Anusha Rai: ಊರ ಹಬ್ಬದಲ್ಲಿ ಕೆಂಡ ತುಳಿದು ಹರಕೆ ತೀರಿಸಿದ ಅನುಷಾ ರೈ: ವಿಡಿಯೋ ನೋಡಿ
ಅನುಷಾ ರೈ ಇತ್ತೀಚೆಗಷ್ಟೆ ಮಹಾಕುಂಭ ಮೇಳಕ್ಕೆ ತೆರಳಿ ಸುದ್ದಿಯಾಗಿದ್ದರು. ಬಳಿಕ ರಾಮ ಜನ್ಮ ಭೂಮಿ ಅಯೋಧ್ಯೆಗೆ ತೆರಳಿ, ರಾಮಲಲ್ಲಾ ದರ್ಶನ ಪಡೆದು ಬಂದಿದ್ದರು. ಇದೀಗ ಅವರು ತಮ್ಮ ಹುಟ್ಟೂರಿನ ಊರಬ್ಬದಲ್ಲಿ ಭಾಗಿಯಾಗಿದ್ದರು. ತಲೆ ಮೇಲೆ ದೀಪವನ್ನು ಹೊತ್ತುಕೊಂಡು ಹಬ್ಬದ ಆಚರಣೆಯಲ್ಲಿ ಭಾಗಿಯಾಗಿ ಕೆಂಡವನ್ನು ತುಳಿದಿದ್ದಾರೆ.

Anusha Rai

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಸ್ಪರ್ಧಿಗಳು ಶೋ ಮುಗಿದ ಬಳಿಕ ಸಖತ್ ಬ್ಯುಸಿಯಾಗಿದ್ದಾರೆ. ಕೆಲವರು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದರೆ ಇನ್ನೂ ಕೆಲವರು ಸಮಾರಂಭದಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ನಿಂದ ಎಲಿಮಿನೇಟ್ ಆದ ಬಳಿಕ ಅಷ್ಟೇನು ಸುದ್ದಿಯಲ್ಲಿದ ಅನುಷಾ ರೈ ಶೋ ಮುಗಿದ ಬಳಿಕ ಪ್ರತಿದಿನ ಟಾಕ್ನಲ್ಲಿದ್ದಾರೆ. ಇತ್ತೀಚೆಗಷ್ಟೆ ತ್ರಿವಿಕ್ರಮ್ ಜೊತೆ ಅನುಷಾ ರೈ ತಮ್ಮ ಹುಟ್ಟೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿಗೆ ಹೋಗಿದ್ದರು. ಬಳಿಕ ಭುವನಂ ಗಗನಂ ಚಿತ್ರದ ಪ್ರಮೋಷನ್ನಲ್ಲಿ ಕಾಣಿಸಿಕೊಂಡಿದ್ದರು.
ಹಾಗೆಯೆ ಅನುಷಾ ರೈ ಮಹಾಕುಂಭ ಮೇಳಕ್ಕೆ ತೆರಳಿ ಸುದ್ದಿಯಾಗಿದ್ದರು. ಬಳಿಕ ನಟಿ, ರಾಮ ಜನ್ಮ ಭೂಮಿ ಅಯೋಧ್ಯೆಗೆ ತೆರಳಿ, ರಾಮಲಲ್ಲಾ ದರ್ಶನ ಪಡೆದು ಬಂದಿದ್ದರು. ಈ ಪುಣ್ಯ ದರ್ಶನದ ಕುರಿತು ವಿಡಿಯೋ ಮಾಡಿದ್ದ ಅವರು, ಶ್ರೀರಾಮನ ದರ್ಶನ ಪದೆದ ನಾನೇ ಧನ್ಯಳು ಎಂದು ಸಹ ನಟಿ ಹೇಳಿಕೊಂಡಿದ್ದರು. ಇದೀಗ ಅನುಷಾ ರೈ ಊರ ಹಬ್ಬದ ಸಂಭ್ರಮದಲ್ಲಿದ್ದಾರೆ. ಊರ ಹಬ್ಬದಲ್ಲಿ ಅನುಷಾ ರೈ ಅವರು ಕೆಂಡ ಹಾಯ್ದಿದ್ದಾರೆ.
ಅನುಷಾ ರೈ ಅವರು ತಮ್ಮ ಹುಟ್ಟೂರಿನ ಊರಬ್ಬದಲ್ಲಿ ಭಾಗಿಯಾಗಿದ್ದರು. ತಲೆ ಮೇಲೆ ದೀಪವನ್ನು ಹೊತ್ತುಕೊಂಡು ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದರು. ಊರಬ್ಬದ ಭಾಗವಾಗಿ ಕೆಂಡವನ್ನು ಕೂಡ ಅನುಷಾ ರೈ ತುಳಿದಿದ್ದಾರೆ. ಆ ಕುರಿತ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಅನುಷಾ ಹಂಚಿಕೊಂಡಿದ್ದಾರೆ.
View this post on Instagram A post shared by Anusha Rai (@anusharai_official)
ಅನುಷಾ ರೈ ಚಂದವಾಗಿ ಸಿಂಗಾರಗೊಂಡು ಜಾತ್ರೆಯಲ್ಲಿ ಮಿಂಚಿದ್ದಾರೆ. ಸಾಮಾನ್ಯವಾಗಿ ಯಾರೇ ಆಗಲಿ ಹರಕೆ ಹೊತ್ತುಕೊಂಡಿದ್ದರೆ, ಈ ರೀತಿ ಮಾಡುವುದು ಸಂಪ್ರದಾಯ. ಅನುಷಾ ಅವರು ಏನು ಹರಕೆ ಹೊತ್ತುಕೊಂಡಿದ್ದರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಸದ್ಯ ಅವರ ಈ ವಿಡಿಯೋ ವೈರಲ್ ಆಗಿದ್ದು, ಕೆಂಡದ ಮೇಲಿನ ನಡಿಗೆಗೆ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ಇವರು ಗುರುತಿಸಿಕೊಂಡಿರುವ ಅನುಷಾ ಅಣ್ಣಯ್ಯ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ಅಭಿನಯಿಸಿದ್ದಾರೆ. 2017ರಲ್ಲಿ ಬಿಡುಗಡೆಯಾದ ಮಹಾನುಭಾವರು ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಆ ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಬಿಗ್ ಬಾಸ್ ಶೋನಿಂದ ಹೊರಗೆ ಬಂದಿರುವ ಅನುಷಾ ರೈ ಮುಂದೆ ಯಾವ ಸಿನಿಮಾಗಳಲ್ಲಿ ನಟಿಸಲಿದ್ದಾರೆ? ಯಾವ ಶೋ ಮಾಡಲಿದ್ದಾರೆ ಎಂಬುದನ್ನು ನೋಡಬೇಕಿದೆ.
ಯುಗಾದಿ ಹಬ್ಬಕ್ಕೆ ಮಜಾ ಟಾಕೀಸ್ ಮಹಾ ಸಂಚಿಕೆ: ಮನದ ಕಡಲು-ಮುಂಗಾರು ಮಳೆ ಟೀಮ್ನ ಸಮಾಗಮ