ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್, ಭಾಗ್ಯಾಗೆ ಚಾಲೆಂಜ್ ಮಾಡಿ ಒಂದು ವಾರ ನಾನು ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಭಾಗ್ಯ ಕೂಡ ಒಪ್ಪಿದ್ದಾಳೆ. ಅದರಂತೆ ಆದೀ ಭಾಗ್ಯ ಮನೆಗೆ ಬಂದು ಏಳು ದಿನಗಳ ಚಾಲೆಂಜ್ ಅನ್ನು ಆದೀ ಶುರುಮಾಡಿದ್ದಾನೆ. ಆದರೆ, ಮೊದಲ ದಿನವೇ ಆದೀಗೆ ರೋಸಿ ಹೋಗಿದೆ. 150 ರೂಪಾಯಿಗಿಂತ ಹೆಚ್ಚಿ ಖರ್ಚು ಮಾಡದಂತೆ ಹಾಗೂ ಸಾಮಾನ್ಯ ಮಿಡಲ್ ಕ್ಲಾಸ್ ಜನರಂತೆ ಇರಬೇಕಿರುವುದರಿಂದ ಆದೀ ಕೋಟ್, ಕಾರಿಲ್ಲದೆ ಆಫೀಸ್ಗೆ ಬಂದಿದ್ದಾನೆ.
ಹೌದು, ಮೊದಲ ದಿನವೇ ಆದೀಗೆ ಬೆವರಿಳಿದು ಹೋಗಿದೆ. ಭಾಗ್ಯ ಮನೆಗೆ ಸ್ಯೂಟ್ ಕೇಸ್ ಹಿಡಿದುಕೊಂಡು ಬಂದ ಆದೀಗೆ ಭಾಗ್ಯ ಉಳಿದುಕೊಳ್ಳಲು ರೂಮ್ ಕೀ ಕೊಟ್ಟಿದ್ದಾಳೆ. ರೂಮ್ಗೆ ಕಾಲಿಟ್ಟೊಡನೆ ಆದೀಗೆ ಶಾಕ್ ಆಗಿದೆ. ಧೂಳು-ಕಸದಿಂದ ಆ ಸಣ್ಣ ರೂಮ್ ಫುಲ್ ಗಲೀಜು ಆಗಿತ್ತು. ಇದರ ಎಲ್ಲ ಕ್ಲೀನಿಂಗ್ ಕೆಲಸ ಮುಗಿಯುವ ಹೊತ್ತಿಗೆ ಆದೀಗೆ ಸುಸ್ತಾಗಿದೆ. ಸ್ವಲ್ಪ ಸಮಯ ರೆಸ್ಟ್ ಮಾಡಿ ನಂತರ ಆಫೀಸ್ಗೆ ಹೊರಟಿದ್ದಾನೆ.
ಆದರೆ, ಅಷ್ಟೊತ್ತಿಗೆ ಮಧ್ಯಾಹ್ನ ಆಗಿರುತ್ತದೆ. ತಿಂಡಿ ಕೂಡ ಆಗಿಲ್ಲ.. ಡೈರೆಕ್ಟ್ ಊಟ ಮಾಡ್ಕೊಂಡೆ ಆಫೀಸ್ ಹೋಗೋಣ ಎಂದು ರೋಡ್ ಸೈಡ್ ಗಾಡಿಯಲ್ಲಿ 40 ರೂಪಾಯಿಗೆ ಅಲ್ಲಿಯೇ ಊಟ ಮಾಡಿದ್ದಾನೆ. ಬಳಿಕ ಬಸ್ ಏರಿ ಆಫೀಸ್ ತಲುಪಿದ್ದಾನೆ. ಆದರೆ, ಇದಕ್ಕೂ ಮುನ್ನ ತಾಂಡವ್ಗೆ ಆದೀಗೆ ಅನೇಕ ಬಾರಿ ಕಾಲ್ ಮಾಡಿದ್ದ. ಆಫೀಸ್ನಲ್ಲಿ ಪ್ರಾಜೆಕ್ಟ್ ವಿಚಾರವಾಗಿ ಇಂಪಾರ್ಟೆಂಟ್ ಮೀಟಿಂಗ್ ಇತ್ತು. ಇದಕ್ಕೆ ಆದೀ ಕೂಡ ಇರಬೇಕಿತ್ತು. ಬಳಿಕ ಹೇಗೋ ತಡವಾಗಿ ಆದರೂ ಆದೀ ಆಫೀಸ್ಗೆ ಬಂದಿದ್ದಾನೆ.
ಮಧ್ಯಾಹ್ನ ಆಫೀಸ್ಗೆ ಬಂದು ತನ್ನ ಸ್ಟಾಫ್ ನವರಿಗೆ ಗುಡ್ ಮಾರ್ನಿಂಗ್ ಎಂದು ಹೇಳಿದ್ದಾನೆ. ಅಲ್ಲದೆ ಆದೀಯ ಐರನ್ ಮಾಡದ ಡ್ರೆಸ್, ಟೈ- ಕೋಟ್ ಇಲ್ಲದೆ ಸಾಮಾನ್ಯ ಜನರಂತೆ ಡ್ರೆಸ್ ಮಾಡಿ ಬಂದಿರುವುದನ್ನು ಕಂಡು ಆಫೀಸ್ ಸ್ಟಾರ್ ಒಬ್ಬರೊಬ್ಬರು ಮಾತನಾಡಿಕೊಳ್ಳುತ್ತಾರೆ. ಅತ್ತ ತಾಂಡವ್ ಕೂಡ ಇದನ್ನು ಕಂಡು, ಏನು ಬ್ರೋ ಇದೆಲ್ಲ.. ಆ ಹೆಂಗಸಿಗೋಸ್ಕರ ಇಷ್ಟೆಲ್ಲ ಮಾಡಬೇಕು ಎಂದು ಹೇಳಿದ್ದಾನೆ. ಅದಕ್ಕೆ ಆದೀ ಇದೆಲ್ಲ ಆಗಲೇಬೇಕು ಎಂದಿದ್ದಾನೆ.
ಆದೀಯ ಡ್ರೆಸ್ ನೋಡಲಾಗದೆ ನೀವು ಹೀಗೆ ಮೀಟಿಂಗ್ ಅಟೆಂಡ್ ಆದ್ರೆ ಚೆನ್ನಾಗಿರಲ್ಲ ಎಂದು ತಾಂಡವ್ ತನ್ನ ಕೋಟ್ ಅನ್ನು ತೆಗೆದು ಆದೀಗೆ ಕೊಟ್ಟಿದ್ದಾನೆ. ಬಳಿಕ ಇಬ್ಬರೂ ಮೀಟಿಂಗ್ ಅಟೆಂಡ್ ಆಗಿ ಅದು ಯಶಸ್ವಿಯಾಗಿದೆ. ಮೀಟಿಂಗ್ ಮುಗಿದ ಬಳಿಕ ಆದೀಶ್ವರ್, ತಾಂಡವ್ಗೆ ಮತ್ತೊಂದು ಶಾಕ್ ಕೊಟ್ಟಿದ್ದಾನೆ. ನಾಳೆಯಿಂದ ನಾನು ವರ್ಕ್ ಫ್ರಂ ಹೋಮ್ ಮಾಡುತ್ತೇನೆ.. ನೀವು ಕಂಪನಿಗೆ ಬಂದು ಹೆಚ್ಚಿನ ವ್ಯವಹಾರ ನೋಡಬೇಕಾಗುತ್ತದೆ ಎಂದಿದ್ದಾನೆ.
ಮತ್ತೊಂದೆಡೆ ಅತ್ತ ಆದೀಶ್ವರ್ ಮನೆಯಲ್ಲಿ ಈ ಚಾಲೆಂಜ್ ಬಗ್ಗೆ ಹೇಳುವಂತಿಲ್ಲ.. ಹೀಗಾಗಿ ಸುಳ್ಳು ಹೇಳಿದ್ದಾನೆ. ತುಂಬಾ ಇಂಪಾರ್ಟೆಂಟ್ ಕೆಲಸ ಒಂದಿದೆ.. ಒಂದು ವಾರದ ಮಟ್ಟಿಗೆ ನಾನು ಹೊರಗೆ ಹೋಗುತ್ತಿದ್ದೇನೆ.. ನಾನು ಅಲ್ಲೇ ಇದ್ದು ಆ ಕೆಲಸ ಮಾಡಿಕೊಳ್ಳಬೇಕು, ಹೀಗಾಗಿ ಅಲ್ಲೆ ಉಳಿದುಕೊಳ್ಳುತ್ತೇನೆ.. ಹೀಗಾಗಿ ಮನೆ ಕಡೆ ಬರೋಕೆ ಆಗಲ್ಲ ಎಂದಿದ್ದಾನೆ. ಇದು ಕನ್ನಿಕಾ-ಮೀನಾಕ್ಷಿಗೆ ಅನುಮಾನ ಮೂಡಿಸಿದೆ. ಅಲ್ಲದೆ ಆಫೀಸ್ಗೆ ಲೇಟ್ ಆಗಿ ಬಂದಿದ್ದಾನೆ ಎಂದು ಮಾಹಿತಿ ಕನ್ನಿಕಾಗೆ ಸಿಗುತ್ತದೆ. ಇಷ್ಟೇ ಅಲ್ಲದೆ ಆದೀ ವರ್ಕ್ ಫ್ರಂ ಹೋಮ್ ಮಾಡುತ್ತಿರುವ ಮಾಹಿತಿ ಕೂಡ ಕನ್ನಿಕಾಗೆ ಲಭ್ಯವಾಗಿದೆ. ಇದು ಕನ್ನಿಕಾ ಅನುಮಾನವನ್ನು ಹೆಚ್ಚಿಸಿದೆ.
ಇನ್ನು ರಾತ್ರಿ ಭಾಗ್ಯಾಗೆ ಗೊತ್ತಾಗದಂತೆ ಕುಸುಮಾ ಅವರು ಆದೀಗೆ ಸ್ಪೆಷಲ್ ತಿಂಡಿ ಕೊಡಲು ಮುಂದಾಗಿದ್ದರು. ಆದರೆ, ಇದು ಭಾಗ್ಯ ಕಣ್ಣಿಗೆ ಕಂಡಿದೆ. ನೀವು ಈರೀತಿ ಮಾಡುವುದು ಸರಿಯಿಲ್ಲ ಅತ್ತೆ.. ಅವರಿಗೆ ಕಷ್ಟ ಆಗುತ್ತೆ ಅಂತ ಅಂದ್ರೆ ಈ ಚಾಲೆಂಜ್ ಬಿಟ್ಟು ಆ ಹಣವನ್ನು ತೆಗೆದುಕೊಂಡು ಹೋಗಲು ಹೇಳಿ ಎಂದಿದ್ದಾಳೆ. ಸದ್ಯ ಆದೀಶ್ವರ್ ಮೊದಲ ದಿನವನ್ನು ಹೇಗೋ ಕಷ್ಟಪಟ್ಟು ಕಳೆದಿದ್ದಾನೆ. ಎರಡನೇ ದಿನ ಹೇಗಿರುತ್ತೆ..? ಅತ್ತ ಕನ್ನಿಕಾಗೆ ಸತ್ಯ ತಿಳಿಯುತ್ತ ಎಂಬುದೆಲ್ಲ ನೋಡಬೇಕಿದೆ.
Bigg Boss 19: ಬಿಗ್ ಬಾಸ್ ಮನೆಗೆ ಹಾನಿ: ಅಂದುಕೊಂಡ ಸಮಯಕ್ಕೆ ಶೋ ಆರಂಭ ಅನುಮಾನ