ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್ ತನ್ನ ಮಿಡಲ್ ಕ್ಲಾಸ್ ಜೀವನವನ್ನು ಶುರು ಮಾಡಿ ಕಷ್ಟವಾದರೂ ಮೊದಲ ದಿನವನ್ನು ಮುಗಿಸಿದ್ದಾನೆ. ಆದೀ ಕೊಟ್ಟ 25 ಲಕ್ಷ ಗಿಫ್ಟ್ ಭಾಗ್ಯ ತೆಗೆದುಕೊಳ್ಳದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾನೆ. ಒಂದು ವಾರ ನಾನು ನಿಮ್ಮತರ ಜೀವನ ಮಾಡಿ ನೋಡ್ತೀನಿ.. ಮಿಡಲ್ ಕ್ಲಾಸ್ ಜನರಿಗೆ ಇಷ್ಟೊಂದು ದುಡ್ಡು ತೆಗೊಂಡ್ರೆ ಕಷ್ಟ ಅಂತೀರಿ ಅಲ್ವಾ ಅದೇನು ಕಷ್ಟ ಅಂತ ನಾನೂ ನೋಡ್ತೀನಿ.. ಈ ಚಾಲೆಂಜ್ನಲ್ಲಿ ನಾನು ವಿನ್ ಆದ್ರೆ ಏನು ಪ್ರಶ್ನೆ ಮಾಡದೆ ಈ ದುಡ್ಡನ್ನು ನೀವು ತೆಗೋಬೇಕು.. ಅಕಸ್ಮಾತ್ ನೀವು ಗೆದ್ದರೆ ಈ ಹಣವನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾನೆ.
ಇದಕ್ಕೆ ಭಾಗ್ಯ ಕೂಡ ಒಪ್ಪಿದ್ದಾಳೆ. ಅದರಂತೆ ಆದೀ ಭಾಗ್ಯ ಮನೆಗೆ ಬಂದು ಏಳು ದಿನಗಳ ಚಾಲೆಂಜ್ ಅನ್ನು ಶುರುಮಾಡಿದ್ದಾನೆ. ಆದರೆ, ಮೊದಲ ದಿನ ಆದೀಗೆ ರೋಸಿ ಹೋಗಿದೆ. 150 ರೂಪಾಯಿಗಿಂತ ಹೆಚ್ಚಿ ಖರ್ಚು ಮಾಡದಂತೆ ಹಾಗೂ ಸಾಮಾನ್ಯ ಮಿಡಲ್ ಕ್ಲಾಸ್ ಜನರಂತೆ ಇರಬೇಕಿರುವುದರಿಂದ ಹೈ-ಫೈ ಜೀವನ ನಡೆಸಿರುವ ಆದೀಗೆ ಇದು ಕೊಂಚ ಕಷ್ಟವಾಗಿದೆ. ಆದರೆ, ಇದನ್ನೆಲ್ಲ ತೋರಿಸಿಕೊಡದೆ ಭಾಗ್ಯ ಮನೆಯವರಲ್ಲಿ ಒಬ್ಬನಾಗಿದ್ದಾನೆ. ಇದರ ಮಧ್ಯೆ ಆದೀ ಗುಂಡಣ್ಣನಿಗೆ ಬಾಕ್ಸಿಂಗ್ ಕಲಿಸಲು ಮುಂದಾಗಿದ್ದಾನೆ.
ಕೆಲ ದಿನಗಳ ಹಿಂದೆ ತನ್ಮಯ್ಗೆ ಸ್ಕೂಲ್ನಲ್ಲಿ ತುಂಬಾ ಅವಮಾನ ಆಗಿತ್ತು. ರನ್ನಿಂಗ್ ರೇಸ್ ಸ್ಪರ್ಧೆಗೆ ಯಾರೆಲ್ಲ ಭಾಗವಹಿಸುತ್ತೀರಿ ಎಂದು ಪಿಟಿ ಸರ್ ಕೇಳಿದಾಗ ತನ್ಮಯ್ ಕೂಡ ಕೈ ಎತ್ತಿದ್ದ. ಆಗ ಗುಂಡು-ಗುಂಡಾಗಿರುವ ತನ್ಮಯ್ನ ನೋಡಿ ಎಲ್ಲರೂ ನಕ್ಕಿದ್ದರು. ನೀನು ಓಡ್ತೀಯಾ..?, ನಿನ್ನ ಕೈಯಿಂದ ಓಡೋಕೆ ಆಗುತ್ತ, ಇಷ್ಟೊಂದು ದಪ್ಪ ಇದ್ದೀಯಾ ಎಂದು ಕೆಲ ಹುಡುಗರು ರೇಗಿಸಿದ್ದಾರೆ. ಇದು ಗುಂಡಣ್ಣ/ ತನ್ಮಯ್ಗೆ ತುಂಬಾ ಬೇಜಾರು ಮಾಡಿದೆ. ಮನೆಗೆ ಬಂದವನೇ ತಾನು ಜಿಮ್ಗೆ ಸೇರಬೇಕು ಎಂದು ಹಠ ಹಿಡಿದಿದ್ದಾನೆ.
ಆದರೆ, ಭಾಗ್ಯ ತನ್ಮಯ್ನನ್ನು ಜಿಮ್ಗೆಲ್ಲ ಸೇರಿಸಲ್ಲ ಎಂದು ಹೇಳಿದ್ದಾಳೆ. ಎಷ್ಟೇ ಹಠ ಹಿಡಿದರೂ ಇದಕ್ಕೆ ಭಾಗ್ಯ ಒಪ್ಪಿಲ್ಲ. ಬಳಿಕ ಸರಿ ಜಿಮ್ ಬೇಡ.. ನಾನು ಬಾಕ್ಸಿಂಗ್ ಕಲೀಬೇಕು ಎಂದು ಹಠ ಹಿಡಿದಿದ್ದಾನೆ. ಇದಕ್ಕೂ ಭಾಗ್ಯ ಒಪ್ಪಿಲ್ಲ.. ಹಣವಿಲ್ಲ.. ನಮ್ಮ ಮನೆ ಹತ್ತಿರ ಕಲಿಸುವವರು ಯಾರೂ ಇಲ್ಲ ಎಂದು ಕಾರಣ ನೀಡಿದ್ದಾಳೆ. ಆದರೆ, ಗುಂಡಣ್ಣ ಊಟ-ತಿಂಡಿ ಬಿಟ್ಟು ನನಗೆ ಬಾಕ್ಸಿಂಗ್ ಸೇರಲೇಬೇಕು ಎಂದು ಹೇಳಿದ್ದಾನೆ. ಬಳಿಕ ಆದೀಶ್ವರ್ ನಾನು ಬಾಕ್ಸಿಂಗ್ ಹೇಳಿ ಕೊಡುತ್ತೇನೆ ಎಂದು ಹೇಳಿದ್ದಾನೆ.
ನೀನು ಚಿಪ್ಸ್, ಐಸ್ಕ್ರೀಂ ಎಲ್ಲ ತಿನ್ನಂಗಿಲ್ಲ.. ಬೆಳಗ್ಗೆ ಬೇಗ ಏಳಬೇಕು.. ಇದಲ್ಲ ಆಗುತ್ತ ಎಂದು ಆದೀ ಕೇಳಿದ್ದಾನೆ.. ಗುಂಡಣ್ಣ ಇದಕ್ಕೆಲ್ಲ ಒಕೆ ಹೇಳಿ ಬೆಳಗ್ಗೆ ಬೇಗ ಎದ್ದು ಆದೀ ರೂಮ್ ಬಳಿ ಬಂದಿದ್ದಾನೆ. ಬಳಿಕ ಇಬ್ಬರೂ ಪಾರ್ಕ್ನಲ್ಲಿ ಜಾಗಿಂಗ್ ಎಕ್ಸಸೈಸ್ ಮಾಡಿದ್ದಾರೆ. ನನಗೆ ಬಾಕ್ಸಿಂಗ್ ಕಲಿಬೇಕು ಇದಲ್ಲ ಎಂದು ಗುಂಡಣ್ಣ ಹೇಳಿದರೂ ಆದೀಶ್ವರ್ ತನ್ನ ಮಾತಿನ ಚಳಕದಿಂದ ಗುಂಡಣ್ಣನನ್ನು ಓಡಿಸಿ ಸಣ್ಣ ಮಾಡಲು ಹೊರಟಿದ್ದಾನೆ.
ಇನ್ನು ಭಾಗ್ಯ ಆದೀಶ್ವರ್ ಬಳಿ ಈ ಸವಾಲು ಬಿಟ್ಟು ಲಗೇಜ್ ಹಿಡ್ಕೊಂಡು ಮನೆಬಿಟ್ಟು ಹೋಗಿ ಎಂದು ಮತ್ತೊಮ್ಮೆ ರಿಕ್ವೆಸ್ಟ್ ಮಾಡಿದ್ದಾಳೆ. ಇದಕ್ಕೆ ಕಾರಣ ಪೂಜಾ.. ಪೂಜಾ ಭಾಗ್ಯಾಗೆ ಕಾಲ್ ಮಾಡಿ ನಾವು ಹನುಮೂನ್ ಹೋಗುವುದು ಪೋಸ್ಟ್ ಪೋನ್ ಆಗಿದೆ ಎಂದು ಹೇಳಿದ್ದಾಳೆ. ಯಾಕೆ ಎಂದು ಕೇಳಿದಾಗ, ಅದು ಆದೀ ಅವರು ತುಂಬಾ ಇಂಪಾರ್ಟೆಂಟ್ ಕೆಲಸ ಇದೆ ಎಂದು ಹೊರಗಡೆ ಹೋಗಿದ್ದಾರೆ.. ಅವರು ಒಂದು ಇರುವುದಿಲ್ಲ.. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲ ಅಂತ ಆಗುತ್ತೆ.. ಅದಕ್ಕೆ ನಾವು ಪೋಸ್ಟ್ ಪೋನ್ ಮಾಡಿದೆವು ಎಂದಿದ್ದಾಳೆ. ಇದು ಭಾಗ್ಯಾಗೆ ಬೇಸರ ತರಿಸಿದೆ.. ನನ್ನಿಂದನೇ ಇದೆಲ್ಲ ಆಗುತ್ತಿರುವುದು ಎಂದು ಅಂದುಕೊಂಡಿದ್ದಾಳೆ.
ಹೀಗಾಗಿ ಆದೀ ಬಳಿ ಹೋಗಿ ಮನೆಗೆ ಪುನಃ ಹೋಗಿ ಎಂದಿದ್ದಾಳೆ. ಆದರೆ, ಇದಕ್ಕೆ ಆದೀಶ್ವರ್ ಒಪ್ಪಿಲ್ಲ.. ನಾನು ಈ ಚಾಲೆಂಜ್ ಯಶಸ್ವಿಯಾಗಿ ಕಂಪ್ಲೀಟ್ ಮಾಡಿ, ನಿಮಗೆ ಆ ಹಣವನ್ನು ಪುನಃ ಕೊಟ್ಟೇ ಹೋಗೋದು ಎಂದಿದ್ದಾನೆ. ಅಲ್ಲದೆ ಅವರು ಹನಿಮೂನ್ ಹೋಗಲು ನಾನು ಕಿಶನ್ ಬಳಿ ಮಾತಾಡಿ ವ್ಯವಸ್ಥೆ ಮಾಡುತ್ತೇನೆ ಎಂಬ ಭರವಸೆ ನೀಡಿದ್ದಾನೆ.