ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಸೇಡಿಗೆ ಸೇಡು: ಕನ್ನಿಕಾ ಆಫೀಸ್ಗೆ ಕೈ ತುತ್ತು ತೆಗೆದುಕೊಂಡು ಹೋಗ ಭಾಗ್ಯ ಟೀಮ್

ಭಾಗ್ಯ ಮನೆಯವರು ತಮ್ಮ ಎದುರಾಳಿಗರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಭಾಗ್ಯ ಮನೆಗೆ ಬಂದು ತನಗೆ ಹೇಗೆ ನನಗೆ ಲೈಸನ್ಸ್ ಸಿಕ್ಕಿತು ಹಾಗೂ ಕನ್ನಿಕಾ ಕೂಟ್ಟ ಕಾಟವನ್ನು ವಿವರಿಸಿದ್ದಾಳೆ. ಇದರಿಂದ ಕೆರಳಿದ ಕುಸುಮಾ, ಭಾಗ್ಯಳನ್ನು ಕರೆದುಕೊಂಡು ಸುಮಾರು 30 ಜನರಿಗೆ ಆಗುವಷ್ಟು ಊಟ ರೆಡಿ ಮಾಡಿ ಕೊಡು ಎಂದು ಹೇಳಿದ್ದಾಳೆ.

ಕನ್ನಿಕಾ ಆಫೀಸ್ಗೆ ಕೈ ತುತ್ತು ತೆಗೆದುಕೊಂಡು ಹೋಗ ಭಾಗ್ಯ ಟೀಮ್

Bhagya Lakshmi Serial

Profile Vinay Bhat Apr 22, 2025 12:34 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಗೆ ಒಳ್ಳೆಯ ದಿನಗಳು ಬರುವ ಸೂಚನೆ ಸಿಕ್ಕಿದೆ. ತನ್ನ ವಿರುದ್ಧ ಮಾಡಿದ ಎಲ್ಲ ಯೋಜನೆಗಳನ್ನು ದಿಟ್ಟವಾಗಿ ಎದುರಿಸಿ ಮುನ್ನುಗ್ಗುತ್ತಿದ್ದಾಳೆ. ಇದರ ಜೊತೆಗೆ ತನಗೆ ಕೆಡುಕು ಬಯಸಲು ಬಂದವರಿಗೆ ಸರಿಯಾಗಿ ತಿರುಗೇಟು ಕೊಡಲು ಮುಂದಾಗಿದ್ದಾಳೆ. ತಾಂಡವ್ ಹಾಗೂ ಶ್ರೇಷ್ಠಾ, ಕನ್ನಿಕಾ ಜೊತೆ ಸೇರಿ ಭಾಗ್ಯಾಳನ್ನು ಸೋಲಿಸಲು ನಾನಾ ಪ್ರಯುತ್ನ ಮಾಡಿದರೂ ಯಾವುದೂ ಯಶಸ್ಸು ಕಂಡಿಲ್ಲ. ತನಗೆ ಬಂದ ಕಷ್ಟಗಳನ್ನೆಲ್ಲ ಭಾಗ್ಯ ಧೈರ್ಯದಿಂದ ಎದುರಿಸಿ ಗೆಲುವು ಕಂಡಿದ್ದಾಳೆ. ಇವರಿಗೆಲ್ಲ ಸೆಡ್ಡು ಹೊಡೆದು ಭಾಗ್ಯ ಮುಂದೆ ಸಾಗುತ್ತಲೇ ಇದ್ದಾಳೆ.

ಭಾಗ್ಯಾಳ ಫುಡ್ ಬ್ಯುಸಿನೆಸ್ ಕೈ ತುತ್ತು ಬಂದ್ ಮಾಡಲು ತಾಂಡವ್-ಶ್ರೇಷ್ಠಾ ಕನ್ನಿಕಾ ಜೊತೆ ಸೇರಿ ಪ್ಲ್ಯಾನ್ ಮಾಡಿದ್ದರು. ಈ ವಿಚಾರ ಭಾಗ್ಯಾಗೆ ಗೊತ್ತಾಗಿ ನೇರವಾಗಿ ಆಹಾರ ಇಲಾಖೆಯ ನಿರ್ದೇಶಕರ ಬಳಿ ಹೋಗಿ, ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾಳೆ. ನಿರ್ದೇಶಕರು ಕೂಡ ಅವಳ ಕಷ್ಟ ಕೇಳಿ, ಭಾಗ್ಯಳಿಗೆ ನ್ಯಾಯ ಕೊಡಿಸಿದ್ದಾರೆ. ಜತೆಗೆ ಕುತಂತ್ರ ಮಾಡಲು ಬಂದ ಕನ್ನಿಕಾಗೆ ಸರಿಯಾಗಿಯೇ ಬುದ್ದಿ ಹೇಳಿ ಕಳುಹಿಸಿದ್ದಾರೆ. ಇದರಿಂದ ಭಾಗ್ಯಳಿಗೆ ಸಿಗಬೇಕಿದ್ದ ಫುಡ್ ಲೈಸನ್ಸ್, ನ್ಯಾಯವಾಗಿಯೇ ಸಿಕ್ಕಿದೆ.

ಇದೀಗ ಭಾಗ್ಯ ಮನೆಯವರು ತಮ್ಮ ಎದುರಾಳಿಗರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಭಾಗ್ಯ ಮನೆಗೆ ಬಂದು ತನಗೆ ಹೇಗೆ ನನಗೆ ಲೈಸನ್ಸ್ ಸಿಕ್ಕಿತು ಹಾಗೂ ಕನ್ನಿಕಾ ಕೂಟ್ಟ ಕಾಟವನ್ನು ವಿವರಿಸಿದ್ದಾಳೆ. ಇದರಿಂದ ಕೆರಳಿದ ಕುಸುಮಾ, ಭಾಗ್ಯಳನ್ನು ಕರೆದುಕೊಂಡು ಸುಮಾರು 30 ಜನರಿಗೆ ಆಗುವಷ್ಟು ಊಟ ರೆಡಿ ಮಾಡಿ ಕೊಡು ಎಂದು ಹೇಳಿದ್ದಾಳೆ. ಯಾರಿಗೆ ಏನು ಎಂದು ಭಾಗ್ಯ ಕೇಳಿದರೂ, ಕುಸುಮಾ ಹೇಳಿಲ್ಲ. ಮೊದಲು ನೀನು ಊಟ ರೆಡಿ ಮಾಡು, ನಂತರ ನೋಡೋಣ ಎಂದು ಹೇಳಿದ್ದಾಳೆ. ಬಳಿಕ ಕುಸುಮಾ ಮೈತುಂಬಾ ಚಿನ್ನ ಹಾಕಿಕೊಂಡು ಭಾಗ್ಯ ಮತ್ತು ಸುಂದರಿಯನ್ನು ಕೂಡ ಕರೆದುಕೊಂಡು ಊಟದ ಡಬ್ಬಿಯೊಂದಿಗೆ ಹೊರಟಿದ್ದಾಳೆ.



ಎಲ್ಲಿಗೆ ಹೋಗುತ್ತಿರುವುದು ಎಂದು ಒತ್ತಾಯದಲ್ಲಿ ಕೇಳಿದಾಗ, ನಾವು ಕನ್ನಿಕಾ ಆಫೀಸ್‌ಗೆ ಹೊರಟಿದ್ದೇವೆ ಎಂದು ಕುಸುಮಾ ಹೇಳಿದ್ದಾಳೆ. ಇದನ್ನ ಕೇಳಿ ಎಲ್ಲರಿಗೂ ಶಾಕ್ ಆಗುತ್ತದೆ. ನಂತರ ಕಾರ್‌ನಲ್ಲಿ ಭಾಗ್ಯ, ಕುಸುಮಾ ಮತ್ತು ಸುಂದರಿ ಕನ್ನಿಕಾ ಆಫೀಸ್‌ಗೆ ಹೋಗಿದ್ದಾರೆ. ಅಲ್ಲಿ ಕನ್ನಿಕಾ ಬಂದಿರುವುದಿಲ್ಲ. ಅಷ್ಟರಲ್ಲಿ ಊಟದ ಸಮಯವಾಗಿದೆ, ಎಲ್ಲರನ್ನೂ ಕರೆದುಕೊಂಡು ಕುಸುಮಾ ಮತ್ತು ಭಾಗ್ಯ, ಕೆಫೆಟೇರಿಯಾಗೆ ಹೋಗಿದ್ದಾರೆ. ಅಲ್ಲಿ ಕನ್ನಿಕಾ ಆಫೀಸ್‌ನ ಎಲ್ಲರಿಗೂ ತಾವು ಮನೆಯಿಂದ ತಂದಿದ್ದ ಊಟವನ್ನು ಹಂಚಿದ್ದಾರೆ. ಅಷ್ಟರಲ್ಲಿ ಆಫೀಸ್‌ಗೆ ಕನ್ನಿಕಾಳ ಎಂಟ್ರಿ ಆಗಿದೆ.

ಸದ್ಯ ಇಲ್ಲಿ ಮಹಾಯುದ್ಧ ನಡೆಯುವ ಸಂಭವವಿದೆ. ಭಾಗ್ಯ ಹಾಗೂ ಅತ್ತೆ ಕುಸುಮಾ, ಕನ್ನಿಕಾಳ ಮಾನ ಹರಾಜು ಮಾಡಬಹುದು. ಈ ಹಿಂದೆ ಇದೇ ಆಫೀಸ್​ನಲ್ಲಿ ಭಾಗ್ಯ ಹಾಗೂ ಕುಸುಮಾಳಿಗೆ ಕನ್ನಿಕಾ ಅವಮಾನ ಮಾಡಿದ್ದಳು. ಈಗ ಅದೇ ಆಫೀಸ್​ನಲ್ಲಿ ಸೇಡುತೀರಿಸಿಕೊಳ್ಳಲು ಇವರಿಬ್ಬರು ಬಂದಿದ್ದಾರೆ. ಇಲ್ಲಿ ಏನೆಲ್ಲ ಆಗುತ್ತೆ ಎಂಬುದು ಮುಂದಿನ ಎಪಿಸೋಡ್​ನಲ್ಲಿ ಸೋಡಬೇಕಿದೆ.

Trivikram: ವೋಟ್ ಹಾಕಿದವರೆಲ್ಲ ನನ್ನ ಸಿನಿಮಾ ಬಂದು ನೋಡಲ್ಲ: ತ್ರಿವಿಕ್ರಮ್ ಶಾಕಿಂಗ್ ಹೇಳಿಕೆ