ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Serial) ಆದೀಶ್ವರ್ ಕಾಮತ್ ಹಾಗೂ ಭಾಗ್ಯ ನಡುವಣ ಎಪಿಸೋಡ್ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಆದೀಯ ದೊಡ್ಡ ಪ್ರಾಜೆಕ್ಟ್ ಒಂದು ಭಾಗ್ಯಾಳ ಕೃಪೆಯಿಂದ ಪುನಃ ಸಿಕ್ಕಿದ ಕಾರಣ ಆಕೆಗೆ 25 ಲಕ್ಷ ರೂ. ಗಿಫ್ಟ್ ನೀಡಿದ್ದಾನೆ. ಆದರೆ, ಸ್ವಾಭಿಮಾನಿ ಭಾಗ್ಯಾಗೆ ಈ ಹಣ ಭಾರವಾಗಿದೆ. ಹೀಗಾಗಿ ಅದನ್ನು ಹೇಗಾದರು ಮಾಡಿ ಆದೀಗೆ ಪುನಃ ಕೊಡಲೇ ಬೇಕು ಎಂದು ಭಾಗ್ಯ ಮುಂದಾಗಿದ್ದಾಳೆ. ಇದಕ್ಕಾ ಭಾಗ್ಯ ಏನು ಬೇಕಾದರು ಮಾಡಲು ತಯಾರಾಗಿದ್ದಾಳೆ. ಇದು ಈಗ ಒಂದು ಚಾಲೆಂಜ್ ಸ್ವೀಕರಿಸುವ ಮಟ್ಟಕ್ಕೆ ಬಂದಿದೆ. ಆದೀಶ್ವರ್, ನಾನು ಒಂದು ವಾರ ನಿಮ್ಮಂತೆ ಮಿಡಲ್ ಕ್ಲಾಸ್ನಲ್ಲಿ ಜೀವನ ಮಾಡುತ್ತೇನೆ ಎಂದು ಭಾಗ್ಯಾಗೆ ಚಾಲೆಂಜ್ ಹಾಕಿದ್ದಾನೆ. ಇದಕ್ಕೆ ಭಾಗ್ಯ ಕೂಡ ಸಮ್ಮತಿ ಸೂಚಿಸಿದ್ದಾಳೆ.
ಒಂದು ವಾರ ನಾನು ನಿಮ್ಮತರ ಜೀವನ ಮಾಡಿ ನೋಡ್ತೀನಿ.. ಅದೇನೊ ಕಷ್ಟ ಅದು-ಇದು ಅಂತ ಹೇಳ್ತೀತಿ ಅಲ್ವಾ ಅದೇನು ಅಂತ ನಾನೂ ನೋಡ್ತೀನಿ.. ಮಿಡಲ್ ಕ್ಲಾಸ್ ಜನರಿಗೆ ಇಷ್ಟೊಂದು ದುಡ್ಡು ತೆಗೊಂಡ್ರೆ ಕಷ್ಟ ಅಂತೀರಿ ಅಲ್ವಾ ಅದೇನು ಕಷ್ಟ ಅಂತ ನಾನೂ ನೋಡ್ತೀನಿ.. ಈ ಚಾಲೆಂಜ್ನಲ್ಲಿ ನಾನು ವಿನ್ ಆದ್ರೆ ಏನು ಪ್ರಶ್ನೆ ಮಾಡದೆ ಈ ದುಡ್ಡನ್ನು ನೀವು ತೆಗೋಬೇಕು.. ಅಕಸ್ಮಾತ್ ನೀವು ಗೆದ್ದರೆ ಈ ಹಣವನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಅತ್ತ ಭಾಗ್ಯ, ನೀವು ಈಗ ಜೀವಿಸ್ತಾ ಇರೋ ಜೀವನಕ್ಕೂ.. ನಮ್ಮ ಜೀವನಕ್ಕೂ ತುಂಬಾ ಬದಲಾವಣೆ ಇದೆ. ನಿಮ್ಮ ದಿನಚರಿ, ಜಾಗ ಎಲ್ಲ ಬದಲಾಗಬೇಕು.. ಅರಮನೆ ಯಂತಹ ಮನೆಯನ್ನು ಬುಟ್ಟು ಬದುಕಬೇಕು ಎಂದು ಹೇಳಿದ್ದಾಳೆ. ಭಾಗ್ಯಾಳ ಎಲ್ಲ ಮಾತಿಗೆ ಆದೀ ಒಪ್ಪಿದ್ದಾನೆ. ಅಷ್ಟೇ ಅಲ್ಲದೆ ತಾಂಡವ್ಗೆ ಕಾಲ್ ಮಾಡಿ, ಈ ಚಾಲೆಂಜ್ ವಿಷಯ ನಮ್ಮ-ನಿಮ್ಮ ಮಧ್ಯೆ ಮಾತ್ರ ಇರಲಿ.. ಬೇರೆ ಎಲ್ಲೂ ಹೇಳಬೇಡಿ.. ಹಾಗೆ ನಾನು ಆಫೀಸ್ಗೆ ಬರೋದು ಹೆಚ್ಚು ಕಡಿಮೆ ಆಗಬಹುದು.. ಸರಿಯಾದ ಸಮಯಕ್ಕೆ ಬರೋಕೆ ಆಗಲ್ಲ ಅಥವಾ ಸ್ವಲ್ಪ ಬೇಗ ಹೋಗ ಬೇಕಾಗಿ ಬರಬಹುದು.. ಸೋ ಪ್ರಾಜೆಕ್ಟ್ ಬಗ್ಗೆ ಏನೇ ಇದ್ರೂ ನೀವೇ ನೋಡಿ ಕೊಳ್ಳಬೇಕು ಎಂದು ಹೇಳಿದ್ದಾನೆ. ಇದು ತಾಂಡವ್ಗೆ ಕೋಪ ತರಿಸಿದೆ.. ಆ ಭಾಗ್ಯ ಮಾತು ಕೇಳಿ ಆದೀ ಬ್ರೋಗು ತಲೆ ಕೆಟ್ಟಿದೆ ಎಂದಿದ್ದಾನೆ.
ಮರುದಿನ ಆದೀಶ್ವರ್ ನೇರವಾಗಿ ಭಾಗ್ಯ ಮನೆಗೆ ಬಂದಿದ್ದಾನೆ. ಆದರೆ, ಈ ಚಾಲೆಂಜ್ ವಿಚಾರ ಭಾಗ್ಯ ಮನೆಯಲ್ಲಿ ಯಾರಿಗೂ ತಿಳಿದಿರುವುದಿಲ್ಲ.. ಸ್ವತಃ ಆದೀಗೆ ಕುಸುಮಾ ಹಾಗೂ ಎಲ್ಲರಿಗೂ ಇದರ ಬಗ್ಗೆ ಹೇಳುತ್ತಾನೆ. ಕುಸುಮಾ ಇದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ.. ಸಣ್ಣ ಮಕ್ಕಳ ರೀತಿ ಏನಿದು ಚಾಲೆಂಜ್.. ನೀವು ದೊಡ್ಡವರು ಅಲ್ಲಿದ್ದರೆ ಚೆಂದ ಎಂದು ಹೇಳುತ್ತಾರೆ. ಆದರೆ ಆದೀ, ಇಲ್ಲ ಇದನ್ನ ನಾನು ಚಾಲೆಂಜ್ ಆಗಿಯೇ ಸ್ವೀಕರಿಸಿದ್ದೇನೆ ಮತ್ತು ಇದರಲ್ಲಿ ಗೆದ್ದು ಆ 25 ಲಕ್ಷ ಭಾಗ್ಯ ಅವರೇ ಇಟ್ಟು ಕೊಳ್ಳುವ ಹಾಗೆ ಮಾಡುತ್ತೇನೆ ಎಂದಿದ್ದಾನೆ.
BB 19: ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ ಟ್ರಾನ್ಸ್ಜೆಂಡರ್: ಯಾರು ನೋಡಿ
ಭಾಗ್ಯ ಮತ್ತೊಮ್ಮೆ ಇದೆಲ್ಲ ಬೇಡ ಎಂದರೂ ಆದೀಶ್ವರ್ ಒಪ್ಪುತ್ತಿಲ್ಲ.. ಕೊನೆಯಲ್ಲಿ ಬೇರೆ ದಾರಿಯಿಲ್ಲದೆ ಇಬ್ಬರೂ ಚಾಲೆಂಜ್ಗ ರೆಡಿಯಾಗಿದ್ದಾರೆ. ಮನೆಯ ಕೆಲಸ ಎಲ್ಲ ನೀವೇ ಮಾಡಬೇಕು.. ಒಂದು ವಾರಕ್ಕೆ ಮೂರು ಶರ್ಟ್, ಎರಡು ಪ್ಯಾಂಟ್ ಅಷ್ಟೇ ಉಪಯೋಗಿಸಬೇಕು.. ದಿನಕ್ಕೆ 150 ರೂಪಾಯಿ ಅಷ್ಟೇ ಖರ್ಚು ಮಾಡಬೇಕು.. ನೀವು ಕಾಮತ್ ಫ್ಯಾಮಿಲಿ ಅವರು ಅಂತ ಎಲ್ಲೂ ಪವರ್ ಯೂಸ್ ಮಾಡಬಾರದು ಎಂದು ಭಾಗ್ಯ ಆದೀಶ್ವರ್ ಬಳಿ ಹೇಳಿದ್ದಾಳೆ.
ಇದನ್ನೆಲ್ಲ ಕೇಳಿ ಆದೀಗೆ ಒಮ್ಮೆ ಶಾಕ್ ಆಗಿದೆ.. ಆದರೆ, ಈ ಜೀವನ ಹೇಗೆ ಇರುತ್ತೆ ಎಂಬುದನ್ನು ತಿಳಿಯಲು ಕೂಡ ಆದೀ ಉತ್ಸುಕನಾಗಿದ್ದಾನೆ. ಹೀಗಾಗಿ ಮುಂದಿನ ಎಪಿಸೋಡ್ನಲ್ಲಿ ಆದೀ ಇದನ್ನ ಹೇಗೆ ಮಾಡುತ್ತಾನೆ?, ಅತ್ತ ಮನೆಯಲ್ಲಿ ಏನು ಕಾರಣ ಹೇಳುತ್ತಾನೆ?, ಆಫೀಸ್ ಪ್ರಾಜೆಕ್ಟ್ ಏನಾಗುತ್ತದೆ ಎಂಬ ವಿಚಾರವೆಲ್ಲ ಕುತೂಹಲ ಕೆರಳಿಸಿದೆ.