ಕಲರ್ಸ್ ಕನ್ನಡದಲ್ಲಿ( Colors Kannada) ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ (bhagyalakshmi kannada serial) ಆದಿ (Aadi) ಈಗ ತನ್ನ ಪ್ರೇಮ ಕಥೆಯನ್ನು ಸುನಂದಾ ಮುಂದೆ ರಿವೀಲ್ ಮಾಡಿದ್ದಾನೆ. ಭಾಗ್ಯಾಳ ಜೀವನದಲ್ಲಿ ಬಂದ ಕಷ್ಟಗಳಿಗೆ ಆದಿ ಈಗ ಬೆನ್ನೆಲುಬಾಗಿ ನಿಂತಿದ್ದಾನೆ. ಅಮ್ಮನ ಎದುರು ಧೈರ್ಯವಾಗಿ ನಿಂತು ತನ್ನ ಪ್ರೀತಿಯನ್ನು ಸಾರಿದ್ದಾನೆ. ಕುಸುಮಾ (Kusuma), ಆದಿ ಎಲ್ಲರೂ ಸೇರಿಕೊಂಡು ಆದಿ ಹಾಗೂ ಭಾಗ್ಯಳ (Bhagya) ಮದುವೆ ಮಾಡಬೇಕು ಎಂದು ಪಣ ತೊಟ್ಟಿದ್ದಾರೆ. ಆದರೆ ಸುನಂದಾ ಮಾತ್ರ ಇದನ್ನು ಒಪ್ಪುತ್ತಿಲ್ಲ.
ಭಾಗ್ಯ ಅವರಿಗೋಸ್ಕರವೇ ಬದುಕುತ್ತೀನಿ
ಆದಿ ಸುನಂದಾ ಬಳಿ ಪ್ರತಿ ದಿನ ಪ್ರತಿ ಕ್ಷಣ ಭಾಗ್ಯ ಅವರಿಗೋಸ್ಕರವೇ ಬದುಕುತ್ತೀನಿ. ನನ್ನ ಮಾತಿನ ಅರ್ಥ ನಾನು ಭಾಗ್ಯ ಅವರನ್ನ ಮನಸಾರೆ ಪ್ರೀತಿಸುತ್ತಿದ್ದೇನೆ. ಎಂತದ್ದೇ ಸಂದರ್ಭ ಬಂದರೂ ನಾನು ಅವರನ್ನು ಬಿಟ್ಟು ಹೋಗೋ ಮಾತೇ ಇಲ್ಲ. ಭಾಗ್ಯ ಅವರ ಕಷ್ಟ ಸುಖದಲ್ಲಿ ನಾನು ಜೊತೆ ಆಗಿರ್ತೀನಿ. ಅವರ ನೋವಿಗೆ ನಾನು ಮದ್ದು ಆಗಿರ್ತೀನಿ.
ಇದನ್ನೂ ಓದಿ: Karna Kannada Serial: ಮಾಡದ ತಪ್ಪಿಗೆ ಜೈಲು ಪಾಲಾಗ್ತಾನಾ ಕರ್ಣ? ನಿತ್ಯಾ ಶಾಕ್!
ಇದು ನನ್ನ ಮಾತುಗಳು ಅಷ್ಟೇ ಅಲ್ಲ. ಭಾಗ್ಯ ಅವರ ಮಾತುಗಳು ಕೂಡ. ಏಕೆ ಅಂದರೆ ಭಾಗ್ಯ ಅವರ ಮನಸ್ಸಿನಲ್ಲಿಯೂ ನಾನು ಇದ್ದೀನಿ ಎಂದು ಸುನಂದಾ ಬಳಿ ನೇರವಾಗಿ ಹೇಳಿದ್ದಾನೆ ಆದಿ.
ಆದಿಯ ಈ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರಾ?
ಕುಸುಮಾ, ಆದಿ ಎಲ್ಲರೂ ಸೇರಿಕೊಂಡು ಆದಿ ಹಾಗೂ ಭಾಗ್ಯಳ ಮದುವೆ ಮಾಡಬೇಕು ಎಂದು ಪಣ ತೊಟ್ಟಿದ್ದಾರೆ. ಆದರೆ ಸುನಂದಾ ಮಾತ್ರ ಇದನ್ನು ಒಪ್ಪುತ್ತಿಲ್ಲ. ಸುನಂದಾ ಅವರಿಗೆ ಆದಿಯ ಈ ಮಾತುಗಳು ಕೇಳಿ ತಲೆ ಸುತ್ತು ಬಂದಂತಾಗಿದೆ.ಭಾಗ್ಯಾಳ ಕಷ್ಟಗಳನ್ನು ಹತ್ತಿರದಿಂದ ಕಂಡಿರುವ ಆದಿ, ಈಗ ಆಕೆಗೆ ಗೌರವದ ಬದುಕು ನೀಡಲು ಮುಂದಾಗಿದ್ದಾನೆ. ಸುನಂದಾ ಈಗ ಆದಿಯ ಈ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರಾ? ಅನ್ನೋದೇ ವೀಕ್ಷಕರಿಗೆ ಇರೋ ಕುತೂಹಲ.
ತಾಂಡವ್ ಬದಲಾದ ಎಂದರೆ ತಾಯಿ ಸುನಂದಾ ಕೂಡ ನಂಬುತ್ತಿಲ್ಲ. ಆದಿಗೂ ಕೂಡ ತಾಂಡವ್‌ನ ಈ ನಡೆ ಆಶ್ಚರ್ಯ ತಂದಿದೆ. ಶ್ರೇಷ್ಠ ಕೂಡ ಒಂದಿಷ್ಟು ನಾಟಕ ಮಾಡಿದಳು, ಭಾಗ್ಯಗೆ ಬಾಯಿಗೆ ಬಂದಹಾಗೆ ಮಾತನಾಡಿದಳು. ಆದರೂ ಕೂಡ ತಾಂಡವ್ ಮಾತ್ರ ಎಲ್ಲಿಯೂ ಭಾಗ್ಯಳನ್ನು ಬಿಟ್ಟುಕೊಡಲೇ ಇಲ್ಲ.
ಅತ್ತ ತಾಂಡವ್, ಭಾಗ್ಯ ಬೇಕು ಎಂದು ಪರಿತಪಿಸುತ್ತಿದ್ದಾನೆ. ಅಪ್ಪ-ಅಮ್ಮ ಮೊದಲಿನ ಥರ ಇರಲಿ ಎಂದು ತನ್ವಿ ಬಯಸುತ್ತಿದ್ದಾಳೆ. ಸುನಂದಾ ಬಿಟ್ಟು ಉಳಿದವರು ಕೂಡ ಆದಿ-ಭಾಗ್ಯ ಮದುವೆಯಾಗಿ ಚೆನ್ನಾಗಿರಲಿ ಎಂದು ನೋಡುತ್ತಿದ್ದಾರೆ.ಇನ್ನು ಮಗಳು ಹಠ ಮಾಡಿದ ಕೂಡಲೇ ಭಾಗ್ಯಗೆ ತಾಂಡವ್ ಕೊಟ್ಟ ನೋವು ಕಾಡಿದೆ.
ಇದನ್ನೂ ಓದಿ: Amruthadhaare Serial: ಗೌತಮ್ ದಿವಾನ್- ಸುನಿ ಮುಖಾಮುಖಿ; ಸಖತ್ ಗಾಬರಿ ಆದ ಜೇಡಿಯ ಪೈಲ್ವಾನ್!
ತಾಂಡವ್‌ನನ್ನು ಮನೆಯೊಳಗಡೆ ಬರೋಕೆ ಓಕೆ ಎಂದು ಮಗಳಿಗೋಸ್ಕರ ಹೇಳಿದ್ದಾಳೆ. ಸುನಂದಾ ಈ ಬಗ್ಗೆ ಭಾಗ್ಯಗೆ ಪ್ರಶ್ನೆ ಇಟ್ಟರೂ ನನ್ನ ಮನಸ್ಸಲ್ಲಿ ತಾಂಡವ್ ಇಲ್ಲ ಎಂದು ನೇರವಾಗಿ ಹೇಳಿದ್ದಾಳೆ ಭಾಗ್ಯ.