ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಕನ್ನಿಕಾಳ ಕುತಂತ್ರ ಬಯಲು ಮಾಡಲು ಚಾರಿಟಿ ಟ್ರಸ್ಟ್​ನ ಎಂಡಿ ಆದ ಭಾಗ್ಯ

ಆದೀಶ್ವರ್ ಮುನ್ನಡೆಸುತ್ತಿರುವ ಚಾರಿಟಿ ಟ್ರಸ್ಟ್​ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಭಾಗ್ಯ ಆಯ್ಕೆ ಆಗಿದ್ದಾಳೆ. ಟ್ರಸ್ಟ್ನಲ್ಲಿ ಏನೋ ದೊಡ್ಡದಾಗಿ ಮೋಸ ನಡೆಯುತ್ತಿದೆ ಎಂಬ ಸೂಚನೆ ಭಾಗ್ಯಾಗೆ ಸಿಕ್ಕಿದೆ. ಈ ಮಹಾ ಮೋಸದ ಬಾಸ್ ಕನ್ನಿಕಾ ಎಂಬ ಅನುಮಾನ ಕೂಡ ಭಾಗ್ಯಾಗೆ ಬಂದಿದೆ. ಇದು ಇಂದಿನ ಎಪಿಸೋಡ್ನ ಹೈಲೈಟ್.

ಅದೀ ಚಾರಿಟಿ ಟ್ರಸ್ಟ್​ನ ಎಂಡಿ ಆದ ಭಾಗ್ಯ

Bhagya Lakshmi Serial -

Profile Vinay Bhat Sep 12, 2025 11:53 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಸದ್ಯದಲ್ಲೇ ಮಹಾತಿರುವೊಂದನ್ನು ಪಡೆದುಕೊಳ್ಳಲಿದೆ. ಇಷ್ಟು ದಿನ ತಮ್ಮ ಮನೆಯವರಿಗೇ ಮೋಸ ಮಾಡಿ ತಮ್ಮ ಆಫೀಸ್​ನಿಂದ ಹಣ ಲೂಟಿ ಹೊಡೆಯುತ್ತದ್ದ ಕನ್ನಿಕಾಳ ಆಟ ಸದ್ಯದಲ್ಲೇ ಬಯಲಾಗುವ ಲಕ್ಷಣ ಕಾಣುತ್ತಿದೆ. ಇದಕ್ಕೆ ಕಾರಣ ಆದೀಶ್ವರ್ ಮುನ್ನಡೆಸುತ್ತಿರುವ ಚಾರಿಟಿ ಟ್ರಸ್ಟ್​ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಭಾಗ್ಯ ಆಯ್ಕೆ ಆಗಿರುವುದು. ಟ್ರಸ್ಟ್​ನಲ್ಲಿ ಏನೋ ದೊಡ್ಡದಾಗಿ ಮೋಸ ನಡೆಯುತ್ತಿದೆ ಎಂಬ ಸೂಚನೆ ಭಾಗ್ಯಾಗೆ ಸಿಕ್ಕಿದೆ. ಈ ಮಹಾ ಮೋಸದ ಬಾಸ್ ಕನ್ನಿಕಾ ಎಂಬ ಅನುಮಾನ ಕೂಡ ಭಾಗ್ಯಾಗೆ ಬಂದಿದೆ. ಇದು ಇಂದಿನ ಎಪಿಸೋಡ್​ನ ಹೈಲೈಟ್.

ಹಿಂದಿನ ಎಪಿಸೋಡ್​ನಲ್ಲಿ ಆದೀ ಭಾಗ್ಯಾಗೆ ತನ್ನ ಚಾರಿಟಿ ಟ್ರಸ್ಟ್​ನ ಆಫೀಸ್​ನಲ್ಲಿ ಸನ್ಮಾನ ಮಾಡಿದ್ದ. 25 ಲಕ್ಷ ಹಣವನ್ನು ಭಾಗ್ಯ ಕಾಮತ್ ಫ್ಯಾಮಿಲಿಯ ಟ್ರಸ್ಟ್​ಗೆ ಕೊಟ್ಟ ಕಾರಣ ಥ್ಯಾಂಕ್ಸ್ ಹೇಳುವ ನೆಪದಲ್ಲಿ ಈ ಸನ್ಮಾನ ಆಯೋಜಿಸಿದ್ದ. ಈ ಕಾರ್ಯಕ್ರಮದಲ್ಲಿ ಆದೀ ಹಾಗೂ ರಾಮ್​ದಾಸ್ ಕಾಮತ್ ಭಾಗ್ಯಾಳನ್ನು ಹಾಡಿ ಹೊಗಳಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಭಾಗ್ಯ ಮನೆಗೆ ಹೊರಡುತ್ತೇನೆ ಎಂದು ಹೇಳುವಾಗ ಆದೀ ಭಾಗ್ಯಾಗೆ ಬಹುದೊಡ್ಡ ಆಫರ್ ಒಂದನ್ನು ಕೊಟ್ಟಿದ್ದಾನೆ.

ಆದೀಶ್ವರ್ ಟ್ರಸ್ಟ್​ನ ಸದಸ್ಯರ ಜೊತೆ ಮಾತನಾಡುತ್ತ ಇರುವಾಗ, ನಮ್ಮ ಹತ್ರ ಫಂಡ್ಸ್ ಇದೆ ಆದ್ರೆ ಅದನ್ನು ಸರಿಯಾಗಿ ಮ್ಯಾನೇಜ್ ಮಾಡೋಕೆ ಯಾರೂ ಇಲ್ಲದಂತಾಗಿದೆ. ಕೆಲಸ ಮಾಡೋದಕ್ಕೆ ನಾವೆಲ್ಲ ರೆಡಿ ಇದ್ದೇವೆ ಆದ್ರೆ ಯಾವ ದಾರಿಯಲ್ಲಿ ಸಾಗಬೇಕು ಅಂತ ಹೇಳೋಕೆ ಯಾರೂ ಇಲ್ಲ ಎಂದು ಸದಸ್ಯರು ಆದೀ ಬಳಿ ಹೇಳಿದ್ದಾರೆ. ಸದಸ್ಯರ ಎಲ್ಲ ಮಾತನ್ನು ಕೇಳಿದ ಆದೀಶ್ವರ್, ಹಾಗಾದರೆ ಇದಕ್ಕೆ ಯಾರಾದರು ಒಳ್ಳೆಯ ರೈಟ್ ಪರ್ಸನ್ ಅನ್ನು ಆಯ್ಕೆ ಮಾಡಬೇಕು.. ಯಾರೂ ಆ ರೈಟ್ ಪರ್ಸನ್ ಎಂದು ಯೋಚಿಸುತ್ತಿರುವಾಗ ಆದೀಗೆ ಭಾಗ್ಯ ಕಾಣಿಸುತ್ತಾಳೆ.

ಇದೇ ಕಾರಣಕ್ಕೆ ಆದೀ ಭಾಗ್ಯ ಅವರೇ ಸ್ವಲ್ಪ ಹೊತ್ತು ಫ್ರೀ ಮಾಡಿಕೊಂಡು ನಾನು ಹೇಳೋ ಕಡೆ ಬರುತ್ತೀರ.. ಒಂದು ಇಂಪಾರ್ಟೆಂಟ್ ವಿಷಯ ಮಾತಾಡೋಕೆ ಇದೆ ಎಂದಿದ್ದಾನೆ. ಏನು ವಿಷಯ ಅಂತ ಹೇಳದೇ ನಾನು ಬರಲ್ಲ ಅಂತ ಭಾಗ್ಯ ಹೇಳಿದ್ದಾಳೆ. ಆಗ ಆದೀ, ನನ್ಗೆ ನಮ್ಮ ಟ್ರಸ್ಟ್​ನ ತೋರಿಸಬೇಕು.. ಮಕ್ಕಳನ್ನು ಭೇಟಿ ಮಾಡಿಸಬೇಕು ಅಂತ ಆಸೆ ಎಂದಿದ್ದಾನೆ. ಇದಕ್ಕೆ ಒಪ್ಪಿಗೆ ಸೂಚಿಸಿ ನಡೀರಿ ಹೋಗೋಣ ಎಂದಿದ್ದಾಳೆ.

ಟ್ರಸ್ಟ್​ಗೆ ಕಾಲಿಟ್ಟ ತಕ್ಷಣ ಭಾಗ್ಯಾಗೆ ತುಂಬಾ ಖುಷಿ ಆಗಿದೆ. ಟ್ರಸ್ಟ್ ಅನ್ನು ಆದೀಶ್ವರ್ ಹೊಗಳುವುದನ್ನು ಕೇಳಿ ಮತ್ತಷ್ಟು ಖುಷಿ ಆಗಿದ್ದಾಳೆ. ಇದು ಕೇವಲ ಟ್ರಸ್ಟ್ ಮಾತ್ರವಲ್ಲ ಹೆಸರಿನ ಹಾಗೆ ಮಕ್ಕಳನ್ನು ಹಾಯಾಗಿ ಇರಿಸೊ ತೊಟ್ಟಿಲು. ಇಲ್ಲಿ ಬರೀ ಪುಸ್ತಕದ ಪಾಠ ಮಾತ್ರವಲ್ಲ ಜೀವನದ ಪಾಠ ಕೂಡ ಕಲಿಸುತ್ತೇವೆ ಎಂದಿದ್ದಾನೆ. ಬಳಿಕ ಎಲ್ಲಿಗೂ ಸಹಾಯ ಮಾಡುವ ಈ ಟ್ರಸ್ಟ್ ಸಮಸ್ಯೆನಾ ಎದುರಿಸುತ್ತಿದೆ ಎಂದರೆ ನೀವು ಏನು ಮಾಡದೆ ಸುಮ್ಮನೆ ಇರುತ್ತೀರಾ ಎಂದು ಕೇಳಿದ್ದಾನೆ.

ಇದು ಭಾಗ್ಯಾಗೆ ಏನೆಂದು ಅರ್ಥ ಆಗುವುದಿಲ್ಲ. ಏನು ಸಮಸ್ಯೆ ಎಂದು ಕೇಳಿದಾಗ.. ಹೇಳುತ್ತೇವೆ ಆದ್ರೆ ಈ ಸಮಸ್ಯೆನಾ ನೀವು ಸರಿ ಮಾಡುತ್ತೀರಾ ಎಂದು ಕೇಳಿದ್ದಾನೆ. ಬಳಿಕ ಈ ಸಂಸ್ಥೆಯಲ್ಲಿ ಎಂಡಿ ಅಂದರೆ ಮ್ಯಾನೇಜಿಂಗ್ ಡೈರೆಕ್ಟರ್ ಪೋಸ್ಟ್ ಖಾಲಿ ಇದೆ ನೀವು ಆ ಪೋಸ್ಟ್ ತೆಗೋತೀರಾ? ಎಂದು ಆದೀ ಕೇಳಿದ್ದಾನೆ. ಇದನ್ನ ಕೇಳಿ ಭಾಗ್ಯಾಗೆ ಶಾಕ್ ಆಗಿದೆ. ಏನು ಎಂಡಿ ಪೋಸ್ಟ್?, ನೀವೇನು ಆಟ ಆಡ್ತಾ ಇದ್ದೀರಾ.. ನಾನು ಓರ್ವ ಸಾಮಾನ್ಯ ಮಹಿಳೆ.. ಇದನ್ನೆಲ್ಲ ನಿಭಾಹಿಸಲು ನನ್ನಿಂದ ಸಾಧ್ಯವಿಲ್ಲ.. ನನ್ನದು ಒಂದು ಸಣ್ಣ ಕ್ಯಾಂಟೀನ್ ಇದೆ ಅಷ್ಟೆ.. ನಾನು ಅದರಲ್ಲೇ ಖುಷಿ ಆಗಿದ್ದೇನೆ.. ನನಗೆ ಅದೇ ಸಾಕು ಇದೆಲ್ಲ ಬೇಡ ಎಂದಿದ್ದಾಳೆ.

ಇದೇ ಸಂದರ್ಭ ಆದೀಗೆ ಒಂದು ಕಾಲ್ ಬರುತ್ತದೆ. ಒಂದು ನಿಮಿಷ ಎಂದು ಹೇಳಿ ಹೊರ ಹೋಗುತ್ತಾನೆ. ಅತ್ತ ಭಾಗ್ಯ ಟ್ರಸ್ಟ್ ಹೇಗಿದೆ ಎಂದು ನೋಡೋಣ ಅಂತ ಒಳಗೆ ಹೋಗುತ್ತಾಳೆ. ಅಲ್ಲಿ ಮಕ್ಕಳು ಆಟ ಆಡುವುದು, ಚಿತ್ರ ಬಿಡಿಸುವುದನ್ನು ಕಂಡು ಖುಷಿ ಆಗುತ್ತಾಳೆ. ಹಾಗೆಯೆ ನಡೆದುಕೊಂಡು ಹೋಗುವಾಗ ಒಂದು ರೂಮ್ ಒಳಗೆ ಒಬ್ಬರು ಮಾತನಾಡುವುದು ಕೇಳಿಸುತ್ತದೆ.

ಚಾರಿಟಿ ಸಂಸ್ಥೆಯಿಂದ ಕನ್ನಿಕಾ ಸುಳ್ಳು ಲೆಕ್ಕ ಕೊಟ್ಟು ದುಡ್ಡು ಬಾಚುತ್ತಿರುತ್ತಾಳೆ. ಎಂಡಿ ಆಗಿ ಬೇರೆಯವರು ಬಂದರೆ ತಮ್ಮ ಕೆಲಸ ಸಲೀಸಾಗಿ ಆಗುವುದಿಲ್ಲ, ತಮ್ಮವರೇ ಕೂರಬೇಕು ಅಂತ ಕನ್ನಿಕಾ ಪ್ಲಾನ್ ಮಾಡುತ್ತಿದ್ದಾಳೆ. ಇದಕ್ಕಾಗಿ ತನ್ನ ಕಡೆಯವರನ್ನು ಎಂಡಿ ಆಗಿ ಮಾಡಬೇಕು ಎಂದು ಕನ್ನಿಕಾ ಓರ್ವನನ್ನು ರೆಡಿ ಮಾಡಿದ್ದಾಳೆ. ಆತನನ್ನು ಆದೀ ಬಳಿ ಕರೆದುಕೊಂಡು ಹೋಗಿ ಇವನೇ ಕರೆಕ್ಟ್ ವ್ಯಕ್ತಿ ಎಂದು ಒಪ್ಪಿಸುವ ಪ್ಲ್ಯಾನ್ ಕನ್ನಿಕಾಳದ್ದು. ಇದೇ ವಿಚಾರವಾಗಿ ಕನ್ನಿಕಾ ಹಾಗೂ ಟ್ರಸ್ಟ್​ನ ಇನ್ನೋರ್ವ ಸಿಬ್ಬಂದಿ ಮಾತನಾಡುತ್ತ ಇರುತ್ತಾರೆ. ಅವರ ಮಾತು ಭಾಗ್ಯಾಗೆ ಕೇಳಿಸುತ್ತದೆ.



ಅಯ್ಯೋ.. ಈ ಟ್ರಸ್ಟ್​ನಲ್ಲಿ ಇಷ್ಟು ದೊಡ್ಡ ಮೋಸ ಆಗುತ್ತ ಇದೆಯಾ?, ಯಾರಿರಬಹುದು ಒಳಗೆ ಈರೀತಿ ಮಾತಾಡುತ್ತಿರುವುದು ಎಂದು ಭಾಗಲು ತೆರೆದಾಗ ಭಾಗ್ಯಾಗೆ ಅಲ್ಲಿ ಕನ್ನಿಕಾ ಕಾಣಿಸುತ್ತಾಳೆ. ಇದೇವೇಳೆ ಅಲ್ಲಿಗೆ ಆದೀ ಬಂದಿದ್ದಾನೆ. ಅರೇ ನೀನೇನು ಕನ್ನಿಕಾ ಇಲ್ಲಿ ಎಂದು ಆದೀ ಕೇಳಿದ್ದಕ್ಕೆ ಸ್ವಲ್ಪ ಕೆಲಸ ಇತ್ತು ಅದಕ್ಕೆ ಬಂದಿದ್ದೆ ಎಂದು ಕನ್ನಿಕಾ ಹೇಳಿದ್ದಾಳೆ. ಬಳಿಕ ಆದೀ ಹಾಗೂ ಭಾಗ್ಯ ಇಲ್ಲಿಂದ ತೆರಳಿದ್ದಾರೆ. ಹೊರಡುವಾಗ ಆದೀಶ್ವರ್, ನೀವು ಈ ಟ್ರಸ್ಟ್​ನ ಎಂಡಿ ಆದರೆ ತುಂಬಾ ಉತ್ತಮ.. ಯೋಚನೆ ಮಾಡಿ ನಿರ್ಧಾರ ತಿಳಿಸಿ ಎಂದು ಭಾಗ್ಯಾಗೆ ಹೇಳಿದ್ದಾನೆ.



ಸದ್ಯ ಮುಂದಿನ ಪ್ರೋಮೋದಲ್ಲಿ ಭಾಗ್ಯಾ ಆದೀ ಆಫೀಸ್​ಗೆ ಬಂದು ನಾನು ಎಂಡಿ ಆಗಲು ಒಪ್ಪಿದ್ದೇನೆ ಎಂದಿದ್ದಾಳೆ. ಭಾಗ್ಯ ಒಪ್ಪಿರುವುದು ಈ ಸಂಸ್ಥೆಯಲ್ಲಿ ನಡೆಯುತ್ತಿರುವ ಹಗರಣವನ್ನು ಬಯಲು ಮಾಡಲು. ಸದ್ಯ ಧಾರಾವಾಹಿ ರೋಚಕ ತಿರುವುದು ಪಡೆದುಕೊಳ್ಳಲಿದೆ. ಕನ್ನಿಕಾಳ ಈ ಕುತಂತ್ರ ಇಲ್ಲಿಯವರೆಗೂ ಯಾರಿಗೂ ಗೊತ್ತಾಗಿಲ್ಲ. ಮುಂದೆ ಅದು ಭಾಗ್ಯಳಿಂದ ಆಚೆ ಬರುವುದು ಖಚಿತ. ಮುಂದಿನ ಎಪಿಸೋಡ್ ಹೇಗಿರುತ್ತೆ ಎಂಬುದು ಕುತೂಹಲ ಮೂಡಿಸಿದೆ.

Kannada Serial TRP: ಒಂದೇ ವಾರದಲ್ಲಿ ಮತ್ತೆ ಮೇಲೆದ್ದ ಕರ್ಣ: ಈ ಬಾರಿ ಎಷ್ಟು TRP?