ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bhagyalakshmi Serial: ಭಾಗ್ಯ ಪ್ರಾಣಕ್ಕೆ ಅಪಾಯ; ತಾಂಡವ್‌ ಕೆನ್ನೆಗೆ ಬಾರಿಸಿದ ಆದಿ!

Bhagyalakshmi Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಯಾರ ಜೊತೆ ಬದುಕುತ್ತಾಳೆ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಇದರ ಜೊತೆಗೆ ಶ್ರೇಷ್ಠಾ ಕುತಂತ್ರವೂ ಮುಂದುವರಿಯುತ್ತಲೇ ಇದೆ. ತಾಂಡವ್‌ ತನ್ನ ಜೊತೆಗಿಲ್ಲ ಎಂದು ಶ್ರೇಷ್ಠ ಭಾಗ್ಯಳನ್ನು ಕೊಲ್ಲಲು ನೋಡಿದ್ದಳು. ಆದರೆ ಅದೇ ಸಮಯಕ್ಕೆ ಆದಿ ಬಂದು ಭಾಗ್ಯಳನ್ನು ರಕ್ಷಣೆ ಮಾಡಿದ್ದಾನೆ. ಆದರೀಗ ಕಥೆಗೆ ಮತ್ತೊಂದು ತಿರುವು ಪಡೆದುಕೊಂಡಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ(Colors Kannada) ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ( Bhagyalakshmi Serial) ಧಾರಾವಾಹಿಯಲ್ಲಿ ಭಾಗ್ಯ ಯಾರ ಜೊತೆ ಬದುಕುತ್ತಾಳೆ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಇದರ ಜೊತೆಗೆ ಶ್ರೇಷ್ಠಾ (Shreshtha) ಕುತಂತ್ರವೂ ಮುಂದುವರಿಯುತ್ತಲೇ ಇದೆ. ತಾಂಡವ್‌ ತನ್ನ ಜೊತೆಗಿಲ್ಲ ಎಂದು ಶ್ರೇಷ್ಠ ಭಾಗ್ಯಳನ್ನು ಕೊಲ್ಲಲು ನೋಡಿದ್ದಳು. ಆದರೆ ಅದೇ ಸಮಯಕ್ಕೆ ಆದಿ ಬಂದು ಭಾಗ್ಯಳನ್ನು ರಕ್ಷಣೆ ಮಾಡಿದ್ದಾನೆ. ಆದರೀಗ ಕಥೆಗೆ ಮತ್ತೊಂದು ತಿರುವು ಪಡೆದುಕೊಂಡಿದೆ. ಈ ಆಕ್ಸಿಡೆಂಟ್‌ನಲ್ಲಿ ತಾಂಡವ್‌ (Thandav) ಕೈವಾಡ ಇದೆ ಅಂತ ಆದಿ ಗರಂ ಆಗಿದ್ದಾನೆ. ತಾಂಡವ್‌ ಕೆನ್ನೆಗೂ ಬಾರಿಸಿದ್ದಾನೆ.

ಭಾಗ್ಯಗೆ ಪ್ರಾಣಾಪಯ ತಂದಿಟ್ಟಿದ್ದಾಳೆ ಶ್ರೇಷ್ಠಾ

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಗೆ ಪ್ರಾಣಾಪಯ ತಂದಿಟ್ಟಿದ್ದಾಳೆ ಶ್ರೇಷ್ಠಾ. ತಾಂಡವ್‌ ತನ್ನ ಜೊತೆಗಿಲ್ಲ ಎಂದು ಶ್ರೇಷ್ಠ ಅವಳನ್ನು ಕೊಲ್ಲಲು ನೋಡುತ್ತಿದ್ದಾಳೆ. ತಾಂಡವ್‌ ಬದಲಾಗಿದ್ದಾನೆ, ಸೂರ್ಯವಂಶಿ ಮನೆಯನ್ನು ಅವನು ಭಾಗ್ಯ ಹೆಸರಿಗೆ ಬರೆದಿದ್ದಾನೆ. ಎಷ್ಟೇ ಪರೀಕ್ಷೆ ಮಾಡಿದರೂ ಕೂಡ ಅವನು ಮಾತ್ರ ಕುಸುಮಾ ಕಣ್ಣಲ್ಲಿ ಸೋತಿಲ್ಲ.

ಇದನ್ನೂ ಓದಿ: Amruthadhaare Serial: ಗೌತಮ್ ಮನಸ್ಸನ್ನು ಘಾಸಿಗೊಳಿಸಿದೆ ಜೈದೇವ್ ಹಾಕಿರೋ ಷರತ್ತು!

ಆದರೂ ಕೂಡ ಯಾರಿಗೂ ಅವನ ಮೇಲೆ ನಂಬಿಕೆ ಇಲ್ಲದಂತಾಗಿದೆ. ಯಾರು ಎಷ್ಟೇ ಟೀಕೆ ಮಾಡಿದರೂ, ವ್ಯಂಗ್ಯ ಮಾಡಿದರೂ ಕೂಡ ಸುನಂದಾ, ತನ್ವಿ ಮಾತ್ರ ತಾಂಡವ್‌ನನ್ನು ಬಿಟ್ಟುಕೊಡ್ತಿಲ್ಲ. ಈ ಮಧ್ಯೆ ಮಗಳ ನಂಬಿಕೆ ಉಳಿಸಿಕೊಳ್ಳಬೇಕು, ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಬೇಕು, ಶಿಕ್ಷೆ ಆಗಬೇಕು ಎಂದು ತಾಂಡವ್‌ ಮನಸ್ಸಿನಲ್ಲಿಯೇ ಕೊರಗುತ್ತಿದ್ದಾನೆ.

ಆದರೆ ಅತ್ತ ಶ್ರೇಷ್ಠಾ ತನ್ನ ಕೆಲಸ ಶುರು ಮಾಡಿದ್ದಾಳೆ. ಭಾಗ್ಯಳನ್ನು ಕೊಲ್ಲಲು ಸಂಚು ರೂಪಿಸಿದ್ದಾಳೆ ಲಾರಿಯೊಂದು ಗುದ್ದಲು ಬಂದಿದೆ. ಅದೇ ಸಮಯಕ್ಕೆ ಆದಿ ರಕ್ಷಣೆ ಮಾಡಿದ್ದಾನೆ.



ತಾಂಡವ್‌ ಕೆನ್ನೆಗೆ ಬಾರಿಸಿದ ಆದಿ

ಆದರೀಗ ಶ್ರೇಷ್ಠಾ ಜೊತೆಗೆ ತಾಂಡವ್‌ ಕೂಡ ಸೇರಿಕೊಂಡು ಅಪಘಾತ ಮಾಡಲು ಸಂಚು ರೂಪಿಸಿದ್ದ ಎಂಬುದು ಆದಿ ವಾದ. ಭಾಗ್ಯ ಮನೆಗೆ ಬಂದ ಆದಿ, ತಾಂಡವ್‌ ಕೆನ್ನೆಗೆ ಬಾರಿಸಿದ್ದಾನೆ. ಶ್ರೇಷ್ಠಾ ನೀನು ಸೇರಿಕೊಂಡು ಭಾಗ್ಯಳನ್ನು ಮುಗಿಸಿಲು ಪ್ಲ್ಯಾನ್‌ ಮಾಡಿದ್ದೀಯಾ ಅಂತ ಆದಿ, ತಾಂಡವ್‌ ಕೆನ್ನೆಗೆ ಬಾರಿಸಿದ್ದಾನೆ. ಆದರೆ ತಾಂಡವ್‌ ಶ್ರೇಷ್ಠಾಗೆ ಸಹಾಯ ಮಾಡಿದ್ದಾನಾ? ಅಥವಾ ಆದಿಯೇ ಈ ರೀತಿ ಅಂದುಕೊಂಡಿದ್ದಾನಾ? ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಆದರೆ ಈ ವಿಚಾರ ಕೇಳಿ ಭಾಗ್ಯ ಸಖತ್‌ ಶಾಕ್‌ ಆಗಿದ್ದಾಳೆ.

ಈಗಾಗಲೇ ಭಾಗ್ಯ ಅಂತೂ ಆದಿ ಮೇಲಿನ ಪ್ರೀತಿ ಬಗ್ಗೆ ವ್ಯಕ್ತಪಡಿಸಿದ್ದಾಳೆ. ಹೀಗಿರುವಾಗ ತಾಂಡವ್‌ ಹಾಗೂ ಶ್ರೇಷ್ಠಾ ಗಲಾಟೆಯೂ ಮಿತಿ ಮೀರಿದೆ. ಇದರ ನಡುವೆಯೇ, ಜ್ಯೋತಿಷಿಯೊಬ್ಬ ಕಣಿ ನುಡಿದಿದ್ದಾರೆ.

ಇದನ್ನೂ ಓದಿ: Rashmika Vijay Reception: ರಶ್ಮಿಕಾ, ವಿಜಯ್ ಆರತಕ್ಷತೆಯಲ್ಲಿ ಡಿಕೆಶಿ!

ಬರುವ ಹುಣ್ಣಿಮೆಯ ಒಳಗೆ ಭಾಗ್ಯಳ ಕುತ್ತಿಗೆಗೆ ತಾಳಿ ಬೀಳಬೇಕು. ಇಲ್ಲದಿದ್ದರೆ ತಾಳಿಭಾಗ್ಯ ಇಲ್ಲ ಎಂದಿದ್ದಾನೆ. ಹಾಗಿದ್ದರೆ ಹುಣ್ಣಿಮೆಯ ಒಳಗೆ ಭಾಗ್ಯಳಿಗೆ ತಾಳಿ ಕಟ್ಟುವವರು ಆದಿನೋ, ತಾಂಡವ್​ನೋ ಎನ್ನುವ ಕುತೂಹಲ ಸದ್ಯಕ್ಕಿದೆ.

Yashaswi Devadiga

View all posts by this author