Bhagya Lakshmi Serial: ಪೂಜಾ-ಕಿಶನ್ ಮದುವೆ ತಪ್ಪಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ ತಾಂಡವ್
ಸುನಂದ ತಾಂಡವ್ ಹೇಳಿದ ಎಲ್ಲ ಸುಳ್ಳನ್ನು ನಂಬಿದ್ದಾಳೆ. ಈ ಮದುವೆ ನಡೆಯಲೇ ಬಾರದು ಅಳಿಯಂದ್ರೆ ಎಂದು ಹೇಳಿದ್ದಾಳೆ. ಈ ಮೂಲಕ ಮುಂಬರುವ ಎಪಿಸೋಡ್ ಸಾಕಷ್ಟು ಕುತೂಹಲ ಕೆರಳಿಸಿದ್ದು, ಪೂಜಾ-ಕಿಶನ್ ಮದುವೆ ನಡೆಯುತ್ತ ಎಂಬುದು ನೋಡಬೇಕಿದೆ.

Bhagya Lakshmi Serial

‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತನ್ನ ತಂಗಿ ಪೂಜಾಳ ಮದುವೆಯ ಕುರಿತು ಇಂಟ್ರೆಸ್ಟಿಂಗ್ ಎಪಿಸೋಡ್ ಸಾಗುತ್ತಿದೆ. ಒಂದುಕಡೆ ಪೂಜಾಳ ಮದುವೆ ಮಾಡಲು ಭಾಗ್ಯ ಎಲ್ಲಿಲ್ಲದ ಕಷ್ಟ ಪಡುತ್ತಿದ್ದರೆ ಮತ್ತೊಂದೆಡೆ ತಾಂಡವ್ ಮದುವೆ ವಿಚಾರದಲ್ಲಿ ಹುಳಿ ಹಿಂಡುತ್ತಿದ್ದಾನೆ. ಕಿಶನ್ ಒಳ್ಳೆಯವನ ಅಥವಾ ಕೆಟ್ಟವನ, ಪೂಜಾಳಿಗೆ ಸರಿಯಾದ ಜೋಡಿಯ ಎಂಬುದನ್ನು ತಿಳಿಯಲು ಸ್ವತಃ ಕುಸುಮಾ ಅವರೇ ಕಿಶನ್ ನಡೆಸುತ್ತಿರುವ ಜಿಮ್ಗೆ ಹೋಗಿ ಪರಿಶೀಲಿಸಿದ್ದಾಳೆ. ಇಲ್ಲಿ ಕಿಶನ್ ನಡವಳಿಕೆ ಕುಸುಮಾಗೆ ತುಂಬಾ ಇಷ್ಟವಾಗಿದೆ.
ಕಿಶನ್ ತೋರಿದ ಕಾಳಜಿಗೆ ಕುಸುಮಾ ಖುಷಿಯಾಗಿದ್ದಾಳೆ. ಇದೆಲ್ಲವನ್ನು ಮನೆಗೆ ಬಂದು ಭಾಗ್ಯ ಬಳಿಯೂ ಹೇಳಿಕೊಂಡಿದ್ದಾಳೆ. ಕುಸುಮಾ ಮಾತು ಕೇಳಿ ಭಾಗ್ಯಾಗೂ ಖುಷಿ ಆಗುತ್ತದೆ. ಬಳಿಕ ಕುಸುಮಾ ಮತ್ತು ಭಾಗ್ಯ, ಕಿಶನ್ ವಿಚಾರವನ್ನು ಪೂಜಾ ಮುಂದೆ ಪ್ರಸ್ತಾಪ ಮಾಡಿದ್ದಾರೆ. ನೀವು ತೋರಿಸುವ ಹುಡುಗನನ್ನೇ ಮದುವೆ ಆಗುವುದಾಗಿ ಪೂಜಾ ಹೇಳಿದ್ದರಿಂದ, ಕಿಶನ್ ನಿನಗೆ ಹೇಳಿ ಮಾಡಿಸಿದ ಜೋಡಿ ಎಂದಿದ್ದಾರೆ. ಇವರಿಬ್ಬರ ಮಾತಿಗೆ ಪೂಜಾ ಸಹ ಖುಷಿಯಾಗಿದ್ದಾಳೆ.
ಹೀಗಿರುವಾಗ ಅತ್ತ ತಾಂಡವ್-ಶ್ರೇಷ್ಠಾ ಈ ಸಂಬಂಧವನ್ನು ಹಾಳು ಮಾಡಲು ಮಾಸ್ಟರ್ ಪ್ಲ್ಯಾನ್ ತಯಾರಿಸಿದ್ದಾರೆ. ಕಿಶನ್‌ನನ್ನು ಕೆಟ್ಟದಾಗಿ ಬಿಂಬಿಸುವ ನಿಟ್ಟಿನಲ್ಲಿ ತಾಂಡವ್ ಹೊಸ ತಂತ್ರ ಮಾಡಿದ್ದಾನೆ. ಇದಕ್ಕೆ ಶ್ರೇಷ್ಠಾ ಕೂಡ ಕೈಜೋಡಿಸಿದ್ದಾಳೆ. ಹೇಗಾದ್ರೂ ಮಾಡಿ ಪೂಜಾ ಮದುವೆ ನಿಲ್ಲಿಸಬೇಕೆಂದಯ ಸುನಂದಾನಾ ಟಾರ್ಗೆಟ್ ಮಾಡಿದ್ದಾರೆ. ತಾಂಡವ್ ನೇರವಾಗಿ ಸುನಂದಾಗೆ ಕಾಲ್ ಮಾಡಿ, ಕಿಶನ್ ಹೇಗೆ, ಅವನ ಬ್ಯಾಕ್‌ಗ್ರೌಂಡ್ ಚೆಕ್ ಮಾಡಿದ್ದೇನೆ. ಅವನಂಥ ನಾಲಾಯಕ್ ಈ ಭೂಮಿ ಮೇಲೆಯೇ ಸಿಗಲ್ಲ. ಅಷ್ಟು ಕೆಟ್ಟವನು ಎಂದು ಇಲ್ಲಸಲ್ಲದ್ದನ್ನು ಹೇಳಿ ಫೋನ್ ಕಟ್ ಮಾಡಿದ್ದಾನೆ ತಾಂಡವ್.
ಇನ್ನೊಂದು ಕಡೆ ಕಿಶನ್ ಜೊತೆ ಮಾತನಾಡಲು ಭಾಗ್ಯ ಕುಸುಮಾ ಹೊರಟಿದ್ದಾರೆ. ಸುನಂದಾ ಸಹ, ಅದೇ ಕಿಶನ್‌ನ ಭೇಟಿಯಾಗಲು ಹೊರಟು ನಿಂತಿದ್ದಾಳೆ. ಪೂಜಾಳ ಬಗ್ಗೆ ನನಗೂ ಜವಾಬ್ದಾರಿ ಇದೆ ಎಂದಿದ್ದಾಳೆ. ಕಿಶನ್‌ನ ನಿಜ ಮುಖ ತೋರಿಸುತ್ತೇನೆ ಎಂದು ಅತ್ತೆ ಸುನಂದಾ ಅವರನ್ನೂ ಕರೆಸಿಕೊಂಡ ತಾಂಡವ್, ಹುಡುಗಿಯೊಬ್ಬಳನ್ನು ಛೂ ಬಿಟ್ಟಿದ್ದಾನೆ. ಆ ಹುಡುಗಿ ಕಿಶನ್ ಬಳಿ ಡ್ರಾಪ್ ಕೇಳುವ ನೆಪದಲ್ಲಿ ಆತನ ಬೈಕ್ ಏರಿದ್ದಾಳೆ. ಕಿಶನ್‌ನ ಇನ್ನೊಂದು ಮುಖ ನೋಡಿದ್ರಲ್ಲ. ಈ ಥರದ ಶೋಕಿ ಮಾಡ್ತಾನೆ ಎಂದೆಲ್ಲ ಸುನಂದ ತಲೆಗೆ ತುಂಬಿಸಿದ್ದಾನೆ.
ಆ ಹುಡುಗಿಯನ್ನು ಕಳುಹಿಸಿದ್ದೇ ತಾಂಡವ್. ಬೈಕ್ ಏರಿದ ಬಳಿಕ ಆ ಹುಡುಗಿ ಕಿಶನ್‌ನ ಆತನನ್ನು ಅಪ್ಪಿಕೊಂಡಿದ್ದಾಳೆ. ಇದು ಕಿಶನ್ಗೆ ಇರಿಸು-ಮುರಿಸು ಉಂಟು ಮಾಡುತ್ತದೆ. ಆದರೆ, ಈ ಘಟನೆ ನಡೆಯುವುದನ್ನು ಕುಸುಮಾ ಮತ್ತು ಭಾಗ್ಯ ಕೂಡ ನೋಡುತ್ತಾರೆ. ಕಿಶನ್ ಜೊತೆಗಿನ ಹುಡುಗಿಯೂ ಅವರಿಬ್ಬರ ಕಣ್ಣಿಗೆ ಬಿದ್ದಿದ್ದಾಳೆ. ಮೊದಲಿಗೆ ಕಿಶನ್ ಇಂಥ ಕೆಲಸ ಮಾಡ್ತಿದ್ದಾನಾ ಎಂದು ಅನಿಸಿದರೂ, ಅದಾದ ಮೇಲೆ ಅದೇ ಹುಡುಗಿಗೆ ಕಿಶನ್ ಬೈಕ್ ನಿಲ್ಲಿಸಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾನೆ. ಇದೆಲ್ಲವನ್ನು ಅಲ್ಲೇ ಹತ್ತಿರದಲ್ಲಿ ನಿಂತು ಭಾಗ್ಯ ಮತ್ತು ಕುಸುಮಾ ನೋಡಿದ್ದಾರೆ.
ಕಿಶನ್‌ನ ಈ ನಡವಳಿಕೆಯಿಂದ ಭಾಗ್ಯ ಹಾಗೂ ಕುಸುಮಾಗೆ ಗೌರವ ಮತ್ತಷ್ಟು ಹೆಚ್ಚಾಗಿದೆ. ಸದ್ಯ ಭಾಗ್ಯ ಕುಸುಮಾಗೆ ನಿಜಾಂಶ ಏನು ಎಂಬುದು ಗೊತ್ತಾಗಿದೆ. ಆದರೆ, ಸುನಂದ ತಾಂಡವ್ ಹೇಳಿದ ಎಲ್ಲ ಸುಳ್ಳನ್ನು ನಂಬಿದ್ದಾಳೆ. ಈ ಮದುವೆ ನಡೆಯಲೇ ಬಾರದು ಅಳಿಯಂದ್ರೆ ಎಂದು ಹೇಳಿದ್ದಾಳೆ. ಈ ಮೂಲಕ ಮುಂಬರುವ ಎಪಿಸೋಡ್ ಸಾಕಷ್ಟು ಕುತೂಹಲ ಕೆರಳಿಸಿದ್ದು, ಪೂಜಾ-ಕಿಶನ್ ಮದುವೆ ನಡೆಯುತ್ತ ಎಂಬುದು ನೋಡಬೇಕಿದೆ.
Pruthvi Bhat: ಗಾಯಕಿ ಪೃಥ್ವಿ ಭಟ್ ಅದ್ಧೂರಿ ರಿಸೆಪ್ಷನ್, ಘಟಾನುಘಟಿಗಳು ಭಾಗಿ: PHOTOS