ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bhagya Lakshmi Serial: ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಹೊಸ ತಿರುವು: ಶ್ರೇಷ್ಠಾ ಬಿಟ್ಟು ಮತ್ತೆ ಮನೆಗೆ ಬಂದ ತಾಂಡವ್

ಮರುದಿನ ಶ್ರೇಷ್ಠಾಳ ನಿಜವಾದ ವರಸೆ ಗೊತ್ತಾಗಿದೆ. ಇದರಿಂದ ತಾಂಡವ್ ಕೋಪಗೊಳ್ಳುತ್ತಾನೆ. ಶ್ರೇಷ್ಠಾ ಕಾಫಿ, ತಿಂಡಿ, ಅಡುಗೆ ಏನನ್ನೂ ಮಾಡದೆ ಎದ್ದು ಸೀದಾ ಆಫೀಸ್ ಹೊರಟು ಹೋಗಿದ್ದಾಳೆ. ತಾಂಡವ್ ಬಂದು ನೋಡಿದಾಗ ಅಡುಗೆ ಮನೆಯಲ್ಲಿ ಏನೂ ಇರುವುದಿಲ್ಲ.

ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಹೊಸ ತಿರುವು: ಶ್ರೇಷ್ಠಾ ಬಿಟ್ಟು ಮತ್ತೆ ಮನೆಗೆ ಬಂದ ತಾಂಡವ್

Bhagya lakshmi serial

Profile Vinay Bhat Jan 21, 2025 12:26 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಹೊಸ ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ಪ್ರತಿ ದಿನ ಒಂದಲ್ಲ ಒಂದು ಟ್ವಿಸ್ಟ್​ನೊಂದಿಗೆ ಧಾರಾವಾಹಿ ಸಾಗುತ್ತಿದ್ದು, ವೀಕ್ಷಕರಿಗೆ ಕುತೂಹಲ ಮೂಡಿಸುತ್ತಿದೆ. ಶ್ರೇಷ್ಠಾ ಜೊತೆ ಮನೆಬಿಟ್ಟು ಹೊರಬಂದ ಎರಡೇ ದಿನಕ್ಕೆ ತಾಂಡವ್ ಮತ್ತೆ ಮನೆಗೂಡು ಸೇರಿದ್ದಾರೆ. ಆದರೆ, ಇದರಲ್ಲಿ ಹೊಸ ಪ್ಲ್ಯಾನ್ ಏನಾದರು ಇದೆಯೇ? ಅಥವಾ ತಾಂಡವ್ ನಿಜಕ್ಕೂ ಬದಲಾಗಿ ಪುನಃ ಮನೆಗೆ ಬಂದಿದ್ದಾನಾ ಎಂಬುದು ನೋಡಬೇಕಿದೆ.

ಮನೆಬಿಟ್ಟು ಹೋದ ಬಳಿಕ ಮೊದಲ ದಿನ ತಾಂಡವ್-ಶ್ರೇಷ್ಠಾ, ಭಾಗ್ಯಾಗೆ ಬುದ್ದಿ ಕಲಿಸಲು ಪ್ಲ್ಯಾನ್ ಮಾಡಿದರು. ಅವ್ಳ ನೆಮ್ಮದಿ ಹಾಳಮಾಡಬೇಕು.. ನನ್ಗೆ ಮಾಡಿರೊ ಅವಮಾನಕ್ಕೆ ಅವಳಿಗೆ ಸರಿಯಾದ ಶಿಕ್ಷೆ ಕೊಡಬೇಕು.. ಅವ್ಳು ಮನೆ ಬಿಟ್ಟು ರೋಡ್ ರೋಡ್ ಅಲಿಬೇಕು ಅಂಥಾ ಸ್ಥಿತಿ ಬರಬೇಕು ಇದೇ ನನ್ನ ಲೈಫ್​ನ ಗೋಲ್ ಎಂದು ತಾಂಡವ್ ಹೇಳಿದ್ದ. ಇದರ ನಡುವೆ ಸಂಕ್ರಾಂತಿ ಹಬ್ಬವನ್ನು ಇಬ್ಬರೂ ಜೋರಾಗಿ ಸೆಲೆಬ್ರೆಟ್ ಮಾಡಿದರು.

ತಾಂಡವ್‌ ಏಳುವ ಮುನ್ನವೇ ಶ್ರೇಷ್ಠಾ ಎದ್ದು ಕಾಫಿ ತರುತ್ತಾಳೆ. ಶ್ರೇಷ್ಠಾ ಇಷ್ಟೊಂದು ಬದಲಾಗಿದ್ದಾಳೆ ಎಂದು ತಾಂಡವ್‌ ಖುಷಿಯಾಗುತ್ತಾನೆ. ಈ ಕಾಫಿಯನ್ನು ನಿಜಕ್ಕೂ ನೀನೇ ಮಾಡಿದ್ದಾ ಎಂದು ಕೇಳುತ್ತಾನೆ. ಶ್ರೇಷ್ಠಾ, ಹೌದು ಎನ್ನುತ್ತಾಳೆ. ತುಂಬಾ ಚೆನ್ನಾಗಿ ಮಾಡಿದ್ದೀಯ, ಆ ಭಾಗ್ಯಾ ಒಂದು ದಿನವೂ ನನಗೆ ಇಂಥ ಕಾಫಿ ಮಾಡಿಕೊಟ್ಟಿಲ್ಲ ಎಂದು ಶ್ರೇಷ್ಠಾಳನ್ನು ಹೊಗಳುತ್ತಾನೆ. ಇದಿಷ್ಟೆ ಅಲ್ಲ, ಇವತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ತಾಂಡವ್‌ ಸ್ನಾನ ಮಾಡಿ ಬರುವಷ್ಟರಲ್ಲಿ ಬೆಡ್‌ ಮೇಲೆ ಪಂಚೆ ಶರ್ಟ್‌ ಎಲ್ಲ ಇಟ್ಟಿರುತ್ತಾಳೆ ಶ್ರೇಷ್ಠಾ. ಊಟಕ್ಕೆ ಬಾಳೆ ಎಲೆ ಇಟ್ಟು ಬಗೆಬಗೆಯ ತಿಂಡಿಗಳನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟಿರುತ್ತಾಳೆ. ಆದರೆ, ಇದೆಲ್ಲ ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ ಊಟ ಎಂಬುದು ತಾಂಡವ್ ತಿಳಿಯದೆ ತುಂಬಾ ಚೆನ್ನಾಗಿ ಮಾಡಿದ್ದೀಯಾ ಎಂದು ತಿನ್ನುತ್ತಾನೆ.

ಆದರೆ, ಮರುದಿನ ಶ್ರೇಷ್ಠಾಳ ನಿಜವಾದ ವರಸೆ ಗೊತ್ತಾಗಿದೆ. ಇದರಿಂದ ತಾಂಡವ್ ಕೋಪಗೊಳ್ಳುತ್ತಾನೆ. ಶ್ರೇಷ್ಠಾ ಕಾಫಿ, ತಿಂಡಿ, ಅಡುಗೆ ಏನನ್ನೂ ಮಾಡದೆ ಎದ್ದು ಸೀದಾ ಆಫೀಸ್ ಹೊರಟು ಹೋಗಿದ್ದಾಳೆ. ತಾಂಡವ್ ಬಂದು ನೋಡಿದಾಗ ಅಡುಗೆ ಮನೆಯಲ್ಲಿ ಏನೂ ಇರುವುದಿಲ್ಲ. ನೇರವಾಗಿ ಶ್ರೇಷ್ಠಾಗೆ ಕಾಲ್ ಮಾಡಿದ ತಾಂಡವ್, ನಿನಗೆ ಒಂದು ಅಡುಗೆ ಕೂಡ ಮಾಡೋಕೆ ಆಗಲ್ಲ ಅಂದ್ರೆ ಹೇಗೆ.. ಅಂತದ್ದೇನು ತಲೆ ಹೋಗೋವಂತ ಕೆಲಸ ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸಿದ ಶ್ರೇಷ್ಠಾ, ನನ್ಗೆ ಮೀಟಿಂಗ್ ಇದೆ ಅಂದ್ರೆ ನಾನು ಎಷ್ಟು ಟೆನ್ಶನ್ ಮಾಡ್ತೇನೆ ಅಂತ ಗೊತ್ತು ಅಲ್ವಾ ನಿನ್ಗೆ.. ನನ್ನ ಕೈಯಯಲ್ಲಿ ಆಗಲ್ಲ.. ನಾನೇನು ಎಮ್ಮೆ ಭಾಗ್ಯಾ ತರಾ ಖಾಲಿ ಕೂತ್ಕೊಂಡು ಇದ್ದೀನಾ.. ನಿನ್ಗೆ ಗೊತ್ತು ತಾನೇ ನನ್ಗೆ ಎಷ್ಟು ಕೆಲಸ ಇದೆ ಅಂತಾ.. ಫ್ರೀ ಇದ್ದಾಗ ಇಬ್ರು ರೊಮ್ಯಾಂಟಿಹ್ ಆಗಿ ಅಡುಗೆ ಮಾಡೋಣ ಬ್ಯುಸಿ ಇದ್ದಾಗ ಆರ್ಡರ್ ಮಾಡೋಣ ಟೆನ್ಶನ್ ಯಾಕೆ ಎಂದು ಹೇಳಿ ಕಾಲ್ ಕಟ್ ಮಾಡುತ್ತಾಳೆ.

ಇದರಿಂದ ಕೋಪಗೊಂಡ ತಾಂಡವ್, ಏನ್ ಕರ್ಮನೋ ಏನು.. ಇವ್ಳು ಏನ್ ಕೆಲ್ಸನೂ ಮಾಡಲ್ಲ ಈಗೋ ಮಾತ್ರ ತೋರಿಸ್ತಾಳೆ.. ಆರಾಮದಲ್ಲಿ ನಾನು ಮನೇಲಿ ಉಂಡುಕೊಂಡು-ತಿಂದುಕೊಂಡು ಇದ್ದೆ. ಈ ಎಮ್ಮೆ ಭಾಗ್ಯಾಳಿಂದ ಎಲ್ಲ ಹಾಳಾಯ್ತು ಎಂದು ಅಂದುಕೊಳ್ಳುತ್ತಾನೆ.

ಅತ್ತ ಮಗ ಮತ್ತೆ ಬರುತ್ತಾನೆ ಎಂದು ಕುಸುಮಾ ಗಟ್ಟಿಯಾದ ನಂಬಿಕೆಯಲ್ಲಿರುತ್ತಾಳೆ. ನನ್ನ ಮಗ ಹೇಗೆ ಮನೆಯಿಂದ ಹೊರಗೆ ಹೋದನೊ ಹಾಗೆ ಹೊರಗೆ ಬರುತ್ತಾನೆ ನೋಡಿ ಎಂದು ಮನೆಯವರ ಬಳಿ ಹೇಳುತ್ತಾಳೆ. ಅಷ್ಟರಲ್ಲಿ ಸೂಟ್​ಕೇಸ್ ಹಿಡಿದುಕೊಂಡು ತಾಂಡವ್ ಮನೆಯೊಳಗೆ ಬರುತ್ತಾನೆ. ಇದನ್ನು ಕಂಡು ಕುಸುಮಾಗೆ ತುಂಬಾ ಸಂತೋಷವಾಗುತ್ತದೆ.



ಅಮ್ಮ ಆಗ್ಲಿ ಅಮ್ಮ ಆಗಲಿ ನಿಮ್ಮನ್ನ ಬಿಟ್ಟು ನನ್ಗೆ ಬದುಕೋಕೆ ಆಗಲ್ಲ ಎಂದು ಅಪ್ಪನನ್ನು ತಬ್ಬಿಕೊಂಡು ಅಳುತ್ತಾನೆ ತಾಂಡವ್. ಆದ್ರೆ ಭಾಗ್ಯಾಗೆ ಇದು ಯಾವುದೊ ಪ್ಲ್ಯಾನ್ ಎಂಬಂತೆ ಅನುಮಾನ ಮೂಡುತ್ತದೆ. ನಾವೆಲ್ಲರು ಈ ನಾಟಕಕ್ಕೆ ಮೋಸ ಹೋದವರೆ.. ಹಾಗಾಗಿ ಈ ಸಲ ಅಂತು ನಾನು ಇದನ್ನೆಲ್ಲ ನಂಬೋದೆ ಇಲ್ಲ ಎಂದು ಹೇಳುತ್ತಾಳೆ. ಆಗ ತಾಂಡವ್, ಇಲ್ಲಿ ನನ್ಗೆ ಆದಂತಹ ಒಂದಿಷ್ಟು ಜವಾಬ್ದಾರಿಗಳಿವೆ. ಅವ್ರ ಮಗನಾಗಿ ಅದನ್ನೆಲ್ಲ ಪೂರೈಸಬೇಕು ಅಂತಾ ಬಂದಿದ್ದೀನಿ ಎಂದು ಹೇಳುತ್ತಾನೆ. ಸದ್ಯ ಇದು ತಾಂಡವ್-ಶ್ರೇಷ್ಠಾರ ಹೊಸ ನಾಟಕನ? ಅಥವಾ ತಾಂಡವ್ ಶ್ರೇಷ್ಠಾಳ ಸಹವಾಸ ಸಾಕು ಎಂದು ನಿಜಕ್ಕೂ ಬದಲಾಗಿ ಬಂದಿದ್ದಾನಾ? ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.