Bhagya Lakshmi Serial: ತಾಂಡವ್ಗೆ ಗೊತ್ತಾಯಿತು ಭಾಗ್ಯ ಕೆಲಸ ತೆಗೆಸಿಕೊಟ್ಟ ವಿಚಾರ: ಹೆಚ್ಚಾಯಿತು ದ್ವೇಷ
ಆಫೀಸ್ನ ಸ್ಟಾಪ್ ಒಬ್ಬರು ತಾಂಡವ್ ಬಳಿ ಬಂದು ಭಾಗ್ಯ ಮೇಡಂ ಅವರು ಹೇಳಿದ್ರು ಅಂತ ನಿಮ್ಗೆ ಮತ್ತು ಶ್ರೇಷ್ಠಾ ಮೇಡಂಗೆ ಕೆಲಸ ಕೊಟ್ಟಿದ್ದು ಎಂಬ ವಿಚಾರ ಹೇಳುತ್ತಾನೆ. ಆದರೆ, ಶ್ರೇಷ್ಠಾಗೆ ಈ ವಿಷಯ ಗೊತ್ತಿಲ್ಲದೆ ಇವತ್ತು ಡಿನ್ನರ್ ಮಾಡೋಣ.. ನಾವು ಭಾಗ್ಯಾಳ ಎದುರು ವಿನ್ ಆಗಿದ್ದೀವಿ ಎಂದು ತಾಂಡವ್ ಬಳಿ ಹೇಳುತ್ತಾಳೆ.

Bhagya Lakshmi Serial

‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತನ್ನ ಮಾಜಿ ಗಂಡನ ಸಹಾಯಕ್ಕೆ ನಿಂತು ಆತನಿಗೆ ಗೊತ್ತಿಲ್ಲದೆ ಅದೇ ಹಳೆಯ ಕಂಪನಿಯಲ್ಲಿ ಕೆಲಸ ತೆಗೆಸಿಕೊಟ್ಟಿದ್ದಾಳೆ. ಆದರೆ, ತಾಂಡವ್ ಇದರಿಂದ ಖುಷಿ ಪಡದೆ ಭಾಗ್ಯಾಳ ಮೇಲೆ ಮತ್ತಷ್ಟು ಕೋಪಗೊಂಡಿದ್ದಾರೆ. ಕೆಲಸವಿಲ್ಲದೆ ಅಲೆದಾಡುತ್ತಿದ್ದ ತಾಂಡವ್-ಶ್ರೇಷ್ಠಾಗೆ ಭಾಗ್ಯ ‘ಲಕ್ಷ್ಮೀ’ಯಾಗಿ ಬಂದು ಹಿಂದಿನ ಕಂಪನಿಯಲ್ಲೇ ಇವರಿಬ್ಬರಿಗೆ ಕೆಲಸ ಸಿಗುವಂತೆ ಮಾಡಿದ್ದಾಳೆ. ಆದರೆ, ಇದೆಲ್ಲ ಭಾಗ್ಯಾಳಿಂದ ಸಾಧ್ಯವಾಗಿದ್ದು ಎಂದು ತಾಂಡವ್-ಶ್ರೇಷ್ಠಾಗೆ ತಿಳಿದಿಲ್ಲ. ಈ ವಿಚಾರ ಗೊತ್ತಾದ ಕೂಡಲೇ ಇಬ್ಬರಿಗೂ ಶಾಕ್ ಆಗಿದೆ. ಆದರೆ, ಇವರಿಬ್ಬರು ದೌಲತ್ತು ಮಾತ್ರ ಕಡಿಮೆ ಆಗಿಲ್ಲ. ಮತ್ತೊಮ್ಮೆ ಭಾಗ್ಯಾಳನ್ನು ಹೀಯಾಳಿಸಿ ಮಾತನಾಡಿದ್ದಾರೆ.
ಈ ಹಿಂದೆ ತಾಂಡವ್ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕ್ಯಾಂಟೀನ್ ನಡೆಸಲು ಭಾಗ್ಯಗೆ ಅನುಮತಿ ಸಿಕ್ಕಿತ್ತು. ಅದೇ ದಿನ ಭಾಗ್ಯಾಗೆ ಅವಮಾನ ಮಾಡಿದ್ದಕ್ಕೆ ತಾಂಡವ್, ಶ್ರೇಷ್ಠಾರನ್ನು ಬಾಸ್ ಕಂಪನಿಯಿಂದ ತೆಗೆದು ಹಾಕಿದ್ದರು. ಬಳಿಕ ತಾಂಡವ್ಗೆ ಒಂದೇ ಒಂದು ಕೆಲಸ ಸಿಕ್ಕಿಲ್ಲ. ಬಂದ ಒಂದೆರಡು ಆಫರ್ ಅನ್ನು ಇದು ನನ್ನ ಲೆವೆಲ್ಗೆ ಇಲ್ಲ ಎಂದು ರಿಜೆಕ್ಟ್ ಮಾಡಿದ್ದಾನೆ.
ಮಗನಿಗೆ ಕೆಲಸವಿಲ್ಲ ಅಂತ ತಾಯಿ ಕುಸುಮಾ ಒಳಗೊಳಗೇ ಸಂಕಟ ಪಡುತ್ತಿರುವುದನ್ನು ಕಂಡು ಭಾಗ್ಯ ಬಾಸ್ ಬಳಿ ಹೋಗಿ ತಾಂಡವ್ಗೆ ಕೆಲಸ ಪುನಹ ಕೊಡಿಸಿ ಎಂದು ರಿಕ್ವೆಸ್ಟ್ ಮಾಡಿದ್ದಾಳೆ. ಭಾಗ್ಯಾಳ ಮಾತಿಗೆ ಬೆಲೆ ಕೊಟ್ಟು ಅವರು ತಾಂಡವ್-ಶ್ರೇಷ್ಠಾರನ್ನು ಪುನಃ ಕೆಲಸಕ್ಕೆ ಕರೆದಿದ್ದಾರೆ. ಆದರೆ, ಕೆಲಸ ವಾಪಸ್ ಸಿಕ್ತು ಅಂತ ಖುಷಿ ಪಡುವ ಬದಲು ತಾಂಡವ್-ಶ್ರೇಷ್ಠಾ ಮತ್ತೆ ಹಳೇ ಚಾಳಿ ಮುಂದುವರೆಸಿದ್ದಾರೆ. ಆಫೀಸ್ಗೆ ಬಂದೊಡನೆ ಇತರೆ ಸಿಬ್ಬಂದಿಗಳ ಎದುರು ದೌಲತ್ತಿನಲ್ಲಿ ಮಾತನಾಡಿದ್ದಾನೆ ತಾಂಡವ್.
ಅವತ್ತು ನಾನು ಹೋಗುವಾಗ ಎಲ್ಲರೂ ಏನೋನೊ ಮಾತಾಡ್ತಾ ಇದ್ರಿ ಅಲ್ವಾ.. ನಾನು ಮತ್ತೆ ಬರಲ್ಲ ಅಂತ ಅಂದುಕೊಂಡಿದ್ರಿ ಅಲ್ಲ ನೀವೆಲ್ಲ.. ಎಲ್ಲರೂ ಸರಿಯಾಗಿ ಕೆಳಿಸಿಕೊಳ್ಳಿ ನಾನು ಮತ್ತೆ ಈ ಕಂಪನಿಗೆ ಬಂದಿದ್ದೇನೆ. ಸರ್ ನನ್ನ ಹೇಗೆ ಕೆಲಸದಿಂದ ತೆಗೆದ್ರೊ ಅದೇರೀತಿ ಮತ್ತೆ ಕಾಲ್ ಮಾಡಿ ಸೇರಿಸಿಕೊಂಡಿದ್ದಾರೆ ಎಂದು ಹೇಳುತ್ತಾನೆ.
ಇದಾದ ಬಳಿಕ ಆಫೀಸ್ನ ಸ್ಟಾಪ್ ಒಬ್ಬರು ತಾಂಡವ್ ಬಳಿ ಬಂದು ಭಾಗ್ಯ ಮೇಡಂ ಅವರು ಹೇಳಿದ್ರು ಅಂತ ನಿಮ್ಗೆ ಮತ್ತು ಶ್ರೇಷ್ಠಾ ಮೇಡಂಗೆ ಕೆಲಸ ಕೊಟ್ಟಿದ್ದು ಎಂಬ ವಿಚಾರ ಹೇಳುತ್ತಾನೆ. ಆದರೆ, ಶ್ರೇಷ್ಠಾಗೆ ಈ ವಿಷಯ ಗೊತ್ತಿಲ್ಲದೆ ಇವತ್ತು ಡಿನ್ನರ್ ಮಾಡೋಣ.. ನಾವು ಭಾಗ್ಯಾಳ ಎದುರು ವಿನ್ ಆಗಿದ್ದೀವಿ ಎಂದು ತಾಂಡವ್ ಬಳಿ ಹೇಳುತ್ತಾಳೆ. ತಾಂಡವ್ ಸಿಟ್ಟಿನಲ್ಲಿ ಇಲ್ಲ ಶ್ರೇಷ್ಠಾ ನನ್ಗೆ ಈ ಗೆಲುವನ್ನು ಸೆಲೆಬ್ರೆಟ್ ಮಾಡೋಕೆ ಆಗಲ್ಲ.. ಈ ಗೆಲುವು ನಾವು ಅಂದುಕೊಂಡ ಹಾಗೆ ಸಿಕ್ಕಿರುವುದಲ್ಲ.. ಈಗ ನಮ್ಗೆ ಕೆಲಸ ಸಿಕ್ಕಿರೋದು ಆ ಎಮ್ಮೆ ಭಾಗ್ಯಾಳಿಂದ ಎಂದು ಹೇಳುತ್ತಾನೆ.
ಇದನ್ನು ಕೇಳಿ ಶ್ರೇಷ್ಠಾಗೆ ಶಾಕ್ ಆಗುತ್ತದೆ. ಸದ್ಯ ಭಾಗ್ಯಾಳಿಂದ ಕೆಲಸ ಸಿಕ್ಕಿದೆ ಎಂಬ ವಿಚಾರ ತಿಳಿದು ಇವರಿಬ್ಬರು ಪುನಃ ಆಫೀಸ್ ತೊರೆಯುತ್ತಾರ ಅಥವಾ ಹೇಗಾದ್ರೆನು ಕೆಲಸ ಸಿಕ್ಕಿತು.. ಮೊದಲು ಆ ಭಾಗ್ಯಾಳನ್ನು ಈ ಕ್ಯಾಂಟೀನ್ನಿಂದ ಓಡಿಸಬೇಕೆಂದು ಹಳೆ ಚಾಳಿಯನ್ನು ಮುಂದುವರೆಸುತ್ತಾರ ಎಂಬುದು ನೋಡಬೇಕಿದೆ.
Chandan Shetty: ಸಂಜನಾ ಆನಂದ್ ‘ಅಣ್ಣ’ ಎಂದ ಬಗ್ಗೆ ಚಂದನ್ ಶೆಟ್ಟಿ ಏನು ಹೇಳಿದ್ರು ಗೊತ್ತೇ?