ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಕೊನೆಗೂ ನಡೆಯಿತು ಪೂಜಾ-ಕಿಶನ್ ಮದುವೆ: ಮಾತುಕೊಟ್ಟ ಆದೀಶ್ವರ್

ಆದೀಶ್ವರ್ಗೆ ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಭಾಗ್ಯ ಮನೆಯವರಿಗೆ ಮಾತುಕೊಟ್ಟ ಬಳಿಕ ಭಾಗ್ಯ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಾಳೆ. ಮೀನಾಕ್ಷಿ-ಕನ್ನಿಕಾ ಪ್ಲ್ಯಾನ್ ಎಲ್ಲ ಫೇಲ್ ಆಗಿದ್ದು, ಭಾಗ್ಯ ಮುಂದೆ ಕ್ಷಮೆ ಕೇಳುವಂತಾಗಿದೆ. ಎಲ್ಲರ ಸಮ್ಮುಖದಲ್ಲೇ ಖುಷಿ ಖುಷಿ ಆಗಿ ಪೂಜಾ-ಕಿಶನ್ ಮದುವೆ ನೆರವೇರಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ-ಕಿಶಣ್ ಕಲ್ಯಾಣೋತ್ಸವ ಕೊನೆಗೂ ಈಡೇರಿದೆ. ಅನೇಕ ಅಡೆತಡೆಗಳ ಮಧ್ಯೆ ಈ ಮದುವೆ ಕೊನೆಗೂ ಸಂಪೂರ್ಣವಾಗಿದೆ. ಭಾಗ್ಯ ಮದುವೆ ಬೇಡ ಎಂದರೂ ಬಳಿಕ ಆದೀಶ್ವರ್​ಗೆ ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಭಾಗ್ಯ ಮನೆಯವರಿಗೆ ಮಾತುಕೊಟ್ಟ ಬಳಿಕ ಭಾಗ್ಯ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಾಳೆ. ಮೀನಾಕ್ಷಿ-ಕನ್ನಿಕಾ ಪ್ಲ್ಯಾನ್ ಎಲ್ಲ ಫೇಲ್ ಆಗಿದ್ದು, ಭಾಗ್ಯ ಮುಂದೆ ಕ್ಷಮೆ ಕೇಳುವಂತಾಗಿದೆ. ಎಲ್ಲರ ಸಮ್ಮುಖದಲ್ಲೇ ಖುಷಿ ಖುಷಿ ಆಗಿ ಪೂಜಾ-ಕಿಶನ್ ಮದುವೆ ನೆರವೇರಿದೆ.

ಈ ಮದುವೆಯನ್ನು ಹೇಗಾದರು ನಿಲ್ಲಿಸ ಬೇಕೆಂದು ಮೀನಾಕ್ಷಿ-ಕನ್ನಿಕಾ ಈ ಹಿಂದೆ ಮಾಡಿದ ಎಲ್ಲ ಪ್ಲ್ಯಾನ್ ಫಾಫ್ ಆಯಿತು. ಭಾಗ್ಯಾಳನ್ನು ಎಮೋಷನ್ ಆಗಿ ಕುಗ್ಗಿಸಲು ಮಾಡಿದ ಯೋಜನೆ ಕೂಡ ನಡೆಯಲಿಲ್ಲ. ತನ್ನೆಲ್ಲ ಯೋಜನೆ ವಿಫಲವಾದ ಬಳಿಕ ಮೀನಾಕ್ಷಿ, ಈ ಮದುವೆ ಆಗಲಿ.. ಆ ಪೂಜಾ ನಮ್ಮ ಮನೆಯಲ್ಲಿ ಅದು ಹೇಗೆ ಸಂತೋಷವಾಗಿ ಇರುತ್ತಾಳೆ ಅಂತ ನಾನೂ ನೋಡ್ತೀನಿ.. ಅವಳಿಗೆ ನರಕ ದರ್ಶನ ಮಾಡುತ್ತೇನೆ ಎಂದು ಹೇಳಿರುವುದು ಭಾಗ್ಯ ಕಿವಿಗೆ ಬಿತ್ತು.

ಹೀಗಾಗಿ ಈ ಮದುವೆ ಬೇಡ ನಡೆಯುವುದೇ ಬೇಡ ಎಂದು ಭಾಗ್ಯ ಮದುವೆ ನಿಲ್ಲಿಸಲು ಮುಂದಾಗುತ್ತಾಳೆ. ಪೂಜಾಳನ್ನ ಕರೆದುಕೊಂಡು ಮದುವೆ ಮನೆಯಿಂದ ಹೊರನಡೆಯಲು ಭಾಗ್ಯ ಮುಂದಾದಳು. ಅಷ್ಟರಲ್ಲಿ ಭಾಗ್ಯಳನ್ನ ತಡೆದದ್ದು ಆದೀಶ್ವರ್. ‘‘ನಾನು ಈವರೆಗೂ ಯಾವುದೇ ತಪ್ಪು ನಿರ್ಧಾರಗಳನ್ನ ಮಾಡಿರಲಿಲ್ಲ. ನನ್ನಿಂದ ಯಾವುದೇ ತಪ್ಪುಗಳಾಗಿರಲಿಲ್ಲ. ಆದರೆ, ನಿಮ್ಮನ್ನ ನಾನು ತಪ್ಪಾಗಿ ಭಾವಿಸಿದೆ. ನಿಮಗೆ ನಾನು ತುಂಬಾ ಅವಮಾನ ಮಾಡಿದ್ದೇನೆ. ಹಣದ ಆಫರ್‌ ಮಾಡಿದ್ದೆ. ತುಂಬಾ ಪರೀಕ್ಷೆ ಮಾಡಿದ್ದೆ. ದಯವಿಟ್ಟು ನನ್ನನ್ನ ಕ್ಷಮಿಸಿ’’ ಎಂದು ಎಲ್ಲರೆದುರು ಭಾಗ್ಯ ಮುಂದೆ ಮಂಡಿಯೂರಿ, ಕಣ್ಣೀರು ಹಾಕುತ್ತಾ, ಕೈಮುಗಿದು ಕ್ಷಮೆ ಕೇಳಿದಾನೆ ಆದೀಶ್ವರ್.



ಅಷ್ಟೇ ಅಲ್ಲದೆ, ಪೂಜಾ ನಿಮ್ಮ ಮನೆ ಮಗಳು ಮಾತ್ರ ಅಲ್ಲ.. ನಮ್ಮ ಮನೆ ಮಗಳು ಕೂಡ.. ಅವಳಿಗೆ ನಮ್ಮ ಮನೆಯಲ್ಲಿ ಯಾವುದೇ ತೊಂದರೆ ಆಗದಂತೆ ಈ ಆದೀಶ್ವರ್ ಕಾಮತ್ ನಿಮಗೆ ಕೊಡುತ್ತಿರುವ ಮಾತು’’ ಎಂದು ಹೇಳಿದ್ದಾನೆ. ಇದರ ಜೊತೆಗೆ ರಾಮ್​ದಾಸ್ ಕಾಮತ್ ಕೂಡ ಕನ್ನಿಕಾ ಮತ್ತು ಮೀನಾಕ್ಷಿ ಬಳಿ ಭಾಗ್ಯಾಳ ಎದುರು ಹೋಗಿ ಕ್ಷಮೆ ಕೇಳಿ ಎಂದು ಹೇಳಿದ್ದಾರೆ. ಅದರಂತೆ ಇವರಿಬ್ಬರು ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಈ ಎಲ್ಲ ಘಟನೆಯ ಬಳಿಕ ಭಾಗ್ಯಾಗೆ ನಂಬಿಕೆ ಬಂದಿದೆ.



ಪೂಜಾ-ಕಿಶನ್​ನನ್ನು ಕೈ-ಕೈ ಹಿಡಿದುಕೊಂಡು ಸ್ವತಃ ಆದೀಯ ಹಸೆಮಣೆ ಮೇಲೆ ಕೂರಿಸಿದ್ದಾನೆ. ಬಳಿಕ ಕಿಶನ್ ಪೂಜಾಳ ಕತ್ತಿಗೆ ತಾಳಿ ಕಟ್ಟಿದ್ದಾನೆ. ಸದ್ಯ ಆದೀಶ್ವರ್ ಸಹ ಭಾಗ್ಯ ಪರವಾಗಿ ನಿಂತಿದ್ದನ್ನ ನೋಡಿ.. ಭಾಗ್ಯಗೆ ಆದೀಶ್ವರ್ ಸಾರಿ ಕೇಳಿದ್ದನ್ನ ನೋಡಿ ಮೀನಾಕ್ಷಿ ಹಾಗೂ ಕನ್ನಿಕಾ ಹೊಟ್ಟೆಗೆ ಬೆಂಕಿ ಬಿದ್ದ ಹಾಗಾಗಿದೆ. ಪೂಜಾ ರಾಮ್​ದಾಸ್ ಮನೆಗೆ ಸೊಸೆಯಾಗಿ ತೆರಳಿದ್ದಾಳೆ. ಇಲ್ಲಿನ್ನು ಏನೇನು ಆಗುತ್ತೆ?, ಮೀನಾಕ್ಷಿ-ಕನ್ನಿಕಾ ಪೂಜಾಳಿಗೆ ಏನು ಹಿಂಸೆ ಕೊಡುತ್ತಾರೆ.. ಇದಕ್ಕೆ ಪೂಜಾ ಹೇಗೆ ತಿರುಗೇಟು ಕೊಡುತ್ತಾಳೆ ಎಂಬುದು ನೋಡಬೇಕಿದೆ. ಯಾಕೆಂದರೆ ಪೂಜಾ ತನ್ನ ಅಕ್ಕ ಭಾಗ್ಯಾಳ ರೀತಿ ಮೃದು ಸ್ವಭಾವದ ಹುಡುಗಿ ಅಲ್ಲ.. ಹೀಗಾಗಿ ಮುಂದಿನ ಸಂಚಿಕೆಗಳು ರೋಚಕತೆ ಸೃಷ್ಟಿಸಿದೆ.

Anushree Marriage: ಅನುಶ್ರೀ ಮದುವೆ ಸುಳ್ಳು ಸುದ್ದಿಯೇ?: ಅನುಮಾನ ಮೂಡಿಸಿದ ಇನ್​ಸ್ಟಾಗ್ರಾಮ್ ವಿಡಿಯೋ