ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Lakshmi Baramma Serial: ಭೂಮಿಕಾರನ್ನು ಮದುವೆ ಆಗೋನು ಹೀಗಿದ್ರೆ ಸಾಕಂತೆ

ಭೂಮಿಕಾ ರಮೇಶ್‌ ಮೊದಲ ಬಾರಿಗೆ ತಮ್ಮ ಮದುವೆ, ಪ್ರೀತಿ, ಪ್ರೇಮ, ಬಾಯ್‌ ಫ್ರೆಂಡ್‌ ಹಾಗೂ ತಮ್ಮ ಬಾಳ ಸಂಗಾತಿ ಹೇಗಿರಬೇಕು ಎನ್ನುವುದರ ಕುರಿತು ವಿಶ್ವವಾಣಿ ಸ್ಪೆಷಲ್ ಯೂಟ್ಯೂಬ್ ಚಾನೆಲ್ನ ವಿಶೇಷ ಸಂದರ್ಶನದಲ್ಲಿ ಕೆಲ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ.

ಭೂಮಿಕಾರನ್ನು ಮದುವೆ ಆಗೋನು ಹೀಗಿದ್ರೆ ಸಾಕಂತೆ

Bhoomika Ramesh Interview

Profile Vinay Bhat Feb 26, 2025 7:30 AM

ಕಲರ್ಸ್ ಕನ್ನಡದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್​ನ ಲಕ್ಷ್ಮೀಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದರಲ್ಲಿ ಮುಖ್ಯ ಭೂಮಿಕೆಯಲ್ಲಿ ಲಕ್ಷ್ಮಿಯಾಗಿ ಎಲ್ಲರ ಮೆಚ್ಚುಗೆ ಪಡೆದಿರುವ ಭೂಮಿಕಾ ರಮೇಶ್​ ಈಗ ಫುಲ್ ಫೇಮಸ್. ರಿಯಾಲಿಟಿ ಶೋಗಳ ಮೂಲಕ ಕಿರುತೆರೆಗೆ ಬಂದ ಭೂಮಿಕಾ ನಂತರ ಸೀರಿಯಲ್​ಗೆ ಬಂದರು.

ಇದೀಗ ಭೂಮಿಕಾ ರಮೇಶ್‌ ಮೊದಲ ಬಾರಿಗೆ ತಮ್ಮ ಮದುವೆ, ಪ್ರೀತಿ, ಪ್ರೇಮ, ಬಾಯ್‌ ಫ್ರೆಂಡ್‌ ಹಾಗೂ ತಮ್ಮ ಬಾಳ ಸಂಗಾತಿ ಹೇಗಿರಬೇಕು ಎನ್ನುವುದರ ಕುರಿತು ವಿಶ್ವವಾಣಿ ಸ್ಪೆಷಲ್ ಯೂಟ್ಯೂಬ್ ಚಾನೆಲ್​ನ ವಿಶೇಷ ಸಂದರ್ಶನದಲ್ಲಿ ಕೆಲ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ.

ನಾನು ಪರ್ಸನಲ್ ಮೊಬೈಲ್ ಅಂತ ಯೂಸ್ ಮಾಡೋದೇ ಇಲ್ಲ. ನನ್ಗೆ ಬಾಯ್ ಫ್ರೆಂಡ್ ಮಾಡೋಕೆ ಟೈಮ್ ಸಿಗಲಿಲ್ಲ ಎಂದಿದ್ದಾರೆ. ತಮ್ಮ ಹುಡುಗ ಹೀಗೆ ಇರಬೇಕು ಎಂದು ಪ್ರತಿಯೊಬ್ಬರಿಗೂ ನಿರೀಕ್ಷೆ ಇರುತ್ತದೆ. ನನಗೂ ಕೆಲವು ಆರೀತಿಯ ಆಸೆಗಳಿವೆ. ನಾನು ಟ್ರೆಡಿಶನಲ್ ಹುಡುಗಿ ಅಂತಾ ಎಲ್ಲರಿಗೂ ಗೊತ್ತು. ಹೀಗಾಗಿ ಆ ರೀತಿನೇ ನಾನು ಆಲೋಚನೆ ಮಾಡುತ್ತೇನೆ. ಎಲ್ಲರ ಮನೆಯಲ್ಲೂ ಮನಸ್ತಾಪಗಳು ಸಾಮಾನ್ಯವಾಗಿರುವುದರಿಂದ ನನಗೆ ಫ್ಯಾಮಿಲಿ ತುಂಬಾ ಮುಖ್ಯ. ಒಂದು ವೇಳೆ ಒಂದು ದಿನ ನಾನು ನನ್ನ ಹುಡುಗನನ್ನು ನಿಲ್ಲಿಸಿಕೊಂಡು ನಾನು ಮುಖ್ಯನಾ ನಿಮ್ಮ ಅಮ್ಮ ಮುಖ್ಯನಾ ಎನ್ನುವ ಪರಿಸ್ಥಿತಿ ಬಂದರೆ ಅವನು ನನ್ನ ಅಮ್ಮನೇ ಮುಖ್ಯ ಎಂದು ಹೇಳಬೇಕು. ಆ ರೀತಿಯ ಹುಡುಗ ಆಗಿರಬೇಕು ಎಂದು ಹೇಳಿದ್ದಾರೆ.

ಅವನಿಗೆ ನಾನು ಮುಖ್ಯ ಎನ್ನುವುದಾಗಿದ್ದರೆ ಖಂಡಿತಾ ಮುಂದೊಂದು ದಿನಾ ಅವನು ನನ್ನನ್ನೂ ಬಿಟ್ಟು ಬಿಡುತ್ತಾನೆ. ಯಾಕೆಂದರೆ ಮೊದಲಿನಿಂದಲೂ ಜೊತೆಗಿರುವ ಅಮ್ಮನನ್ನು ಬಿಟ್ಟು ನಾನು ಅಂತಾ ಹೇಳುತ್ತಿದ್ದಾನೆ ಅಂದರೆ ಮುಂದೊಂದು ದಿನಾ ನನ್ನನ್ನು ಬಿಡುತ್ತಾನೆ ಅಂತಾ. ಹೀಗಾಗಿ ಫ್ಯಾಮಿಲಿ ಹುಡುಗ ಆಗಿರಬೇಕು.. ಫ್ಯಾಮಿಲಿಗೆ ಸಮಯ ಕೊಡುವ ಹುಡುಗ ಆಗಿರಬೇಕು. ನನ್ನ ತಂದೆ-ತಾಯಿಗೂ ವಯಸ್ಸಾಗುತ್ತದೆ ಅವರನ್ನೂ ಮಕ್ಕಳ ರೀತಿ ನೋಡಿಕೊಳ್ಳಬೇಕಾದ ಸಮಯ ಬರುತ್ತದೆ. ಆಗ ನಾನು ಅವರಿಗೆ ತಾಯಿಯಾದರೆ ಅವನು ತಂದೆ ಸ್ಥಾನ ಕೊಡುವವನಾಗಿರಬೇಕು ಎಂದು ಹೇಳಿದ್ದಾರೆ.



ಇನ್ನು ಕಾಲೇಜಲ್ಲಿ ಇರುವಾಗ ನನಗೆ ಲಿಟಲ್ ಮಿಸ್ ಮೊನಾಲಿಸ ಅವಾರ್ಡ್ ಸಿಕ್ಕಿತು. ಅದಕ್ಕಾಗಿ ನನಗೆ ಒರಿಸ್ಸಾಗೆ ಹೋಗಬೇಕಾಗಿದ್ದರಿಂದ ಅದರ ಟ್ರೈನಿಂಗ್​ನಲ್ಲೇ ಬ್ಯುಸಿ ಇದ್ದೆ. ನಾನು ಹೀಗೆನೆ ಬ್ಯುಸಿಯಾದೆ.. ಬಾಯ್ ಫ್ರೆಂಡ್ ಬಗ್ಗೆಲ್ಲ ಗಮನವೇ ಹರಿಸಿಲ್ಲ.. ಆದ್ರೆ ಆಗುತ್ತೆ ಬಿಡು ಅಂತ ಇದ್ದೆ. ಪ್ರಮೋಸಲ್ಸ್ ತುಂಬಾ ಬಂದಿದೆ. ಆದ್ರೆ ನನ್ಗೆ ಡೈರೆಕ್ಟ್ ಆಗಿ ಹೇಳೋ ಧೈರ್ಯ ಯಾರೂ ಮಾಡಿಲ್ಲ. ಯಾಕಂದ್ರೆ ಎಲ್ಲರಿಗೂ ಒಂದು ಭಯ ಇತ್ತು.. ನನ್ನ ಅಪ್ಪ ಲಾಯರ್ ಅಂತ.. ಬೇಡಪ್ಪ ಇವಳತ್ರ ಹೋಗ್ಬಾರದು ಅಂತ ಕೆಲವರಿಗೆ ಇತ್ತು ಎಂದು ಹೇಳಿದ್ದಾರೆ.

Kshethrapathi: ಕಲರ್ಸ್ ಕನ್ನಡದಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್: ಶಿವರಾತ್ರಿಗೆ ಬರುತ್ತಿದೆ ಕ್ಷೇತ್ರಪತಿ ಸಿನಿಮಾ