿರುಗೇಟು ಕೊಡುವ ಮೂಲಕ ಕನ್ನಿಕಾಳನ್ನು ಹೊರಗಟ್ಟಿದ್ದಾಳೆ. ಸದ್ಯ ಭಾಗ್ಯಾಗೆ ಯಾವಾಗ ಲೈಸನ್ಸ್ ಸಿಗುತ್ತೆ? ಅಥವಾ ಲೈಸನ್ಸ್ ಸಿಗದಂತೆ ಕನ್ನಿಕಾ ಫುಡ್ ಆಫೀಸರ್ ಜೊತೆ ಏನು ಮಾತುಕತೆ ನಡೆಸುತ್ತಾಳೆ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Bro Gowda: ಲಕ್ಷ್ಮೀ ಬಾರಮ್ಮ ಮುಗಿದ ಬೆನ್ನಲ್ಲೇ ಶಮಂತ್​ಗೆ ಬಂಪರ್ ಆಫರ್: ತೆಲುಗಿನಿಂದ ಬಂತು ಕರೆ