ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಇಷ್ಟುದಿನ ತನ್ನ ಮನೆಯವರಿಂದ ಮುಚ್ಚಿಟ್ಟಿದ್ದ ಬಹುದೊಡ್ಡ ಸತ್ಯ ಈಗ ಬಯಲಾಗಿದೆ. ತನ್ನ ಮನೆಯಲ್ಲಿ ಕಳೆದ ಏಳು ದಿನಗಳಿಂದ ಮುಚ್ಚಿಟ್ಟಿದ್ದ ಸತ್ಯ ಇದೀಗ ಬಯಲಾಗಿದೆ. ಭಾಗ್ಯ 25 ಲಕ್ಷ ಹಣ ತೆಗೆದುಕೊಳ್ಳಬೇಕೆಂದು ಮಿಡಲ್ ಕ್ಲಾಸ್ ಜೀವನ ನಡೆಸುತ್ತಿದ್ದ ಆದೀ ಮೇಲೆ ರಾಮ್ದಾಸ್ ಬೇಜಾರು ಮಾಡಿಕೊಂಡಿದ್ದು, ಕಣ್ಣೀರಿಟ್ಟಿದ್ದಾರೆ. ಭಾಗ್ಯಾಳ ಅಮ್ಮ ಮುಖಾಂತರ ಈ ಎಲ್ಲ ಸತ್ಯ ಪೂಜಾಗೆ ಗೊತ್ತಾಗಿದೆ. ಪೂಜಾ ನೇರವಾಗಿ ರಾಮ್ದಾಸ್ ಬಳಿ ಹೇಳಿದ್ದಾಳೆ. ಬಳಿಕ ಎಲ್ಲರೂ ಭಾಗ್ಯ ಮನೆಗೆ ಬಂದಿದ್ದಾರೆ.
ಆದೀ ಭಾಗ್ಯ ಮನೆಯಲ್ಲಿರುವಾಗ ಪೂಜಾ ಅಕ್ಕನಿಗೆ ಕಾಲ್ ಮಾಡಿದ್ದಾಳೆ. ಅಕ್ಕ- ತಂಗಿಯರು ಮಾತನಾಡುತ್ತಿರುವಾಗ ಹಿನ್ನಲೆಯಲ್ಲಿ ಆದೀಯ ವಾಯ್ಸ್ ಪೂಜಾಗೆ ಕೇಳಿಸಿದೆ. ಪೂಜಾಗೆ ಇಲ್ಲಿಂದ ಅನುಮಾನ ಬಂದು ಅಮ್ಮನಿಗೆ ಕಾಲ್ ಮಾಡಿದ್ದಾಳೆ. ಪೂಜಾ ಅಮ್ಮನಿಗೆ ಮೊದಲೇ ಆದೀ ಈ ಮನೆಯಲ್ಲಿರುವುದು ಇಷ್ಟ ಇರುವುದಿಲ್ಲ.. ಹೀಗಾಗಿ ಪೂಜಾ ಕೇಳಿದ ತಕ್ಷಣ ಕೋಪದಲ್ಲಿ ಎಲ್ಲ ಸತ್ಯ ಬಾಯಿಬಿಟ್ಟಿದ್ದಾಳೆ. ಆದೀ ಒಂದು ವಾರದಿಂದ ಇಲ್ಲೇ ಇದ್ದಾನೆ ಎಂದು ಹೇಳಿದ್ದಾಳೆ.
ಬಳಿಕ ಪೂಜಾ, ರಾಮ್ದಾಸ್ ಬಳಿ ಹೋಗಿ ಆದೀ ಏಳು ದಿನಗಳಿಂದ ಭಾಗ್ಯಕ್ಕನ ಮನೆ ಮೇಲೆ ರೂಮ್ ಮಾಡಿ ಅಲ್ಲೇ ಸಾಮಾನ್ಯ ಜನರಂತೆ ಜೀವನ ನಡೆಸುತ್ತಿದ್ದಾರಂತೆ ಎಂದು ಹೇಳಿದ್ದಾಳೆ. ಇದನ್ನ ಕೇಳಿ ರಾಮ್ದಾಸ್ಗೆ ಶಾಕ್ ಆಗಿದೆ. ಬನ್ನಿ ಹೋಗೋಣ ಎಂದು ಎಲ್ಲರೂ ಭಾಗ್ಯ ಮನೆಗೆ ಹೊರಟಿದ್ದಾರೆ. ಆದರೆ, ಇವರು ಬರುವ ಮುನ್ನವೇ ಭಾಗ್ಯ ಮನೆಗೆ ಕನ್ನಿಕಾ ಎಂಟ್ರಿ ಕೊಟ್ಟಿದ್ದಾಳೆ. ಬಂದವಳೇ ನೀನು ಇಲ್ಲಿ ಏನು ಮಾಡ್ತಾ ಇದ್ದೀಯಾ ಬ್ರೋ.. ಅರೇ ಲಗೆಜ್ ಬ್ಯಾಗ್ ಕೂಡ ಇಲ್ಲೆ ಇದೆ ನಿಂದು ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾಳೆ.
ಆದೀಶ್ವರ್ ಪ್ರಶ್ನೆಗೆ ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾಗಿದ್ದಾನೆ. ಬಳಿಕ ರಾಮ್ದಾಸ್, ಪೂಜಾ, ಮೀನಾಕ್ಷಿ ಹಾಗೂ ಕಿಶನ್ ಕೂಡ ಬಂದಿದ್ದಾರೆ. ಭಾಗ್ಯ ನಿನ್ನ ಮೇಲೆ ನನಗೆ ತುಂಬಾ ಬೇಜಾರಾಗಿದೆ.. ಈ ವಿಷಯ ನಮ್ಮ ಬಳಿ ಹೇಳಬಹುದಿತ್ತು ಅಲ್ವಾ?, ಆದೀ ಹಣ ತೆಗೆದುಕೊಂಡಿಲ್ಲ ಅಂದ್ರೆ ನನ್ನ ಬಳಿ ಬರಬಹುದಿತ್ತು.. ಬರಲು ಟೈಮ್ ಇಲ್ಲ ಅಂತಾದ್ರೆ ಕನಿಷ್ಠ ಕಾಲ್ ಮಾಡಿ ಆದ್ರೂ ಹೇಳಬಹುದಿತ್ತು.. ಆದರೆ, ನೀವೆಲ್ಲ ಸುಳ್ಳು ಹೇಳಿ ಈರೀತಿ ಮಾಡಿದ್ದು ತುಂಬಾ ನೋವುಂಟು ಮಾಡಿದೆ ಎಂದು ಹೇಳಿ ಹೊರಟಿದ್ದಾರೆ.
ಆದೀಶ್ವರ್ ಮನೆಗೆ ರಿಟರ್ನ್ ಹೋದ ಬಳಿಕ ಕೂಡ ರಾಮ್ದಾಸ್ ತುಂಬಾ ಬೇಜಾರು ಮಾಡಿಕೊಂಡಿದ್ದಾರೆ. ಮೀನಾಕ್ಷಿ ಕೂಡ ನಿನ್ನಿಂದ ನಾವು ಇದನ್ನ ನಿರೀಕ್ಷೆ ಮಾಡಿರಲಿಲ್ಲ.. ಇಂತ ಚೀಪ್ ಕೆಲಸಕ್ಕೆ ಹೇಗೆ ಇಳಿದೆ ನೀನು ಎಂದು ಕೇಳಿದ್ದಾರೆ. ಆದೀ ಇದು ಯಾವುದಕ್ಕೂ ಉತ್ತರಿಸದೆ ಮೌನವಾಗಿದ್ದ. ಮತ್ತೊಂದೆಡೆ ಅತ್ತ ಭಾಗ್ಯ ತನ್ನ ಅಮ್ಮನ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಸ್ವಲ್ಪ ಹೊತ್ತು ಕಳೆದರೆ ಎಲ್ಲ ಸರಿ ಆಗುತ್ತಿತ್ತು.. ಕೊನೆಯ ಘಳಿಗೆಯಲ್ಲಿ ನೀನು ಯಾಕೆ ಇದನ್ನ ಪೂಜಾ ಬಳಿ ಹೇಳೋಕೆ ಹೋದೆ ಎಂದು ಕೇಳಿದ್ದಾಳೆ.
ಮತ್ತೊಂದೆಡೆ ಅತ್ತ ಭಾಗ್ಯ ಮಗಳು ತನ್ವಿ ಕ್ಲಾಸ್ಗೆ ಬಂಕ್ ಹಾಕಿದ ಕಾರಣ ಕಾಲೇಜ್ನಿಂದ ಸಸ್ಪೆಂಡ್ ಆಗಿದ್ದು, ಪೇರೆಂಟ್ಸ್ ಬರೋ ತನಕ ಕಾಲೇಜಿಗೆ ಬರಬಾರದು ಎಂದು ಪ್ರಿನ್ಸಿಪಾಲ್ ಹೇಳಿದ್ದಾರೆ. ಹೀಗಾಗಿ ತನ್ವಿಗೆ ಏನು ಮಾಡಬೇಕೆಂದು ದೋಚುತ್ತಿಲ್ಲ. ಅಪ್ಪನ ಬಳಿ ಹೇಳಿ ಹೇಗಾದ್ರು ಮ್ಯಾನೇಜ್ ಮಾಡೋಣ ಎಂದು ತನ್ವಿ ತಾಂಡವ್ ಬಳಿ ವಿಚಾರ ಹೇಳಿದ್ದಾಳೆ. ಆದರೆ, ಮೊದಲಿಗೆ ತಾಂಡವ್ ಮನಬಂದಂತೆ ಬೈದಿದ್ದಾನೆ. ನಿನ್ನ ನಾನು ಫೀಸ್ ಕೊಟ್ಟಿ ಕಾಲೇಜ್ ಕಳುಹಿಸಿದ್ದು ಇದಕ್ಕ.. ನಾನು ಯಾವುದೇ ಕಾರಣಕ್ಕೂ ಬರುವುದಿಲ್ಲ ಎಂದು ಹೇಳಿದ್ದಾನೆ.
ಬಳಿಕ ತಾಂಡವ್ ಈ ವಿಚಾರವನ್ನು ಶ್ರೇಷ್ಠಾ ಬಳಿ ಹೇಳಿದ್ದಾಳೆ. ಆಗ ಶ್ರೇಷ್ಠಾ, ಕಮಾನ್ ತಾಂಡವ್.. ನೀನು ಯಾವ ಜನರೇಷನ್ನಲ್ಲಿ ಇದ್ದೀಯಾ.. ಕಾಲೇಜ್ ಬಂಕ್ ಎಲ್ಲ ಈಗ ಕಾಮನ್.. ನೀನು ಬಂಕ್ ಮಾಡಿಲ್ಲ ಅಂತ ನಿನ್ನ ಮಗಳು ಕೂಡ ಹಾಗೆ ಇರಬೇಕಾ?, ನಿನ್ನ ಮಗಳ ದೃಷ್ಟಿಯಲ್ಲಿ ನೀನು ಒಳ್ಳೆಯವನಾಗಲು ಇದೇ ಉತ್ತಮ ಅವಕಾಶ.. ನಾಳೆ ಕಾಲೇಜ್ ಹೋಗಿ ಮಾತಾಡು ಎಂದಿದ್ದಾಳೆ. ಬಳಿಕ ತಾಂಡವ್, ತನ್ವಿಗೆ ಕಾಲ್ ಮಾಡಿ ನಾಳೆ ಬರುತ್ತೇನೆ ಎಂದಿದ್ದಾನೆ.
ಸದ್ಯ ಧಾರಾವಾಹಿಯ ಮುಂದಿನ ಎಪಿಸೋಡ್ ರೋಚಕತೆ ಸೃಷ್ಟಿಸಿದೆ. ಒಂದುಕಡೆ ಆದೀಶ್ವರ್ ಮುಂದೇನು ಮಾಡುತ್ತಾನೆ ಎಂಬುದು ನೋಡಬೇಕಿದೆ. ಮತ್ತೊಂದೆಡೆ ತನ್ವಿ ಸಸ್ಪೆಂಡ್ ಆಗಿರುವ ವಿಚಾರ ಭಾಗ್ಯಾಗೆ ಗೊತ್ತಿಲ್ಲ.. ಇದು ತಿಳಿದ್ರೆ ಇನ್ನೇನು ಆಗುತ್ತೆ ಎಂಬುದು ಕುತೂಹಲ ಮೂಡಿದೆ. ಮತ್ತೊಂದಡೆ ಭಾಗ್ಯ ಮನೆಯಿಂದ ಕಳುವಾದ 25 ಲಕ್ಷ ಸಿಕ್ಕಿಲ್ಲ.. ಈ ಕಳ್ಳತನದ ಹಿಂದೆ ಕನ್ನಿಕಾ ಕೈವಾಡ ಇದೆ. ಇದು ಆದೀ-ಭಾಗ್ಯಾಗೆ ಗೊತ್ತಾಗುತ್ತ ಎಂಬುದು ನೋಡೇಕಿದೆ.
Bhavya Gowda: ಅಕ್ಕನ ಜೊತೆ ಮುದ್ದು ಮುದ್ದಾಗ ಫೋಟೋ ತೆಗೆಸಿಕೊಂಡ ಭವ್ಯಾ ಗೌಡ