ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಶ್ರೇಷ್ಠಾ ಕೆನ್ನೆಗೆ ಮನಬಂದಂತೆ ಬಾರಿಸಿದ ಭಾಗ್ಯ: ವೀಕ್ಷಕರು ಫುಲ್ ಶಾಕ್

ಶ್ರೇಷ್ಠಾಳನ್ನು ಕರೆದ ಭಾಗ್ಯ, ಏ ಮನೆಹಾಳಿ.. ನನ್ನ ಜೀವನದಲ್ಲಿ ಇನ್ನು ಏನೆಲ್ಲ ಆಟ ಆಡಬೇಕು ಅಂತ ಅಂದುಕೊಂಡಿದ್ದೀಯಾ ಎಂದು ಹೇಳಿ ರಪರಪನೆ ಮನಬಂದಂತೆ ಕೆನ್ನೆಗೆ ಬಾರಿಸುತ್ತಾಳೆ. ಶ್ರೇಷ್ಠಾಗೆ ಖಡಕ್ ವಾರ್ನ್ ಮಾಡಿ ಅವಳಿಂದಳೇ ಊಟದ ದುಡ್ಡನ್ನು ವಸೂಲಿ ಮಾಡಿಕೊಂಡು ಹೊರಡುತ್ತಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ರುದ್ರರೂಪ ತಾಳಿದ್ದಾಳೆ. ತನಗೆ ಕೆಡುಕು ಬಯಸಲು ಬಂದ ತಾಂಡವ್ ಹಾಗೂ ಶ್ರೇಷ್ಠಾಳ ಮೈಚಳಿ ಬಿಡಿಸಿದ್ದಾಳೆ ಭಾಗ್ಯ. ತನ್ನ ಹೊಟ್ಟೆ ತುಂಬಿಸುತ್ತಿರುವ ಕೈ ತುತ್ತು ಮೇಲೆಯೇ ಕಲ್ಲು ಹಾಕಲು ಬಂದವರಿಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾಳೆ. ಗೆಳತಿಯ ಕೈಯಿಂದ ಮಾಸ್ಟರ್ ಪ್ಲ್ಯಾನ್ ಮಾಡಿದ್ದ ಶ್ರೇಷ್ಠಾಗೆ ಭಾರೀ ಅವಮಾನ ಆಗಿದೆ. ಲಾಸ್ ಆಗುವ ಭೀತಿಯಲ್ಲಿದ್ದ ಭಾಗ್ಯ ಈಗ ಶ್ರೇಷ್ಠಾ ಕೈಯಿಂದಲೇ ಹಣ ವಸೂಲಿ ಮಾಡಿ ಮಗನ ಸ್ಕೂಲ್ ಫೀಸ್ ಕಟ್ಟಿದ್ದಾಳೆ.

ಭಾಗ್ಯಾಳನ್ನು ಹೇಗಾದರು ಮಾಡಿ ಸೋಲಿಸಬೇಕೆಂದು ತಾಂಡವ್-ಶ್ರೇಷ್ಠಾ ಇಬ್ಬರೂ ಪಣತೊಟ್ಟಿದ್ದರು. ಇದಕ್ಕಾಗಿ ಶ್ರೇಷ್ಠಾ ತನ್ನ ಗೆಳತಿಯ ಸಹಾಯ ಪಡೆದುಕೊಂಡಿದ್ದಳು. ಭಾಗ್ಯಾಳಿಗೆ ಒಂದು ಫೋನ್ ಕರೆ ಬರುತ್ತದೆ. ಶ್ರೇಷ್ಠಾ ಗೆಳತಿ ಫೋನ್ ಮಾಡಿ, ಒಂದು ಈವೆಂಟ್ ಇದೆ, 200 ಜನಕ್ಕೆ ಊಟಕ್ಕೆ ರೆಡಿ ಮಾಡಿ ಎಂದು ಹೇಳಿದ್ದಾಳೆ. ಊಟ ಇಲ್ಲಿ ತಂದು ಕೊಟ್ಟ ಬಳಿಕ ಹಣ ಕೊಡುತ್ತೇನೆ ಎಂದು ಹೇಳಿದ್ದಾಳೆ. ಇದಕ್ಕೆ ಒಪ್ಪಿದ ಭಾಗ್ಯ ಗುಂಡಣ್ಣನ ಸ್ಕೂಲ್ ಫೀಸ್ ಕಟ್ಟಲು ತೆಗೆದಿರಿಸಿದ ಹಣದಲ್ಲಿ ಅಡುಗೆ ಸಾಮಾಗ್ರಿ ತಂದು ಊಟಕ್ಕೆ ರೆಡಿ ಮಾಡುತ್ತಾಳೆ. ಊಟ ಎಲ್ಲ ರೆಡಿಯಾಗಿ ತಂದುಕೊಡುತ್ತೇನೆ ಎಂದಾಗ ಆರ್ಡರ್ ಕ್ಯಾನ್ಸಲ್ ಮಾಡುವುದು ಶ್ರೇಷ್ಠಾ-ತಾಂಡವ್ ಪ್ಲ್ಯಾನ್ ಆಗಿದೆ.

ಭಾಗ್ಯ ಊಟದ ಆರ್ಡರ್ ತೆಗೆದುಕೊಂಡು ಲೊಕೇಷನ್​ಗೆ ತಲುಪಿದ್ದಾಳೆ. ಆದರೆ, ಆ ಮನೆಯಲ್ಲಿ ಯಾರೂ ಇರುವುದಿಲ್ಲ. ಕಾಲ್ ಮಾಡಿ ಕೇಳಿದಾಗ, ಶ್ರೇಷ್ಠಾ ಸೂಚನೆಯಂತೆ, ಇವತ್ತು ಪ್ರೋಗ್ರಾಂ ಕ್ಯಾನ್ಸಲ್ ಆಯಿತು, ನೀವು ರೆಡಿ ಮಾಡಿದ ಊಟ ನಮಗೆ ಬೇಡ, ಸ್ವಾರಿ ಎಂದು ಕಥೆ ಹೇಳುತ್ತಾಳೆ. ಅದನ್ನು ಕೇಳಿ ಭಾಗ್ಯಗೆ ಶಾಕ್ ಆಗುತ್ತದೆ. ಆದರೆ, ಮನೆಯ ಡೋರ್ ತೆರೆದಿರುವುದನ್ನು ಭಾಗ್ಯ ಗಮನಿಸುತ್ತಾಳೆ. ಮನೆಯೊಳಗೆ ಯಾರೋ ಇರುವುದನ್ನು ಕೂಡ ಆಕೆಯ ಗಮನಕ್ಕೆ ಬರುತ್ತದೆ.



ಮನೆಯೊಳಗೆ ಹೋದಾಗ ಅಲ್ಲಿ ಯಾರೂ ಕಾಣಿಸುವುದಿಲ್ಲ. ಶ್ರೇಷ್ಠಾ ಗೆಳತಿ ಅಡಗಿ ಕುಳಿತುಕೊಂಡು, ಅವಳು ವಾಪಸ್ ಹೋಗುವುದನ್ನೇ ಕಾಯುತ್ತಿರುತ್ತಾಳೆ. ಅತ್ತ ಭಾಗ್ಯ ಕೂಡ ಪ್ಲ್ಯಾನ್ ಮಾಡುತ್ತಾಳೆ. ತಾನು ಮನೆಯಿಂದ ಹೊರಹೋಗುವಂತೆ ನಾಟಕ ಆಡಿ ನಂತರ ದಿಢೀರ್ ಆಗಿ ಬರುತ್ತಾಳೆ. ಆಗ ಶ್ರೇಷ್ಠಾ ಗೆಳತಿ ಸಿಕ್ಕಿ ಬೀಳುತ್ತಾಳೆ. ಜೋರಾಗಿ ಗದರಿಸಿದಾಗ ಆಕೆ ಎಲ್ಲ ವಿಚಾರವನ್ನು ರಿವೀಲ್ ಮಾಡುತ್ತಾಳೆ. ಭಾಗ್ಯಾಗೆ ಈಗ ಎಲ್ಲಿಲ್ಲದ ಕೋಪ ಬರುತ್ತದೆ. ಅಲ್ಲಿಂದ ನೇರವಾಗಿ ಶ್ರೇಷ್ಠಾ ಮನೆಗೆ ಹೋಗುತ್ತಾಳೆ.

ಶ್ರೇಷ್ಠಾಳನ್ನು ಕರೆದ ಭಾಗ್ಯ, ಏ ಮನೆಹಾಳಿ.. ನನ್ನ ಜೀವನದಲ್ಲಿ ಇನ್ನು ಏನೆಲ್ಲ ಆಟ ಆಡಬೇಕು ಅಂತ ಅಂದುಕೊಂಡಿದ್ದೀಯಾ ಎಂದು ಹೇಳಿ ರಪರಪನೆ ಮನಬಂದಂತೆ ಕೆನ್ನೆಗೆ ಬಾರಿಸುತ್ತಾಳೆ. ಶ್ರೇಷ್ಠಾಗೆ ಖಡಕ್ ವಾರ್ನ್ ಮಾಡಿ ಅವಳಿಂದಳೇ ಊಟದ ದುಡ್ಡನ್ನು ವಸೂಲಿ ಮಾಡಿಕೊಂಡು ಹೊರಡುತ್ತಾಳೆ. ರೆಡಿ ಮಾಡಿದ ಊಟವನ್ನು ಅಲ್ಲಿಯೇ ಪಕ್ಕದ ಅನಾಥಾಶ್ರಮದ ಮಕ್ಕಳಿಗೆ ಕೊಟ್ಟು, ತನ್ಮಯ್ ಸ್ಕೂಲ್‌ಗೆ ಹೊರಡುತ್ತಾಳೆ ಭಾಗ್ಯ.



ಭಾಗ್ಯ ಸ್ಕೂಲ್‌ಗೆ ಬಂದು ಶ್ರೇಷ್ಠಾ ಕೈಯಿಂದ ವಸೂಲಿ ಮಾಡಿದ ದುಡ್ಡಿನಿಂದ ತನ್ಮಯ್‌ನ ಫೀಸ್ ಕಟ್ಟಿದ್ದಾಳೆ. ಅತ್ತ ತಾಂಡವ್ ಕೂಡ ತನ್ಮಯ್ ಸ್ಕೂಲ್ ಫೀಸ್ ನಾನೇ ಕಟ್ಟುವೆ ಎಂದು ಶಾಲೆಗೆ ಬಂದಿದ್ದಾಣೆ. ಆದರೆ, ಅಲ್ಲಿನ ಪ್ರಾಂಶುಪಾಲರು ಹೇಳಿದ ಮಾತು ಕೇಳಿ ತಾಂಡವ್​ಗೆ ಶಾಕ್ ಆಗುತ್ತಿದೆ. ತನ್ಮಯ್ ಫೀಸ್ ಈಗಾಗಲೇ ಭಾಗ್ಯ ಕಟ್ಟಿ ಆಗಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಕೇಳಿ ತಾಂಡವ್​ ಆಘಾತಕ್ಕೊಳಗಾಗುತ್ತಾನೆ. ಸದ್ಯ ಇನ್ನಾದರು ಭಾಗ್ಯಾಳ ಜೀವನದಿಂದ ಇವರಿಬ್ಬರು ದೂರ ಇರುತ್ತಾರ ಅಥವಾ ಮತ್ತೊಂದು ಪ್ಲ್ಯಾನ್ ಮಾಡಿ ಕೈಸುಟ್ಟುಗೊಳ್ಳುತ್ತಾರ ಎಂಬುದು ನೋಡಬೇಕಿದೆ.

Vinay Gowda: ಜೈಲಲ್ಲಿದ್ದಾಗ ಸುದೀಪ್ ಸರ್ ಕರೆ ಮಾಡಿ..: ಕಿಚ್ಚನ ಋಣ ಮರೆಯಲ್ಲ ಎಂದ ವಿನಯ್ ಗೌಡ