Annayya Serial: ಮಾರಿಗುಡಿ ಪಂಚಾಯ್ತಿ; ಪಾರು ಮಾತು ಕೇಳಿ ವೀರಭದ್ರ ಗಡಗಡ!
Annayya Serial Kannada: . ರತ್ನ ಮದುವೆ ಜೊತೆ ವೀರಭದ್ರನ ಪ್ಲ್ಯಾನ್ ಕೂಡ ಜೋರಾಗುತ್ತಿದೆ. ಇನ್ನೇನು ಶಾರದಮ್ಮಗೆ ಶಿಕ್ಷೆಯನ್ನ ವೀರಭದ್ರ ವಿಧಿಸಬೇಕು ಅನ್ನೋಷ್ಟರಲ್ಲಿ ಪಾರು ಎಂಟ್ರಿ ಕೊಟ್ಟಿದ್ದಾಳೆ. ಅಮ್ಮ ಅಂದರೇನೆ ದ್ವೇಷದ ಕಿಡಿ ಕಾರುತ್ತಿದ್ದ ಶಿವು, ಇದುವರೆಗೂ ತಾಯಿಯನ್ನು ನಂಬುತ್ತಿಲ್ಲ. ಇಷ್ಟೂ ವರ್ಷವೂ ಶಾರದಮ್ಮನ ಮೇಲೆ ಕಳ್ಳತನ ಆರೋಪ ಹೊರಿಸಿ ವಿರಭದ್ರ ಅಮ್ಮ ಮಗನನ್ನು ದೂರ ಮಾಡಿ ಮಜಾ ತೆಗೆದುಕೊಂಡಿದ್ದ. ಆದರೀಗ ಪಾರು ಅವಕಾಶ ಕೊಡುತ್ತಿಲ್ಲ.
ಅಣ್ಣಯ್ಯ ಧಾರಾವಾಹಿ -
ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ (Annayya Serial Kannada), ಧಾರಾವಾಹಿಯಲ್ಲಿ ಶಾರದಮ್ಮನ ಮೇಲೆಯೇ ಕಥೆ ಸಾಗುತ್ತಿದೆ. ರತ್ನ ಮದುವೆ ಜೊತೆ ವೀರಭದ್ರನ (Veerabhadra) ಪ್ಲ್ಯಾನ್ ಕೂಡ ಜೋರಾಗುತ್ತಿದೆ. ಇನ್ನೇನು ಶಾರದಮ್ಮಗೆ ಶಿಕ್ಷೆಯನ್ನ ವೀರಭದ್ರ ವಿಧಿಸಬೇಕು ಅನ್ನೋಷ್ಟರಲ್ಲಿ ಪಾರು ಎಂಟ್ರಿ ಕೊಟ್ಟಿದ್ದಾಳೆ. ಅಮ್ಮ ಅಂದರೇನೆ ದ್ವೇಷದ ಕಿಡಿ ಕಾರುತ್ತಿದ್ದ ಶಿವು, ಇದುವರೆಗೂ ತಾಯಿಯನ್ನು ನಂಬುತ್ತಿಲ್ಲ. ಇಷ್ಟೂ ವರ್ಷವೂ ಶಾರದಮ್ಮನ (Sharadamma) ಮೇಲೆ ಕಳ್ಳತನ ಆರೋಪ ಹೊರಿಸಿ ವಿರಭದ್ರ ಅಮ್ಮ ಮಗನನ್ನು ದೂರ ಮಾಡಿ ಮಜಾ ತೆಗೆದುಕೊಂಡಿದ್ದ. ಆದರೀಗ ಪಾರು ಅವಕಾಶ ಕೊಡುತ್ತಿಲ್ಲ.
ಶಾರದಮ್ಮನ ಮೇಲೆ ವೀರಭದ್ರ ಟಾರ್ಗೆಟ್
ವೀರಭದ್ರ ಶಾರದಮ್ಮನಿಗೆ ಎಷ್ಟೋ ಕೆಡುಕನ್ನು ಉಂಟು ಮಾಡಿದ್ದಾನೆ. ಅಷ್ಟೇ ಯಾಕೆ ಮಕ್ಕಳನ್ನೇ ಶಾರದಮ್ಮನಿಂದ ದೂರ ಮಾಡಿದ್ದಾನೆ. ತನ್ನ ಜೀವನವನ್ನೇ ಹಾಳು ಮಾಡಿದ ವೀರಭದ್ರನಿಗೆ ಮುಟ್ಟಿ ನೊಡುವಂತೆ ಈ ಹಿಂದೆ ಶಾರದಮ್ಮ ತಿರುಗೇಟು ಕೊಟ್ಟಿದ್ದಳು.
ಇದನ್ನೂ ಓದಿ: Filmfare Awards event: ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭ; ಏರ್‌ಪೋರ್ಟ್‌ನಲ್ಲಿಯೇ ನಟಿ ಅಂಜಲಿ ಗರಂ, ಕಾರಣ ಇದು
ಮಾದಪ್ಪನ ಮನೆಯಲ್ಲಿ ವೀರಭದ್ರನ ಮುಂದೆಯೇ ಕಾಲ ಮೇಲೆ ಕಾಲು ಹಾಕಿ ಮಂಚದ ಮೇಲೆ ಕುಳಿತುಕೊಂಡು, ತನಗೆ ಕೋಪ ಬಂದರೆ ತಾನು ಏನು ಬೇಕಾದರೂ ಮಾಡುವೆ ಎಂದು ಶಾರದಮ್ಮ ಚಾಲೆಂಜ್ ಕೂಡ ಹಾಕಿದ್ದಳು. ಇದೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ವೀರಭದ್ರ, ಟಾರ್ಗೆಟ್ ಮಾಡಿದ್ದಾನೆ.
ಊರಿನವರನ್ನು ಕರೆಸಿ ಪಂಚಾಯ್ತಿ ನಡೆಸಿದ್ದಾನೆ. ವೀರಭದ್ರ ಮಾತನಾಡಿ, ʻಶಾರದಮ್ಮ ಒಡವೆ ಕದ್ದಿದ್ದಾಳೆ ಎಂಬುದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಕದ್ದುಕೊಂಡ ಹೋಗಿದ್ದ ಚಿನ್ನದ ಬೆಲೆಯನ್ನ ಈಗಿನ ಬೆಲೆಯಲ್ಲಿ ಕಟ್ಟಿದ್ದರೆ ಶಾರದಮ್ಮ ಈ ಊರಿನಲ್ಲಿ ಇರಬಹುದುʼ ಎಂದು ಆದೇಶ ನೀಡ್ತಾನೆ. ಅದೇ ಹೊತ್ತಿಗೆ ಪಾರು ಎಂಟ್ರಿ ಕೊಟ್ಟಿದ್ದಾಳೆ.
ಪಾರು ಮಾತು ಕೇಳಿ ವೀರಭದ್ರ ಗಡಗಡ!
ತಂದೆ ಬಳಿ ಬಂದ ಪಾರು, ಆ ಒಡೆವಯನ್ನ ಕದ್ದುಕೊಂಡು ಬಚ್ಚಿಟ್ಟುಕೊಂಡಿದ್ರಲ್ಲ, ಆ ಜಾಗದಿಂದಲೇ ನಾನು ಬರ್ತೀರೋದುʼ ಎಂದಿದ್ದಾಳೆ ಪಾರು. ಪಾರು ಮಾತು ಕೇಳಿ ವೀರಭದ್ರನಿಗೆ ಶಾಕ್ ಆಗಿದೆ. ತನ್ನ ಕೇಡಿನ ಕೆಲಸ ಮಗಳಿಗೆ ಹೇಗೆ ಗೊತ್ತಾಯ್ತು ಅಂತ ಶಾಕ್ ಆಗಿದ್ದಾನೆ.
ಪಾರು ಒಂದು ವೇಳೆ ಸತ್ಯ ಹೇಳಿ ಬಿಟ್ಟರೆ ಎನ್ನೋ ಸತ್ಯಕ್ಕೆ ತನ್ನ ತೀರ್ಪನ್ನೇ ಬದಲಿಸ್ತಾನಾ? ಅಥವಾ ಇಷ್ಟಾದರೂ ಶಿವುಗೆ ತಾಯಿ ಮೇಲೆ ನಂಬಿಕೆ ಬರಲ್ವಾ? ಪಾರು ಮುಂದಿನ ನಡೆಯೇನು ಅನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: Rashmika-Vijay Wedding: ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ರಿವೀಲ್; ʻವಿರೋಶ್ʼಮದುವೆ ಸಂಭ್ರಮ
ಇನ್ನೊಂದು ಕಡೆ ಅಣ್ಣಯ್ಯ ಸೀರಿಯಲ್‌ನಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಎಲ್ಲರ ಮುಂದೆ ಒಳ್ಳೆಯವನಂತೆ ನಟಿಸುತ್ತಿರುವ ಪರಶು ಮುಖವಾಡ ಕಳಚಿ ಬೀಳುತ್ತಾ ಅನ್ನೋ ಗೊಂದಲಗಳಿಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಮದುವೆ ಮಂಟಪಕ್ಕೆ ಮಗುವಿನೊಂದಿಗೆ ಮಹಿಳೆಯೊಬ್ಬಳು ಎಂಟ್ರಿ ಕೊಟ್ಟು, ಪರಶುನನ್ನು ಅಪ್ಪ ಎಂದು ಮಗು ಕರೆದಿದ್ದು ಕಥೆಗೆ ಹೊಸ ತಿರುವು ನೀಡಿದೆ.