ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bhagyalakshmi Kannada Serial: 'ಭಾಗ್ಯಲಕ್ಷ್ಮೀ' ಮುಕ್ತಾಯ ಆಗುತ್ತಾ? ನಟಿ ಸುಷ್ಮಾ ರಾವ್​ ಪೋಸ್ಟ್‌ನಲ್ಲಿ ಇರೋದೇನು?

Colors Kannada: ಕಲರ್ಸ್ ಕನ್ನಡದ ಜನಪ್ರಿಯ ಮೆಗಾ ಧಾರಾವಾಹಿ ಭಾಗ್ಯಲಕ್ಷ್ಮೀ . ಇದೀಗ ಸೀರಿಯಲ್‌ ಅಂತಿಮ ಘಟ್ಟ ತಲುಪಿದೆ ಎಂಬ ಉಹಾಪೋಹಗಳು ಇತ್ತು. ಇದೀಗ ಸ್ವತಃ ಸುಷ್ಮಾ ಅವರೇ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಸದ್ಯ ಸೀರಿಯಲ್​ ಮುಗಿಯಲ್ಲ ಎನ್ನುವ ಪೋಸ್ಟ್​ ಸುಷ್ಮಾ ಅವರ ಇನ್​ಸ್ಟಾಗ್ರಾಮ್​ನಲ್ಲಿ ಅಭಿಮಾನಿಯೊಬ್ಬರು ಶೇರ್​ ಮಾಡಿದ್ದಾರೆ. 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಭಾಗ್ಯ ಕಂಡ್ರೆ ಉರಿದು ಬೀಳುತ್ತಿದ್ದ ತಾಂಡವ್‌ಗೆ (Thandav) ಕೊನೆಗೂ ಬುದ್ದಿ ಬಂದಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ

ಕಲರ್ಸ್ ಕನ್ನಡದ (Colors Kannada) ಜನಪ್ರಿಯ ಮೆಗಾ ಧಾರಾವಾಹಿ ಭಾಗ್ಯಲಕ್ಷ್ಮೀ (bhagyalakshmi serial kannada) . ಇದೀಗ ಸೀರಿಯಲ್‌ ಅಂತಿಮ ಘಟ್ಟ ತಲುಪಿದೆ ಎಂಬ ಉಹಾಪೋಹಗಳು ಇತ್ತು. ಇದೀಗ ಸ್ವತಃ ಸುಷ್ಮಾ (Sushma) ಅವರೇ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಸದ್ಯ ಸೀರಿಯಲ್​ ಮುಗಿಯಲ್ಲ ಎನ್ನುವ ಪೋಸ್ಟ್​ ಸುಷ್ಮಾ ಅವರ ಇನ್​ಸ್ಟಾಗ್ರಾಮ್​ನಲ್ಲಿ ಅಭಿಮಾನಿಯೊಬ್ಬರು ಶೇರ್​ ಮಾಡಿದ್ದಾರೆ. 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ಭಾಗ್ಯ ಕಂಡ್ರೆ ಉರಿದು ಬೀಳುತ್ತಿದ್ದ ತಾಂಡವ್‌ಗೆ (Thandav) ಕೊನೆಗೂ ಬುದ್ದಿ ಬಂದಿದೆ.

ತಾಂಡವ್​ ಇದೀಗ ಪಶ್ಚಾತ್ತಾಪ

ತಾಂಡವ್​ ಬದಲಾಗಿದ್ದಾನೆ. ಭಾಗ್ಯಳ ಕಾಲಿಗೆ ಬಿದ್ದು ಗೋಳೋ ಎನ್ನುತ್ತಿದ್ದಾನೆ. ಆದರೆ ಭಾಗ್ಯ ಮಾತ್ರ ಅವನನ್ನು ಕ್ಷಮಿಸಲು ರೆಡಿ ಇಲ್ಲ. ವಿಲನ್​ ಆಗಿರೋ ತಾಂಡವ್​ ಇದೀಗ ಪಶ್ಚಾತ್ತಾಪದಲ್ಲಿ ಬೇಯುತ್ತಿದ್ದಾನೆ, ಪತ್ನಿ ಭಾಗ್ಯ ಒಂದು ಸಲ ಕ್ಷಮಿಸಿದರೆ ಸಾಕು, ಆಕೆಯ ತಂಟೆಗೆ ಬರುವುದಿಲ್ಲ ಎನ್ನುತ್ತಿದ್ದಾನೆ. ಸದ್ಯ ಸೀರಿಯಲ್​ ಮುಗಿಯಲ್ಲ ಎನ್ನುವ ಪೋಸ್ಟ್​ ಸುಷ್ಮಾ ಅವರ ಇನ್​ಸ್ಟಾಗ್ರಾಮ್​ನಲ್ಲಿ ಅಭಿಮಾನಿಯೊಬ್ಬರು ಶೇರ್​ ಮಾಡಿದ್ದಾರೆ.

ಇದನ್ನೂ ಓದಿ: Lahari Velu Son Marriage: ಲಹರಿ ವೇಲು ಪುತ್ರ ಅದ್ಧೂರಿ ವಿವಾಹ; ಇಲ್ಲಿವೆ ಫೋಟೋಸ್‌

ಸೀರಿಯಲ್​ ಮುಗಿಯಲ್ಲ

“ಹಾಯ್‌ ಎಲ್ಲರಿಗೂ ನಮಸ್ಕಾರ, ಎಲ್ಲಾ ಹೇಗಿದ್ದೀರಾ…ಎಲ್ಲರೂ ಭಾಗ್ಯಲಕ್ಷ್ಮೀ ಸೀರಿಯಲ್‌ ಮುಗೀತಾ ಇದೆ ಅಂತ ಪೋಸ್ಟ್‌ ಅಪ್ಲೋಡ್‌ ಮಾಡಿದ್ದಾರೆ. ಅದು ಸುಳ್ಳು. ಭಾಗ್ಯಲಕ್ಷ್ಮೀ ಸೀರಿಯಲ್‌ ಸದ್ಯ ಮುಗಿಯುತ್ತಾ ಇಲ್ಲ. ಹೀಗಂತ ಸುಷ್ಮಾ ಅವರೇ ಹೇಳಿದ್ದಾರೆ. ಸೀರಿಯಲ್‌ ಮುಗಿಯಲ್ಲ.. ದಯವಿಟ್ಟು ಸುಳ್ಳು ಪೋಸ್ಟ್ ಅಪ್ಲೋಡ್‌ ಮಾಡಬೇಡಿ" ಎಂದು ಸುಷ್ಮಾ ಅವರ ಅಭಿಮಾನಿಯೊಬ್ಬರು ಟ್ಯಾಗ್​ ಮಾಡಿದ್ದು, ಅದಕ್ಕೆ ಖುದ್ದು ಸುಷ್ಮಾ ಕೆ. ರಾವ್​ ಅವರು ಲೈಕ್​ ಮಾಡಿದ್ದಾರೆ.



ಅಲ್ಲಿಗೆ ಈ ಸೀರಿಯಲ್​ ಸದ್ಯ ಮುಗಿಯಲ್ಲ ಎನ್ನುವುದು ತಿಳಿಯುತ್ತದೆ. ಆದಿ ಜೊತೆಗಿನ ಸ್ನೇಹ ನಿಧಾನಕ್ಕೆ ಪ್ರೀತಿಗೆ ತಿರುಗಿದೆ. ಆದಿ ತನ್ನ ಪ್ರೀತಿಯನ್ನ ಭಾಗ್ಯ ಮುಂದೆ ಹೇಳಿಕೊಂಡಿದ್ದಾನೆ. ತಾಂಡವ್‌ ನಿಜಕ್ಕೂ ಬದಲಾಗಿದ್ದಾನಾ? ಭಾಗ್ಯಳ ಒಲವು ಆದಿ ಕಡೆಗಾ? ಇಲ್ಲ ತಾಂಡವ್‌ ಕಡೆಗ? ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗುತ್ತೆ. ಈ ಪೋಸ್ಟ್‌ ಪ್ರಕಾರ 'ಭಾಗ್ಯಲಕ್ಷ್ಮೀ' ಧಾರಾವಾಹಿ ಮುಕ್ತಾಯ ಸದ್ಯಕ್ಕಂತೂ ಇಲ್ಲ.

ಇದನ್ನೂ ಓದಿ: Bhagyalakshmi Kannada Serial: ಭಾಗ್ಯ ಲಕ್ಷ್ಮೀ ಸೀರಿಯಲ್‌ ಅಂತ್ಯ? ಆದಿ-ಭಾಗ್ಯ ಒಂದಾದ್ರಾ?

‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಸುಷ್ಮಾ ಕೆ ರಾವ್, ಪದ್ಮಜಾ ರಾವ್, ಹರೀಶ್ ರಾಜ್, ಮುಖ್ಯಮಂತ್ರಿ ಚಂದ್ರು, ಸುದರ್ಶನ್ ರಂಗಪ್ರಸಾದ್, ಕಾವ್ಯ ಗೌಡ, ಸುಕೃತಾ ನಾಗ್, ಭವ್ಯ ಶ್ರೀ ಮುಂತಾದವರು ಅಭಿನಯಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಸಂಜೆ 7 ಕ್ಕೆ ಭಾಗ್ಯಲಕ್ಷ್ಮೀ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author