ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Bhagya Lakshmi Serial: ತಂದೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ ತಾಂಡವ್: ಮನೆಗೆ ಬಂದಿದ್ದೇ ಭಾಗ್ಯಾಗೋಸ್ಕರ?

ತಾಂಡವ್ ಅಪ್ಪನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಆದ್ರೆ ತಂದೆ, ಹೇ.. ತಾಂಡವ್ ಯಾಕೆ ಹೀಗೆ ಮಾಡ್ತಾ ಇದ್ದೀಯಾ?, ನನ್ ಕಾಲು ಮುಟ್ಟಬೇಡ ನೀನು.. ನನ್ನ ಅಪ್ಪ ಅಂತ ಕರಿಬೇಡ.. ಏನೋ ಇದು ಹೊಸ ನಾಟಕ ಎಂದು ದೂರ ಹೋಗುತ್ತಾರೆ.

ತಂದೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ ತಾಂಡವ್: ಮನೆಗೆ ಬಂದಿದ್ದೇ ಭಾಗ್ಯಾಗೋಸ್ಕರ?

Bhagya lakshmi serial

Profile Vinay Bhat Jan 22, 2025 12:11 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ (Bhagya Lakshmi Kannada Serial) ಹೊಸ ತಿರುವು ಪಡೆದುಕೊಂಡಿದ್ದು, ಮನೆಬಿಟ್ಟು ಹೋಗಿದ್ದ ತಾಂಡವ್ ಮತ್ತೆ ಮನೆಗೆ ಬಂದಿದ್ದಾನೆ. ಶ್ರೇಷ್ಠಾ ಜೊತೆ ಮನೆಬಿಟ್ಟು ಹೊರಬಂದ ಎರಡೇ ದಿನಕ್ಕೆ ತಾಂಡವ್ ಮತ್ತೆ ಮನೆಯ ಗೂಡು ಸೇರಿದ್ದಾನೆ. ತಂದೆ ಕಾಲು ಹಿಡಿದು ಕ್ಷಮೆ ಕೇಳಿದ್ದಾನೆ ತಾಂಡವ್. ಆದರೆ, ಇದರಲ್ಲಿ ಯಾವುದೊ ಹೊಸ ಪ್ಲ್ಯಾನ್ ಇದ್ದಂತೆ ಕಾಣುತ್ತಿದೆ. ಭಾಗ್ಯಾ ಒಬ್ಬಳೆ ಇರುವಾಗ ಅವಳ ಬಳಿ ಬಂದು ಚಾಲೆಂಜ್ ಕೂಡ ಮಾಡಿದ್ದಾನೆ.

ಮನೆಬಿಟ್ಟು ಹೋದ ಬಳಿಕ ಮೊದಲ ದಿನ ತಾಂಡವ್-ಶ್ರೇಷ್ಠಾ ಖುಷಿ ಆಗೇ ಇದ್ದರು. ಭಾಗ್ಯಾಗೆ ಬುದ್ದಿ ಕಲಿಸಬೇಕು ಎಂದು ಪ್ಲ್ಯಾನ್ ಮಾಡಿದರು. ಅವ್ಳ ನೆಮ್ಮದಿ ಹಾಳಮಾಡಬೇಕು ಎಂದರು. ಆದರೆ, ಮರುದಿನ ಶ್ರೇಷ್ಠಾಳ ನಿಜವಾದ ವರಸೆ ಗೊತ್ತಾಗಿದೆ. ಇದರಿಂದ ತಾಂಡವ್ ಕೋಪಗೊಳ್ಳುತ್ತಾನೆ. ಶ್ರೇಷ್ಠಾ ಕಾಫಿ, ತಿಂಡಿ, ಅಡುಗೆ ಏನನ್ನೂ ಮಾಡದೆ ಎದ್ದು ಸೀದಾ ಆಫೀಸ್ ಹೊರಟು ಹೋಗಿದ್ದಾಳೆ. ತಾಂಡವ್ ಬಂದು ನೋಡಿದಾಗ ಅಡುಗೆ ಮನೆಯಲ್ಲಿ ಏನೂ ಇರುವುದಿಲ್ಲ.

ಶ್ರೇಷ್ಠಾಗೆ ಕಾಲ್ ಮಾಡಿದಾಗ ನನ್ಗೆ ಮೀಟಿಂಗ್ ಇದೆ ಅಂದ್ರೆ ನಾನು ಎಷ್ಟು ಟೆನ್ಶನ್ ಮಾಡ್ತೇನೆ ಅಂತ ಗೊತ್ತು ಅಲ್ವಾ ನಿನ್ಗೆ.. ನನ್ನ ಕೈಯಯಲ್ಲಿ ಆಗಲ್ಲ.. ನಾನೇನು ಎಮ್ಮೆ ಭಾಗ್ಯಾ ತರಾ ಖಾಲಿ ಕೂತ್ಕೊಂಡು ಇದ್ದೀನಾ.. ನಿನ್ಗೆ ಗೊತ್ತು ತಾನೇ ನನ್ಗೆ ಎಷ್ಟು ಕೆಲಸ ಇದೆ ಅಂತಾ.. ಫ್ರೀ ಇದ್ದಾಗ ಇಬ್ರು ರೊಮ್ಯಾಂಟಿಹ್ ಆಗಿ ಅಡುಗೆ ಮಾಡೋಣ ಬ್ಯುಸಿ ಇದ್ದಾಗ ಆರ್ಡರ್ ಮಾಡೋಣ ಟೆನ್ಶನ್ ಯಾಕೆ ಎಂದು ಹೇಳಿ ಕಾಲ್ ಕಟ್ ಮಾಡುತ್ತಾಳೆ.

ಇದರಿಂದ ಕೋಪಗೊಂಡ ತಾಂಡವ್, ಏನ್ ಕರ್ಮನೋ ಏನು.. ಇವ್ಳು ಏನ್ ಕೆಲ್ಸನೂ ಮಾಡಲ್ಲ ಈಗೋ ಮಾತ್ರ ತೋರಿಸ್ತಾಳೆ.. ಆರಾಮದಲ್ಲಿ ನಾನು ಮನೇಲಿ ಉಂಡುಕೊಂಡು-ತಿಂದುಕೊಂಡು ಇದ್ದೆ ಎಂದು ಅಂದುಕೊಳ್ಳುತ್ತಾನೆ. ಹೀಗಿರುವಾಗ ಸೂಟ್​ಕೇಸ್ ಹಿಡಿದುಕೊಂಡು ತಾಂಡವ್ ದಿಢೀರ್ ಮನೆಯೊಳಗೆ ಪುನಃ ಬರುತ್ತಾನೆ. ಇದನ್ನು ಕಂಡು ಕುಸುಮಾಗೆ ತುಂಬಾ ಸಂತೋಷವಾಗುತ್ತದೆ. ಅಮ್ಮ ಆಗ್ಲಿ ಅಮ್ಮ ಆಗಲಿ ನಿಮ್ಮನ್ನ ಬಿಟ್ಟು ನನ್ಗೆ ಬದುಕೋಕೆ ಆಗಲ್ಲ ಎಂದು ಅಪ್ಪನನ್ನು ತಬ್ಬಿಕೊಂಡು ಅಳುತ್ತಾನೆ ತಾಂಡವ್.

ಅಪ್ಪನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಆದ್ರೆ ತಂದೆ, ಹೇ.. ತಾಂಡವ್ ಯಾಕೆ ಹೀಗೆ ಮಾಡ್ತಾ ಇದ್ದೀಯಾ?, ನನ್ ಕಾಲು ಮುಟ್ಟಬೇಡ ನೀನು.. ನನ್ನ ಅಪ್ಪ ಅಂತ ಕರಿಬೇಡ.. ಏನೋ ಇದು ಹೊಸ ನಾಟಕ ಎಂದು ದೂರ ಹೋಗುತ್ತಾರೆ. ಆಗ ತಾಂಡವ್, ಹಾಗಲ್ಲ ಹೇಳಬೇಡಿ ಅಪ್ಪ.. ನಾನು ನೀವು ಹೆತ್ತ ಮಗ, ನನ್ನ ಮೇಲೆ ಅಷ್ಟು ನಂಬಿಕೆ ಇಲ್ವ ನಿಮ್ಗೆ.. ಕಾಲಿಗೆ ಬಿದ್ರೂ ಅದೆಲ್ಲ ನಾಟಕ ಅಂತಿದ್ದೀರಿ ಅಲ್ವಾ ಎನ್ನುತ್ತಾನೆ. ನಾನು ಜಗತ್ತಲ್ಲಿ ಯಾರನ್ನ ಬೇಕಾದ್ರೂ ಕಣ್ಣುಮುಚ್ಚಿಕೊಂಡು ನಂಬುತ್ತೇನೆ.. ಆದ್ರೆ ನಿನ್ನನ್ನ ಮಾತ್ರ ನಂಬಲ್ಲ.. ಅದಿಕೆನೇ ನಾನು ನಿನ್ನ ಬದಲಾಗಿ ಭಾಗ್ಯಾನೇ ಈ ಮನೆಗೆ ಸರಿ ಅಂತ ನಾನು ಹೇಳಿದ್ದು ಎಂದು ತಾಂಡವ್ ಅಪ್ಪ ಹೇಳುತ್ತಾರೆ.

ಆದ್ರೆ ಭಾಗ್ಯಾಗೆ ಇದು ಯಾವುದೊ ಪ್ಲ್ಯಾನ್ ಎಂಬಂತೆ ಅನುಮಾನ ಮೂಡುತ್ತದೆ. ನಾವೆಲ್ಲರು ಈ ನಾಟಕಕ್ಕೆ ಮೋಸ ಹೋದವರೆ.. ಹಾಗಾಗಿ ಈ ಸಲ ಅಂತು ನಾನು ಇದನ್ನೆಲ್ಲ ನಂಬೋದೆ ಇಲ್ಲ ಎಂದು ಹೇಳುತ್ತಾಳೆ. ಆದ್ರೆ ಕುಸುಮಾ ಹಾಗೂ ಭಾಗ್ಯಾಳ ಅಮ್ಮ ಬಿಟ್ಟು ಉಳಿದವರು ಯಾರೂ ನಂಬುವುದಿಲ್ಲ. ಆಗ ತಾಂಡವ್, ಇಲ್ಲಿ ನನ್ಗೆ ಆದಂತಹ ಒಂದಿಷ್ಟು ಜವಾಬ್ದಾರಿಗಳಿವೆ. ಅವ್ರ ಮಗನಾಗಿ ಅದನ್ನೆಲ್ಲ ಪೂರೈಸಬೇಕು ಅಂತಾ ಬಂದಿದ್ದೀನಿ ಎಂದು ಹೇಳುತ್ತಾನೆ.

ಬಳಿಕ ಭಾಗ್ಯಾ ಒಬ್ಬಳೆ ಇರುವಾಗ ಬಂದು ಮಾತನಾಡಿದ ತಾಂಡವ್, ಈ ಕಾಲಚಕ್ರದಲ್ಲಿ ಇವತ್ತು ನೀನು ಮೇಲೆ ಇದ್ಯಾ.. ಒಂದಲ್ಲ ಒಂದು ದಿನ ಕೆಳಗಡೆ ಬಂದೇ ಬರ್ತೀಯಾ.. ನಾನು ಮೇಲೆ ಇರ್ತೀನಿ.. ಈ ಮನೆಯಿಂದ ನಿನ್ನ ದೂರ ಮಾಡಿಲ್ಲ ಅಂದ್ರೆ ನನ್ನ ಹೆಸರು ತಾಂಡವ್ ಸೂರ್ಯವಂಶಿನೇ ಅಲ್ಲ ಎಂದು ಹೇಳುತ್ತಾನೆ. ಆಗ ಇದಕ್ಕೆ ತಿರುಗೇಟು ಕೊಟ್ಟ ಭಾಗ್ಯಾ, ಹಾಗಾದ್ರೆ ಹೆಸರು ಚೇಂಜ್ ಮಾಡೋದಕ್ಕೆ ರೆಡಿಯಾಗಿ ಎಂದು ಸವಾಲು ಹಾಕುತ್ತಾಳೆ. ಸದ್ಯ ತಾಂಡವ್ ಮನೆಗೆ ಬಂದಿರುವ ಉದ್ದೇಶ ಭಾಗ್ಯಾಳನ್ನು ಹೊರಗೆ ಹಾಕಲು ಎಂಬುದು ಸ್ಪಷ್ಟವಾಗಿದೆ. ಆದ್ರೆ, ಈ ಪ್ಲ್ಯಾನ್ ಸಕ್ಸಸ್ ಆಗುತ್ತಾ ಎಂಬುದು ನೋಡಬೇಕಿದೆ.

BBK 11: ಬಿಗ್ ಬಾಸ್ ಮನೆಗೆ ಬಂತು ಮಜಾ ಟಾಕೀಸ್ ಟೀಮ್: ಸ್ಪರ್ಧಿಗಳಿಗೆ ಮಜಾವೋ ಮಜಾ