Bharjari Bachelors: ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಪಹಲ್ಗಾಮ್ ಘೋರ ದುರಂತ ಮರುಸೃಷ್ಟಿ: ಕಣ್ಣೀರಿಟ್ಟ ವೀಕ್ಷಕರು
ಪ್ರತಿವಾರ ಒಂದಲ್ಲ ಒಂದು ವಿಭಿನ್ನ ಕಾನ್ಪೆಪ್ಟ್ನೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿರುವ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಶೋನಲ್ಲಿ ಪಹಲ್ಗಾಮ್ನ ಭಯೋತ್ಪಾದಕ ದಾಳಿಯ ಘೋರ ದುರಂತವನ್ನು ಮರುಸೃಷ್ಟಿಸಿದ್ದು ಎಲ್ಲರ ಗಮನ ಸೆಳೆದಿದೆ. ಇದನ್ನು ಪ್ರೇಕ್ಷಕರು ಕೂಡ ಕಣ್ಣೀರಿಟ್ಟಿದ್ದಾರೆ.

Bharjari bachelors

ಝೀ ಕನ್ನಡದಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 (bharjari bachelors 2) ಪ್ರಸಾರವಾಗುತ್ತಿದೆ. ಈ ಶೋಗೆ ಅಮೋಘ ರೆಸ್ಪಾನ್ಸ್ ಕೇಳಿಬರುತ್ತಿದೆ. ಹತ್ತು ಬ್ಯಾಚುಲರ್ಸ್ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ಪ್ರತಿವಾರ ಒಂದಲ್ಲ ಒಂದು ವಿಭಿನ್ನ ಕಾನ್ಪೆಪ್ಟ್ನೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿರುವ ಈ ಶೋನಲ್ಲಿ ಪಹಲ್ಗಾಮ್ನ ಭಯೋತ್ಪಾದಕ ದಾಳಿಯ ಘೋರ ದುರಂತವನ್ನು ಮರುಸೃಷ್ಟಿಸಿದ್ದು ಎಲ್ಲರ ಗಮನ ಸೆಳೆದಿದೆ. ಇದನ್ನು ಪ್ರೇಕ್ಷಕರು ಕೂಡ ಕಣ್ಣೀರಿಟ್ಟಿದ್ದಾರೆ.
ಹಿಂದಿನ ವಾರ ಭರ್ಜರಿ ಬ್ಯಾಚುಲರ್ಸ್ 2 ಶೋನಲ್ಲಿ ಫ್ಯಾಮಿಲಿ ರೌಂಡ್ ನಡೆದಿತ್ತು. ಈ ಬಾರಿ ಮನರಂಜನಾ ಸುತ್ತು (Entertainment Round) ನಡೆಸಲಾಗಿದೆ. ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ದರ್ಶನ್ ಹಾಗೂ ಅಪೇಕ್ಷಾ ಜೋಡಿ ಮಾಡಿದ ಒಂದು ಪರ್ಫಾರ್ಮೆನ್ಸ್ ನೋಡಿ ಎಲ್ಲರೂ ಭಾವುಕರಾಗಿದ್ದಾರೆ.
ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಗೆ ಕನ್ನಡಿಗರು ಸೇರಿ 26 ಜನ ಬಲಿಯಾಗಿದ್ದಾರೆ. ಹೊಸದಾಗಿ ಮದುವೆಯಾಗಿದ್ದ ಜೋಡಿ ಹನಿಮೂನ್‌ಗೆಂದು ಪಹಲ್ಗಾಮ್‌ಗೆ ಬಂದಿದ್ದರು. ಹೆಂಡತಿಯ ಕಣ್ಣ ಮುಂದೆಯೇ ಗಂಡನನ್ನು ಗುಂಡಿಕ್ಕಿ ಉಗ್ರರು ಕೊಂದಿದ್ದರು. ಗಂಡನ ಮೃತದೇಹದ ಮುಂದೆ ದಿಕ್ಕೇ ತೋಚದ ಸ್ಥಿತಿಯಲ್ಲಿ ಕೂತಿದ್ದ ಹೆಂಡತಿಯ ನೋವು ಯಾರಿಗೂ ಬೇಡ. ಈ ದೃಶ್ಯವನ್ನು ಕಂಡು ಅದೆಷ್ಟೋ ಹೃದಯಗಳ ಮನ ಕಲಕಿತು. ಇದೀಗ ಭರ್ಜರಿ ಬ್ಯಾಚುಲರ್ಸ್ʼನಲ್ಲಿ ಪತಿಯನ್ನ ಕಳೆದುಕೊಂಡು ಆ ಮಹಿಳೆಯ ಸ್ಥಿತಿ ಹೇಗಿತ್ತು ಎಂದು ದರ್ಶನ್ ಮತ್ತು ಅಪೇಕ್ಷಾ ಪರ್ಫಾಮೆನ್ಸ್ ಮಾಡಿ ತೋರಿಸಿದ್ದಾರೆ.
ಈ ಪರ್ಫಾರ್ಮೆನ್ಸ್‌ನ ಬಳಿಕ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಒಂದು ನಿಮಿಷ ಮೇಣದ ಬತ್ತಿ ಹಿಡಿದು ಮೌನಾಚರಣೆ ಮಾಡಿ, ದುರಂತದಲ್ಲಿ ಮೃತರಾದವರಿಗೆ ಗೌರವ ಸಲ್ಲಿಸಿದರು. ಈ ಭಾವನಾತ್ಮಕ ಕ್ಷಣವು ಶೋನ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿತು, ಮತ್ತು ವೀಕ್ಷಕರಿಗೆ ಈ ಘಟನೆಯ ತೀವ್ರತೆಯನ್ನು ಮತ್ತೊಮ್ಮೆ ನೆನಪಿಸಿತು.
ಈ ಘೋರ ಘಟನೆ ಬಗ್ಗೆ ‘‘ತುಂಬಾ ನೋವಿನ ಘಟನೆ, ಇದು ಮತ್ತೆ ಆಗಬಾರದು’’ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ. ಮೂರು ಗಂಟೆಯ ಭರ್ಜರಿ ಮನರಂಜನೆಯ ಮಹಾಸಂಚಿಕೆಯಲ್ಲಿ ಬ್ಯಾಚುಲರ್ಸ್ ಮತ್ತು ಏಂಜಲ್ಸ್ ಡ್ಯಾನ್ಸ್, ಕಾಮಿಡಿ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಇಷ್ಟ ಪಟ್ಟು ಮದುವೆ ಆಗಿದ್ದೆ, ಸ್ಟವ್ ಕೂಡ ಬಿಡದೆ ಎಲ್ಲ ಎತ್ಕೊಂಡೋದ್ಳು: ನೋವು ತೋಡಿಕೊಂಡ ಶ್ರೀಧರ್