Bhagya Lakshmi Serial: ಭಾಗ್ಯ ಮನೆಯವರೊಂದಿಗೆ ಒಂದಾಗಿ ಹೋದ ಆದೀಶ್ವರ್ ಕಾಮತ್
ಭಾಗ್ಯ ಮನೆಯಲ್ಲಿ ಪೂಜೆಯ ಸಂಭ್ರಮ ನಡೆಯುತ್ತಿದ್ದು, ಆದೀಶ್ವರ್ನೇ ಎದುರು ನಿಂತು ಭಾಗ್ಯ ಜೊತೆ ಎಲ್ಲ ನಡೆಸಿಕೊಂಡು ಹೋಗುತ್ತಿದ್ದಾರೆ. ಒಟ್ಟಾರೆಯಾಗಿ ಭಾಗ್ಯ ಮನೆಯವರೊಂದಿಗೆ ಆದೀಶ್ವರ್ ಕಾಮತ್ ಒಂದಾಗಿ ಹೋಗಿದ್ದಾನೆ. ಊಟಕ್ಕೆ ಎಲ್ಲರು ಕೂತಾಗ ನಾನೇ ಬಳಿಸುತ್ತೇನೆ ಎಂದು ಆದೀಶ್ವರ್ ಬಾಳೆ ಎಲೆ ಇಟ್ಟು ಭಾಗ್ಯ ಜೊತೆ ಸೇರುತ್ತಾನೆ.

Bhagya lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಮದುವೆಯ ಭಾಗ್ಯ ಮನೆಯವರು ಹಾಗೂ ಆದೀಶ್ವರ್ ಕಾಮತ್ ತುಂಬಾ ಕ್ಲೋಸ್ ಆಗಿದ್ದಾರೆ. ದಿನದಿಂದ ದಿನಕ್ಕೆ ಭಾಗ್ಯ-ಆದೀ ಒಂದಲ್ಲ ಒಂದು ವಿಚಾರಕ್ಕೆ ಭೇಟಿಯಾಗಿ ಹತ್ತಿರವಾಗುತ್ತಿದ್ದಾರೆ. ಸದ್ಯ ಭಾಗ್ಯ ಮನೆಯಲ್ಲಿ ಪೂಜೆಯ ಸಂಭ್ರಮ ನಡೆಯುತ್ತಿದ್ದು, ಆದೀಶ್ವರ್ನೇ ಎದುರು ನಿಂತು ಭಾಗ್ಯ ಜೊತೆ ಎಲ್ಲ ನಡೆಸಿಕೊಂಡು ಹೋಗುತ್ತಿದ್ದಾರೆ. ಒಟ್ಟಾರೆಯಾಗಿ ಭಾಗ್ಯ ಮನೆಯವರೊಂದಿಗೆ ಆದೀಶ್ವರ್ ಕಾಮತ್ ಒಂದಾಗಿ ಹೋಗಿದ್ದಾನೆ.
ಲಕ್ಷ್ಮೀ ಪೂಜೆಗೆ ಭಾಗ್ಯ ಹೊಸದಾಗಿ ಮದುವೆಯಾದ ಪೂಜಾ ಹಾಗೂ ಕಿಶನ್ರನ್ನು ಕರೆದಿದ್ದಾಳೆ. ಇವರಿಬ್ಬರು ಬರುತ್ತಾರೆಂದು ಭಾಗ್ಯ ಬಗೆ-ಬಗೆಯ ತಿಂಡಿ ತಿನಿಸು ರೆಡಿ ಮಾಡಿಟ್ಟಿರುತ್ತಾಳೆ. ಆದರೆ, ಶಾಕಿಂಗ್ ಎಂಬಂತೆ ಈ ಪೂಜೆಗೆ ಇಡೀ ರಾಮ್ದಾಸ್ ಕುಟುಂಬವೇ ಬಂದಿದೆ. ಭಾಗ್ಯ ಕಿಶನ್-ಪೂಜಾ ಮಾತ್ರ ಬರಬಹುದೆಂದು ಇವರಿಬ್ಬರಿಗೆ ಆಗುವಷ್ಟು ಮಾತ್ರ ಊಟಕ್ಕೆ ರೆಡಿ ಮಾಡಿಟ್ಟಿರುತ್ತಾಳೆ. ಇಷ್ಟು ಜನರನ್ನು ಕಂಡು ಕುಸುಮಾ-ಭಾಗ್ಯಾಗೆ ಈಗ ದಿಢೀರ್ ಅಂತ ಊಟಕ್ಕೆ ಏನು ಮಾಡುವುದು ಎಂದು ಗಲಿಬಿಲಿ ಆಗುತ್ತದೆ.
ಭಾಗ್ಯ ಪೂಜಾಳನ್ನು ಒಳಗೆ ಕರೆದುಕೊಂಡು ಬಂದು, ಒಂದು ಸಮಸ್ಯೆ ಆಗಿದೆ.. ನಾನು ನೀವಿಬ್ಬರು ಮಾತ್ರ ಬರುವುದು ಅಂತ ಅಂದುಕೊಂಡು ಅಷ್ಟೇ ಊಟಕ್ಕೆ ರೆಡಿ ಮಾಡಿದ್ದೇನೆ ಎಂದು ಹೇಳುತ್ತಾಳೆ. ಇದನ್ನ ಆದೀಶ್ವರ್ ಮತ್ತು ಕಿಶನ್ ಕೇಳಿಸಿಕೊಳ್ಳುತ್ತಾಳೆ. ತಕ್ಷಣವೇ ಆದೀ ಭಾಗ್ಯಾ ಬಳಿ ಕ್ಷಮೆ ಕೇಳಿ, ಸ್ವಾರಿ ನಾವು ನಿಮಗೆ ಹೇಳಬೇಕಿತ್ತು.. ತೊಂದರೆ ಇಲ್ಲ, ನಾನು ಏನೋ ಕನ್ವೆನ್ಸ್ ಮಾಡಿಸಿ ಅಪ್ಪ, ಕನ್ನಿಕಾ ಅವರನ್ನೆಲ್ಲ ಪುನಃ ಮನೆಗೆ ಕರೆದುಕೊಂಡು ಹೋಗುತ್ತೇನೆ, ಇದು ನಮ್ಮಿಂದ ಆಗಿರುವ ತಪ್ಪು ಎಂದು ಹೇಳುತ್ತಾನೆ.
ಆಗ ಭಾಗ್ಯ ಅಯ್ಯೋ ಬೇಡ.. ಬೇಡ.. ಊಟಕ್ಕೆ ಇನ್ನು ಸ್ವಲ್ಪ ಹೊತ್ತಿದೆ ಅಲ್ವಾ.. ನಾವು ಎಲ್ಲ ರೆಡಿ ಮಾಡುತ್ತೇವೆ ಎಂದು ಹೇಳಿ ಒಂದೊಂದೆ ಪಾತ್ರೆ ತೆಗೆದುಕೊಂಡು ಬಗೆ ಬಗೆಯ ಅಡುಗೆ ಮಾಡಲು ಮುಂದಾಗುತ್ತಾಳೆ. ಭಾಗ್ಯಾಳಿಗೆ ಪೂಜಾ, ಕುಸುಮಾ ಕೂಡ ಸಹಾಯ ಮಾಡುತ್ತಾರೆ. ಇವರ ಅಡುಗೆ ವೇಗ ಕಂಡು ಆದೀ ಹಾಗೂ ಕಿಶನ್ಗೆ ಶಾಕ್ ಆಗುತ್ತದೆ. ಅಚ್ಚರಿ ಎಂದರೆ ಸಯಮಕ್ಕೆ ಸರಿಯಾಗಿ ಎಲ್ಲ ಅಡುಗೆ ರೆಡಿ ಆಗುತ್ತದೆ. ಊಟಕ್ಕೆ ಎಲ್ಲರು ಕೂತಾಗ ನಾನೇ ಬಳಿಸುತ್ತೇನೆ ಎಂದು ಆದೀಶ್ವರ್ ಬಾಳೆ ಎಲೆ ಇಟ್ಟು ಭಾಗ್ಯ ಜೊತೆ ಸೇರುತ್ತಾರೆ. ತರಾತುರಿಯಲ್ಲಿ ಅಡುಗೆ ಮಾಡಿದರೂ ಭಾಗ್ಯ ಕೈ ರುಚಿಯನ್ನು ಮೆಚ್ಚಿ ಎಲ್ಲರೂ ಹೊಗಳುತ್ತಾರೆ.
ಇನ್ನು ಆದೀಶ್ವರ್ ಭಾಗ್ಯಾಗೆ ದೊಡ್ಡ ಗಿಫ್ಟ್ ಕೊಡುವುದರಲ್ಲಿದ್ದಾನೆ. ಹೊರಡುವ ಮುನ್ನ ಆದೀ 25 ಲಕ್ಷ ಹಣವನ್ನು ಭಾಗ್ಯ ಕೈಗೆ ನೀಡಲಿದ್ದಾನೆ. ಆದೀ ಹಾಗೂ ತಾಂಡವ್ಗೆ ಕೈ ತಪ್ಪುತ್ತಿದ್ದ ದೊಡ್ಡ ಪ್ರಾಜೆಕ್ಟ್ ಒಂದು ಭಾಗ್ಯಾಳ ಕೃಪೆಯಿಂದ ಪುನಃ ಸಿಕ್ಕಿತು. ಕೋಟಿ ಕೋಟಿ ಪ್ರಾಜೆಕ್ಟ್ ಭಾಗ್ಯ ಇಲ್ಲದಿದ್ದರೆ ಇವರಿಗೆ ಸಿಗುತ್ತಿರಲಿಲ್ಲ. ಇಷ್ಟೆಲ್ಲ ಸಹಾಯ ಮಾಡಿರುವ ಭಾಗ್ಯಾಗೆ ಗಿಫ್ಟ್ ನೀಡಲು ಆದೀ ಮುಂದಾಗಿದ್ದಾನೆ.
ಈ ಬಗ್ಗೆ ತಾಂಡವ್ ಬಳಿ ಕೂಡ ಆದೀ ಚರ್ಚೆ ಮಾಡಿದ್ದಾನೆ. ನಾನು ಭಾಗ್ಯಾಗೆ ಏನಾದರು ವ್ಯಾಲ್ಯುವೆಬಲ್ ಗಿಫ್ಟ್ ಕೊಡಬೇಕು ಅಂದುಕೊಂಡಿದ್ದೇನೆ.. ಅವಳಿಂದಲೇ ನಮ್ಮ ಪ್ರಾಜೆಕ್ಟ್ ಅಪ್ರೂವ್ ಆಗಿರೋದು ಅಲ್ವಾ ಎಂದು ತಾಂಡವ್ಗೆ ಕಾಲ್ ಮಾಡಿ ಹೇಳುತ್ತಾನೆ. ತಾಂಡವ್ಗೆ ಕೋಪ ಬಂದರೂ ಅದನ್ನು ತೋರಿಸದೆ, ಹೌದು ಹೌದು.. ಎಂದಿದ್ದಾನೆ. ಸದ್ಯ ಆದೀ ಭಾಗ್ಯ ಮನೆಯಲ್ಲಿರುವಾಗ ತಾಂಡವ್ಗೆ ಕಾಲ್ ಮಾಡಿ ತಕ್ಷಣವೇ ಭಾಗ್ಯ ಮನೆಗೆ ಬರುವಂತೆ ಹೇಳಿದ್ದಾನೆ. ತಾಂಡವ್ ಯಾಕೆಂದು ಕೇಳಿದರೂ ಆತ ಹೇಳುತ್ತಿಲ್ಲ.. ಬಹುಶಃ ಭಾಗ್ಯಾಗೆ ಹಣ ಕೊಡಲು ಇರಬಹುದು.. ಇದೆಲ್ಲ ಮುಂದಿನ ಸಂಚಿಕೆಯಲ್ಲಿ ಪ್ರಸಾಯ ಕಾಣಲಿದೆ.
Mokshitha Pai: ಬಿಳಿ ಬಣ್ಣದ ಕೋ-ಆರ್ಡ್ ಡ್ರೆಸ್ನಲ್ಲಿ ಅಪ್ಸರೆಯಂತೆ ಕಂಡ ಮೋಕ್ಷಿತಾ ಪೈ