ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾ ತೊಟ್ಟಿಲು ಚಾರಿಟೆಬಲ್ ಟ್ರಸ್ಟ್ನ ಎಂಡಿ ಆಗಿ ಅಧಿಕಾರ ಸ್ವೀಕರಿಸಿದ್ದೆ ತಡ ಮತ್ತೊಂದು ಸಂಕಷ್ಟ ಬಂದೊದಗಿದೆ. ತಾಂಡವ್- ಭಾಗ್ಯ ಒಂದೇ ಆಫೀಸ್ನಲ್ಲಿ ಕೆಲಸ ಮಾಡುತ್ತಿರುವುದನ್ನು ಸಹಿಸಲಾಗದ ಶ್ರೇಷ್ಠಾ ಭಾಗ್ಯ ವಿರುದ್ಧ ಯುದ್ಧ ಸಾರಿದ್ದಾಳೆ. ನಿನ್ನನ್ನ ಸುಮ್ಮನೆ ಬಿಡಲ್ಲ ಎಂದು ಸವಾಲು ಹಾಕಿದ್ದಾಳೆ. ಭಾಗ್ಯಾಳ ನೆಮ್ಮದಿ ಹಾಳು ಮಾಡಲು ತನ್ವಿಯನ್ನು ದಾಳವಾಗಿ ಬಳಸಿಕೊಂಡಿದ್ದಾಳೆ.
ಕೆಲ ದಿನಗಳ ಹಿಂದೆ ಭಾಗ್ಯ ಮಗಳು ತನ್ವಿ ಕ್ಲಾಸ್ಗೆ ಬಂಕ್ ಹಾಕಿದ ಕಾರಣ ಕಾಲೇಜ್ನಿಂದ ಸಸ್ಪೆಂಡ್ ಆಗಿದ್ದು, ಪೇರೆಂಟ್ಸ್ ಬರೋ ತನಕ ಕಾಲೇಜಿಗೆ ಬರಬಾರದು ಎಂದು ಪ್ರಿನ್ಸಿಪಾಲ್ ಹೇಳಿದ್ದರು. ಹೀಗಾಗಿ ತನ್ವಿಗೆ ಏನು ಮಾಡಬೇಕೆಂದು ಗೊತ್ತಾಗಿಲ್ಲ. ಅಮ್ಮನ ಬಳಿ ಹೇಳಿದ್ರೆ ಖಂಡಿತವಾಗಿಯು ಹೊಡೆಯುತ್ತಾಳೆ ಅಂತ ತನ್ವಿ ಅಪ್ಪನ ಬಳಿ ಹೇಳಿ ಹೇಗಾದ್ರು ಮ್ಯಾನೇಜ್ ಮಾಡೋಣ ಎಂದು ವಿಚಾರ ಹೇಳಿದ್ದಾಳೆ. ಆದರೆ, ಮೊದಲಿಗೆ ತಾಂಡವ್ ಮನಬಂದಂತೆ ಬೈದಿದ್ದಾನೆ. ನಿನ್ನ ನಾನು ಫೀಸ್ ಕೊಟ್ಟಿ ಕಾಲೇಜ್ ಕಳುಹಿಸಿದ್ದು ಇದಕ್ಕ.. ನಾನು ಯಾವುದೇ ಕಾರಣಕ್ಕೂ ಬರುವುದಿಲ್ಲ ಎಂದು ಹೇಳಿದ್ದಾನೆ.
ಬಳಿಕ ತಾಂಡವ್ ಈ ವಿಚಾರವನ್ನು ಶ್ರೇಷ್ಠಾ ಬಳಿ ಹೇಳಿದ್ದ. ಆಗ ಶ್ರೇಷ್ಠಾ, ಕಮಾನ್ ತಾಂಡವ್.. ನೀನು ಯಾವ ಜನರೇಷನ್ನಲ್ಲಿ ಇದ್ದೀಯಾ.. ಕಾಲೇಜ್ ಬಂಕ್ ಎಲ್ಲ ಈಗ ಕಾಮನ್.. ನೀನು ಬಂಕ್ ಮಾಡಿಲ್ಲ ಅಂತ ನಿನ್ನ ಮಗಳು ಕೂಡ ಹಾಗೆ ಇರಬೇಕಾ?, ನಿನ್ನ ಮಗಳ ದೃಷ್ಟಿಯಲ್ಲಿ ನೀನು ಒಳ್ಳೆಯವನಾಗಲು ಇದೇ ಉತ್ತಮ ಅವಕಾಶ.. ನಾಳೆ ಕಾಲೇಜ್ ಹೋಗಿ ಮಾತಾಡು ಎಂದಿದ್ದಾಳೆ. ಬಳಿಕ ಮರುದಿನ ತಾಂಡವ್ ಹಾಗೂ ಶ್ರೇಷ್ಠಾ ಕಾಲೇಜ್ಗೆ ಬಂದು ಪ್ರಿನ್ಸಿಪಾಲ್ ಜೊತೆ ಮಾತಾಡಿ ಪುನಃ ಕಾಲೇಜಿಗೆ ಸೇರಿಸಿಕೊಂಡಿದ್ದಾರೆ.
ಆದರೆ, ಈ ಯಾವುದೇ ವಿಚಾರ ಭಾಗ್ಯಾಗೆ ತಿಳಿದಿರುವುದಿಲ್ಲ. ಸದ್ಯ ಭಾಗ್ಯಾಳಿಗೆ ಬುದ್ದಿ ಕಲಿಸಬೇಕೆಂದು ಶ್ರೇಷ್ಠಾ ತನ್ನ ಫ್ರೆಂಡ್ನ ಸಹಾಯದಿಂದ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಶ್ರೇಷ್ಠಾಳ ಫ್ರೆಂಡ್ ಭಾಗ್ಯಾಗೆ ಕಾಲ್ ಮಾಡಿ, ನಿಮ್ಮ ಮಗಳ ಜೊತೆ ನೀವು ಸರಿಯಿಲ್ವಾ?, ನಿಮ್ಮ ಮಗಳ ಜೊತೆ ನೀವು ಚೆನ್ನಾಗಿ ಇರುತ್ತಿದ್ದರೆ ಹೀಗೆಲ್ಲ ಆಗುತ್ತ ಇರಲಿಲ್ಲ ಎಂದಿದ್ದಾನೆ. ಆಗ ಭಾಗ್ಯ, ಏನು ವಿಷಯ ಅಂತ ಹೇಳಿ.. ಗಾಬರಿ ಆಗೋ ಥರ ಮಾತನಾಡಬೇಡಿ ಎಂದಿದ್ದಾಳೆ. ಆಗ ಆತ, ಹಾಗಿದ್ರೆ ನಿಮ್ಮ ಮಗಳು ತನ್ವಿ ಕಾಲೇಜ್ ಇಂದ ಸಸ್ಪೆಂಡ್ ಆಗಿರುವ ವಿಷಯ ನಿಮಗೆ ಗೊತ್ತೇ ಇಲ್ವಾ ಎಂದು ಕೇಳಿದ್ದಾನೆ. ಈ ಸುದ್ದಿ ಕೇಳಿ ಭಾಗ್ಯಾಗೆ ಶಾಕ್ ಆಗಿದೆ.
ಮನೆಗೆ ಬಂದವಳೇ ತನ್ವಿಯನ್ನು ಕರೆದು, ನೀನು ಕಾಲೇಜ್ ಇಂದ ಸಸ್ಪೆಂಡ್ ಆಗಿದ್ಯಾ ಎಂದು ಜೋರಾಗಿ ಕೇಳಿದ್ದಾಳೆ. ಭಾಗ್ಯಾಳ ಮಾತಿನಿಂದ ಹೆದರಿದ ತನ್ವಿ ಇರುವ ವಿಷಯ ಹೇಳಿದ್ದಾಳೆ. ಕಾಲೇಜಿನಿಂದ ನಿನ್ನ ಪೇರೆಂಟ್ಸ್ನ ಕರ್ಕೊಂಡು ಬನ್ನಿ ಅಂದ್ರು.. ನಾನು ಅದನ್ನ ಪಪ್ಪ ಹತ್ರ ಹೇಳಿದೆ.. ಬಳಿಕ ಶ್ರೇಷ್ಠಾ ಆಂಟಿ ಪಪ್ಪಾನ ಕನ್ವೆನ್ಸ್ ಮಾಡಿ ಕಾಲೇಜಿಗೆ ಕರ್ಕೊಂಡು ಬಂದ್ರು ಎಂದು ಹೇಳಿದ್ದಾಳೆ. ಇದು ಭಾಗ್ಯಾಗೆ ಮತ್ತಷ್ಟು ಸಿಟ್ಟು ತರಿಸಿದೆ. ಹಿಂದು-ಮುಂದು ನೋಡದೆ ತನ್ವಿಯ ಕೆನ್ನೆಗೆ ಭಾಗ್ಯ ಬಾರಿಸಿದ್ದಾಳೆ.
ಮತ್ತೊಂದೆಡೆ ಭಾಗ್ಯ ಆಫೀಸ್ನಲ್ಲಿ ನಡೆಯುತ್ತಿರುವ ಅಕ್ರಮವನ್ನು ಬಯಲಿಗೆಳೆಯಲು ರಿಸೆಪ್ಷನ್ ಜೊತೆ ಲೆಕ್ಕದ ಎಲ್ಲ ಫೈಲ್ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಾಳೆ. ಆದರೆ, ಆ ಫೈಲ್ ಭಾಗ್ಯಾಳ ಚೇಂಬರ್ನಲ್ಲೇ ಇರುತ್ತದೆ. ರಿಸೆಪ್ಷನಿಸ್ಟ್ಗೆ ಅನುಮಾನ ಬಂದು ಎಲ್ಲ ಫೈಲ್ ಇಲ್ಲೆ ಇದೆ ಮೇಡಂ.. ನೀವು ಮೊದಲು ಎಲ್ಲಿ ಕೆಲಸ ಮಾಡ್ತಾ ಇದ್ರಿ ಎಂದು ಕೇಳಿದ್ದಾಳೆ. ಅದಕ್ಕೆ ಭಾಗ್ಯ ನಾನು ಅಡುಗೆ ಕೆಲಸ, ಮನೆ ಕೆಲಸ, ಮಕ್ಕಳನ್ನು ಸ್ಕೂಲ್ಗೆ ರೆಡಿ ಮಾಡೋ ಕೆಲಸ.. ನನ್ನ ಮನೆಯ ಎಲ್ಲ ಕೆಲಸ ಮಾಡುತ್ತಿದ್ದೆ ಎಂದಿದ್ದಾಳೆ.
ಆಗ ಆಕೆ ಅಂದ್ರೆ ನೀವು ಅಷ್ಟು ಓದಿನೂ ಮನೆಯಲ್ಲೇ ಇದ್ರ ಎಂದು ಕೇಳಿದ್ದಾಳೆ. ಅದಕ್ಕೆ ಭಾಗ್ಯ ನಾಣು ಅಷ್ಟೆಲ್ಲ ಓದಿಲ್ಲ.. ಹತ್ತನೇ ತರಗತಿ ತನಕ ಮಾತ್ರ ಓದಿರೋದು ಎಂದಿದ್ದಾಳೆ. ಇದನ್ನ ಕೇಳಿ ರಿಸೆಪ್ಷನಿಸ್ಟ್ಗೆ ಶಾಕ್ ಆಗಿದೆ. ನಾನು ಡಿಗ್ರಿ ಕಂಪ್ಲೀಟ್ ಮಾಡಿದ್ದೇನೆ ಆದ್ರೆ ನಾನೀಗ ರಿಸೆಪ್ಷನಿಸ್ಟ್ ಅಷ್ಟೆ, 10th ಕಲಿತಿರುವ ಇವರು ಎಂಡಿ ಹೇಗೆ ಆದ್ರು ಎಂದು ಅನುಮಾನಿಸಿದ್ದಾಳೆ. ಇದೇವೇಳೆ ಅಲ್ಲಿಗೆ ಆದೀಶ್ವರ್ ಬಂದಿದ್ದಾನೆ. ಆಗ ಆದೀ ಮತ್ತು ಭಾಗ್ಯ ಕ್ಲೋಸ್ ಆಗಿ ಮಾತನಾಡುತ್ತಿರುವುದನ್ನು ಆಕೆ ಗಮನಿಸಿದ್ದಾಳೆ. ಹೋ.. ಇದು ಕಥೆ ಎಂದು ಅಂದುಕೊಂಡಿದ್ದಾಳೆ. ಸದ್ಯ ಆಫೀಸ್ನಲ್ಲಿ ಆದೀ-ಭಾಗ್ಯ ನಡುವೆ ಏನೋ ನಡೆಯುತ್ತಿದೆ ಎಂಬ ಗಾಸಿಪ್ ಹಬ್ಬಲಾರಂಭಿಸಿದೆ. ಮತ್ತೊಂದೆಡೆ ಮಗಳ ವಿಷಯದಲ್ಲಿ ಭಾಗ್ಯ ತಲೆ ಕೆಡಿಸಿಕೊಂಡಿದ್ದಾಳೆ. ಈ ಎಲ್ಲ ವಿಷಯವನ್ನು ಹೇಗೆ ಮ್ಯಾನೇಜ್ ಮಾಡುತ್ತಾಳೆ ಎಂಬುದು ನೋಡಬೇಕಿದೆ.
Aishwarya Shindogi: ಶ್ರೀಲಂಕಾದಲ್ಲಿ ಐಶ್ವರ್ಯಾ-ಶಿಶಿರ್ ಮಸ್ತ್ ಎಂಜಾಯ್: ಬೇಗ ಮದುವೆ ಆಗಿ ಎಂದ ಫ್ಯಾನ್ಸ್