ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಇಂಟರ್​ವ್ಯೂ ಪಾಸ್ ಆಗಿ ಎಂಡಿ ಆದ ಭಾಗ್ಯ: ಆದೀಗೆ ಖುಷಿಯೋ ಖುಷಿ

ರಾತ್ರಿಯೆಲ್ಲ ಕೂತು ಭಾಗ್ಯ ಅಕೌಂಟ್ಸ್, ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಬುಕ್ಸ್ ಓದಿದ್ದಾಳೆ. ಇಂಟರ್ವ್ಯೂ ಮಾಡುವವರು ಭಾಗ್ಯ ಕೊಟ್ಟ ತೂಕದ ಉತ್ತರಕ್ಕೆ ಮನಸೋತು ಆಕೆಯನ್ನು ಸೆಲೆಕ್ಟ್ ಮಾಡಿದ್ದಾರೆ. ಈ ಮೂಲಕ ಭಾಗ್ಯಾಗೆ ದೊಡ್ಡ ಹುದ್ದೆ ಸಿಕ್ಕಿದೆ. ಅತ್ತ ಕನ್ನಿಕಾಳ ಮಾಸ್ಟರ್ ಪ್ಲ್ಯಾನ್ ಎಲ್ಲ ಫ್ಲಾಪ್ ಆಗಿದೆ.

Bhagya lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾ ಮತ್ತೊಂದು ಅಗ್ನಿಪರೀಕ್ಷೆ ಎದುರಿಸಿ ಅದರಲ್ಲಿ ಯಶಸ್ವಿಯಾಗಿ ಪಾಸ್ ಆಗಿದ್ದಾಳೆ. ಆದೀ ನಡೆಸಿಕೊಂಡು ಹೋಗುತ್ತಿರುವ ತೊಟ್ಟಿಲು ಚಾರಿಟೆಬಲ್ ಟ್ರಸ್ಟ್​ಗೆ ಎಂಡಿ ಆಗಲು ಭಾಗ್ಯ ಇಂಟರ್​ವ್ಯೂ ಅಟೆಂಡ್ ಮಾಡಿದ್ದಾಳೆ. ಇದಕ್ಕಾಗಿ ರಾತ್ರಿಯೆಲ್ಲ ಕೂತು ಭಾಗ್ಯ ಅಕೌಂಟ್ಸ್, ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಬುಕ್ಸ್​​ ಓದಿದ್ದಾಳೆ. ಇಂಟರ್​ವ್ಯೂ ಮಾಡುವವರು ಭಾಗ್ಯ ಕೊಟ್ಟ ತೂಕದ ಉತ್ತರಕ್ಕೆ ಮನಸೋತು ಆಕೆಯನ್ನು ಸೆಲೆಕ್ಟ್ ಮಾಡಿದ್ದಾರೆ. ಈ ಮೂಲಕ ಭಾಗ್ಯಾಗೆ ದೊಡ್ಡ ಹುದ್ದೆ ಸಿಕ್ಕಿದೆ. ಅತ್ತ ಕನ್ನಿಕಾಳ ಮಾಸ್ಟರ್ ಪ್ಲ್ಯಾನ್ ಎಲ್ಲ ಫ್ಲಾಪ್ ಆಗಿದೆ.

ಆರಂಭದಲ್ಲಿ ಆದೀ ಯಾವುದೇ ಇಂಟರ್​ವ್ಯೂ, ಕಂಪನಿ ಪಾಲಿಸಿಯನ್ನು ಫಾಲೋ ಮಾಡದೆ ಭಾಗ್ಯಾಳನ್ನು ಈ ಕಂಪನಿಗೆ ಎಂಡಿ ಆಗಿ ನೇಮಿಸಿದ್ದ. ಇದಕ್ಕೆ ಭಾಗ್ಯ ಕೂಡ ಒಪ್ಪಿಕೊಂಡಿದ್ದಳು. ಆದರೆ, ಈ ವಿಷಯ ಕನ್ನಿಕಾಗೆ ಗೊತ್ತಾಗಿ ಆಕೆ ರಂಪಮಾಡಿದ್ದಳು. ಅಂತಹ ದೊಡ್ಡ ಪೋಸ್ಟ್​​ಗೆ ಒಬ್ಬರನ್ನು ಜಾಯಿನ್ ಮಾಡಬೇಕು ಅಂದ್ರೆ ಅದಕ್ಕೆ ಎಷ್ಟು ಪ್ರೊಸೀಜರ್ ಇದೆ ಎಂದು ರೇಗಾಡಿದ್ದಳು. ರಾಮ್​ದಾಸ್ ಕೂಡ ಕನ್ನಿಕಾ ಮಾತಿಗೆ ಸಮ್ಮತಿ ಸೂಚಿಸಿ ಈ ಪೋಸ್ಟ್​ಗೆ ಆಯ್ಕೆ ಆಗಬೇಕು ಅಂದ್ರೆ ರೆಸ್ಯೂಮ್ ತೆಗೊಬೇಕು.. ಹೆಚ್​ಆರ್ ಭೇಟಿ ಆಗಬೇಕು.. ಇಂಟರ್​ವ್ಯೂ ಆಗಬೇಕು.. ಅದರಲ್ಲಿ ಪಾಸ್ ಆಗಬೇಕು ಎಂದಿದ್ದಾರೆ.

ಈ ವಿಷಯವನ್ನು ಆದೀ, ಭಾಗ್ಯ ಮನೆಗೆ ಹೋಗಿ ಹೇಳಿದಾಗ ಭಾಗ್ಯಾಗೆ ಕೋಪ ಬಂದಿದೆ. ಬಳಿಕ ರಾಮ್​ದಾಸ್ ಬಂದು ಇಂಟರ್​ವ್ಯೂ ಅಟೆಂಡ್ ಮಾಡು ಎಂದು ಹೇಳಿದರೂ ಭಾಗ್ಯ ಇದಕ್ಕೆ ಆರಂಭದಲ್ಲಿ ಒಪ್ಪಲಿಲ್ಲ. ಬಳಿಕ ಆ ಕಂಪನಿಯಲ್ಲಿ ನಡೆಯುತ್ತಿರುವ ಮೋಸವನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ.. ಅವರನ್ನು ಸಾಕ್ಷಿ ಸಮೇತ ಹಿಡಿಯಬೇಕು ಅದಕ್ಕೆ ನಾನು ಇಂಟರ್​ವ್ಯೂ ಅಟೆಂಡ್ ಮಾಡಿ ಪಾಸ್ ಆಗಬೇಕು ಎಂದು ಅಂದುಕೊಂಡು ಒಕೆ ಹೇಳುತ್ತಾಳೆ.

ರಾತ್ರಿ ಎಲ್ಲ ನಿದ್ದೆಗೆಟ್ಟು ಕೊಂಚ ಓದಿ ಭಾಗ್ಯ ಮರುದಿನ ಇಂಟರ್​ವ್ಯೂಗೆ ಎಂದು ಆಫೀಸ್​ಗೆ ಬಂದಿದ್ದಾಳೆ. ಆದರೆ, ಭಾಗ್ಯ ಬರುವ ಹೊತ್ತಿಗೆ ಅನೇಕ ಜನರು ಅದಾಗಲೇ ಇಂಟರ್​ವ್ಯೂಗೆ ಎಂದು ಬಂದು ಕೂತಿರುತ್ತಾರೆ. ಕನ್ನಿಕಾ ರೆಫರ್ ಮಾಡಿರುವ ಹುಡುಗ ಕೂಡ ಇರುತ್ತಾನೆ. ಇಂಟರ್​ವ್ಯೂ ಶುರುವಾಗುತ್ತದೆ. ಕನ್ನಿಕಾಳ ಹುಡುಗ ಎಲ್ಲದಕ್ಕೂ ಸರಿಯಾಗಿ ಉತ್ತರ ಕೊಟ್ಟು ಇಂಟರ್​ವ್ಯೂ ಮಾಡುವವರ ಮನಗೆಲ್ಲುತ್ತಾನೆ. ಇವನೇ ಸರಿಯಾದ ಕ್ಯಾಂಡಿಡೇಟ್ ಅಂದುಕೊಳ್ಳುತ್ತಾರೆ.

ಬಳಿಕ ಕೊನೆಯಲ್ಲಿ ಭಾಗ್ಯ ಬರುತ್ತಾಳೆ. ಆರಂಭದಲ್ಲಿ ಭಾಗ್ಯ ಇಂಗ್ಲಿಶ್​​ನಲ್ಲಿ ಮಾತನಾಡಲು ತಡಬಡಿಸುತ್ತಾಳೆ. ನಂತರ ಕನ್ನಡದಲ್ಲೇ ಮಾತನಾಡುತ್ತಾಳೆ. ಇಂಟರ್​ವ್ಯೂ ಮಾಡುವವರು ಭಾಗ್ಯಾಗೆ ಒಂದು ಸಿಚುವೇಷನ್ ಕೊಡುತ್ತಾರೆ.. ಅದನ್ನ ನೀವು ಹೇಗೆ ನಿಭಾಯಿಸುತ್ತೀರಿ ಹೇಳಿ ಎನ್ನುತ್ತಾರೆ. ನಿಮ್ಮ ಹತ್ರ ತುಂಬಾ ಕಡಿಮೆ ಜನ ಇರುತ್ತಾರೆ.. ಆಗ ತುಂಬಾ ದೊಡ್ಡ ಪ್ರಾಬ್ಲಂ ಬರುತ್ತೆ ಅದನ್ನ ನೀವು ಹೇಗೆ ಮ್ಯಾನೇಜ್ ಮಾಡುತ್ತೀರಾ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಭಾಗ್ಯ ಕೊಟ್ಟ ಉತ್ತರ ನೋಡಿ ಎಲ್ಲರೂ ಫಿದಾ ಆಗುತ್ತಾರೆ.



ಭಾಗ್ಯ ಒಂದು ಕ್ಯಾಂಟೀನ್ ನಡೆಸಿಕೊಂಡು ಹೋಗ್ತಾ ಇದ್ದಾಳೆ. ಇಲ್ಲಿ ಇಂಟರ್​ವ್ಯೂ ಅವರು ಕೇಳಿದ ಪ್ರಶ್ನೆಗೆ ಆ ಕ್ಯಾಂಟೀನ್ ಅನ್ನು ಉದಾಹರಣೆಯಾಗಿ ಇಟ್ಟುಕೊಂಡು ಉತ್ತರ ಕೊಟ್ಟಿದ್ದಾರೆ. ನಾನು ಕ್ಯಾಂಟೀನ್​ನಲ್ಲಿ ಒಂದು ದಿನ 50 ಜನಕ್ಕೆ ಊಟ ರೆಡಿ ಮಾಡಿದ್ದೆ. ಆದರೆ 100 ಆರ್ಡರ್ ಬಂತು. ಏನು ಮಾಡಬೇಕು ಅಂತ ತಿಳಿಯಲಿಲ್ಲ.. ಆಗ ಯೋಚನೆ ಮಾಡಿ 50 ಊಟ ರೆಡಿ ಮಾಡುವ ಬದಲು ಇದಕ್ಕ ಅಕ್ಕಿಯಲ್ಲಿ ಪುಳಿಯೊಗರೆ ಮತ್ತು ರೈಸ್​ ಬಾತ್ ಮಾಡಿದೆ.. ಅಲ್ಲಿಂದಲ್ಲಿಗೆ ಅದು ಸರಿ ಹೋಯಿತು. 100 ಜನಕ್ಕೆ ಹೊಟ್ಟೆ ತುಂಬಿತು ಎಂದಿದ್ದಾಳೆ.

ಆಗ ಇಂಟರ್​ವ್ಯೂ ಮಾಡಿದವರು, ನಿಮಗೆ ಆನ್​ಲೈನ್​ನಲ್ಲಿ ಆರ್ಡರ್ ಮಾಡಿ ಸರಿ ಹೊಂದಿಸಬಹುದಿತ್ತು ಅಲ್ವಾ ಎಂದು ಕೇಳಿದ್ದಾರೆ. ಅದಕ್ಕೆ ಭಾಗ್ಯ, ಹಾಗೆ ಮಾಡಿದರೆ ನಾವು ನಂಬಿಕೆ ಕಳೆದುಕೊಂಡಂತೆ ಆಗುತ್ತದೆ.. ಅವರು ನಮ್ಮ ಊಟನೇ ಬೇಕೆಂದು ಆರ್ಡರ್ ಮಾಡಿರುತ್ತಾರೆ ಹೀಗಿರುವಾಗ ನಾವು ಬೇರೆ ಕಡೆಯಿಂದ ಊಟ ತಂದು ಕೊಟ್ಟರೆ ಹಾಗೂ ಅದು ಚೆನ್ನಾಗಿರಲಿಲ್ಲ ಎಂದಾದರೆ ನಮಗೂ ಕೆಟ್ಟ ಹೆಸರು.. ನೆಮ್ಮದಿಯೂ ಇರುವುದಿಲ್ಲ ಎಂದಿದ್ದಾಳೆ.

ಭಾಗ್ಯಾಳ ಈ ಉತ್ತರ ಕೇಳಿ ಇಂಟರ್​ವ್ಯೂ ಮಾಡುವವರು ಖುಷಿ ಆಗಿದ್ದಾರೆ. ಸರಿ ನೀವು ಹೊರಗೆ ಇರಿ ನಾವು ರಿಸಲ್ಟ್ ಹೇಳುತ್ತೇವೆ ಎಂದಿದ್ದಾರೆ. ಇಂಟರ್​ವ್ಯೂ ಮುಗಿದ ಬಳಿಕ ಇಂಟರ್​ವ್ಯೂ ಮಾಡಿದ 5 ಜನರ ಬಳಿ ಆದೀ ಬಂದು ಯಾರು ಪಾಸ್ ಆದರು ಎಂದು ಕೇಳುತ್ತಾನೆ. ಇದಕ್ಕೆ ಮೂರು ಜನ ಭಾಗ್ಯ ಹೆಸರು ಹೇಳಿದರೆ ಇನ್ನಿಬ್ಬರು ಕನ್ನಿಕಾ ರೆಫರ್ ಮಾಡಿದ ವ್ಯಕ್ತಿಯನ್ನು ಸಜೆಸ್ಟ್ ಮಾಡಿದ್ದಾರೆ.

Vasudeva Kutumba Serial: ವಸುದೇವ ಕುಟುಂಬ ಧಾರಾವಾಹಿ ಹೇಗಿದೆ ಕೇಳಿದ ಅವಿನಾಶ್: ಮೊದಲ ಎಪಿಸೋಡ್ಗೆ ವೀಕ್ಷಕರು ಫಿದಾ

ಭಾಗ್ಯ ಆಯ್ಕೆ ಆಗಿದ್ದಕ್ಕೆ ಆದೀಶ್ವರ್​ಗೆ ಎಲ್ಲಿಲ್ಲದ ಖುಷಿ ಆಗುತ್ತದೆ. ಭಾಗ್ಯ ಬಳಿ ಬಂದು ಹೇಳುತ್ತಾನೆ.. ಭಾಗ್ಯಾಗೂ ಖುಷಿ ಆಗುತ್ತದೆ.. ಮನೆಗೆ ಬಂದು ಎಲ್ಲರಿಗೂ ಸ್ವೀಟ್ ಹಂಚಿ ಸಂಭ್ರಮಿಸಿದ್ದಾರೆ. ಸದ್ಯ ಭಾಗ್ಯಾಗೆ ದೊಡ್ಡ ಪೋಸ್ಟ್ ಸಿಕ್ಕಿದೆ. ಇದನ್ನು ಹೇಗೆ ನಿಭಾಯಿಸುತ್ತಾಳೆ?.. ಅಲ್ಲಿ ನಡೆಯುತ್ತಿರುವ ಅಕ್ರಮವನ್ನು ಹೇಗೆ ಬಯಲಿಗೆಳೆಯುತ್ತಾಳೆ? ಎಂಬುದು ನೋಡಬೇಕಿದೆ.