ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಪೂಜಾಳಿಗೆ ಚಿತ್ರಹಿಂಸೆ ನೀಡುತ್ತಿರುವ ಮೀನಾಕ್ಷಿ-ಕನ್ನಿಕಾ: ಬಂದೇ ಬಿಟ್ಟಳು ಭಾಗ್ಯ

ಅಕ್ಕ ಭಾಗ್ಯಾಳನ್ನು ಕಂಡು ಪೂಜಾಗೆ ಎಲ್ಲಿಲ್ಲದ ಸಂತೋಷ ಆಗಿದೆ. ಸದ್ಯ ಪೂಜಾಳಿಗೆ ಅಡುಗೆ ಮಾಡಲು ಭಾಗ್ಯ ಹೇಗೆ ಸಹಾಯ ಮಾಡುತ್ತಾಳೆ?, ಭಾಗ್ಯ ಬಂದಿದ್ದಕ್ಕೆ ಮೀನಾಕ್ಷಿ ಇನ್ನೇನು ಖ್ಯಾತೆ ತೆರೆಯುತ್ತಾಳೆ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ ರಾಮ್​ದಾಸ್ ಮನೆಯ ಸೊಸೆಯಾಗಿ ಹೊಸ ಮನೆಗೆ ಕಾಲಿಟ್ಟಿದ್ದಾಳೆ. ಆದರೆ, ಈ ಮದುವೆ ನಿಲ್ಲಿಸಲು ಮೀನಾಕ್ಷಿ-ಕನ್ನಿಕಾ ಪ್ಲ್ಯಾನ್ ಎಲ್ಲ ಫೇಲ್ ಆಗಿದ್ದು, ಈ ಪೂಜಾಳಿಗೆ ಹೇಗಾದರು ಮಾಡಿ ಬುದ್ದಿ ಕಲಿಸಬೇಕು.. ಅವಳಾಗಿಯೇ ಈ ಮನೆಯಿಂದ ಹೊರಹೋಗಬೇಕು ಎಂದು ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ ಪೂಜಾಗೆ ಬೇಕಂತಲೇ ಮೀನಾಕ್ಷಿ-ಕನ್ನಿಕಾ ಚಿತ್ರಹಿಂಸೆ ಕೊಡುತ್ತಿದ್ದಾರೆ. ಅನಗತ್ಯ ಕೆಲಸವನ್ನು ಹೇಳಿ ಕಷ್ಟಪಡುವಂತೆ ಮಾಡುತ್ತಿದ್ದಾರೆ. ಪೂಜಾ ಹೀಗೆ ಕಷ್ಟಪಡುತ್ತಿರುವಾಗ ಅಲ್ಲಿಗೆ ಭಾಗ್ಯ ಎಂಟ್ರಿ ಆಗಿದೆ.

ಮದುವೆ ಮುಗಿದು ಮನೆಗೆ ಬಂದಾಗ ಆದೀಶ್ವರ್-ರಾಮ್​ದಾಸ್ ಪ್ರೀತಿಯಿಂದ ಪೂಜಾಳನ್ನು ಬರಮಾಡಿಕೊಂಡರು. ಮೊದಲ ದಿನದಿಂದಲೇ ಮೀನಾಕ್ಷಿ-ಕನ್ನಿಕಾ ಪೂಜಾಳಿಗೆ ಕೆಡುಕು ಬಯಸಲು ಶುರುಮಾಡಿದ್ದಾರೆ. ಪೂಜಾ-ಕಿಶನ್ ಮೊದಲ ರಾತ್ರಿಗೆ ಹೂವಿನ ಅಲಂಕಾರದಿಂದ ರೆಡಿ ಮಾಡಿದ್ದ ಹಾಸಿಗೆಯನ್ನು ಕನ್ನಿಕಾ ಹಾಳು ಮಾಡಿದಳು. ಆದರೆ, ಪೂಜಾ ಇದನ್ನೆಲ್ಲ ಮನಸ್ಸಿಗೆ ತೆಗೆದುಕೊಂಡಿಲ್ಲ. ಬೇಗನೆ ಎದ್ದು ದೇವರ ಪೂಜೆ ಮಾಡಿ, ತುಳಸಿ ಕಟ್ಟೆಗೆ ಸುತ್ತು ಬಂದು ಬತ್ತಿ ಹೊತ್ತಿಸಿದ್ದಾಳೆ. ಇದನ್ನು ಕಂಡು ರಾಮ್​ದಾಸ್​ ಭಾವುಕರಾಗಿದ್ದಾರೆ.

ಈ ಹಿಂದೆ ನನ್ನ ಹೆಂಡತಿ ಇದ್ದಾಗ ಇದನ್ನೆಲ್ಲ ಮಾಡ್ತಾ ಇದ್ದಳು.. ಅವಳು ಹೋದ ಬಳಿಕ ಈರೀತಿ ಯಾರೂ ಮಾಡುತ್ತಿರುಲಿಲ್ಲ.. ಈಗ ಪೂಜಾ ಆ ಕಾರ್ಯವನ್ನು ಮುಂದುವರೆಸುತ್ತಿದ್ದಾಳೆ.. ಇವಳೆ ನಮ್ಮ ಮನೆಗೆ ತಕ್ಕ ಸೊಸೆ ಎಂದು ಅಂದುಕೊಂಡಿದ್ದಾನೆ. ಆಗ ಅಲ್ಲಿಗೆ ಮಿನಾಕ್ಷಿ ಬಂದು ತನ್ನ ವರಸೆ ತೆಗೆದಿದ್​ದಾಳೆ. ಮೀನಾಕ್ಷಿ ಅಡುಗೆ ಬಟ್ಟರ ಬಳಿ ತಿಂಡಿ ಮಾಡೋದು ಬೇಡ ಅಂತ ಹೇಳಿದ್ದಾಳೆ. ಈ ಮನೆಯ ಹೊಸ ಸೊಸೆ ಪೂಜಾನೇ ತಿಂಡಿ ಮಾಡಿದ್ರೆ ಒಳ್ಳೆಯದಿರುತ್ತೆ ಎಂದು ಹೇಳಿದ್ದಾಳೆ.

ಇದನ್ನ ಕೇಳಿ ಪೂಜಾಗೆ ಶಾಕ್ ಆಗಿದೆ. ಬಾ ಪೂಜಾ.. ನಿನ್ನ ಜೊತೆಗೆ ನಾನು ಇರುತ್ತೇನೆ ಎಂದು ಪೂಜಾಳನ್ನು ಅಡುಗೆ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಮೊದಲಿಗೆ ಇಡೀ ಅಡುಗೆ ಮನೆಯನ್ನು ಕ್ಲೀನ್ ಮಾಡಲು ಹೇಳಿದ್ದಾಳೆ. ಈಗಾಗಲೇ ಅಡುಗೆ ಕೋಣೆ ಶುಚಿ ಇದ್ದರೂ ಮತ್ತೊಮ್ಮೆ ಕ್ಲೀನ್ ಮಾಡು.. ಇದು ನಮ್ಮ ಮನೆಯ ಸಂಪ್ರದಾಯ ಎಂದು ಹೇಳಿದ್ದಾಳೆ. ಅಡುಗೆ ಮನೆ ಎಲ್ಲ ಗುಡಿಸಿ-ಒರೆಸಿದ ಬಳಿಕ ಪೂಜಾ ತಿಂಡಿಗೆಂದು ತರಕಾರಿ ಹಚ್ಚಲು ಮುಂದಾಗುತ್ತಾಳೆ.

ಆಗ ಪುನಃ ಇದಕ್ಕೆ ಅಡ್ಡಗಾಲು ಹಾಕಿದ ಮೀನಾಕ್ಷಿ, ಅಡುಗೆ ಮನೆ ಕ್ಲೀನ್ ಮಾಡಿದ ಬಳಿಕ ಸ್ಥಾನ ಮಾಡದೆ ತಿಂಡಿ ಮಾಡಲು ಹೊರಡಬಾರದು, ಅದು ರಾಮ್​ದಾಸ್ ಕುಟುಂಬದ ಸಂಪ್ರದಾಯ ಅಲ್ಲ ಎಂದು ಹೇಳಿದ್ದಾಳೆ. ಇದಕ್ಕಾಗಿ ಹೊರಗೆ ಬಾ ಎಂದು ಕರೆದಿದ್ದು, ಅಲ್ಲಿ ಬಕೆಟ್ ಒಂದರಲ್ಲಿ ತಣ್ಣೀರು ತಂದಿಟ್ಟು ಇದರಲ್ಲಿ ಸ್ಥಾನ ಮಾಡಬೇಕು ಎಂದು ಹೇಳಿದ್ದಾಳೆ. ಇದೆಂತ ಸಂಪ್ರಾದಾಯ ಎಂದು ಪೂಜಾ ಪ್ರಶ್ನಿಸಿದಾಗ, ಕನ್ನಿಕಾ ಬಂದು ಬಕೆಟ್​ನಲ್ಲಿದ್ದ ನೀರನ್ನು ಪೂಜಾಳ ತಲೆಯ ಮೇಲೆ ಎರೆದಿದ್ದಾಳೆ. ಈ ಮೂಲಕ ಪುಜಾಳಿಗೆ ಚಿತ್ರ ಹಿಂದೆ ನೀಡುತ್ತಿದ್ದಾರೆ.



ಇದಿಷ್ಟೇ ಅಲ್ಲದೆ.. ತಿಂಡಿಯನ್ನು ಅಡುಗೆ ಕೋಣೆಯಲ್ಲಿ ಗ್ಯಾಸ್​ ಮೇಲೆ ಮಾಡುವ ಹಾಗಿಲ್ಲ.. ಹೊರಗಡೆ ಒಲೆ ಹಾಕಿ ಅದರಲ್ಲಿ ಮಾಡಬೇಕು.. ಅದು ನಮ್ಮ ಸಂಪ್ರದಾಯ ಎಂದು ಮೀನಾಕ್ಷಿ ಪೂಜಾಗೆ ಹೇಳಿದ್ದಾಳೆ. ಇದು ಪೂಜಾಳಿಗೆ ಸಿಟ್ಟು ತರಿಸಿದೆ.. ಆದರೆ ಬೇರೆ ದಾರಿಯಿಲ್ಲದೆ ಪೂಜಾ ಸೌದೆ ತಂದು ಒಲೆಯಲ್ಲಿ ಬೆಂಕಿ ಉರಿಸಲು ಪ್ರಯತ್ನಿಸಿದ್ದಾಳೆ. ಆದರೆ ಎಷ್ಟೇ ಬೆಂಕಿ ಹಚ್ಚಿಸಲು ಟ್ರೈ ಮಾಡಿದರೂ ಸೌದೆಗೆ ಬೆಂಕಿ ಹಿಡಿಯುತ್ತಿಲ್ಲ.. ಯಾಕೆಂದರೆ ಮೀನಾಕ್ಷಿ ಆ ಎಲ್ಲ ಸೌದೆಗೆ ನೀರು ಮುಟ್ಟಿಸಿ ಬೆಂಕಿ ಹಿಡಿಯದಂತೆ ಮಾಡಿರುತ್ತಾಳೆ.

ಪೂಜಾಳಿಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ.. ಕಣ್ಣೀರು ಬರುತ್ತದೆ.. ಇದೇ ವೇಳೆ ಅಲ್ಲಿಗೆ ಭಾಗ್ಯಾಳ ಎಂಟ್ರಿ ಆಗುತ್ತದೆ.. ನಾನು ಸಹಾಯ ಮಾಡುತ್ತೇನೆ ನಿನಗೆ ಎಂದು ಭಾಗ್ಯ ಬಂದಿದ್ದಾಳೆ. ಭಾಗ್ಯಾಳನ್ನು ಕಂಡು ಪೂಜಾಗೆ ಎಲ್ಲಿಲ್ಲದ ಸಂತೋಷ ಆಗಿದೆ. ಸದ್ಯ ಪೂಜಾಳಿಗೆ ಅಡುಗೆ ಮಾಡಲು ಭಾಗ್ಯ ಹೇಗೆ ಸಹಾಯ ಮಾಡುತ್ತಾಳೆ?, ಭಾಗ್ಯ ಬಂದಿದ್ದಕ್ಕೆ ಮೀನಾಕ್ಷಿ ಇನ್ನೇನು ಖ್ಯಾತೆ ತೆರೆಯುತ್ತಾಳೆ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Shobha Shetty: ಕೊನೆಗೂ ಮದುವೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಶೋಭಾ ಶೆಟ್ಟಿ