ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ಹಾಗೂ ಆದೀಶ್ವರ್ ಒಂದಲ್ಲ ಎಂದು ವಿಚಾರದಿಂದ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಇದರ ನಡುವೆ ತಾಂಡವ್ ಕೂಡ ಆದೀಗೆ ಕ್ಲೋಸ್ ಆಗಿದ್ದಾನೆ. ಆದರೆ, ಭಾಗ್ಯ ಹಾಗೂ ತಾಂಡವ್ ನಡುವಿನ ಸಂಬಂಧದ ಬಗ್ಗೆ ಆದೀಶ್ವರ್ಗೆ ಇನ್ನೂ ತಿಳಿದಿಲ್ಲ. ತಾಂಡವ್-ಆದೀ ಒಂದು ಬಹುದೊಡ್ಡ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ. ಇದರ ಅಪ್ರೂವಲ್ ಹಾಗೂ ಇನ್ವೆಸ್ಟ್ಮೆಂಟ್ಗೆ ಒಂದು ಮೀಟಿಂಗ್ ಕರೆದಿರುತ್ತಾರೆ. ಆದರೆ, ಈ ಮೀಟಿಂಗ್ಗೆ ಬರುವ ಬರದಲ್ಲಿ ತಾಂಡವ್ ಒಂದು ಫೈಲ್ ಅನ್ನು ಮಿಸ್ ಮಾಡಿದ್ದಾನೆ. ಇದನ್ನ ಕಂಡ ಭಾಗ್ಯ ಫೈಲ್ ಅನ್ನು ಆಫೀಸ್ಗೆ ತಂದುಕೊಟ್ಟಿದ್ದಾಳೆ.
ಭಾಗ್ಯ ತಂಗಿ ಪೂಜಾ ಮನೆಗೆ ಬಂದಾಗ ಮನೆಯ ಮಾಳಿಗೆಯಲ್ಲಿ ಆದೀಶ್ವರ್ ಹಾಗೂ ತಾಂಡವ್ ಪ್ರಾಜೆಕ್ಟ್ ಕುರಿತು ಮಾತನಾಡುತ್ತಾ ಇರುತ್ತಾರೆ.. ಅಲ್ಲಿ ಆದೀಶ್ವರ್ ತಾಂಡವ್ ಬಳಿ ಒಂದು ಕೆಂಪು ಬಣ್ಣದ ಫೈಲ್ ಕೊಟ್ಟು, ಈ ಫೈಲ್ ತುಂಬಾ ಇಂಪಾರ್ಟೆಂಟ್ ಇವತ್ತು ಪ್ರಾಜೆಕ್ಟ್ ಅಪ್ರೂವ್ ಆಗಬೇಕು ಎಂದರೆ ಈ ಫೈಲ್ ಬೇಕೇಬೇಕು.. ಇದನ್ನು ಮಿಸ್ ಮಾಡಲೇ ಬಾರದು ಎಂದು ಹೇಳಿದ್ದಾನೆ.
ಆದರೆ, ತಾಂಡವ್ ಕಾರಿಗೆ ಹತ್ತುವಾಗ ಆ ಕೆಂಪು ಬಣ್ಣದ ಇಂಪಾರ್ಟೆಂಟ್ ಫೈಲ್ ಆತನ ಕೈ ಜಾರಿ ಕೆಳಗೆ ಬೀಳುತ್ತದೆ.. ತಾಂಡವ್ಗೆ ಇದು ಗೊತ್ತಾಗುವುದಿಲ್ಲ.. ಭಾಗ್ಯ ಇದನ್ನು ನೋಡುತ್ತಾಳೆ. ತಾಂಡವ್-ಆದೀ ಆಫೀಸ್ಗೆ ತೆರಳಿ ಪ್ರಾಜೆಕ್ಟ್ ಕುರಿತು ಫಾರಿನ್ ಇನ್ವೆಸ್ಟರ್ಗಳಿಗೆ ವಿವರಿಸಲು ಮುಂದಾಗುತ್ತಾರೆ. ಕೆಂಪು ಬಣ್ಣದ ಫೈಲ್ನಲ್ಲಿರುವ ವಿಷಯವನ್ನು ಹೇಳಲು ಹೊರಟಾಗ ತಾಂಡವ್ಗೆ ಆ ಫೈಲ್ ಕಾಣಿಸುವುದಿಲ್ಲ.. ತಾಂಡವ್ ಫುಲ್ ಟೆನ್ಶನ್ ಆಗುತ್ತಾನೆ. ಅತ್ತ ಭಾಗ್ಯ ಆ ಫೈಲ್ನ ಅಗತ್ಯತೆ ಅರಿದು ಅದನ್ನು ಹಿಡಿದುಕೊಂಡು ಆಫೀಸ್ಗೆ ಬಂದಿದ್ದಾಳೆ.
ಆದರೆ, ಆಫೀಸ್ನಲ್ಲಿ ಭಾಗ್ಯಾಳನ್ನು ಸೆಕ್ಯುರಿಟಿ ಒಳಗೆ ಬಿಡುವುದಿಲ್ಲ. ಬಳಿಕ ಸೆಕ್ಯುರಿಟಿಯ ಮಾತು ಕೇಳದೆ ಆ ಫೈಲ್ ಹಿಡಿದುಕೊಂಡು ಆಫೀಸ್ ಒಳಗೆ ಹೋಗಿದ್ದಾಳೆ. ತಾಂಡವ್-ಆದೀ ಫೈಲ್ ಇಲ್ಲ ಎಂದು ಚಡಪಡಿಸುತ್ತಿರುವಾಗ ಅಲ್ಲಿಗೆ ಭಾಗ್ಯ ಬಂದಿದ್ದಾಳೆ. ಭಾಗ್ಯ ಕೈಯಲ್ಲಿ ಆ ಕೆಂಪು ಬಣ್ಣದ ಫೈಲ್ ಕಂಡು ಆದೀಶ್ವರ್ಗೆ ತುಂಬಾ ಖುಷಿ ಆಗುತ್ತದೆ, ತಾಂಡವ್ಗೆ ಶಾಕ್ ಆಗುತ್ತದೆ. ಪ್ರಾಜೆಕ್ಟ್ ಅಪ್ರೂವ್ ಆಗಿ ಎಲ್ಲರೂ ಖುಷಿ ಪಡುತ್ತಾರೆ.
ಹೊರಬಂದು ಆದೀಶ್ವರ್ ಭಾಗ್ಯಾಗೆ ತುಂಬಾ ಥ್ಯಾಂಕ್ಸ್ ಎಂದು ಹೇಳುತ್ತಾನೆ.. ಈ ಫೈಲ್ ನೀವು ತಂದುಕೊಟ್ಟಿಲ್ಲ ಎಂದಾದರೆ ನಮಗೆ ತುಂಬಾ ಲಾಸ್ ಆಗುತ್ತಿತ್ತು.. ಇವತ್ತು ನೀವು ದೇವರ ರೀತಿ ಬಂದ್ರಿ ಎಂದಿದ್ದಾನೆ. ತಾಂಡವ್ ಬಳಿಯೂ ಥ್ಯಾಂಕ್ಸ್ ಹೇಳಲು ಹೇಳುತ್ತಾನೆ, ತಾಂಡವ್ ಒಲ್ಲದ ಮನಸ್ಸಿನಿಂದ ಥ್ಯಾಂಕ್ಸ್ ಎಂದು ಹೇಳುತ್ತಾನೆ. ಇದಾದ ಬಳಿಕ ಎಲ್ಲರೂ ಊಟ ಮಾಡೋಣ ಎಂದು ಆದೀ ಹೇಳಿದಾಗ ಭಾಗ್ಯ ಬೇಡ ನಾನು ಹೊರಡುತ್ತೇನೆ, ಸ್ವಲ್ಪ ಕೆಲಸ ಇದೆ ಎನ್ನುತ್ತಾಳೆ. ಆದರೆ, ಆಕೆಯನ್ನು ಬಿಡದ ಆದೀ ನಮ್ಮೊಟ್ಟಿಗೆ ಕೂತು ಊಟ ಮಾಡಬೇಕು ಎಂದು ಒತ್ತಾಯಿಸುತ್ತಾನೆ.
ಈ ಸಂದರ್ಭ ಭಾಗ್ಯ ಊಟದ ಜೊತೆಗೆ ತಾನು ಮಾಡಿದ ಭಾಗೀ ಬಾತ್ ಅನ್ನು ಎಲ್ಲರಿಗೂ ನೀಡುತ್ತಾಳೆ. ಭಾಗ್ಯಾಳ ಕೈ ರುಚಿ ಕಂಡು ಎಲ್ಲರೂ ಆಕೆಯನ್ನು ಹೊಗಳುತ್ತಾರೆ. ಅತ್ತ ತಾಂಡವ್ಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ.. ಊಟದ ಮುಗಿದೊಡನೆ ಭಾಗ್ಯಾಳನ್ನು ಸೈಡ್ಗೆ ಕರೆದುಕೊಂಡು ಬಂದು, ದಯವಿಟ್ಟು ಇಲ್ಲಿಂದ ಹೊರಟು ಹೋಗು, ನನ್ನ-ಆದೀ ಮಧ್ಯೆ ಬರಬೇಡ.. ಇದೆಲ್ಲ ನಿನ್ನ ನಾಟಕ ಅಂತ ನನ್ಗೆ ಗೊತ್ತು ಎಂದು ಹೇಳುತ್ತಾನೆ. ಭಾಗ್ಯ ಅಲ್ಲಿಂದ ಹೊರಡುತ್ತಾಳೆ.
ಇದೇವೇಳೆ ಆದೀ-ತಾಂಡವ್ ಕೂಡ ಆಫೀಸ್ನಿಂದ ಹೊರಡುತ್ತಾರೆ. ಭಾಗ್ಯ ಹೊರಗಡೆ ನಿಂತಿರುವುದನ್ನು ಕಂಡ ಆದೀ, ತಾಂಡವ್ನನ್ನು ಕರೆದು ನೀವು ಹೋಗೋ ದಾರಿಯಲ್ಲಿ ಭಾಗ್ಯಾಳನ್ನು ಡ್ರಾಪ್ ಮಾಡಿ ಎಂದು ಹೇಳುತ್ತಾನೆ. ತಾಂಡವ್ಗೆ ಮತ್ತಷ್ಟು ಕೋಪ ಬರುತ್ತದೆ.. ಬೇಡ ನಾನು ನಡೆದುಕೊಂಡೇ ಹೋಗುತ್ತೇ.. ನನಗೆ ಹೀಗೆ ಹೋಗಲು ಇಷ್ಟ ಎಂದು ಭಾಗ್ಯ ಹೇಳಿದರೂ ಆದೀ ಕೇಳುವುದಿಲ್ಲ.. ಬಳಿಕ ತಾಂಡವ್ ಏನೋ ಹೇಳಿ ತಪ್ಪಿಸಿಕೊಳ್ಳುತ್ತಾನೆ. ಹಾಗಾದರೆ ನಾನೇ ಡ್ರಾಪ್ ಮಾಡುತ್ತೇನೆ ಎಂದು ಸ್ವತಃ ಆದೀಯೇ ಭಾಗ್ಯಾಳನ್ನು ಡ್ರಾಪ್ ಮಾಡಲು ಹೊರಟಿದ್ದಾನೆ.
ಮತ್ತೊಂದೆಡೆ ಕುಸುಮಾ ಮನೆಕಡೆ ಬರುತ್ತಿರುವಾಗ ಹತ್ತಿರದ ಮನೆಯವರ ಸ್ಥಿತಿ ಕಂಡು ಟೆನ್ಶನ್ ಮಾಡಿಕೊಂಡಿದ್ದಾಳೆ. ಹತ್ತಿರದ ಮನೆಯಲ್ಲಿ ಓರ್ವ ಮಹಿಳೆ ಮತ್ತು ಆಕೆಯ ಅಮ್ಮ ಮಾತ್ರ ಇದ್ದಾರೆ. ಆ ಮಹಿಳೆಗೆ ಡಿವೋರ್ಸ್ ಆಗಿದೆ.. ಆಕೆಯ ಅಮ್ಮನಿಗೆ ವಯಸ್ಸಾಗಿದೆ.. ನನ್ನ ನಂತರ ಇವಳೊಬ್ಬಳೇ ಈ ಸಮಾಜದಲ್ಲಿ ಇರಬೇಕು.. ಅದು ಹೇಗೆ ಇರುತ್ತಾಳೋ ಎಂದು ಕುಸುಮಾ ಬಳಿ ಹೇಳಿದ್ದಾರೆ. ಕುಸುಮಾಳಿಗೆ ಈ ಮಾತು ಭಾಗ್ಯಾಳ ಸ್ಥಿತಿಯನ್ನು ನೆನಪಿಸಿದೆ. ನಾವು ಹೋದ ಬಳಿಕ ಭಾಗ್ಯ ಒಬ್ಬಂಟಿಯಾಗಿ ಇಬ್ಬರು ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾಳೆ ಎಂಬ ಟೆನ್ಶನ್ ಕುಸುಮಾಳಿಗೆ ಶುರುವಾಗಿದೆ.
ಸದ್ಯ ಭಾಗ್ಯ ಲಕ್ಷ್ಮೀ ಧಾರಾವಾಹಿ ಕುತೂಹಲ ಮೂಡಿಸುತ್ತದೆ. ಕಳೆದ ಕೆಲವು ವಾರಗಳಿಂದ ಪ್ರಸಾರ ಕಾಣುತ್ತಿರುವ ಎಪಿಸೋಡ್ಗಳು ಜನರಿಗೆ ಕೂಡ ಇಷ್ಟವಾಗುತ್ತದೆ..ಉತ್ತಮ ಟಿಆರ್ಪಿ ಕೂಡ ಸಿಗುತ್ತಿದೆ. ಸದ್ಯ ಭಾಗ್ಯಾಳಿಗೆ ಒಂದೊಳ್ಳೆ ಜೀವನ ರೂಪಿಸಲು ಕುಸುಮಾ ಕೆಲಸ ಆರಂಭಿಸಿದಂತಿದೆ. ಇದಕ್ಕಾಗಿ ಕುಸುಮಾ ಏನು ಮಾಡುತ್ತಾಳೆ?, ಆದೀಶ್ವರ್ನ ಸಹಾಯ ಕೇಳುತ್ತಾಳಾ ಎಂಬುದು ನೋಡಬೇಕಿದೆ.
Sangeetha Sringeri: ಕೊನೆಗೂ ಒಂದು ಸಿನಿಮಾ ಒಪ್ಪಿಕೊಂಡ ಸಂಗೀತಾ ಶೃಂಗೇರಿ, ಇದು ಅಂತಿಂಥಾ ಪಾತ್ರವಲ್ಲ