Bhagya Lakshmi Serial: ತಾಂಡವ್-ಶ್ರೇಷ್ಠಾಗೆ ಹಳೆ ಕಂಪನಿಯಲ್ಲೇ ಕೆಲಸ ತೆಗೆಸಿಕೊಟ್ಟ ಭಾಗ್ಯ
ಮಗನಿಗೆ ಕೆಲಸವಿಲ್ಲ ಅಂತ ತಾಯಿ ಕುಸುಮಾ ಒಳಗೊಳಗೇ ಸಂಕಟ ಪಡುತ್ತಿದ್ದರು. ಅತ್ತ ಗುಂಡಣ್ಣ ಹಾಗೂ ಮಗಳು ತನ್ವಿ ಕೂಡ ಅಪ್ಪನಿಗೆ ಕಸಲ ಹೋಯಿತಲ್ಲ ಎಂದು ದುಃಖದಲ್ಲಿದ್ದಳು. ಇದನ್ನ ಗಮನಿಸಿದ ಭಾಗ್ಯ ಮತ್ತೆ ಒಳ್ಳೆಯತನದಿಂದ ಬಾಸ್ ಜೊತೆ ಮಾತನಾಡಿದ್ದಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಕೆಲಸವಿಲ್ಲದೆ ಅಲೆದಾಡುತ್ತಿದ್ದ ತಾಂಡವ್-ಶ್ರೇಷ್ಠಾಗೆ ಭಾಗ್ಯ ‘ಲಕ್ಷ್ಮೀ’ಯಾಗಿ ಬಂದಿದ್ದಾಳೆ. ಹಿಂದಿನ ಕಂಪನಿಯಲ್ಲೇ ಇವರಿಬ್ಬರಿಗೆ ಕೆಲಸ ಸಿಕ್ಕಿದೆ. ಆದರೆ, ಇದೆಲ್ಲ ಭಾಗ್ಯಾಳಿಂದ ಸಾಧ್ಯವಾಗಿದ್ದು ಎಂದು ತಾಂಡವ್-ಶ್ರೇಷ್ಠಾಗೆ ತಿಳಿದಿಲ್ಲ. ಜೊತೆಗೆ ಇವರಿಬ್ಬರು ದೌಲತ್ತು ಕೂಡ ಕಡಿಮೆ ಆಗಿಲ್ಲ. ಮತ್ತೊಮ್ಮೆ ಭಾಗ್ಯಾಳನ್ನು ಹೀಯಾಳಿಸಿ ಮಾತನಾಡಿದ್ದಾರೆ. ಭಾಗ್ಯ ಮಾತ್ರ ಇದುಯಾವುದಕ್ಕೂ ತಿರುಗೇಟು ಕೊಡದೆ ಮೌನಂ ಸಮ್ಮತಿ ಲಕ್ಷಣಂ ಎಂದು ನಗುತ್ತ ತೆರಳಿದ್ದಾಳೆ.
ಈ ಹಿಂದೆ ತಾಂಡವ್ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕ್ಯಾಂಟೀನ್ ನಡೆಸಲು ಭಾಗ್ಯಗೆ ಅನುಮತಿ ಸಿಕ್ಕಿತ್ತು. ಅದೇ ದಿನ ಭಾಗ್ಯಾಗೆ ಅವಮಾನ ಮಾಡಿದ್ದಕ್ಕೆ ತಾಂಡವ್, ಶ್ರೇಷ್ಠಾರನ್ನು ಬಾಸ್ ಕಂಪನಿಯಿಂದ ತೆಗೆದು ಹಾಕಿದ್ದರು. ಬಳಿಕ ತಾಂಡವ್ಗೆ ಒಂದೇ ಒಂದು ಕೆಲಸ ಸಿಕ್ಕಿಲ್ಲ. ಬಂದ ಒಂದೆರಡು ಆಫರ್ ಅನ್ನು ಇದು ನನ್ನ ಲೆವೆಲ್ಗೆ ಇಲ್ಲ ಎಂದು ರಿಜೆಕ್ಟ್ ಮಾಡಿದ್ದಾನೆ. ಆದರೆ, ಇಂಟರ್ವ್ಯೂನಲ್ಲಿ ತಾಂಡವ್ ದುರಂಕರಾದ ಮಾತನ್ನು ಕೇಳಿ ನಿನ್ನಂತವರಿಗೆ ಕೆಲಸ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ತಾನು ದೊಡ್ಡ ಮ್ಯಾನೇಜರ್, ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನ ಹ್ಯಾಂಡಲ್ ಮಾಡಿದ್ದೇನೆ, 60% ಹೈಕ್ ಕೊಟ್ಟರೆ ಮಾತ್ರ ಬರ್ತೀನಿ, ಅದಕ್ಕಿಂತ ಕಮ್ಮಿ ಅಂದ್ರೆ ರಿಜೆಕ್ಟ್ ಮಾಡ್ತೇನೆ ಅಂತೆಲ್ಲಾ ಇಂಟರ್‌ವ್ಯೂಗೆ ಹೋದ ಕಡೆಯಲ್ಲೆಲ್ಲಾ ದರ್ಪದಿಂದ ತಾಂಡವ್ ಮಾತಾಡಿದ್ದಾನೆ.
ತಾಂಡವ್ ವರ್ತನೆ, ದೌಲತ್ತು ಯಾರಿಗೂ ಇಷ್ಟವಾಗುತ್ತಲೇ ಇಲ್ಲ. ಹೀಗಾಗಿಯೇ, ನಿಮ್ಮಂಥ ಆಟಿಟ್ಯೂಡ್ ಇರೋರು ನಮ್ಮ ಕಂಪನಿಗೆ ಬೇಡ ಅಂತ ಎಲ್ಲರೂ ತಾಂಡವ್ ಮುಖಕ್ಕೆ ಮಂಗಳಾರತಿ ಎತ್ತಿ ಕಳುಹಿಸುತ್ತಾರೆ. ಬೀದಿಯಲ್ಲಿ ತನ್ನ ಕೋಪ ಹೊರಹಾಕಿ ಎಲ್ಲ ಕಡೆ ನನ್ನ ರಿಜೆಕ್ಟ್ ಮಾಡ್ತಾರೆ ನನ್ನ ಎಂದು ಶ್ರೇಷ್ಠಾ ಕೈ ಹಿಡಿದುಕೊಂಡು ಕಣ್ಣೀರಿಟ್ಟಿದ್ದಾನೆ. ಇದಾದ ಬಳಿಕ ತಾಂಡವ್-ಶ್ರೇಷ್ಠಾಗೆ ಮತ್ತದೆ ಹಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಇದಕ್ಕೆ ಕಾರಣವಾಗಿದ್ದು ಭಾಗ್ಯ.
ಮಗನಿಗೆ ಕೆಲಸವಿಲ್ಲ ಅಂತ ತಾಯಿ ಕುಸುಮಾ ಒಳಗೊಳಗೇ ಸಂಕಟ ಪಡುತ್ತಿದ್ದರು. ಅತ್ತ ಗುಂಡಣ್ಣ ಹಾಗೂ ಮಗಳು ತನ್ವಿ ಕೂಡ ಅಪ್ಪನಿಗೆ ಕಸಲ ಹೋಯಿತಲ್ಲ ಎಂದು ದುಃಖದಲ್ಲಿದ್ದಳು. ಇದನ್ನ ಗಮನಿಸಿದ ಭಾಗ್ಯ ಮತ್ತೆ ಒಳ್ಳೆಯತನದಿಂದ ಬಾಸ್ ಜೊತೆ ಮಾತನಾಡಿದ್ದಾಳೆ. ತಾಂಡವ್‌ನ ಮತ್ತೆ ಕೆಲಸಕ್ಕೆ ಕರೆದುಕೊಳ್ಳುವಂತೆ ಬಾಸ್ ಬಳಿ ಭಾಗ್ಯ ಮನವಿ ಮಾಡಿದ್ದಾಳೆ. ಭಾಗ್ಯಳ ಮನವಿ ಮೇರೆಗೆ ತಾಂಡವ್, ಶ್ರೇಷ್ಠಾರನ್ನ ಕೆಲಸಕ್ಕೆ ವಾಪಸ್ ತೆಗೆದುಕೊಂಡುಬಿಟ್ಟಿದ್ದಾರೆ ಬಾಸ್.
ಆದರೆ, ಕೆಲಸ ವಾಪಸ್ ಸಿಕ್ತು ಅಂತ ಖುಷಿ ಪಡುವ ಬದಲು ತಾಂಡವ್-ಶ್ರೇಷ್ಠಾ ಮತ್ತೆ ಭಾಗ್ಯ ಮೇಲೆ ವಿಷಕಾರಿದ್ದಾರೆ. ಆಫೀಸ್ಗೆ ಬಂದೊಡನೆ ಭಾಗ್ಯಾಳನ್ನು ಕಂಡಾಗ, ನಮ್ಮ ಜಾಗಕ್ಕೆ ಇನ್ಯಾರೂ ಸಿಕ್ಕಿಲ್ಲ ಅಂತ ಕಾಣುತ್ತೆ. ಅದಕ್ಕೆ ವಾಪಸ್ ಕರೆದುಕೊಂಡಿದ್ದಾರೆ. ನಾನಿಲ್ಲದೆ ಈ ಕಂಪನಿಯ ಪ್ರಾಜೆಕ್ಟ್ ಯಾವುದೂ ಮುಂದಕ್ಕೆ ಹೋಗಲ್ಲ.. ಕಂಪನಿ ಲಾಸ್ ಆಗುತ್ತೆ.. ಅದಕ್ಕೆ ನನ್ನ ವಾಪಾಸ್ ಕಾಲ್ ಕರೆಸಿಕೊಂಡಿದ್ದಾರೆ. ನಮ್ಮನ್ನ ಕೆಲಸದಿಂದ ಕಿತ್ತಾಗಿದೆ ಎಂಬ ಅಹಂ ನಿನ್ನಲ್ಲಿ ಇದೆಯಲ್ಲ ಅದನ್ನೆಲ್ಲ ಈಗಲೇ ಬಿಟ್ಟಾಕು.. ಯಾವ ಕಂಪನಿ ನಮ್ಮನ್ನ ಕೆಲಸದಿಂದ ಕಿತ್ತಾಕಿಯೊ ಅದೇ ಕಂಪನಿ ನಮ್ಮನ್ನ ಕಾಲ್ ಮಾಡಿ ಮತ್ತೆ ಕರೆಸಿದೆ ಎಂಬ ಅಹಂಕಾರದ ಮಾತನ್ನಾಡುತ್ತಾನೆ.
ಸದ್ಯ ಭಾಗ್ಯಾಳ ಕೃಪೆಯಿಂದಲೇ ನಮ್ಮಿಬ್ಬಿರನ್ನು ಆಫೀಸ್ಗೆ ಮತ್ತೆ ಕರೆಸಿದ್ದು ಎಂಬ ವಿಚಾರ ತಾಂಡವ್-ಶ್ರೇಷ್ಠಾಗೆ ತಿಳಿದಿಲ್ಲ. ಬಾಸ್ ಈ ವಿಚಾರ ಹೇಳಿದಾಗ ಇವರಿಬ್ಬರು ಯಾವರೀತಿ ರಿಯಾಕ್ಟ್ ಆಗುತ್ತಾರೆ?, ತಾಂಡವ್-ಶ್ರೇಷ್ಠಾ ಮತ್ತೆ ಈ ಕೆಲಸವೇ ನಮಗೆ ಬೇಡ ಎಂದು ಬಿಟ್ಟು ಹೋಗುತ್ತಾರ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Chaithra Kundapura: ಹನುಮಂತನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಚೈತ್ರಾ ಕುಂದಾಪುರ