ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್ ಹಾಗೂ ಭಾಗ್ಯ ನಡುವಣ ಆತ್ಮೀಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾಗ್ಯ-ಆದೀ ಒಂದಲ್ಲ ಒಂದು ವಿಚಾರಕ್ಕೆ ಭೇಟಿಯಾಗಿ ಹತ್ತಿರವಾಗುತ್ತಲೇ ಇದ್ದಾರೆ. ಮೊನ್ನೆಯಷ್ಟೆ ಆದೀ ಹಾಗೂ ತಾಂಡವ್ಗೆ ಕೈ ತಪ್ಪುತ್ತಿದ್ದ ದೊಡ್ಡ ಪ್ರಾಜೆಕ್ಟ್ ಒಂದು ಭಾಗ್ಯಾಳ ಕೃಪೆಯಿಂದ ಪುನಃ ಸಿಕ್ಕಿತು. ಕೋಟಿ ಕೋಟಿ ಪ್ರಾಜೆಕ್ಟ್ ಭಾಗ್ಯ ಇಲ್ಲದಿದ್ದರೆ ಇವರಿಗೆ ಸಿಗುತ್ತಿರಲಿಲ್ಲ. ಮಿಸ್ ಆಗಿದ್ದ ಒಂದು ಫೈಲ್ ಅನ್ನು ಸರಿಯಾದ ಸಮಯಕ್ಕೆ ಭಾಗ್ಯ ಆಫೀಸ್ಗೆ ತಂದುಕೊಟ್ಟಿದ್ದಳು. ಇಷ್ಟೆಲ್ಲ ಸಹಾಯ ಮಾಡಿರುವ ಭಾಗ್ಯಾಗೆ ಒಂದು ದೊಡ್ಡ ಗಿಫ್ಟ್ ನೀಡಲು ಆದೀ ಮುಂದಾಗಿದ್ದಾನೆ.
ಭಾಗ್ಯಾಗೆ ಆದೀಶ್ವರ್ ಬರೋಬ್ಬರಿ 25 ಲಕ್ಷ ರೂಪಾಯಿ ಹಣವನ್ನು ಉಡುಗೊರೆಯಾಗಿ ನೀಡಬೇಕು ಎಂದು ಅಂದುಕೊಂಡಿದ್ದಾನೆ. ಸದ್ಯ ಭಾಗ್ಯ ಮನೆಯಲ್ಲಿ ಪೂಜೆಯ ಸಂಭ್ರಮ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಆ ಗಿಫ್ಟ್ ನೀಡುವುದು ಉತ್ತಮ ಎಂದು ಆದೀ ಅಂದುಕೊಂಡಿದ್ದಾರೆ. ಹೀಗೆ ಗಿಫ್ಟ್ ಕೊಡುವಾಗ ತಾಂಡವ್ ಕೂಡ ಉತ್ತಮ ಎಂದು ಆದೀ ಕಾಲ್ ಮಾಡಿ ತಕ್ಷಣ ಒಮ್ಮೆ ಭಾಗ್ಯ ಮನೆಗೆ ಬನ್ನಿ ಎಂದು ಹೇಳುತ್ತಾನೆ. ಆರಂಭದಲ್ಲಿ ತಾಂಡವ್ ಅಲ್ಲಿಗೆ ಬರಲು ಒಪ್ಪುವುದಿಲ್ಲ.ಆ ಎಮ್ಮೆ ಭಾಗ್ಯ ಮನೆಗೆ ಪುನಃ ಹೋಗಬೇಕ ಎಂದು ಅಂದುಕೊಳ್ಳುತ್ತಾನೆ. ಬಳಿಕೆ ಒಕೆ ಎಂದಿದ್ದಾನೆ.
ಆದರೆ, ಇಲ್ಲಿ ಶ್ರೇಷ್ಠಾಳನ್ನು ಒಪ್ಪಿಸುವುದೇ ತಾಂಡವ್ಗೆ ದೊಡ್ಡ ಸಮಸ್ಯೆ ಆಗಿದೆ. ಮೊದಲೇ ಶ್ರೇಷ್ಠಾಗೆ ತಾಂಡವ್ ಮೇಲೆ ಅನುಮಾನ ಬಂದಿದೆ. ಆದೀ ಬ್ರೋ ಕರೆದಿದ್ದಾನೆ.. ಜಸ್ಟ್ 10 ನಿಮಿಷಕ್ಕೆ ಹೋಗಿ ಬರೋಣ ಎಂದು ಹೇಳಿದ್ದಾನೆ. ಬಳಿಕ ಹೇಗೋ ಶ್ರೇಷ್ಠಾ ಒಪ್ಪಿದ್ದಾಳೆ. ಇದರ ಬೆನ್ನಲ್ಲೆ ತಾಂಡವ್, ಭಾಗ್ಯಾಗೆ ಕಾಲ್ ಮಾಡಿ.. ನಾನು ಆ ಮನೆಗೆ ಕಾಲಿಡಬಾರದು ಅಂತ ಡಿಸೈಡ್ ಮಾಡಿದ್ದೆ ಆದ್ರೆ ಈಗ ಆದೀ ಬ್ರೋ ಕಾಲ್ ಮಾಡಿ ಬರೋಕೆ ಹೇಳುತ್ತಿದ್ದಾರೆ.. ನಾನು ಬರ್ತಾ ಇದ್ದೇನೆ, ಅಲ್ಲಿ ಆದೀ ಅವರಿಗೆ ನಮ್ಮಿಬ್ಬರ ಬಗ್ಗೆ ಹಾಗೂ ಆ ಮನೆಯ ಸಂಬಂಧದ ಬಗ್ಗೆ ಗೊತ್ತಾಗಬಾರದು ಎಂದು ಹೇಳಿದ್ದಾನೆ.
ಅದರಂತೆ ಇಬ್ಬರೂ ಭಾಗ್ಯ ಮನೆಗೆ ಬರುತ್ತಾರೆ.. ಪೂಜಾಗೆ ಅಕ್ಕ-ಪಕ್ಕದ ಮನೆಯವರೆಲ್ಲ ಬಂದಿದ್ದು, ಅವರಲ್ಲಿ ಓರ್ವ ಮಹಿಳೆ ಅರೇ.. ತಾಂಡವ್ ನೀನು ಹೇಗಿದ್ದಿ ಎಂದು ಕೇಳುತ್ತಾರೆ.. ಭಾಗ್ಯಾಳ ಪಕ್ಕದ ಮನೆಯವರು ತಾಂಡವ್ನನ್ನು ವಿಚಾರಿಸುವುದು ಕಂಡು ಆದೀಗೆ ಶಾಕ್ ಆಗುತ್ತದೆ.. ನಿಮಗೆ ಇವರು ಗೊತ್ತಾ ಎಂದು ಆದೀ ಆ ಮಹಿಳೆ ಬಳಿ ಕೇಳುತ್ತಾನೆ.. ಆಗ ಭಾಗ್ಯ ಹೇಳಿರುವ ಮಾತು ಅವರಿಗೆ ನೆನಪಾಗುತ್ತದೆ.. ತಾಂಡವ್ ಯಾರಂತನೇ ನಿಮಗೆ ಗೊತ್ತಿಲ್ಲ.. ಆರೀತಿ ಇರಿ ಎಂದು ಅವರ ಬಳಿ ಭಾಗ್ಯ ಹೇಳಿದ್ದಳು.. ಆದೀ ಪ್ರಶ್ನೆಗೆ, ಇವರು ನಮಗೆ ಗೊತ್ತಿಲ್ಲ.. ನೀವು ಮಾತನಾಡುತ್ತಿರುವಾಗ ಹೆಸರು ಕೇಳಿಸಿಕೊಂಡೆ ಎಂದು ಅಲ್ಲಿಗೆ ಪ್ಯಾಚ್ ಅಪ್ ಮಾಡಿದ್ದಾಳೆ.
ಅತ್ತ ಅಪ್ಪ ಹತ್ತಿರದಲ್ಲೇ ಇದ್ದರು ತನ್ವಿ ಹಾಗೂ ಗುಂಡಣ್ಣನಿಗೆ ಮಾತನಾಡಲಾಗುತ್ತಿಲ್ಲ. ಆದರೆ. ಒಂದು ಘಳಿಗೆಯಲ್ಲಿ ತನ್ವಿ ತಾಂಡವ್ನನ್ನು ಅಪ್ಪ ಎಂದು ಕರೆದಿದ್ದಾಳೆ. ಇದು ಆದೀ ಗಮನಿಸಿದ್ದಾನೆ.. ತಾಂಡವ್ ನಡೆದುಕೊಂಡು ಬರುವಾಗ ಬಾಳೆ ಹಣ್ಣಿನ ಸಿಪ್ಪೆಗೆ ಕಾಲಿಟ್ಟು ಜಾರಿ ಬೀಳುತ್ತಾನೆ. ಇದನ್ನ ಗಮನಿಸಿದ ತನ್ವಿ ಅಪ್ಪ.. ಎಂದು ಜೋರು ಕೂಗಿದ್ದಾಳೆ. ಆಗ ಆದೀ ಅರೇ.. ತನ್ವಿ ತಾಂಡವ್ನನ್ನು ಅಪ್ಪ ಎಂದು ಕರೆದ್ಳಾ? ಎಂದು ಕೇಳಿದಾಗ ಕುಸುಮಾ ಬಂದು ಅಲ್ಲ ಅಲ್ಲ.. ಅವಳು ಅಪ್ಪ ಬಂದಿದ್ದಲ್ಲ.. ಅಯ್ಯೋ ಪಾಪಾ ಅಂದಿದ್ದು ಎಂದು ಸುಳ್ಳು ಹೇಳುತ್ತಾಳೆ.
ಸದ್ಯ ಈ ಸನ್ನಿವೇಶ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಆದೀಶ್ವರ್ಗೆ ತಾಂಡವ್ವೇ ಭಾಗ್ಯಾಳ ಗಂಡ ಎಂಬ ವಿಚಾರ ಗೊತ್ತಾಗುತ್ತ ಎಂಬುದು ನೋಡಬೇಕಿದೆ. ಮತ್ತೊಂದೆಡೆ 25 ಲಕ್ಷ ಹಣ ಕೊಡುವಾಗ ತಾಂಡವ್ ಏನು ಮಾಡುತ್ತಾನೆ?, ಸ್ವಾಭಿಮಾನದ ಭಾಗ್ಯ ಈ ಹಣ ಸ್ವೀಕರಿಸುತ್ತಾಳಾ? ಎಂಬುದೆಲ್ಲ ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.
Gagana Bhari: ನಾಯಕಿಯಾದ ಮಹಾನಟಿ: ಕಿರುತೆರೆ ಲೋಕಕ್ಕೆ ರಾಜಕುಮಾರಿಯಾಗಿ ಬಂದ ಗಗನಾ