ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Bhagya Lakshmi Serial: ಮಗಳ ಬರ್ತ್ ಡೇ ಸೆಲೆಬ್ರೆಟ್ ಮಾಡಲು ಕಾದು-ಕಾದು ಸುಸ್ತಾದ ಭಾಗ್ಯಾ

ಭಾಗ್ಯ ಮನೆಯಲ್ಲಿ, ಎಲ್ಲರೂ ಸೇರಿಕೊಂಡು ತನ್ವಿ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಪೂಜಾ ಮತ್ತು ಸುಂದರಿ ಮನೆಯನ್ನು ಸಿಂಗರಿಸುತ್ತಿದ್ದಾಳೆ. ಆದರೆ, ತನ್ವಿ ಎಷ್ಟೊ ಹೊತ್ತಾದರೂ ಮನೆಗೆ ಬರುವುದಿಲ್ಲ. ಭಾಗ್ಯಾ ಕಾದು ಕಾದು ಸುಸ್ತಾಗುತ್ತಾಳೆ. ಭಾಗ್ಯಾಳ ಮಗ ಗುಂಡ ಅಲ್ಲೇ ಸೋಫದಲ್ಲಿ ಮಲಗಿ ಬಿಡುತ್ತಾನೆ.

ಮಗಳ ಬರ್ತ್ ಡೇ ಸೆಲೆಬ್ರೆಟ್ ಮಾಡಲು ಕಾದು-ಕಾದು ಸುಸ್ತಾದ ಭಾಗ್ಯಾ

Bhagya Lakshmi serial

Profile Vinay Bhat Feb 19, 2025 12:11 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Kannada Serial) ಸದ್ಯ ಭಾಗ್ಯಾ ಮಗಳ ತನ್ವಿ ಬರ್ತ್ ಡೇ ಎಪಿಸೋಡ್ ಭರ್ಜರಿ ಆಗಿ ಮೂಡಿಬರುತ್ತಿದೆ. ರೆಸಾರ್ಟ್​ನಲ್ಲಿ ತಂದೆ ತಾಂಡವ್ ಹಾಗೂ ಶ್ರೇಷ್ಠಾ ಜೊತೆ ತನ್ವಿ ಅದ್ಧೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿದ್ದಾಳೆ. ಕೆಲಸ ಕಳೆದುಕೊಂಡಿರುವ ಭಾಗ್ಯಾ ಬೇರೆ ದಾರಿಯಿಲ್ಲದೆ ಜೋಕರ್ ವೇಷ ತೊಟ್ಟು ನೃತ್ಯ ಮಾಡಿದ್ದಾಳೆ. ಅದು ಕೂಡ ತನ್ನ ಮಗಳ ಬರ್ತ್ ಡೇ ಸೆಲೆಬ್ರೇಷನ್ ಪಾರ್ಟಿಗೆ. ಇದೆಲ್ಲ ಭಾಗ್ಯಾ ಮಾಡುತ್ತಿರುವುದು ತನ್ವಿಗೋಸ್ಕರನೇ.. ಆದರೆ, ತನ್ವಿ ಇದಕ್ಕೆಲ್ಲ ಬೆಲೆ ಕೊಡುತ್ತಾಳ ಎಂಬುದು ನೋಡಬೇಕಿದೆ.

ಹುಟ್ಟುಹಬ್ಬ ಭರ್ಜರಿ ಆಚರಿಸಿದ್ದಕ್ಕೆ ತಾಂಡವ್‌ಗೆ ತನ್ವಿ ಥ್ಯಾಂಕ್ಸ್ ಪಪ್ಪಾ ಎಂದು ಹೇಳಿದ್ದಾಳೆ. ಅದಕ್ಕೆ ತಾಂಡವ್, ಅಪ್ಪನಾಗಿ ಇದು ನನ್ನ ಕರ್ತವ್ಯ, ಮಗಳಿಗಾಗಿ ಇಷ್ಟೂ ಮಾಡದಿದ್ದರೆ ಹೇಗೆ ಎಂದು ಹೇಳುತ್ತಾನೆ. ನಿನ್ನ ಜತೆ ಪಪ್ಪಾ ಯಾವತ್ತೂ ಇರುತ್ತಾನೆ ಎಂದು ಹೇಳಿ ಮಗಳನ್ನು ಖುಷಿಪಡಿಸುತ್ತಾನೆ. ತನ್ವಿಗೆ ಅಪ್ಪನ ಮಾತು ಕೇಳಿ ಖುಷಿಯಾಗುತ್ತದೆ. ಅತ್ತ ಭಾಗ್ಯಾ ರೆಸಾರ್ಟ್​ನಲ್ಲಿ ಜೋಕರ್ ವೇಷ ತೊಟ್ಟಿದ್ದಕ್ಕೆ ಸಿಕ್ಕ ಹಣ ಪಡೆದುಕೊಂಡು ಮಗಳಿಗೆ ಬರ್ತ್ ಡೇ ಗಿಫ್ಟ್ ಕೊಡಿಸಲು ಮೊಬೈಲ್ ಶಾಪ್​ಗೆ ಹೋಗುತ್ತಾಳೆ. ಆದರೆ, ಈ ಹಣಕ್ಕಾಗಿ ಭಾಗ್ಯಾ ಪಟ್ಟ ಕಷ್ಟ ಅಷ್ಟಿಟ್ಟಲ್ಲ. ಭಾಗ್ಯ, ಮ್ಯಾನೇಜರ್ ಬಳಿ ವೇತನದ ಜತೆಗೆ, ಸ್ವಲ್ಪ ಅಡ್ವಾನ್ಸ್ ಎಂದು ಹೆಚ್ಚುವರಿ ಹಣ ಪಡೆದಿದ್ದಾಳೆ. ಅದಕ್ಕೆ ಅವಳ ಮ್ಯಾನೇಜರ್, ನಾನು ಹಾಗೆಲ್ಲ ಸುಲಭದಲ್ಲಿ ಯಾರನ್ನೂ ನಂಬಲ್ಲ ಎಂದು ಅವಳ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾನೆ. ನಂತರ ಹಣ ನೀಡಿದ್ದಾನೆ.

ಅದನ್ನು ತೆಗೆದುಕೊಂಡು ಹೊರಟ ಭಾಗ್ಯ, ಸೀದಾ ಮೊಬೈಲ್ ಶಾಪ್‌ಗೆ ಹೋಗಿದ್ದಾಳೆ. ಅಲ್ಲಿ ಚೆನ್ನಾಗಿರುವ ಮೊಬೈಲ್ ಒಂದನ್ನು ಖರೀದಿಸಿದ್ದಾಳೆ, ಆದರೆ ಅದಕ್ಕೆ ಒಂದು ಸಾವಿರ ಹೆಚ್ಚಿಗೆ ಆದರೂ ಸರಿ, ಎಂದು ಅದನ್ನೇ ತೆಗೆದುಕೊಂಡಿದ್ದಾಳೆ. ಭಾಗ್ಯ ಮನೆಯಲ್ಲಿ, ಎಲ್ಲರೂ ಸೇರಿಕೊಂಡು ತನ್ವಿ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಪೂಜಾ ಮತ್ತು ಸುಂದರಿ ಮನೆಯನ್ನು ಸಿಂಗರಿಸುತ್ತಿದ್ದಾಳೆ. ಆದರೆ, ತನ್ವಿ ಎಷ್ಟೊ ಹೊತ್ತಾದರೂ ಮನೆಗೆ ಬರುವುದಿಲ್ಲ. ಭಾಗ್ಯಾ ಕಾದು ಕಾದು ಸುಸ್ತಾಗುತ್ತಾಳೆ. ಭಾಗ್ಯಾಳ ಮಗ ಗುಂಡ ಅಲ್ಲೇ ಸೋಫದಲ್ಲಿ ಮಲಗಿ ಬಿಡುತ್ತಾನೆ.

ಧರ್ಮರಾಜ್ ಬಂದು, ಏನಿದು ತನ್ವಿ ಇನ್ನೂ ಮನೆಗೆ ಬಂದಿಲ್ವಾ? ಎಂದು ಮನೆಯವರ ಬಳಿ ಕೇಳುತ್ತಾನೆ. ಅಷ್ಟೊತ್ತಿಗೆ ತನ್ವಿ, ತಾಂಡವ್ ಶ್ರೇಷ್ಠಾ ಜೊತೆ ಕಾರಿನಲ್ಲಿ ಬರುತ್ತಾಳೆ. ಕಾರಿನಿಂದ ಇಳಿದ ಕೂಡಲೆ ತನ್ವಿ ಭಯ ಶುರುವಾಗುತ್ತದೆ.. ಅಪ್ಪ ತುಂಬಾ ಲೇಟ್ ಆಗಿದೆ.. ಅಜ್ಜಿ ಬೈತಾರೆ.. ಭಯ ಆಗ್ತಿದೆ ಎಂದು ಹೇಳುತ್ತಾಳೆ. ಇಷ್ಟಕ್ಕೆಲ್ಲ ತಲೆಕೆಡಿಸ್ಕೊಬೇಡ.. ನಾನು ನಿನ್ ಜೊತೆ ಬಂದ್ರೆ ಅಜ್ಜಿ ಏನೂ ಹೇಳಲ್ಲ .. ನಾನು ಅಜ್ಜಿ ಹತ್ರ ಹೇಳ್ತೀನಿ ಅಂತ ಹೇಳುತ್ತಾನೆ. ಆಗ ಶ್ರೇಷ್ಠಾ ಕೂಡ ಒಳಗೆ ಬರಲು ಮುಂದಾಗುತ್ತಾಳೆ. ಈ ಸಂದರ್ಭ ಶ್ರೇಷ್ಠಾಳನ್ನು ತಡೆದ ತಾಂಡವ್.. ನೀನು ಬರ್ಬೇಡ.. ಕಳೆದ ಸಲ ಇಲ್ಲಿ ಬಂದಾಗ ಆದ ಅವಾಂತರ ಸಾಕು ಅನ್ನುತ್ತಾಳೆ. ಇದರಿಂದ ಕೋಪಗೊಂಡ ಶ್ರೇಷ್ಠಾ ಅವರು ತೆರಳಿದ ನಂತ್ರ, ಮಗಳು ಸಿಕ್ಕಿದ್ಲು ಅಂತ ನನ್ನೇ ಇಗ್ನೋರ್ ಮಾಡ್ತಾ ಇದ್ದೀಯಾ.. ಆಗ್ಲಿಂದ ನೋಡ್ತಾ ಇದ್ದೇನೆ.. ನನ್ನ ಅವೈಡ್ ಮಾಡ್ತಾ ಇದ್ದೀಯಾ.. ಒಮ್ಮೆ ನನ್ನ ಮದುವೆ ಆಗು.. ಆ ಮೇಲೆ ನಿನ್ನಿಂದ ಈ ಮನೆಯವರನ್ನೆಲ್ಲ ದೂರ ಮಾಡ್ತೇನೆ ಎಂದು ಅಂದುಕೊಳ್ಳುತ್ತಾಳೆ.



ಮನೆಯೊಳಗೆ ತಾಂಡವ್-ತನ್ವಿ ಕಂಡು ಎಲ್ಲರೂ ಖುಷಿ ಆಗುತ್ತಾರೆ. ಆದರೆ, ಧರ್ಮರಾಜ್ ಬಂದು ನೀನ್ಯಾಕೆ ಬಂದೆ.. ಸಂಬಂಧ ಮುರ್ಕೊಂಡು ಹೋದವರು ಪದೇ ಪದೇ ಬರಬಾರದು ಇಲ್ಲಿದೆ ಎನ್ನುತ್ತಾರೆ. ಅದಕ್ಕೆ ತಾಂಡವ್, ಮಗಳನ್ನ ಕರ್ಕೊಂಡು ಹೋದ ಮೇಲೆ ವಾಪಾಸ್ ಕರ್ಕೊಂಡು ಬಂದು ಬಿಡೋದು ನನ್ನ ಜವಾಬ್ದಾರಿ ತಾನೆ.. ಹಾಗೆ ಭಾಗ್ಯಾ ಮೇಡಂ ಏನೋ ನನ್ನ ಮಗಳ ಬರ್ತ್ ಡೇನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡ್ತಾರಂತೆ.. ಅದನ್ನು ನೋಡ್ಕೊಂಡು ಹೋಗೋಣ ಅಂತ ಬಂದೆ ಎಂದು ಹೇಳುತ್ತಾನೆ. ಸದ್ಯ ಭಾಗ್ಯಾ-ತನ್ವಿ ಬರ್ತ್ ಡೇ ಸೆಲೆಬ್ರೇಷನ್​ಗೆ ತಾಂಡವ್ ಇರುತ್ತಾನ.. ಭಾಗ್ಯಾ ಕೊಡುವ ಸಣ್ಣ ಗಿಫ್ಟ್ ತನ್ವಿಗೆ ಇಷ್ಟವಾಗುತ್ತಾ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Hanumantha: ಬಾಯ್ಸ್ vs ಗರ್ಲ್ಸ್ ಶೋನಿಂದ ಹನುಮಂತ ಮಿಸ್ಸಿಂಗ್: ಹೊರ ನಡೆದ್ರಾ ಬಿಗ್ ಬಾಸ್ ವಿನ್ನರ್?