BBK 11: ಬಿಗ್ ಬಾಸ್ ಮನೆಗೆ ಬಂತು ಮಜಾ ಟಾಕೀಸ್ ಟೀಮ್: ಸ್ಪರ್ಧಿಗಳಿಗೆ ಮಜಾವೋ ಮಜಾ
ಕಲರ್ಸ್ ಕನ್ನಡದಲ್ಲಿ ಸದ್ಯದಲ್ಲೇ ವೀಕೆಂಡ್ನಲ್ಲಿ ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ಶೋ ಮತ್ತೆ ಶುರುವಾಗಲಿದೆ. ಇದರ ಪ್ರಚಾರಕ್ಕಾಗಿ ಹಾಗೂ ಬಿಗ್ ಬಾಸ್ ಮನೆಯೊಳಗಿರುವ ಸ್ಪರ್ಧಿಗಳನ್ನು ನಗಿಸಲು ಮಜಾ ಟಾಕೀಸ್ ಟೀಮ್ ದೊಡ್ಮನೆಯೊಳಗೆ ಬಂದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯದ ಹಂತದಲ್ಲಿದೆ. ಇನ್ನೇನು ಮೂರು ದಿನಗಳಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಮನೆಯೊಳಗಿರುವ ಆರು ಸ್ಪರ್ಧಿಗಳ ಪೈಕಿ ಯಾರು ವಿನ್ನರ್ ಆಗುತ್ತಾರೆ ಎಂಬುದು ರೋಚಕತೆ ಸೃಷ್ಟಿಸಿದೆ. ಉಗ್ರಂ ಮಂಜು, ತ್ರಿವಿಕ್ರಮ್, ಭವ್ಯಾ ಗೌಡ, ಮೋಕ್ಷಿತಾ ಪೈ, ಹನುಮಂತು, ರಜತ್ ಕಿಶನ್ ಡೊಡ್ಮನೆಯಲ್ಲಿದ್ದಾರೆ. ಈಗಾಗಲೇ ವೋಟಿಂಗ್ ಲೈನ್ಸ್ ಕೂಡ ತೆರೆದುಕೊಂಡಿದೆ. ಸದ್ಯ ಫಿನಾಲೆ ವೀಕ್ನಲ್ಲಿರುವ ಸ್ಪರ್ಧಿಗಳು ಸಖತ್ ಟೆನ್ಶನ್ನಲ್ಲಿದ್ದಾರೆ. ಇವರ ತಲೆ ಬಿಸಿ ಕಡಿಮೆ ಮಾಡಲು ಬಿಗ್ ಬಾಸ್ ಮನೆಯೊಳಗೆ ಮಜಾ ಟಾಕೀಸ್ ತಂಡ ಕಾಲಿಟ್ಟಿದೆ.
ಹೌದು, ಕಲರ್ಸ್ ಕನ್ನಡದಲ್ಲಿ ಸದ್ಯದಲ್ಲೇ ವೀಕೆಂಡ್ನಲ್ಲಿ ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ಶೋ ಮತ್ತೆ ಶುರುವಾಗಲಿದೆ. ಇದರ ಪ್ರಚಾರಕ್ಕಾಗಿ ಹಾಗೂ ಬಿಗ್ ಬಾಸ್ ಮನೆಯೊಳಗಿರುವ ಸ್ಪರ್ಧಿಗಳನ್ನು ನಗಿಸಲು ಮಜಾ ಟಾಕೀಸ್ ಟೀಮ್ ದೊಡ್ಮನೆಯೊಳಗೆ ಬಂದಿದೆ. ಇವರ ಜೊತೆ ಬಿಗ್ ಬಾಸ್ ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದ್ದು, ನಕ್ಕಿ-ನಕ್ಕಿ ಸುಸ್ತಾಗಿದ್ದಾರೆ.
ದೊಡ್ಮನೆಗೆ ಬಂದ್ರು ಮಜಾ ಮಂದಿ.. ಫಿನಾಲೆ ಟೆನ್ಶನ್ನಲ್ಲಿರೋ ಸ್ಪರ್ಧಿಗಳಿಗೆ ಮಜಾವೋ ಮಜಾ ಎಂದು ಕಲರ್ಸ್ ಕನ್ನಡ ಇಂದಿನ ಬಿಗ್ ಬಾಸ್ ಎಪಿಸೋಡ್ನ ಪ್ರೊಮೊ ಬಿಡುಗಡೆ ಮಾಡಿದೆ. ಇದರಲ್ಲಿ ವಿನೋದ್ ಗೊಬ್ರಗಾಲ, ಪ್ರಿಯಾಂಕ, ವಿಶ್ವಾಸ್, ಕುರಿ ಪ್ರತಾಪ್, ಪಿ.ಕೆ, ಶಿವು ಸೇರಿದಂತೆ ಮಜಾ ಟಾಕೀಸ್ನ ಅನೇಕ ಮಂದಿ ಡೊಡ್ಮನೆಗೆ ಬಂದಿದ್ದಾರೆ. ಇವರು ಸ್ಪರ್ಧಿಗಳ ಎದುರು ಸಣ್ಣ ಸ್ಕಿಟ್ ಮಾಡಿ ಕೂಡ ತೋರಿಸಿದ್ದಾರೆ.
ನಿನ್ನೆ ಬಿಗ್ ಬಾಸ್ ಮನೆಗೆ ಯಜಮಾನ ಧಾರಾವಾಹಿ ತಂಡದ ಸದಸ್ಯರು ಬಂದಿದ್ದರು. ಈ ಧಾರಾವಾಹಿಯ ಮುಖ್ಯ ಪಾತ್ರದಾರಿಗಳಾದ ರಾಘವೇಂದ್ರ ಹಾಗೂ ಝಾನ್ಸಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಇವರುಗಳ ಜೊತೆ ಎಲ್ಲ ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದರು. ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಬಳಿಕ ಇದೇ ಸಮಯಕ್ಕೆ ಯಜಮಾನ ಧಾರಾವಾಹಿ ಪ್ರಸಾರ ಕಾಣಲಿದೆ.
ಇನ್ನು ಕನ್ನಡಿಗರನ್ನು ನಕ್ಕು ನಗಿಸುವ ಶೋ ಮಜಾ ಟಾಕೀಸ್ ಮತ್ತೆ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಅಧಿಕೃತವಾಗಿ ಪ್ರೋಮೋ ಹಂಚಿಕೊಂಡಿದೆ. ಫೆಬ್ರವರಿ 1ರಿಂದ ಈ ಶೋ ಆರಂಭವಾಗಲಿದೆ. ಈ ಬಾರಿಯ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರೊಂದಿಗೆ ಹೊಸ ಕಲಾವಿದರ ದಂಡೇ ಸೇರಿಕೊಂಡಿದೆ. ಮಜಾಭಾರತ ವೇದಿಕೆ ಮೇಲೆ ಮಿಂಚಿದ್ದ ಹಲವು ಕಲಾವಿದರು ಈಗ ಮಜಾ ಟಾಕೀಸ್‌ಗೆ ಎಂಟ್ರಿಕೊಟ್ಟಿದ್ದಾರೆ.
ತುಕಾಲಿ ಸಂತೋಷ್, ಪಿ.ಕೆ, ಶಿವು, ವಿನೋದ್ ಗೊಬ್ರಗಾಲ, ಪ್ರಿಯಾಂಕ, ವಿಶ್ವಾಸ್, ಕುರಿ ಪ್ರತಾಪ್ ಜೊತೆಗೆ ಯೋಗರಾಜ್ ಭಟ್ ಕೂಡ ಇದ್ದಾರೆ. ಹೊಸ ಮಜಾ ಟಾಕೀಸ್‌ನಲ್ಲಿ ಇಂದ್ರಜಿತ್ ಲಂಕೇಶ್ ಮಿಸ್ ಆಗಿದ್ದು, ಆ ಜಾಗಕ್ಕೆ ಯೋಗರಾಜ್ ಭಟ್ಟರು ಬಂದಿದ್ದಾರೆ. ಇಷ್ಟು ದಿನ ಪ್ರತಿ ವೀಕೆಂಡ್‌ನಲ್ಲಿ ಬಿಗ್ ಬಾಸ್ ಮೂಲಕ ಕಿಚ್ಚ ಸುದೀಪ್ ಬರುತ್ತಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ ಮುಕ್ತಾಯದ ಹಂತ ತಲುಪಿದ್ದು, ಇದು ಮುಗಿಯುತ್ತಿದ್ದಂತೆ ಮಜಾ ಟಾಕೀಸ್ ಆರಂಭವಾಗಲಿದೆ.
BBK 11: ಅಂಕಲ್-ಆಂಟಿ ಲವ್ ಸ್ಟೋರಿ ಎಂದು ಟ್ರೋಲ್ ಮಾಡಿದವರಿಗೆ ಖಡಕ್ ಮಾತು ಹೇಳಿದ ಗೌತಮಿ