ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharma Keerthi Raj: ನಾನು ಕಷ್ಟ ಪಟ್ಟು ಖರೀದಿ ಮಾಡಿದ ಕಾರು ಮಾರಬೇಕಾಗಿ ಬಂತು: ಕಷ್ಟದ ದಿನ ನೆನೆದ ಧರ್ಮ

ಬಿಗ್ ಬಾಸ್ ಮನೆಯಲ್ಲಿ ಧರ್ಮ ಕೀರ್ತಿರಾಜ್ ಅವರು ಏನೇ ಇದ್ದರೂ ಓಪನ್ ಆಗಿ ಮಾತನಾಡುತ್ತಾ ಇದ್ದರು. ಹೇಳಬೇಕು ಅನಿಸಿದ್ದನ್ನೆಲ್ಲ ಸಾಫ್ಟ್ ಆಗಿ ಕನ್ವೆ ಮಾಡುತ್ತಿದ್ದರು. ಬಿಗ್ ಬಾಸ್ನಿಂದ ಹೊರ ಬಂದ ಬಳಿಕವೂ ಅವರು ಮುಕ್ತವಾಗಿ ಮಾತನಾಡೋದನ್ನು ಮುಂದುವರಿಸಿದ್ದಾರೆ. ಸದ್ಯ ಧರ್ಮ ಅವರು ಸಂದರ್ಶನವೊಂದರಲ್ಲಿ ತಾನು ಪಟ್ಟ ಕಷ್ಟದ ಬಗ್ಗೆ ಓಪನ್ ಆಗಿ ಹೇಳಿಕೊಂಡಿದ್ದಾರೆ.

ಕಷ್ಟ ಪಟ್ಟು ಖರೀದಿ ಮಾಡಿದ ಕಾರು ಮಾರಬೇಕಾಯಿತು: ಕಷ್ಟದ ದಿನ ನೆನೆದ ಧರ್ಮ

Dharma Keerthi raj

Profile Vinay Bhat Mar 6, 2025 7:21 AM

ಬಿಗ್ ಬಾಸ್ ಕನ್ನಡ ಸೀಸನ್ 11 ಧರ್ಮ ಕೀರ್ತಿರಾಜ್​ಗೆ ದೊಡ್ಡ ಬ್ರೇಕ್ ಕೊಟ್ಟಿದೆ. ಎಂಟನೇ ವಾರಕ್ಕೆ ಎಲಿಮಿನೇಟ್ ಆದರೂ ಇವರು ಹೊರಹೋಗುವಾಗ ಕರ್ನಾಟಕ ಜನತೆಯ ಮನಗೆದ್ದರು. ಇವರು ದೊಡ್ಮನೆಯಲ್ಲಿ ಒಟ್ಟು 55 ದಿನ ಇದ್ದರು. ದೊಡ್ಮನೆಯಲ್ಲಿ ಇರಬೇಕು ಎಂದರೆ ರಫ್ ಆ್ಯಂಡ್ ಟಫ್ ಆಗಿರಬೇಕು. ಆದರೆ, ಧರ್ಮ ಅವರಲ್ಲಿ ಈ ಅಂಶ ಕೊಂಚ ಕಮ್ಮಿ ಇತ್ತು. ಅವರು ಸದಾ ಕೂಲ್ ಆಗಿಯೇ ಇರುತ್ತಿದ್ದರು. ಜನರು ಧರ್ಮ ಅವರಲ್ಲಿ ಇದನ್ನೇ ಇಷ್ಟಪಟ್ಟರು. ಇದಕ್ಕೆ ಅವರಿಗೂ ಖುಷಿ ಇದೆ. ಧರ್ಮ ಅವರು ಜೀವನದಲ್ಲಿ ನಡೆದುಕೊಂಡು ಬಂದ ಹಾದಿ ಅಷ್ಟೊಂದು ಸುಗಮವಾಗಿರಲಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಧರ್ಮ ಅವರು ಏನೇ ಇದ್ದರೂ ಓಪನ್ ಆಗಿ ಮಾತನಾಡುತ್ತಾ ಇದ್ದರು. ಹೇಳಬೇಕು ಅನಿಸಿದ್ದನ್ನೆಲ್ಲ ಸಾಫ್ಟ್ ಆಗಿ ಕನ್ವೆ ಮಾಡುತ್ತಿದ್ದರು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕವೂ ಅವರು ಮುಕ್ತವಾಗಿ ಮಾತನಾಡೋದನ್ನು ಮುಂದುವರಿಸಿದ್ದಾರೆ. ಸದ್ಯ ಧರ್ಮ ಅವರು ಸಂದರ್ಶನವೊಂದರಲ್ಲಿ ತಾನು ಪಟ್ಟ ಕಷ್ಟದ ಬಗ್ಗೆ ಓಪನ್ ಆಗಿ ಹೇಳಿಕೊಂಡಿದ್ದಾರೆ.

ನಾನು ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದೇನೆ. ಕೋವಿಡ್‌ ಸಮಯದಲ್ಲಿ ನನ್ನ ಕಾರನ್ನು ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿತ್ತು. ನಾನು ಕಷ್ಟ ಪಟ್ಟು ಖರೀದಿ ಮಾಡಿರುವ ಕಾರು ಅದು. ಸುಮಾರು ಒಂದು ಲಕ್ಷ ಕಿಮೀ. ಓಡಾಡಿತ್ತು. ನಾನು ಕಷ್ಟ ಪಟ್ಟು ದುಡಿದ ಹಣದಲ್ಲಿ ಆಡಿ ಏ 4 ಕಾರನ್ನು ಖರೀದಿಸಿದ್ದು. ನಾಲ್ಕು ವರ್ಷ ಇಟ್ಟುಕೊಂಡ ಕಾರಿಗೆ ನಾನು ಡೌನ್ ಪೇಮೆಂಟ್ ಮಾಡಿದೆ EMIಗಳನ್ನು ಕಟ್ಟಿದೆ ಆದರೆ ಪರಿಸ್ಥಿತಿ ಈ ರೀತಿ ಆದಾಗ ನಾನು ಮಾರಾಟ ಮಾಡಿದೆ. ನನಗೆ ಎಲ್ಲೂ ಮುಜುಗರ ಇರಲಿಲ್ಲ ಏಕೆಂದರೆ ನನ್ನ ಕಷ್ಟಕ್ಕೆ ಆಗಿ ಬಂತು. ಆ ಸಮಯ ಕಳೆದ ಮೇಲೆ ಮತ್ತೆ ಹೊಸ ಕಾರು ಖರೀದಿಸಿ ಬೌನ್ಸ್ ಬ್ಯಾಕ್ ಮಾಡಿದೆ ಎಂದು ಹೇಳಿದ್ದಾರೆ.

ನಾನು ದುಡಿದಿರುವುದರಲ್ಲಿ ಸಾಧನೆ ಮಾಡಿರುವುದರ ಬಗ್ಗೆ ನನಗೆ ತೃಪ್ತಿ ಇಲ್ಲ. ಖಂಡಿತಾ ಮುಂದೆ ತುಂಬಾ ಮಾಡಬೇಕಿದೆ. ತಂದೆ ತಾಯಿಗೆ ಮಗನಾಗಿ ಏನು ಮಾಡಿಕೊಡಬೇಕಿತ್ತು ಅದನ್ನು ಮಾಡಿದ್ದೀನಿ. ಇರುವೆಗೆ ಅದರದ್ದೇ ಚಿಂತೆ, ಆನೆಗೆ ಅದರದ್ದೇ ಚಿಂತೆ ಅನ್ನೋದು ಸತ್ಯ. ಸದ್ಯಕ್ಕೆ ಮನೆ ನಡೆಸಲು ಎಷ್ಟು ಬೇಕು, ಅಪ್ಪ ಅಮ್ಮನಿಗೆ ಎಷ್ಟು ಬೇಕೋ ನನ್ನ EMI ಕಟ್ಟಲು ಎಷ್ಟು ಬೇಕು...ಇದಕ್ಕೆ ಯಾವುದೇ ಸಮಸ್ಯೆ ಇಲ್ಲ. ನನ್ನ ಅಪ್ತರಿಗೆ ಒಂದಿಷ್ಟು ಮಾಡುವುದು, 6 ತಿಂಗಳಿಗೆ ಒಮ್ಮೆ ವಿದೇಶ ಟ್ರಿಪ್ ಹೋಗುವುದು ಅಷ್ಟೇ ಆಗುತ್ತಿರುವುದು. ಮುಂದೆ ಹಂತವಾಗಿ ಬೆಳೆಯಬೇಕು ಎಂದು ಧರ್ಮ ಕೀರ್ತಿರಾಜ್ ಹೇಳಿದ್ದಾರೆ.

ಇನ್ನು ಬಿಗ್ ಬಾಸ್​ನಿಂದ ಸಿನಿಮಾ ಆಫರ್​ಗಳು ಬರುತ್ತವೆ ಅನ್ನೋದು ತಪ್ಪು. ಸಿನಿಮಾನೇ ಬೇರೆ, ಇದೇ ಬೇರೆ ಎಂದು ಹೇಳಿಕೊಂಡಿದ್ದಾರೆ. ನನಗೆ ಬಿಗ್ ಬಾಸ್​​ನಿಂದ ಏನೂ ಲಾಭ ಆಗಲೇ ಇಲ್ಲ ಅಂತ ಹೇಳಲ್ಲ. ಇದರಿಂದ ಸಾಕಷ್ಟು ಒಳಿತೂ ಆಗಿದೆ. ಅವನು ಕೀರ್ತಿರಾಜ್ ಮಗ, ಅವನಿಗೆ ಧಿಮಾಕು ಎಂದೆಲ್ಲ ಜನರು ನನ್ನ ಬಗ್ಗೆ ಅಂದುಕೊಂಡಿದ್ದಿರಬಹುದು. ಆದರೆ, ಬಿಗ್ ಬಾಸ್​ಗೆ ಹೋಗಿ ನಾನು ಯಾರು ಅನ್ನೋದು ಗೊತ್ತಾಗಿದೆ. ನನಗೆ ಬಿಗ್‌ ಬಾಸ್‌ ಜನರೊಂದಿಗೆ ಬೆರೆಯಲು ಮತ್ತೆ ಅವಕಾಶ ಕೊಟ್ಟಿತು ಎಂದು ಹೇಳಿದರು.

Satya Naidu Marriage: ಅದ್ಧೂರಿಯಾಗಿ ನಡೆಯಿತು ಚೈತ್ರಾ ವಾಸುದೇವನ್ ಮಾಜಿ ಪತಿಯ ಎರಡನೇ ಮದುವೆ: ವಿಡಿಯೋ ನೋಡಿ