BBK 12: ಬಿಗ್ ಬಾಸ್ ಆರಂಭಕ್ಕೆ ಎರಡೇ ದಿನ ಬಾಕಿ: ಫೈನಲ್ ಆಯ್ತು 18 ಕಂಟೆಸ್ಟೆಂಟ್ಗಳ ಲಿಸ್ಟ್, ಇವರೇನಾ?
ಬಿಗ್ ಬಾಸ್ ಟೀಮ್ 18 ಕಂಟೆಸ್ಟೆಂಟ್ಗಳ ಫೈಲ್ ಪಟ್ಟಿ ರೆಡಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ದಿನಕ್ಕೊಂದು ಹೊಸ ಹೊಸ ಹೆಸರು ಹರಿದಾಡುತ್ತಲೇ ಇದೆ. ಇದರಲ್ಲಿ ಅಧಿಕೃತವಾಗಿ ಯಾರೆಲ್ಲ ದೊಡ್ಮನೆಗೆ ಎಂಟ್ರಿ ಕೊಡುತ್ತಾರೆ ಎಂಬುದು ಭಾನುವಾರ ಸಂಜೆಯಷ್ಟೆ ತಿಳಿಯಲಿದೆ. ಆದರೆ, ಕೆಲವೊಂದು ಖಚಿತ ಹೆಸರು ತಿಳಿದುಬಂದಿದೆ. ಅವರು ಯಾರೆಲ್ಲ ಎಂಬುದನ್ನು ನೋಡುವುದಾದರೆ..

BBK 12 Final Contestant -

‘‘Expect the Unexpected’’ ಎಂಬ ಥೀಮ್‌ನೊಂದಿಗೆ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಎಲ್ಲ ತಯಾರಿ ನಡೆದಿದೆ. ಈ ಬಾರಿ ಹಲವು ಅನಿರೀಕ್ಷಿತ ತಿರುವುಗಳ ಮೂಲಕ ಬಿಗ್ ಬಾಸ್ ಶೋ ಸಾಗಲಿದೆಯಂತೆ. ಈ ಹಿಂದಿನ ಸೀಸನ್‌ನಲ್ಲಿ ಸ್ವರ್ಗ, ನರಕ ಎಂಬ ಕಾನ್ಸೆಪ್ಟ್ ಇತ್ತು. ಆದರೆ, ಈ ಬಾರಿ ಹಾಗಲ್ಲ.. ಏನು ಅಂದುಕೊಳ್ತೀವೋ.. ಅದು ಆಗಲ್ಲ ಎಂದು ಸುದೀಪ್ ಪ್ರೊಮೋದಲ್ಲಿ ಒತ್ತಿ ಹೇಳಿದ್ದಾರೆ. ಹೀಗಾಗಿ ಸಂಡೆ ಏನೆಲ್ಲ ಇರಲಿದೆ ಎಂಬುದು ರೋಚಕತೆ ಸೃಷ್ಟಿಸಿದೆ.
ಈಗಾಗಲೇ ಬಿಗ್ ಬಾಸ್ ಟೀಮ್ 18 ಕಂಟೆಸ್ಟೆಂಟ್ಗಳ ಫೈಲ್ ಪಟ್ಟಿ ರೆಡಿ ಮಾಡಿದ್ದಾರೆ. ಅಲ್ಲದೆ ಅವರ ಬಯೋದ ಪ್ರೊಮೋ ಕೂಡ ರೆಡಿ ಮಾಡಿದ್ದಾರಂತೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ದಿನಕ್ಕೊಂದು ಹೊಸ ಹೊಸ ಹೆಸರು ಹರಿದಾಡುತ್ತಲೇ ಇದೆ. ಇದರಲ್ಲಿ ಅಧಿಕೃತವಾಗಿ ಯಾರೆಲ್ಲ ದೊಡ್ಮನೆಗೆ ಎಂಟ್ರಿ ಕೊಡುತ್ತಾರೆ ಎಂಬುದು ಭಾನುವಾರ ಸಂಜೆಯಷ್ಟೆ ತಿಳಿಯಲಿದೆ. ಆದರೆ, ಕೆಲವೊಂದು ಖಚಿತ ಹೆಸರು ತಿಳಿದುಬಂದಿದೆ. ಅವರು ಯಾರೆಲ್ಲ ಎಂಬುದನ್ನು ನೋಡುವುದಾದರೆ..
ಗೀತಾ ಧಾರಾವಾಹಿ ಮೂಲಕ ಕರ್ನಾಟಕ ಜನತೆಯಲ್ಲಿ ಮನದಲ್ಲಿ ನೆಲೆಸಿರುವ ಧನುಷ್ ಬಿಗ್ ಬಾಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅವರಿಗೆ ಇತ್ತೀಚೆಗೆ ವಿವಾಹ ಕೂಡ ನೆರವೇರಿತು. ಹಾಸ್ಯ ಶೋಗಳ ಮೂಲಕ ಗಮನ ಸೆಳೆದ ಸೂರಜ್, ಕಾಮಿಡಿ ಕಿಲಾಡಿಗಳು ಶೋನಲ್ಲಿ ಮಿಂಚು ಹರಿಸಿದ್ದರು. ಇತ್ತೀಚೆಗೆ ಕ್ವಾಟ್ಲೆ ಕಿಚನ್ ಶೋನಲ್ಲಿ ಕೂಡ ಹೆಚ್ಚು ಕ್ವಾಟ್ಲೆ ಕೊಟ್ಟು ಸುದ್ದಿಯಾದರು. ಅಲ್ಲದೆ ಸೆಪ್ಟೆಂಬರ್ 27 ರಂದು ಕ್ವಾಟ್ಲೆ ಕಿಚನ್ ಗ್ರ್ಯಾಂಡ್ ಫಿನಾಲೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದೇ ವೇಳೆ ಬಿಗ್ ಬಾಸ್ಗೆ ಹೋಗುವ ಕೆಲ ಸ್ಪರ್ಧಿಗಳ ಹೆಸರು ಅನೌನ್ಸ್ ಆಗಲಿದೆ ಎನ್ನಲಾಗಿದ್ದು, ಇದರಲ್ಲಿ ಸೂರಜ್ ಹೆಸರು ಕೂಡ ಇದೆಯಂತೆ.
ಇನ್ನು ಮೀಡಿಯಾ ಕೋಟಾದಿಂದ ಈ ಹಿಂದೆ ಜಯಪ್ರಕಾಶ್ ಅವರು ಬರುತ್ತಾರೆ ಎನ್ನಲಾಗಿತ್ತು. ಆದರೀಗ ಈ ಹೆಸರು ಸೈಲೆಂಟ್ ಆಗಿದೆ. ಸದ್ಯ ಟ್ರೆಂಡಿಂಗ್ನಲ್ಲಿರುವ ಹೆಸರು ದಿವ್ಯಾ ವಸಂತ್. ಇವರು ನ್ಯೂಸ್ ಆ್ಯಂಕರ್ ಆಗಿ ಕಾಣಿಸಿಕೊಂಡಿದ್ದರು. ಅಮೂಲ್ಯಾಗೆ ಮಗು ಜನಿಸಿದಾಗ ಇಡೀ ಕರ್ನಾಟಕವೇ ಖುಷಿಪಡೋ ಸುದ್ದಿ ಎಂದು ಹೇಳಿ ಟ್ರೋಲ್ ಕೂಡ ಆಗಿದ್ದರು. ಉಳಿದಂತೆ ಅನನ್ಯಾ ಅಮರ್, ಗಿಲ್ಲಿ ನಟ, ಸತ್ಯ ಹೀರೋ ನಟ ಸಾಗರ್, ಶ್ವೇತಾ ಪ್ರಸಾದ್ ಹೆಸರು ಕೂಡ ಪಟ್ಟಿಯಲ್ಲಿ ಇದೆ.
BBK 12 Contestant: ಈ ಬಾರಿ ಬಿಗ್ ಬಾಸ್ಗೆ ಹೋಗಲಿದ್ದಾರೆ ಮಾಸ್ಟರ್ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ
ಇನ್ನು ಪಡ್ಡೆ ಹುಲಿ ಸಿನಿಮಾದ ಮೂಲಕ ಗಮನ ಸೆಳೆದ ನಟ ಶ್ರೇಯಸ್ ಮಂಜು. ಇವರು ಬಿಗ್ ಬಾಸ್ ಸೀಸನ್ 12ಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಸಂದರ್ಶನವೊಂದರಲ್ಲಿ ಇವರು ಚಾನೆಲ್‌ನಿಂದ ಕರೆ ಬಂದಿರುವುದು ನಿಜ ಎಂದು ಒಪ್ಪಿಕೊಂಡಿದ್ದು, ಇನ್ನೇನು ಎರಡು ದಿನ ಬಾಕಿ ಇದೆ.. ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.