ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi) ಕಥಾನಾಯಕಿ ಭಾಗ್ಯ ಹೊಸ ಉದ್ಯಮ ಅಷ್ಟೊಂದು ಕ್ಲಿಕ್ ಮಾಗುವಂತೆ ಕಾಣುತ್ತಿಲ್ಲ. ಈ ಹಿಂದೆ ದೊಡ್ಡ ಫೈವ್ ಸ್ಟಾರ್ ಹೋಟೆಲ್ನಲ್ಲಿ ಚೆಫ್ ಕೆಲಸ ಮಾಡುತ್ತಿದ್ದ ಭಾಗ್ಯ ಈಗ ಬೀದಿಗಳಲ್ಲಿ ಊಟ ಬಡಿಸುವಂತಾಗಿದೆ. ಭಾಗ್ಯ ಆಫೀಸ್ನಲ್ಲಿ ಕೆಲಸ ಮಾಡುವವರಿಗೆ ಊಟದ ಡಬ್ಬ ತಲುಪಿಸಿ, ಮನೆಯಿಂದಲೇ ಅವಳು ಅಡುಗೆ ಮಾಡಿ ಹಾಸ್ಟೆಲ್ ಹುಡುಗರಿಗೆ, ಆಫೀಸ್‌ನಲ್ಲಿದ್ದವರಿಗೆ ಬಾಕ್ಸ್ ಕಳಿಸಿಕೊಡುವ ಪ್ಲಾನ್ ಮಾಡಿದ್ದಾಳೆ. ಅದಕ್ಕೆ ಮನೆಯವರೆಲ್ಲರೂ ಸಹಕಾರ ನೀಡಿದ್ದಾರೆ. ಇದಕ್ಕೆ ಕೈ ರುಚಿ ಎಂಬ ಹೆಸರು ಕೂಡ ಇಡಲಾಗಿದೆ. ಆದರೆ, ಭಾಗ್ಯಾಗೆ ಮೊದಲ ದಿನ ಯಶಸ್ಸು ಸಿಗಲಿಲ್ಲ.
ಭಗ್ಯಾಗೆ ಫುಡ್ ಆರ್ಡರ್ನ ಒಂದೇ ಒಂದು ಫೋನ್ ಕಾಲ್ ಬಂದಿಲ್ಲ. ಯಾವುದೇ ಕಾಲ್ ಬರುವುದಿಲ್ಲ ಎಂಬುದನ್ನು ಅರಿತ ಭಾಗ್ಯ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಅವಕಾಶ ಆಗಲಿ.. ಅದೃಷ್ಟ ಆಗಲಿ.. ಅದಾಗೆ ಅದು ನಮ್ಮನ್ನ ಹುಡ್ಕೊಂಡು ಬರಲ್ಲ.. ಕೆಲವೊಂದು ಸಲ ನಾವೇ ಅದನ್ನು ಹುಡ್ಕೊಂಡು ಹೋಗಬೇಕು ಎಂದು ಊಟದ ಡಬ್ಬ ಹಿಡಿದುಕೊಂಡು ಆಫಿಸ್ಗಳ ಮುಂದೆ ಹೋಗಿ ರುಚಿ-ರುಚಿಯಾದ ಮನೆ ಊಟ ತಯಾರಿದೆ ಎಂದು ಕೂಗಿ ಹೇಳಿದ್ದಾಳೆ.
ಜನರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಬ್ಯುಸಿನೆಸ್ ಮಾಡಲು ಭಾಗ್ಯ ಮುಂದಾಗಿದ್ದಾಳೆ. ಭಾಗ್ಯ ಮನೆ ಊಟ ಎಂದು ಹೇಳಿದಾಗ ಅಲ್ಲಿದ್ದ ಕೆಲವು ಹುಡುಗರು ಊಟವನ್ನು ಸವಿಯಲು ಬರುತ್ತಾರೆ. ಕೂಡಲೇ ಅವರಿಗೆ ಬಹಳಷ್ಟು ಖುಷಿಯಾಗುತ್ತದೆ. ಅವರಿಗೆ ಮನೆಯ ಊಟವನ್ನು ಸವಿದ ಅನುಭವ ಆಗುತ್ತದೆ. ಹೀಗಾಗಿ ಅವರ ಫ್ರೆಂಡ್ಸ್ ಹಾಗೂ ಇತರರಿಗೆ ಹೇಳಲು ಶುರು ಮಾಡುತ್ತಾರೆ. ವಿಶೇಷ ಎಂದರೆ ಇಲ್ಲಿ ಭಾಗ್ಯ ಎಲ್ಲರಿಗೂ ಕೊಟ್ಟಿದ್ದು ಫ್ರೀ ಊಟ. ಇದನ್ನು ಕಂಡು ಪೂಜಾಗೆ ಶಾಕ್ ಆಗುತ್ತದೆ. ಇದೇನಕ್ಕ ಮಾಡುತ್ತಿದ್ದೀಯಾ.. ಫ್ರೀ ಊಟ ಕೊಟ್ಟರೆ, ಈ ದಿನ ಮಾಡಿದ ಎಲ್ಲಾ ಕೆಲಸ ವ್ಯರ್ಥ ಆಗುವುದಿಲ್ಲವೇ ಎಂದು ಹೇಲುತ್ತಾಳೆ. ಆಗ, ನಾವು ಮಾಡಿದ ಊಟವನ್ನು ಅವರು ಸವಿದರೆ ಖಂಡಿತವಾಗಿಯೂ ಅವರೆಲ್ಲರೂ ನಾಳೆಯೂ ನಾನು ಮಾಡಿದ ಊಟವನ್ನು ತೆಗೆದುಕೊಳ್ಳುತ್ತಾರೆ ಎಂದು ಭಾಗ್ಯ ಹೇಳುತ್ತಾಳೆ.
ಇದರ ಮಧ್ಯೆ ಭಾಗ್ಯ ಬಾಳಿಗೆ ಮತ್ತೆ ಕನ್ನಿಕಾಳ ಎಂಟ್ರಿ ಆಗಿದೆ. ಭಾಗ್ಯ ರಸ್ತೆಯಲ್ಲಿ ಊಟ ಕೊಡುತ್ತಿರುವುದನ್ನು ನೋಡಿದ ಕನ್ನಿಕಾ ಕಾರು ನಿಲ್ಲಿಸಿ ತನ್ನ ಡ್ರೈವರ್‌ನನ್ನು ಕಳುಹಿಸಿ ತನಗೆ ಊಟ ತರುವಂತೆ ಹೇಳುತ್ತಾಳೆ. ಕನ್ನಿಕಾ ಹೇಳಿದಂತೆ ಡ್ರೈವರ್ ಭಾಗ್ಯ ಬಳಿಗೆ ಹೋಗಿ ಮೇಡಂ ಊಟ ತರಲು ಹೇಳಿದರು. ಒಂದು ಪ್ಲೇಟ್ ಕೊಡಿ ಎಂದಾಗ ಭಾಗ್ಯ ಖುಷಿಯಿಂದ ನಿಮ್ಮ ಮೇಡಂಗೆ ನಾನೇ ಊಟ ಕೊಡುತ್ತೇನೆ ಎಂದಾಗ ಕನ್ನಿಕಾ ಕಾರಿನ ಗ್ಲಾಸ್ ಕೆಳಗಿಸುತ್ತಾಳೆ. ಕನ್ನಿಕಾಳನ್ನು ನೋಡಿದ ಭಾಗ್ಯಾಗೆ ಏನು ಮಾತನಾಡಬೇಕು ಎಂಬುದು ದೋಚುವುದಿಲ್ಲ.
ಕನ್ನಿಕಾ ನಗುತ್ತಾ ಏನಿದೆಲ್ಲ ಭಾಗ್ಯ ರಸ್ತೆಯಲ್ಲಿ ಊಟ ಮಾರಾಟ ಮಾಡುತ್ತಿದ್ದಿಯಾ? ಯಾಕೆ ಭಾಗ್ಯ ಏನಾಯಿತು ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿರುತ್ತಾಳೆ. ಆದರೆ ಭಾಗ್ಯ ಮಾತ್ರ ಕನ್ನಿಕಾ ಮಾತಿಗೆ ಸೊಪ್ಪು ಹಾಕುವುದಿಲ್ಲ. ಭಾಗ್ಯ ನೀನು ಯಾವಾಗ ನನ್ನ ವಿರುದ್ಧ ನಿಂತ್ಯೋ ಆವತ್ತಿನಿಂದ ನೀನು ಸಂಕಷ್ಟಗಳನ್ನು ಎದುರಿಸಲೇಬೇಕಾಗಿದೆ ಎಂದಾಗ ಭಾಗ್ಯ ನನಗೆ ಗೊತ್ತಿದೆ, ಆದರೆ ನಾನು ಯಾವತ್ತೂ ಯಾರ ತಲೆ ಒಡೆದು ಹಣ ಸಂಪಾದಿಸಲ್ಲ. ನಾನು ನಿಯತ್ತಾಗಿಯೇ ದುಡಿದು ಹಣ ಮಾಡುತ್ತಿದ್ದೇನೆ. ನನ್ನ ಕಾಲು ಎಳೆದು ಕೆಳಗೆ ಹಾಕಬಹುದು ಅಂದುಕೊಂಡವರನ್ನೆಲ್ಲ ತುಳಿದು ಮೇಲೆ ಬರ್ತೀನಿ ನಾನು ಎಂದು ಕನ್ನಿಕಾಳ ಮುಖಕ್ಕೆ ಹೊಡೆದಂತೆ ಹೇಳಿದ್ದಾಳೆ.
Anusha Rai: ಊರ ಹಬ್ಬದಲ್ಲಿ ಕೆಂಡ ತುಳಿದು ಹರಕೆ ತೀರಿಸಿದ ಅನುಷಾ ರೈ: ವಿಡಿಯೋ ನೋಡಿ