Bhagya Lakshmi Serial: ಯುಗಾದಿ ಸಂಭ್ರಮದಲ್ಲಿದ್ದ ಭಾಗ್ಯಾಗೆ ಶಾಕ್ ಕೊಟ್ಟ ಪೊಲೀಸರು: ತನ್ವಿ ಅರೆಸ್ಟ್?
ಗೆಳತಿಯರ ಜತೆ ಎಂಜಾಯ್ ಮಾಡುತ್ತಿರುತ್ತಾಳೆ. ಅದೇ ರೆಸಾರ್ಟ್ಗೆ ಇನ್ನೊಂದು ಹುಡುಗರ ಗುಂಪು ಕೂಡ ಬಂದಿರುತ್ತೆ. ಅಷ್ಟರಲ್ಲಿ ಹುಡುಗನೊಬ್ಬ ತನ್ವಿ ಬಳಿ ಬಂದು ಒಟ್ಟಿಗೆ ಡ್ಯಾನ್ಸ್ ಮಾಡೋಣ, ನೀನು ತುಂಬಾ ಸುಂದರವಾಗಿ ಕಾಣಿಸುತ್ತಿದ್ದಿ ಎಂದು ಹೇಳಿದ್ದಾನೆ. ಅದನ್ನು ಕೇಳಿ ತನ್ವಿ ಅವನ ಕೆನ್ನೆಗೆ ಒಂದು ಬಾರಿಸಿದ್ದಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಳ ಮನೆಯವರು ಯುಗಾದಿ ಸಂಭ್ರಮದಲ್ಲಿದ್ದಾರೆ. ಎಣ್ಣೆ ಹಚ್ಚಿ ಸ್ನಾನ ಮಾಡಿದ ಬಳಿಕ ಮನೆಯವರು ಎಲ್ಲರೂ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ನಂತರ ಹಬ್ಬದ ವಿಶೇಷ ಅಡುಗೆ ಊಟ ಮಾಡಲು ತಯಾರಾಗಿದ್ದಾರೆ. ಭಾಗ್ಯಾಳ ಕೈ ತುತ್ತು ಉದ್ಯಮಕ್ಕೆ ಕೂಡ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಎಲ್ಲವೂ ಸರಾಗವಾಗಿ ಸಾಗಲು ಶುರುವಾಗಿದೆ. ಆದರೆ, ಈ ಹೊತ್ತಿಗೆ ಭಾಗ್ಯಾಗೆ ಮತ್ತೊಂದು ಆಘಾತ ಬರಸಿಡಿಲಿನಂತೆ ಬಂದಿದೆ. ಹೆತ್ತವರ ಪರ್ಮಿಷನ್ ಇಲ್ಲದೆ ರೆಸಾರ್ಟ್ಗೆ ಟ್ರಿಪ್ ಹೋಗಿರುವ ತನ್ವಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ.
ತನ್ವಿ ತನ್ನ ಫ್ರೆಂಡ್ಸ್ ಜೊತೆ ರೆಸಾರ್ಟ್‌ಗೆ ಟ್ರಿಪ್ ಹೋಗಲು ನಾನಾ ಕಸರತ್ತು ನಡೆಸಿದ್ದಳು. ಆದರೆ ಇದಕ್ಕೆ ಅಜ್ಜಿ-ಅಮ್ಮ-ಅಪ್ಪನವರಿಂದ ಪರ್ಮೀಷನ್ ಸಿಕ್ಕಿರಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಪೇಪರ್ಗೆ ಸಹಿ ಹಾಕಲು ಶ್ರೇಷ್ಠಾ ಬಳಿ ಹೋಗಿದ್ದಾಳೆ. ಮನೆಯಲ್ಲಿ ಯಾರಿಗೂ ತಿಳಿಯದಂತೆ ಶ್ರೇಷ್ಠಾಳಿಂದ ಸಹಿ ಹಾಕಿಸಿಕೊಂಡು ರೆಸಾರ್ಟ್ಗೆ ತೆರಳಿದ್ದಾಳೆ. ಶಾಲೆಯಲ್ಲಿ ಸ್ಪೆಷಲ್ ಕ್ಲಾಸ್ ಇದೆ, ಹೋಗಲೇಬೇಕು ಎಂದು ಮನೆಯಲ್ಲಿ ಕಥೆ ಹೇಳಿದ್ದಾಳೆ. ಆದರೆ, ರೆಸಾರ್ಟ್ನಲ್ಲಿ ಎಂಜಾಯ್ ಮಾಡುತ್ತಿರುವಾಗ ಅಲ್ಲಿಗೆ ದಿಢೀರ್ ಪೊಲೀಸ್ ರೈಡ್ ಆಗಿದೆ.
ತನ್ವಿ, ಗೆಳತಿಯರ ಜತೆ ಎಂಜಾಯ್ ಮಾಡುತ್ತಿರುತ್ತಾಳೆ. ಅದೇ ರೆಸಾರ್ಟ್ಗೆ ಇನ್ನೊಂದು ಹುಡುಗರ ಗುಂಪು ಕೂಡ ಬಂದಿರುತ್ತೆ. ಅಷ್ಟರಲ್ಲಿ ಹುಡುಗನೊಬ್ಬ ತನ್ವಿ ಬಳಿ ಬಂದು ಒಟ್ಟಿಗೆ ಡ್ಯಾನ್ಸ್ ಮಾಡೋಣ, ನೀನು ತುಂಬಾ ಸುಂದರವಾಗಿ ಕಾಣಿಸುತ್ತಿದ್ದಿ ಎಂದು ಹೇಳಿದ್ದಾನೆ. ಅದನ್ನು ಕೇಳಿ ತನ್ವಿ ಅವನ ಕೆನ್ನೆಗೆ ಒಂದು ಬಾರಿಸಿದ್ದಾಳೆ. ಅಷ್ಟರಲ್ಲಿ ರೆಸಾರ್ಟ್‌ಗೆ ಪೊಲೀಸ್ ಬಂದಿದ್ದಾರೆ. ಜಗಳವನ್ನು ಕಂಡ ಪೊಲೀಸರು ನೋಡೋಕೆ ಇವರೆಲ್ಲ ಚಿಕ್ಕ ಮಕ್ಕಳ ತರಾ ಕಾಣಿಸ್ತಾರೆ, ಐಡಿ ಚೆಕ್ ಮಾಡೋಣ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ. ಆಗ ಎಲ್ಲರೂ ಮೈನರ್ ಎಂಬ ವಿಚಾರ ಬೆಳಕಿಗೆ ಬಂದಿದೆ.
ಬಳಿಕ ಎಲ್ಲ ಮಕ್ಕಳ ಮನೆಯವರನ್ನು ಕರೆಸಬೇಕು ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ. ಮನೆಯವರ ಅನುಮತಿ ಪತ್ರ ಇದೆಯೆಂದರೂ ಪೊಲೀಸರು ಕೇಳಿಲ್ಲ, ಮನೆಯವರಿಗೆ ಫೋನ್ ಮಾಡಿ ಎಂದು ಹೇಳಿದ್ದಾರೆ. ಅದರಂತೆ ತನ್ವಿ ಅಮ್ಮನಿಗೆ ಕಾಲ್ ಮಾಡಿದ್ದಾಳೆ. ಅಮ್ಮ ನಾನು ಪೊಲೀಸರು ಕೈಯಲ್ಲಿ ಸಿಕ್ಕಾಕಿಕೊಂಡಿದ್ದೇನೆ ಎಂದು ಹೇಳುತ್ತಾಳೆ, ಪೊಲೀಸರು ಭಾಗ್ಯಾಳ ಜೊತೆ ಮಾತನಾಡಿ, ಇಲ್ಲಿ ನಿಮ್ಮ ಮಗಳು ರೆಸಾರ್ಟ್ಗೆ ಬಂದಿದ್ದಾಳೆ.. ನಾವೆಲ್ಲರನ್ನು ಇಲ್ಲಿ ರೈಡ್ ಮಾಡಿ ನಿಲ್ಲಿಸಿದ್ದೇವೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಭಾಗ್ಯಾಗೆ ಆಘಾತವಾಗಿದೆ. ಇಲ್ಲಿಗೆ ಸಂಚಿಕೆ ಮುಕ್ತಾಯಗೊಂಡಿದ್ದು ಮುಂದಿನ ಎಪಿಸೋಡ್ನಲ್ಲಿ ಏನು ಟ್ವಿಸ್ಟ್ ಇರುತ್ತೆ?, ಮಗಳನ್ನು ಈ ಅಪಾಯದಿಂದ ಹೇಗೆ ಪಾರು ಮಾಡುತ್ತಾಳೆ?, ಅಥವಾ ಇದಕ್ಕೆ ತಾಂಡವ್ ಎಂಟ್ರಿ ಆಗುತ್ತಾನ ಎಂಬುದೆಲ್ಲ ನೋಡಬೇಕಿದೆ.
Lakshmi Baramma: ಲಕ್ಷ್ಮೀ ಬಾರಮ್ಮ ಅಂತಿಮ ಅಧ್ಯಾಯ: ಈ ದಿನಾಂಕಕ್ಕೆ ಧಾರಾವಾಹಿ ಎಂಡ್