Kaun Banega Crorepati: ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್!
ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತೀಯ ಸೇನೆಯು ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ನಡೆಸಿತ್ತು. ಇದರ ಸಂಪೂರ್ಣ ಮಾಹಿತಿಯನ್ನು ಮಾಧ್ಯಮಗಳಿಗೆ ತಿಳಿಸಲು ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಎಲ್ಲರ ಮುಂದೆ ಬಂದಿದ್ದರು. ಇದೀಗ ಇವರು ಕೌನ್ ಬನೇಗಾ ಕರೋಡ್‌ಪತಿ (Kaun Banega Crorepati) ವಿಶೇಷ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದು, ವಿವಾದ ಸೃಷ್ಟಿಸಿದೆ.


ಮುಂಬೈ: ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ವೇಳೆ ಎಲ್ಲರ ಗಮನ ಸೆಳೆದಿರುವ ಕರ್ನಲ್ ಸೋಫಿಯಾ ಖುರೇಷಿ (Colonel Sofiya Qureshi) ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ (Wing Commander Vyomika Singh) ಈಗ ವಿವಾದಕ್ಕೆ ಗುರಿಯಾಗಿದ್ದಾರೆ. ಕೌನ್ ಬನೇಗಾ ಕರೋಡ್‌ಪತಿ (Kaun Banega Crorepati) ವಿಶೇಷ ಸಂಚಿಕೆಯಲ್ಲಿ ಇವರು ಕಾಣಿಸಿಕೊಂಡಿದ್ದು, ಇದರ ಪ್ರೋಮೋ ಈಗ ಬಿಡುಗಡೆಯಾಗಿದೆ. ಇದು ಈಗ ವಿವಾದ ಉಂಟು ಮಾಡಿದೆ. ಅನೇಕರು ಕೇಂದ್ರ ಸರ್ಕಾರವು ಜನಸಂಪರ್ಕ ಮತ್ತು ರಾಜಕೀಯ ಲಾಭಕ್ಕಾಗಿ ಸಶಸ್ತ್ರ ಪಡೆಗಳ ಬಳಕೆ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು. ಇದಾದ ಬಳಿಕ ಭಾರತೀಯ ಸೇನೆಯು ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ನಡೆಸಿತ್ತು. ಇದರ ಸಂಪೂರ್ಣ ಮಾಹಿತಿಯನ್ನು ಮಾಧ್ಯಮಗಳಿಗೆ ತಿಳಿಸಲು ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಎಲ್ಲರ ಮುಂದೆ ಬಂದಿದ್ದರು. ಇದೀಗ ಇವರು ಕೆಬಿಸಿಯ ವಿಶೇಷ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಪ್ರೋಮೋ ಈಗ ವಿವಾದ ಸೃಷ್ಟಿಸಿದೆ.
ಆಪರೇಷನ್ ಸಿಂದೂರ್‌ನ ಮುಖವಾಗಿದ್ದ ಮತ್ತು ಮಾಧ್ಯಮ ಸಂವಾದಗಳನ್ನು ಮುನ್ನಡೆಸಿದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಕೌನ್ ಬನೇಗಾ ಕರೋಡ್‌ಪತಿ (ಕೆಬಿಸಿ) ವಿಶೇಷ ಸಂಚಿಕೆಯಲ್ಲಿ ಕಾಣಿಸಿಕೊಂಡಿರುವುದಕ್ಕೆ ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದಾರೆ. ಸಶಸ್ತ್ರ ಪಡೆಗಳನ್ನು ಕೇಂದ್ರ ಸರ್ಕಾರವು ಜನಸಂಪರ್ಕ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಅನೇಕರು ಆರೋಪಿಸಿದ್ದಾರೆ.
ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರೊಂದಿಗೆ ಕೆಬಿಸಿಯ ಸ್ವಾತಂತ್ರ್ಯ ದಿನದ ಈ ವಿಶೇಷ ಸಂಚಿಕೆಯಲ್ಲಿ ಕಳೆದ ವರ್ಷ ಭಾರತೀಯ ನೌಕಾಪಡೆಯಲ್ಲಿ ಯುದ್ಧನೌಕೆಯ ಕಮಾಂಡ್ ಅನ್ನು ನೀಡಿರುವ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಮಾಂಡರ್ ಪ್ರೇರಣಾ ದಿಯೋಸ್ಥಲಿ ಕೂಡ ಭಾಗವಹಿಸಲಿದ್ದಾರೆ.
राजनीति अपने आखिरी पड़ाव पर पहुच चुकी हैं
— Mr,CooL (@MR_COOL77777) August 12, 2025
ऑपरेशन सिंदूर में मुख्य भूमिका निभाने वाली देश की बेटियाँ कर्नल सोफिया कुरैशी और VyomikaSingh'
कौन बनेगा करोड़पति पर इस हफ्ते दिखाईं देंगी
अब आप लोग समझ सकते हैं ज्यादा कुछ लिख दूँगा तो एक विशेष पार्टी के अंध भक्त लोगों को मिर्ची लग… pic.twitter.com/UnZslHCLnm
ಪ್ರೋಮೋದಲ್ಲಿ ಏನಿದೆ?
ಆಗಸ್ಟ್ 15 ರಂದು ಪ್ರಸಾರವಾಗಲಿರುವ ಕೆಬಿಸಿಯ ಟೀಸರ್ ನಲ್ಲಿ ಭಾರತೀಯ ಸೇನೆಯ ಅಧಿಕಾರಿಗಳಿಗೆ ಕೆಬಿಸಿ ನಿರೂಪಕ ಅಮಿತಾಭ್ ಬಚ್ಚನ್ ಅವರು ಭವ್ಯ ಸ್ವಾಗತ ನೀಡುತ್ತಿರುವುದನ್ನು ತೋರಿಸಲಾಗಿದೆ. ಇದರಲ್ಲಿ ಪಹಲ್ಗಾಮ್ ದಾಳಿಯ ಬಳಿಕ ಭಾರತ ಪ್ರಾರಂಭಿಸಿದ ಆಪರೇಷನ್ ಸಿಂದೂರ್ ಏಕೆ ಅಗತ್ಯವಾಗಿತ್ತು ಎಂಬುದನ್ನು ಕರ್ನಲ್ ಖುರೇಷಿ ವಿವರಿಸಿದ್ದಾರೆ.
ಪಾಕಿಸ್ತಾನವು ಭಯೋತ್ಪಾದನಾ ಕೃತ್ಯಗಳನ್ನು ಪದೇ ಪದೇ ನಡೆಸುತ್ತಿದೆ. ಹೀಗಾಗಿ ಈ ಪ್ರತಿಕ್ರಿಯೆ ಅಗತ್ಯವಾಗಿತ್ತು. ಅದಕ್ಕಾಗಿಯೇ ಆಪರೇಷನ್ ಸಿಂದೂರ್ ಅನ್ನು ಯೋಜಿಸಲಾಗಿತ್ತು ಎನ್ನುತ್ತಾರೆ ಖುರೇಷಿ.
ರಿಯಾಲಿಟಿ ಶೋವೊಂದರಲ್ಲಿ ಈ ಕಾರ್ಯಾಚರಣೆಯ ಬಗ್ಗೆ ಇಬ್ಬರು ಅಧಿಕಾರಿಗಳು ಮಾತನಾಡುತ್ತಿರುವುದು ಅನೇಕರಿಗೆ ಇಷ್ಟವಾಗಲಿಲ್ಲ. ಹಲವಾರು ಮಂದಿ ಈ ಅಧಿಕಾರಿಗಳನ್ನು ಸಂಪೂರ್ಣವಾಗಿ ಸಮವಸ್ತ್ರದೊಂದಿಗೆ ಆಹ್ವಾನಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು, ಯಾವುದೇ ದೇಶದಲ್ಲಿ ಗಂಭೀರವಾದ ಮಿಲಿಟರಿ ಕಾರ್ಯಾಚರಣೆಯ ಅನಂತರ ನೀವು ಎಂದಾದರೂ ಈ ರೀತಿಯದ್ದನ್ನು ನೋಡಿದ್ದೀರಾ? ಸೇವೆಯಲ್ಲಿರುವ ಯಾರಿಗಾದರೂ ಇದನ್ನು ಹೇಗೆ ಅನುಮತಿಸಲಾಗುತ್ತದೆ? ಪ್ರಸ್ತುತ ಆಡಳಿತವು ನಮ್ಮ ಪಡೆಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಶಸ್ತ್ರ ಪಡೆಗಳ ಶಿಷ್ಟಾಚಾರವು ಕೆಬಿಸಿಯಂತಹ ರಿಯಾಲಿಟಿ ಶೋಗಳಿಗೆ ಅಧಿಕಾರಿಗಳನ್ನು ಕಳುಹಿಸಲು ಅವಕಾಶ ನೀಡುತ್ತದೆಯೇ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳಿಗೆ ಕೆಲವು ಶಿಷ್ಟಾಚಾರ, ಘನತೆ ಮತ್ತು ಅಪಾರ ಗೌರವವಿದೆ. ರಾಜಕಾರಣಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅದನ್ನು ಹಾಳು ಮಾಡುತ್ತಿದ್ದಾರೆ. ಅದು ನಾಚಿಕೆಗೇಡಿನ ಸಂಗತಿ ಎಂದು ಮತ್ತೊಬ್ಬರು ಹೇಳಿದ್ದಾರೆ. ನಮ್ಮ ಸೈನ್ಯವು ರಾಜಕೀಯಕ್ಕಿಂತ ಮೇಲಿತ್ತು. ಸಾರ್ವಜನಿಕ ಸಂಪರ್ಕವನ್ನು ಮೀರಿ ಪವಿತ್ರವಾಗಿತ್ತು. ನಮ್ಮ ಪಡೆಗಳು ರಾಜಕಾರಣಿಗಳ ಬ್ರ್ಯಾಂಡ್‌ನಲ್ಲ, ರಾಷ್ಟ್ರವನ್ನು ರಕ್ಷಿಸುವುದು ಎಂದು ಮತ್ತೊಬ್ಬರು ತಿಳಿಸಿದ್ದಾರೆ.
ಸೇನೆಯ ಶಿಷ್ಟಾಚಾರದಂತೆ ಸೇನಾ ಉಡುಗೆಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ಅಥವಾ ಸಾಮಾಜಿಕ ಕೂಟಗಳಲ್ಲಿ ಧರಿಸುವಂತಿಲ್ಲ. ಅಲ್ಲದೇ ಸಾರ್ವಜನಿಕ ಸ್ಥಳಗಳು, ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡುವಾಗ, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಅಥವಾ ನಾಗರಿಕ ವಿಮಾನದಲ್ಲಿ ಪ್ರಯಾಣಿಸುವಾಗ ಅದನ್ನು ಹಾಕುವಂತಿಲ್ಲ. ಕಮಾಂಡಿಂಗ್ ಅಧಿಕಾರಿಯಿಂದ ಲಿಖಿತವಾಗಿ ಅನುಮತಿ ಪಡೆಯದ ಹೊರತು ಅಧಿಕೃತವಲ್ಲದ ಮಾನ್ಯತೆ ಪಡೆದ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಅಧಿಕೃತ ಸಮವಸ್ತ್ರವನ್ನು ಧರಿಸುವಂತಿಲ್ಲ ಎಂದು ಹೇಳಿದೆ ಎಂದು ಮತ್ತೊಬ್ಬರು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Food poison: ಈರುಳ್ಳಿ ದೋಸೆ ತಿಂದು ಕಾಲೇಜು ಹಾಸ್ಟೆಲ್‌ನ 30 ವಿದ್ಯಾರ್ಥಿಗಳು ಆಸ್ಪತ್ರೆ ಪಾಲು
ಎರಡು ವರ್ಷಗಳ ಹಿಂದೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪಡೆದ ಮಲಯಾಳಂ ಚಲನಚಿತ್ರ ನಟ ಮೋಹನ್ ಲಾಲ್ ಅವರನ್ನು ಕೇರಳದ ಸರ್ಕಾರಿ ಜಾಹೀರಾತುಗಳಲ್ಲಿ ಬಳಸಿಕೊಳ್ಳಲಾಗಿತ್ತು. ವಾಣಿಜ್ಯ ಉದ್ದೇಶಗಳಿಗಾಗಿ ನಟ ತಮ್ಮ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಇದನ್ನು ಮೋಹನ್ ಲಾಲ್ ನಿರಾಕರಿಸಿದ್ದರು ಎಂದು ಕಾಮೆಂಟ್ ನಲ್ಲಿ ಮತ್ತೊಬ್ಬರು ತಿಳಿಸಿದ್ದರು.