ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್ ಹಾಗೂ ಭಾಗ್ಯ ನಡುವಣ ಎಪಿಸೋಡ್ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಇವರಿಬ್ಬರ ಆತ್ಮೀಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಕುಸುಮಾ ಕೂಡ ಸಪೋರ್ಟ್ ಮಾಡುತ್ತಿದ್ದಾಳೆ. ಮೊನ್ನೆಯಷ್ಟೆ ಆದೀ ಹಾಗೂ ತಾಂಡವ್ಗೆ ಕೈ ತಪ್ಪುತ್ತಿದ್ದ ದೊಡ್ಡ ಪ್ರಾಜೆಕ್ಟ್ ಒಂದು ಭಾಗ್ಯಾಳ ಕೃಪೆಯಿಂದ ಪುನಃ ಸಿಕ್ಕಿತು. ಕೋಟಿ ಕೋಟಿ ಪ್ರಾಜೆಕ್ಟ್ ಭಾಗ್ಯ ಇಲ್ಲದಿದ್ದರೆ ಇವರಿಗೆ ಸಿಗುತ್ತಿರಲಿಲ್ಲ. ಮಿಸ್ ಆಗಿದ್ದ ಒಂದು ಫೈಲ್ ಅನ್ನು ಸರಿಯಾದ ಸಮಯಕ್ಕೆ ಭಾಗ್ಯ ಆಫೀಸ್ಗೆ ತಂದುಕೊಟ್ಟಿದ್ದಳು. ಇಷ್ಟೆಲ್ಲ ಸಹಾಯ ಮಾಡಿರುವ ಭಾಗ್ಯಾಗೆ 25 ಲಕ್ಷ ರೂ. ಗಿಫ್ಟ್ ನೀಡಲು ಆದೀ ಮುಂದಾಗಿದ್ದ. ಅದರಂತೆ ಇದೀಗ ಆದೀ ಆ ಹಣವನ್ನು ಭಾಗ್ಯಾಗೆ ನೀಡಿದ್ದಾನೆ.
ಭಾಗ್ಯಾಗೆ ಆದೀಶ್ವರ್ ಬರೋಬ್ಬರಿ 25 ಲಕ್ಷ ರೂಪಾಯಿ ಹಣವನ್ನು ಉಡುಗೊರೆಯಾಗಿ ನೀಡಬೇಕು ಎಂದು ಅಂದುಕೊಂಡಿದ್ದ. ಇದೇ ಸಮಯಕ್ಕೆ ಭಾಗ್ಯ ಮನೆಯಲ್ಲಿ ಪೂಜೆಯ ಆಯೋಜನೆ ಆಯಿತು. ಇದೇ ಸಂದರ್ಭದಲ್ಲಿ ಆ ಗಿಫ್ಟ್ ನೀಡುವುದು ಉತ್ತಮ ಎಂದು ಆದೀ ಅಂದುಕೊಂಡು, ಪೂಜೆ ಬರುವಾಗ ಆ ಹಣವನ್ನು ತೆಗೆದುಕೊಂಡು ಬಂದಿದ್ದಾನೆ. ಪೂಜೆ, ಊಟ ಮುಗಿಸಿ ರಾಮ್ದಾಸ್ ಕಾಮತ್, ಮೀನಾಕ್ಷಿ ಹಾಗೂ ಕನ್ನಿಕಾ ಬೇಗನೆ ಹೋಗುತ್ತಾರೆ.
ಆದರೆ, ಆದೀ ನಾನು ಸ್ವಲ್ಪ ಮತ್ತೆ ಬರುತ್ತೇನೆ ಎಂದು ಹೇಳುತ್ತಾನೆ. ಬಳಿಕ ಆದೀ, ತಾಂಡವ್ಗೆ ಕಾಲ್ ಮಾಡಿ ತಕ್ಷಣ ಒಮ್ಮೆ ಭಾಗ್ಯ ಮನೆಗೆ ಬನ್ನಿ, 25 ಲಕ್ಷ ಗಿಫ್ಟ್ ಕೊಡುವಾಗ ನೀವುಕೂಡ ಇದ್ದರೆ ಉತ್ತಮ ಎಂದು ಹೇಳುತ್ತಾನೆ. ಒಲ್ಲದ ಮನಸ್ಸಿನಿಂದ ತಾಂಡವ್ ಹಾಗೂ ಶ್ರೇಷ್ಠಾ ಬರುತ್ತಾರೆ. ಬಳಿಕ ಭಾಗ್ಯ ಮನೆಯವರನ್ನೆಲ್ಲ ಕರೆದು ಭಾಗ್ಯ ಆ ಒಂದು ಫೈಲ್ ಕೊಟ್ಟು ದೊಡ್ಡ ಸಹಾಯ ಮಾಡಿದ್ದಾಳೆ.. ಹೀಗಾಗಿ ಅವಳಿಗೆ ಒಂದು ಸ್ಪೆಷಲ್ ಗಿಫ್ಟ್ ಕೊಡಬೇಕು ಅಂದುಕೊಂಡಿದ್ದೇನೆ ಎಂದು ಹೇಳಿ ಆದೀ ಸ್ಯೂಟ್ ಕೇಸ್ ಅನ್ನು ಭಾಗ್ಯಾಗೆ ಕೊಡುತ್ತಾನೆ.
ಭಾಗ್ಯಾಗೆ ಅದರಲ್ಲಿ ಹಣ ಇರುವ ವಿಚಾರ ತಿಳಿದಿರುವುದಿಲ್ಲ.. ಎಲ್ಲರು ಭಾಗ್ಯ ಬಳಿ ಸ್ಯೂಟ್ ಕೇಸ್ ಓಪನ್ ಮಾಡಿ ನೋಡು ಎಂದು ಹೇಳುತ್ತಾರೆ. ತೆಗೆದು ನೋಡಿದಾಗ ಭಾಗ್ಯಾಗೆ ಶಾಕ್ ಆಗುತ್ತದೆ.. ಅಯ್ಯೋ ಇಷ್ಟೊಂದು ಹಣ ಎಂದು ಹೇಳುತ್ತಾಳೆ. ಅದಕ್ಕೆ ಆದೀ ಅದರಲ್ಲಿ ಅಷ್ಟೊಂದು ಹಣವೇನಿಲ್ಲ.. ಕೇವಲ 25 ಲಕ್ಷ ಇರುವುದು ಅಷ್ಟೆ ಎನ್ನುತ್ತಾನೆ. ಇದನ್ನ ಕೇಳಿ ಭಾಗ್ಯಾಗೆ ಮತ್ತಷ್ಟು ಶಾಕ್ ಆಗುತ್ತದೆ. ಈ ಹಣ ನನಗೆ ಬೇಡ.. ಇದು ನಾನು ಸಂಪಾದಿಸಿದ ಹಣವಲ್ಲ ಎಂದು ಹೇಳುತ್ತಾಳೆ.
ಇದು ನಿಮಗೆ ಸೇರಬೇಕಾದ ಹಣ.. ನೀವು ಇದಕ್ಕೆ ಅರ್ಹರು ಎಂದು ಆದೀಶ್ವರ್ ಎಷ್ಟೇ ಕನ್ವೆನ್ಸ್ ಮಾಡಲು ಹೊರಟರೂ ಭಾಗ್ಯ ಗಲಿಬಿಲಿಗೊಂಡು ಬೇಡ ನನಗೆ ಈ ದುಡ್ಡು ಬೇಡವೇ ಬೇಡ.. ನಾನು ಆ ಫೈಲ್ ಕೊಟ್ಟು ಮಾಡಿದ ಸಹಾಯಕ್ಕೆ ಒಂದು ಅರ್ಥ ಬರಬೇಕು ಅಂದರೆ ಈ ಹಣವನ್ನು ನೀವೇ ಪುನಃ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ. ಆದೀ ಭಾಗ್ಯ ಕೈಯಿಂದ ಸ್ಯೂಟ್ ಕೇಸ್ ತೆಗೆದುಕೊಂಡು ನೇರವಾಗಿ ದೇವರ ಕೋಣೆಗೆ ಹೋಗಿ ದೇವರ ಎದುರು ಅದನ್ನು ಇರುತ್ತಾನೆ. ಇವತ್ತು ವರಮಹಾಲಕ್ಷ್ಮೀ ಮನೆಗೆ ಬಂದ ಲಕ್ಷ್ಮೀಯನ್ನು ಬೇಡ ಅನ್ನಬಾರದು ಎಂದು ಹೇಳಿ ಹೊರಡುತ್ತಾನೆ.
ಎಲ್ಲರೂ ಹೋದ ಬಳಿಕ ಕೂಡ ಭಾಗ್ಯ ಆ ಹಣವನ್ನು ಮುಟ್ಟಲೂ ತಯಾರಿಲ್ಲ.. ಇದು ನಾವು ಸಂಪಾದಿಸಿದ ಹಣವಲ್ಲ.. ಇದನ್ನು ನಾವು ಉಪಯೋಗೊಸಬಾರದು.. ಇದು ನಮಗೆ ದಕ್ಕಲ್ಲ ಎಂದು ಒಂದೇ ಸಮನೆ ಹಠ ಹಿಡಿದು ಕೂತಿದ್ದಾಳೆ. ಮನೆಯವರೆಲ್ಲ ಎಷ್ಟೇ ಕನ್ವೆನ್ಸ್ ಮಾಡಿದರೂ ಭಾಗ್ಯ ಆ ಹಣವನ್ನು ತೆಗೆದುಕೊಳ್ಳಲು ರೆಡಿಯಿಲ್ಲ. ರಾತ್ರಿ ಕುಸುಮಾಗೆ ಆದೀ ಕಾಲ್ ಮಾಡಿ ಹಣದ ಬಗ್ಗೆ ವಿಚಾರಿಸುತ್ತಾನೆ. ಭಾಗ್ಯ ಆ ಹಣವನ್ನು ತೆಗೆದುಕೊಳ್ಳುವುದಿಲ್ಲವಂತೆ ಎಂದು ಕುಸುಮಾ ಹೇಳಿದ್ದಾಳೆ.
ತಕ್ಷಣ ಭಾಗ್ಯಾಗೆ ಕಾಲ್ ಮಾಡಿದ ಆದೀಶ್ವರ್, ಈ ದುಡ್ಡು ನಿಮಗೇ ಸೇರಬೇಕಾಗಿರುವುದು ಎಂದು ಹೇಳಿದ್ದಾನೆ. ಭಾಗ್ಯ ಇದಕ್ಕೆ ಎಷ್ಟೇ ವಿರೋಧ ಮಾಡಿದರೂ ಆದೀ ಒಪ್ಪಲು ರೆಡಿಯಿಲ್ಲ.. ಸದ್ಯ ಇವರಿಬ್ಬರ ಮಧ್ಯೆ ಇದೇ ವಿಚಾರಕ್ಕೆ ಮುದ್ದಾದ ಜಗಳ ಶುರುವಾಗಿದೆ. ಭಾಗ್ಯಾ ಈ ಹಣವನ್ನು ತೆಗೆದುಕೊಳ್ಳುವುದು ಅನುಮಾನ.. ಹೀಗಿರುವಾಗ ಮುಂದೆ ಈ ಹಣವನ್ನು ಏನು ಮಾಡುತ್ತಾಳೆ.. ಆದೀ ಇನ್ನೇನು ಮಾಡುತ್ತಾನೆ.. ಎಂಬುದು ನೋಡಬೇಕಿದೆ.
Chandan Shetty-Niveditha: ಬಾಹ್ಯ ಸೌಂದರ್ಯಕ್ಕಿಂತ ಅವರ ಮನಸ್ಸನ್ನು ಪ್ರೀತಿಸಿಬೇಕು: ಚಂದನ್ ಶೆಟ್ಟಿ ನೇರ ಮಾತು