ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಮನೆಗೆ ಬಂದು ಬುಕ್ಸ್ ತೆಗೊಂಡೋದ ತನ್ವಿ: ಶ್ರೇಷ್ಠಾಳ ಪ್ಲ್ಯಾನ್ ಸಕ್ಸಸ್

ನಾನಿನ್ನು ಅಮ್ಮನ ಮನೆಗೆ ಹೋಗಲ್ಲ.. ಇಲ್ಲೇ ಇರುತ್ತೇನೆ ಎಂದು ತನ್ವಿ ಹೇಳಿದ್ದಾಳೆ. ಸದ್ಯ ಆ ಮನೆಯಲ್ಲಿರುವ ಡ್ರೆಸ್ ಬುಕ್ ತರಲು ತನ್ವಿ ಬಂದಿದ್ದು, ಈ ಸಂದರ್ಭ ಶ್ರೇಷ್ಠಾ ಹಾಗೂ ಕುಸುಮಾ ನಡುವೆ ಮಾತಿನ ಚಕಮಕಿ ನಡೆದಿದೆ. ಇದುಕೂಡ ಶ್ರೇಷ್ಠಾಳ ಪ್ಲಾನ್ ಆಗಿತ್ತು.. ಅದರಂತೆ ಈಗ ನಡೆದಿದೆ.

ಮನೆಗೆ ಬಂದು ಬುಕ್ಸ್ ತೆಗೊಂಡೋದ ತನ್ವಿ: ಶ್ರೇಷ್ಠಾಳ ಪ್ಲ್ಯಾನ್ ಸಕ್ಸಸ್

Bhagya lakshmi serial -

Profile Vinay Bhat Sep 26, 2025 11:57 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾ ಮಗಳು ತನ್ವಿಯ ನಿರ್ಧಾರ ಸದ್ಯ ಭಾಗ್ಯ ಮನೆಯಲ್ಲಿ ಕೋಲಾಹಲ ಎಬ್ಬಿಸಿದೆ. ಹೇಳದೆ- ಕೇಳದೆ ತನ್ವಿ ತನ್ನ ಮನೆ ಬಿಟ್ಟು ತಂದೆ ತಾಂಡವ್ ಮನೆಯಲ್ಲಿ ಸೆಟಲ್ ಆಗಿದ್ದಾಳೆ. ಯಾರಿಗೂ ಹೇಳದೆ ಶ್ರೇಷ್ಠಾ ಜೊತೆ ಆಕೆ ತಂದೆ ಮನೆಗೆ ತೆರಳಿದ್ದಾಳೆ. ನಾನಿನ್ನು ಅಮ್ಮನ ಮನೆಗೆ ಹೋಗಲ್ಲ.. ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾಳೆ. ಸದ್ಯ ಆ ಮನೆಯಲ್ಲಿರುವ ಡ್ರೆಸ್ ಬುಕ್ ತರಲು ತನ್ವಿ ಬಂದಿದ್ದು, ಈ ಸಂದರ್ಭ ಶ್ರೇಷ್ಠಾ ಹಾಗೂ ಕುಸುಮಾ ನಡುವೆ ಮಾತಿನ ಚಕಮಕಿ ನಡೆದಿದೆ. ಇದುಕೂಡ ಶ್ರೇಷ್ಠಾಳ ಪ್ಲಾನ್ ಆಗಿತ್ತು.. ಅದರಂತೆ ಈಗ ನಡೆದಿದೆ.

ತನ್ವಿ ಮನೆಬಿಟಟ್ಟು ತಾಂಡವ್ ಮನೆ ಸೇರಲು ಕಾರಣ ಭಾಗ್ಯ ಹೊಡೆದಿರುವುದು. ಕ್ಲಾಸ್ ಬಂಕ್ ಮಾಡಿ ಸಸ್ಪೆಂಡ್ ಆದಾಗ ತನಗೆ ಹೇಳದೆ ಕಾಲೇಜ್​ಗೆ ತಾಂಡವ್ ಮತ್ತು ಶ್ರೇಷ್ಠಾಳನ್ನು ಕರೆದುಕೊಂಡು ಹೋಗಿದ್ದು ಭಾಗ್ಯಾಗೆ ಸಿಟ್ಟು ತರಿಸಿದೆ. ಇದೇ ವಿಚಾರದಲ್ಲಿ ಕೋಪದಲ್ಲಿ ತನ್ವಿಯ ಕೆನ್ನೆಗೆ ಒಂದೇಟು ಭಾಗ್ಯ ಹೊಡೆದಿದ್ದಾಳೆ. ಭಾಗ್ಯ ಹೊಡೆದಿರುವ ವಿಚಾರವನ್ನು ಅಡ್ವನ್ಟೇಜ್ ಆಗಿ ತೆಗೆದುಕೊಂಡ ಶ್ರೇಷ್ಠಾ ತನ್ವಿ ಮೈಂಡ್ ವಾಶ್ ಮಾಡಿ ಮನೆಗೆ ಕರ್ಕೊಂಡು ಬಂದಳು.. ಅಲ್ಲದೆ ತಾಂಡವ್​ ಜೊತೆ ಆ ಭಾಗ್ಯ ನಮ್ಮ ತನ್ವಿಗೆ ಹೊಡೆದಿದ್ದಾಳೆ ಪಾಪಾ ಎಂದು ನಾಟಕ ಆಡಿದಳು. ಮತ್ತೊಂದೆಡೆ ಭಾಗ್ಯ ಮನೆಯಲ್ಲಿ ತನ್ವಿ ಬರದಿರುವುದನ್ನು ಕಂಡು ಟೆನ್ಶನ್ ಆಗಿ ಆದೀಶ್ವರ್​ನನ್ನು ಕರೆದು ಪೊಲೀಸ್ ಕಂಪ್ಲೆಂಟ್ ಕೊಡಲು ಮುಂದಾಗುತ್ತಾರೆ.

ಅಲ್ಲದೆ ತನ್ನ ಕಾಂಟೆಕ್ಟ್​ನಲ್ಲಿ ವಿಚಾರಿಸುತ್ತೇನೆ ಎಂದು ತಾಂಡವ್​ಗೆ ಕಾಲ್ ಮಾಡಿ ಹೇಳುತ್ತಾನೆ. ಪೊಲೀಸ್ ಕಂಪ್ಲೆಂಟ್ ವಿಷಯ ತಿಳಿದು ತಾಂಡವ್​ಗೆ ನಡುಕ ಶುರುವಾಗಿದೆ. ತನ್ವಿ ಬಳಿ ಹೋಗಿ ಅಜ್ಜಿಗೆ ಕಾಲ್ ಮಾಡಿ ನಾನು ಪಪ್ಪ ಮನೆಯಲ್ಲಿದ್ದೇನು ಎಂದು ಹೇಳು ಎಂದಿದ್ದಾನೆ. ತನ್ವಿ ಹೇಳಿದಾಗ ಭಾಗ್ಯ ಮನೆಯವರಿಗೆ ಶಾಕ್ ಆಗಿದೆ. ಇದು ಭಾಗ್ಯಾಗೆ ಮತ್ತಷ್ಟು ಸಿಟ್ಟು ತರಿಸಿದೆ. ನಮಗೆ ಇಷ್ಟೆಲ್ಲ ದ್ರೋಹ ಮಾಡಿರುವ ಆ ತಾಂಡವ್​ ಮನೆಗೆ ಹೋಗಿದ್ದಾಳೆ.. ನಾನು ಯಾವುದೇ ಕಾರಣಕ್ಕೂ ಅವಳನ್ನು ಅಲ್ಲಿಂದ ಕರ್ಕೊಂಡು ಬರಲ್ಲ ಎನ್ನುತ್ತಾಳೆ.

ಮರುದಿನ ತನ್ವಿ ನನ್ನ ಕಾಲೇಜ್ ಡ್ರೆಸ್, ಬುಕ್ಸ್ ಎಲ್ಲ ಅಲ್ಲೇ ಇದೆ ಎಂದಿದ್ದಾಳೆ. ಅದಕ್ಕೆ ಶ್ರೇಷ್ಠಾ, ನಾನು ನಿನ್ನ ಜೊತೆ ಬರ್ತಿದ್ದೆ ಆದ್ರೆ ಆ ಮನೆಯವರು ನನಗೆ ತುಂಬಾ ಅವಮಾನ ಮಾಡಿದ್ದಾರೆ.. ಈಗ ಬಂದ್ರುಕೂಡ ಪುನಃ ನನಗೆ ಅವಮಾನ ಮಾಡುತ್ತಾರೆ ಹಾಗಾಗಿ ನಾನು ಮನೆಯೊಳಗೆ ಬರಲ್ಲ.. ರೋಡ್ ಸೈಡ್​ನಲ್ಲಿ ನಿಂತಿರುತ್ತೇನೆ.. ನೀನು ಹೋಗಿ ಬುಕ್ಸ್ ತೆಗೊಂದು ಬಾ ಎಂದಿದ್ದಾಳೆ.

ಅದರಂತೆ ತನ್ವಿ ಭಾಗ್ಯ ಮನೆಗೆ ಬುಕ್ಸ್ ಮತ್ತು ಡ್ರೆಸ್ ತೆಗೆದುಕೊಳ್ಳಲು ಬಂದಿದ್ದಾಳೆ. ತನ್ವಿಯನ್ನು ನೋಡಿದೊಡನೆ ಭಾಗ್ಯಾಳ ಅಮ್ಮ ಒಳಗೆ ಬಾ.. ನೀನು ಹಾಗೆಲ್ಲ ಅಲ್ಲಿಗೆ ಹೋಗಬಾರದು ಎಂದು ಪ್ರೀತಿಯಲ್ಲಿ ಮಾತನಾಡಿಸಲು ಮುಂದಾಗುತ್ತಾರೆ. ಆದ್ರೆ ಕುಸುಮಾ ಮಾತ್ರ ಖಡಕ್ ಆಗಿ ನಿಂತು, ನೀನು ಯಾಕೆ ಇಲ್ಲಿಗೆ ಬಂದೆ.. ಆ ಮನೆಗೆ ಹೋಗಿದ್ವಿ ಅಲ್ವಾ ಅಲ್ಲೇ ಇರು.. ಆ ಶ್ರೇಷ್ಠಾ ಎಂತವಳು ಅಂತ ನಿನ್ಗೆ ಗೊತ್ತಿಲ್ಲ ಎಂದಿದ್ದಾರೆ. ಆದ್ರೆ ಭಾಗ್ಯಾಳ ಅಮ್ಮ, ನೀವು ಹೇಳಬೇಡಿ.. ಅವಳು ಬಂದಿದ್ದಾಳೆ ಅಲ್ವಾ?, ಇನ್ನೂ ಹೋಗಲ್ಲ ಎಂದಾಗ, ಕೋಪಗೊಂಡ ತನ್ವಿ ನಾನೇನು ಇಲ್ಲೇ ಇರಲು ಬಂದಿಲ್ಲ.. ನನ್ನ ಬುಕ್ಸ್ ತೆಗೊಂಡು ಹೋಗ್ತೇನೆ ಎಂದು ರೂಮ್​ಗೆ ತೆರಳಿದ್ದಾಳೆ.

ಬುಕ್ಸ್-ಡ್ರೆಸ್ ತೆಗೊಂದು ಹೊರಡಲು ಮುಂದಾದ ಭಾಗ್ಯ ಮಾವ ಬಂದು, ಹೋಗಬೇಡ ಪುಟ್ಟಿ, ನೀನು ಅಲ್ಲಿಂದ ಕಾಲೇಜ್​ಗೆ ಹೇಗೆ ಹೋಗ್ತೀಯಾ.. ಕಷ್ಟ ಆಗಬಹುದು.. ಊಟ-ತಿಂಡಿಗೆ ಏನು ಮಾಡ್ತೀಯ.. ನಿನ್ಗೆ ಅಲ್ಲಿ ಪ್ರೀತಿ ಕೋಡೋರು ಯಾರೂ ಇಲ್ಲ ಎಂದಿದ್ದಾರೆ. ಅದಕ್ಕೆ ತನ್ವಿ, ನನ್ಗೆ ಅಲ್ಲಿ ಊಟ-ತಿಂಡಿ ಎಲ್ಲ ಶ್ರೇಷ್ಠಾ ಆಂಟಿ ಕೊಡ್ತಾರೆ.. ಅವರು ಜಾಸ್ತಿ ಪ್ರೀತಿ ಕೊಡ್ತಾರೆ.. ಈಗ ಕೂಡ ನನ್ನ ಇಲ್ಲಿಗೆ ಕರ್ಕೊಂಡು ಬಂದಿದ್ದು ಅವರೇ.. ನೀವು ಅವರಿಗೆ ಅವಮಾನ ಮಾಡ್ತೀರಿ ಅಂತ ಹೊರಗಡೆ ರೋಡ್​ನಲ್ಲಿ ನಿತ್ತಿದ್ದಾರೆ ಎಂದಿದ್ದಾಳೆ.

ಈ ವಿಷಯ ಕೇಳಿದ ಕುಸುಮಾ, ಆ ಮನೆಹಾಳಿ ಹೊರಗಡೆ ಇದ್ದಾಳಾ ಅವಳ ಗ್ರಹಚಾರ ಬಿಡಿಸ್ತೇನೆ ಎಂದು ಕಾರ್ ಬಳಿ ಬರುತ್ತಾರೆ. ಅತ್ತ ಶ್ರೇಷ್ಠಾಗೆ ಕೂಡ ಇದೇ ಬೇಕಾಗಿರುವುದು.. ತನ್ವಿಯನ್ನು ತನ್ನ ಬಲೆಗೆ ಬೀಳಿಸಲು ಭಾಗ್ಯ ಮನೆಯವರು ಕೆಟ್ಟವರೆಂದು ತನ್ವಿಯ ತಲೆಯಲ್ಲಿ ತುಂಬಲು ಇದೇ ಒಳ್ಳೆಯ ಅವಕಾಶ ಎಂದು, ಕುಸುಮಾ ಎಷ್ಟೇ ಬೈದರು ಒಂದೂ ಮಾತನಾಡದೆ ಶ್ರೇಷ್ಠಾ ಸುಮ್ಮನಿರುತ್ತಾಳೆ. ಬಳಿಕ, ನೋಡಿದ್ಯಾ ತನ್ವಿ ನಾನು ಅದಕ್ಕೆ ಇಲ್ಲಿಗೆ ಬರಲ್ಲ ಅಂತ ಹೇಳಿದ್ದು, ನಾನು ನನ್ನ ಪಾಡಿಗೆ ಸುಮ್ಮನೆ ಇದ್ದರೂ ಇವರು ನನಗೆ ಅವಮಾನ ಮಾಡುತ್ತಾರೆ ಎಂದು ಕಣ್ಣೀರು ಹಾಕುತ್ತಾಳೆ.



ಆಗ ಕುಸುಮಾ, ಸಾಕು ನಿನ್ನ ನಾಟಕ.. ಕಪಾಳಕ್ಕೆ ಒಂದು ಬಾರಿಸ್ತೇನೆ ಎಂದಿದ್ದಾರೆ.. ಈ ಸಂದರ್ಭ ತನ್ವಿ, ಇದರಲ್ಲಿ ಶ್ರೇಷ್ಠಾ ಆಂಟಿದು ಏನೂ ತಪ್ಪಿಲ್ಲ.. ಅವರಿಗೆ ಇಲ್ಲಿ ಬರೋಕೆ ಇಷ್ಟನೇ ಇರಲಿಲ್ಲ.. ನನಗೋಸ್ಕರ ಹೆಲ್ಪ್ ಮಾಡ್ತೇನೆ ಅಂತ ಬಂದ್ರು.. ಆದ್ರೆ ನೀವು ಅವರಿಗೇ ಅವಮಾನ ಮಾಡ್ತಾ ಇದ್ದೀರಾ.. ಎಂದಿದ್ದಾಳೆ. ಇಲ್ಲಿಗೆ ಶ್ರೇಷ್ಠಾ ನನ್ನ ಪ್ಲ್ಯಾನ್ ವರ್ಕ್ ಆಯಿತು ಎಂದಿದ್ದಾಳೆ. ಸದ್ಯ ತನ್ವಿಗೆ ಇದನ್ನೆಲ್ಲ ಅರ್ಥ ಮಾಡಿಸಿ ಆ ಮನೆಯಿಂದ ಹೇಗೆ ಕರೆದುಕೊಂಡು ಬರೋದು ಎಂಬುದು ಭಾಗ್ಯ ಮನೆಗೆ ಟೆನ್ಶನ್ ಶುರುವಾಗಿದೆ.. ಮತ್ತೊಂದೆಡೆ ಶ್ರೇಷ್ಠಾ, ಭಾಗ್ಯ ಆಫೀಸ್​ನಲ್ಲೇ ಕೆಲಸಕ್ಕೆ ಜಾಯಿನ್ ಆಗಲು ಮುಂದಾಗಿದ್ದಾಳೆ.. ಹೀಗಾಗಿ ಮುಂಬರುವ ಎಪಿಸೋಡ್ ಹೇಗಿರುತ್ತೆ ಎಂಬುದು ನೋಡಬೇಕಿದೆ.

Kannada Serial TRP: ಫೀನಿಕ್ಸ್​ನಂತೆ ಎದ್ದು ಬಂದ ಅಮೃತಧಾರೆ: ಟಿಆರ್​ಪಿಯಲ್ಲಿ ಜಿಗಿತ, ಆದರೆ..