ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ನಾಯಕಿ ಸುಷ್ಮಾ ಕೆ ರಾವ್ (Sushma K Rao) ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಧಾರಾವಾಹಿಯಲ್ಲಿ ಇವರು ಮಾಡುತ್ತಿರುವ ಪಾತ್ರ ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ. ಗಂಡ ಮೋಸ ಮಾಡಿ ಬೇರೊಬ್ಬಳ ಜೊತೆ ಇದ್ದರೂ ಎಷ್ಟೇ ಕಷ್ಟ ಕೊಟ್ರು ಜಗ್ಗದೇ ಮಕ್ಕಳು, ಅತ್ತೆ ಮಾವನ ಜೊತೆ ನಿಂತು ಬದುಕನ್ನು ದಿಟ್ಟವಾಗಿ ಎದುರಿಸುತ್ತಿದ್ದಾಳೆ ಭಾಗ್ಯ. ಇದಕ್ಕಾಗಿಯೆ ಟಾಪ್ ಲಿಸ್ಟ್ನಲ್ಲಿ ಭಾಗ್ಯ ಲಕ್ಷ್ಮೀ ಸ್ಥಾನ ಪಡೆದುಕೊಂಡು ಮುನ್ನುಗುತ್ತಿದೆ.
ಇದೀಗ ಇದ್ದಕ್ಕಿದ್ದಂತೆ ಭಾಗ್ಯ ಅಲಿಯಾಸ್ ಸುಷ್ಮಾ ಧಾರಾವಾಹಿಯಿಂದ ಕೆಲ ದಿನಗಳ ಬ್ರೇಕ್ ಪಡೆದುಕೊಂಡು ದೂರದೂರಿಗೆ ಹೊರಟಿದ್ದಾರೆ. ಎಲ್ಲಿಗೆ ಹೊರಟಿದ್ದಾರೆ ಅಂತ ಕೇಳಿದ್ರೆ ಖಂಡಿತ ನಿಮಗೆ ಆಶ್ಚರ್ಯವಾಗುತ್ತೆ. ಸುಷ್ಮಾ ರಾವ್ ಹೊರಟಿರುವುದು ಮೌಂಟ್ ಎವರೆಸ್ಟ್ ಕಡೆಗೆ, ಮೌಂಟ್ ಎವರೆಸ್ಟ್ ಹತ್ತಬೇಕು ಅನ್ನೋದು ಸುಷ್ಮಾ ರಾವ್ ಅವರ ಬಹುದಿನಗಳ ಕನಸು. ಹಾಗಂತ ಈ ಬಾರಿ ಅವರು ಹೋಗ್ತಾ ಇರೋದು ಮೌಂಟ್ ಎವರೆಸ್ಟ್ ಹತ್ತೋಕೆ ಅಲ್ಲ, ಬದಲಾಗಿ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ, ಅದು ಒಂಟಿಯಾಗಿ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಷ್ಮಾ ವಿಡಿಯೋ ಹಂಚಿಕೊಂಡಿದ್ದಾರೆ. ಭಾಗ್ಯ ಅವರ ಹೊಸ ಸಾಹಸಕ್ಕೆ ಅಭಿಮಾನಿಗಳು ಕೂಡ ಸಾಥ್ ಕೊಟ್ಟಿದ್ದಾರೆ. ನೀವು ಧಾರಾವಾಹಿಯಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ನಮಗೆಲ್ಲಾ ಸ್ಫೂರ್ತಿ ಎಂದು ಮನಸಾರೆ ಹಾಡಿ ಹೊಗಳುತ್ತಿದ್ದಾರೆ.
ಇತ್ತೀಚಿಗೆ ಕುಂಭಮೇಳಕ್ಕೂ ಹೋಗಿ ಬಂದಿದ್ದರು ಸುಷ್ಮಾ. ಸದ್ಯ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಹೋಗಬೇಕಾದ ಕಾರಣ ದಿನ-ರಾತ್ರಿ ಶೂಟಿಂಗ್ ಮಾಡಿ ಕೆಲವು ಎಪಿಸೋಡ್‌ಗಳನ್ನು ಮುಗಿಸಿ ಬಂದಿರುವುದಾಗಿ ಸುಷ್ಮಾ ಹೇಳಿದ್ದಾರೆ. ಚಾರಣಕ್ಕೆ ಹೊರಡುವಾಗ ಹಲವಾರು ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು. ಆದರೆ ಶೂಟಿಂಗ್ ಮಧ್ಯೆ ಬಿಡುವು ಸಿಗದ ಕಾರಣ, ಮನೆಯವರೇ ಎಲ್ಲಾ ಅರೇಂಜ್ ಮಾಡಿ ಕೊಟ್ಟಿದ್ದಾರೆ. ಏನೇನು ಇದೆ ಎಂದು ನೋಡುವುದಕ್ಕೂ ಟೈಮ್ ಇರಲಿಲ್ಲ. ಹಾಗೆಯೇ ಬಂದಿದ್ದೇನೆ ಎಂದಿದ್ದಾರೆ ನಟಿ. ಮೊದಲಿಗೆ ಕಠ್ಮಂಡುಗೆ ಹೋಗಿ ಅಲ್ಲಿಂದ ಎಲ್ಲೆಲ್ಲಿ ಹೋಗುತ್ತೇನೆ ಎನ್ನುವ ಮಾಹಿತಿಯನ್ನು ವಿಡಿಯೋ ಮೂಲಕ ನೀಡಿದ್ದಾರೆ.
ಸುಷ್ಮಾ ಅವರು ಮೂಲತಃ ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ಎಸ್. ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಇವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Kannada Serial TRP: ಟಿಆರ್ಪಿಯಲ್ಲಿ ಝೀ ಕನ್ನಡ ಧಾರಾವಾಹಿಯದ್ದೇ ಹವಾ: ನಂಬರ್ 1 ಧಾರಾವಾಹಿ ಇದೇ ನೋಡಿ