ಇಷ್ಟ ಪಟ್ಟು ಮದುವೆ ಆಗಿದ್ದೆ, ಸ್ಟವ್ ಕೂಡ ಬಿಡದೆ ಎಲ್ಲ ಎತ್ಕೊಂಡೋದ್ಳು: ನೋವು ತೋಡಿಕೊಂಡ ಶ್ರೀಧರ್
ಕನ್ನಡಡ ಕಿರುತೆರೆಯ ಪಾರು, ವಧು ಸೀರಿಯಲ್ ನಟ ಶ್ರೀಧರ್ ಬೆಂಗಳೂರಿನ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ತಮ್ಮ ಜೀವನದ ಕಹಿ ಸತ್ಯವನ್ನು ವಿಶ್ವವಾಣಿ ಜೊತೆ ತೆರೆದಿಟ್ಟಿದ್ದಾರೆ. ಮುಖ್ಯವಾಗಿ ತಮ್ಮ ಹೆಂಡತಿ ಬಿಟ್ಟುಹೋದ ಬಗ್ಗೆ ಮಾತನಾಡಿದ್ದಾರೆ.

Paaru & Vadhu Serial Actor Sridhar

ಕನ್ನಡಡ ಕಿರುತೆರೆಯ ಪಾರು, ವಧು ಸೀರಿಯಲ್ ನಟ ಶ್ರೀಧರ್ (Sridhara ) ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ವಧು ಸೀರಿಯಲ್‌ನಲ್ಲಿ ನಾಯಕಿ ಡಿವೋರ್ಸ್ ಲಾಯರ್ ವಧು ಚಿಕ್ಕಪ್ಪನ ಪಾತ್ರದಲ್ಲಿ ಶ್ರೀಧರ್ ಅಭಿನಯಿಸುತ್ತಿದ್ದರು. ಆದರೆ, ದಿಢೀರ್ ಎಂದು ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡಿರುವ ಫೋಟೋ ಕಳೆದ ಕೆಲವು ದಿನಗಳಿಂದ ವೈರಲ್ ಆಗುತ್ತಿದೆ. ಇನ್‌ಫೆಕ್ಷನ್‌ನಿಂದಾಗಿ ಶ್ರೀಧರ್ ತೀವ್ರ ಅಸ್ವಸ್ಥರಾಗಿದ್ದಾರೆ. ಸದ್ಯ ನಟನನ್ನು ಅವರ ತಾಯಿ ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಇತ್ತೀಚೆಗಷ್ಟೆ ಆರ್ಥಿಕ ಸಹಾಯಕ್ಕಾಗಿ ಮನವಿ ಕೂಡ ಮಾಡಿದ್ದಾರೆ. ಇದೀಗ ತಮ್ಮ ಜೀವನದ ಕಹಿ ಸತ್ಯವನ್ನು ವಿಶ್ವವಾಣಿ ಜೊತೆ ತೆರೆದಿಟ್ಟಿದ್ದಾರೆ. ಮುಖ್ಯವಾಗಿ ತಮ್ಮ ಹೆಂಡತಿ ಬಿಟ್ಟುಹೋದ ಬಗ್ಗೆ ಮಾತನಾಡಿದ್ದಾರೆ. ‘‘ನನ್ಗೆ ಮದುವೆ ಆಗಿ 11 ವರ್ಷ ಆಗಿತ್ತು, ಅವಳು ಇಂಡಿಪೆಂಡೆಂಟ್ ಲೈಫ್ ಬೇಕು ಅಂತ ಹೇಳುತ್ತಿದ್ದಳು. ಮಗನಿಗೆ 5 ವರ್ಷ ಆಗುವ ತನಕ ಕಾದು ನನ್ನ ಬಿಟ್ಟು ಹೋದ್ಳು. ಕೋವಿಡ್ ಟೈಮ್ನಲ್ಲಿ ಸ್ವಲ್ಪ ಮಾತುಕತೆ ಆಗಿತ್ತು. ನನ್ನ ಮೊಬೈಲ್ನಲ್ಲಿ ಮಗ ಆನ್ಲೈನ್ ಕ್ಲಾಸ್ ಕೇಳ್ತಿದ್ದ. ನಾನು ಹೋಗೇಕು.. ನಿನ್ನ ಮೊಬೈಲ್ ಅವನಿಗೆ ಕೊಡು ಅಂತ ಹೇಳ್ದೆ. ಅದಕ್ಕೆ ಅವ್ಳು ಆಗಲ್ಲ.. ನನ್ಗೆ ಕೆಲಸ ಮುಖ್ಯ, ನಾನು ಕೆಲಸಕ್ಕೆ ಹೋಗ್ಬೇಕು. ಅವನ ಶಿಕ್ಷಣ ಬೇಕಿದ್ರೆ ಹಾಳಾಗಿ ಹೋಗ್ಲಿ ಅಂತ ಹೇಳಿದಳು’’.
‘‘ಅವಳು ಆರೀತಿ ಹೇಳಿದ್ದು ನನಗೆ ಕೋಪಬಂತು. ನಾನು ಸ್ವಲ್ಪ ಜೋರಿನಲ್ಲಿ ಮಾತನಾಡಿದೆ. ಅದಕ್ಕೆ ಅವ್ಳು ಯಾಕೋ ಅಷ್ಟು ಜೋರಾಗಿ ಕೂಗ್ತೀಯಾ ಬೋ* ಮ*ನೆ ಅಂತ ಹೇಳಿದ್ಳು. ನನ್ನ ಲೈಫ್ನಲ್ಲಿ ಅಂತ ಹೆಂಗಸನ್ನು ನೋಡೇ ಇಲ್ಲ. ನಂಗೆ ಅವ್ಳು ಊಟ ಕೂಡ ಹಾಕಿಲ್ಲ. ನನ್ನ ದುಡ್ಡಲ್ಲಿ ಜಾಗ ಎಲ್ಲ ತೆಗೊಂಡು ಅದನ್ನ ನಿನ್ನ ಹೆಸರಿಗೇ ಮಾಡ್ತೇನೆ ಅಂತ ಹೇಳಿ ಅವಳ ಅಪ್ಪನ ಹೆಸರಿಗೆ ಮಾಡುದ್ಳು. ಇದೆಲ್ಲ ಪಕ್ಕ ಪ್ಲ್ಯಾನ್ ಮಾಡಿ ಮಾಡಿದ್ದಾಳೆ. ನಾನು ಶೂಟಿಂಗ್ ಹೋಗಿದ್ದೆ. ಆಗ ನನ್ನ ಮಗನ ಕರ್ಕೊಂಡು ಗ್ಯಾಸ್ ಸ್ಟವ್ ಕೂಡ ಬಿಡದೆ ಎಲ್ಲ ಎತ್ಕೊಂಡೋದ್ಳು’’ ಎಂದು ಶ್ರೀಧರ್ ಹೇಳಿದ್ದಾರೆ.
‘‘ನಾನೀಗ ರಿಕವರ್ ಆಗುತ್ತಿದ್ದೇನೆ. ನನ್ನ ಜೊತೆ ಧಾರಾವಾಹಿಗಳಲ್ಲಿ ಕೆಲಸ ಮಾಡಿದವರು 2-3 ಸ್ನೇಹಿತರು ಬಂದು ಮಾತನಾಡಿಸಿಕೊಂಡು ಹೋಗಿದ್ದಾರೆ. ಆರ್ಥಿಕ ಸಹಾಯವನ್ನು ಕೂಡ ಮಾಡುತ್ತಿದ್ದಾರೆ. ಆದರೂ ದಿನಕ್ಕೆ 10-12 ಸಾವಿರ ರೂ. ಖರ್ಚಾಗುತ್ತದೆ. ಏನಾದರೂ ಟೆಸ್ಟ್‌ಗಳನ್ನು ಮಾಡಿಸಿದರೆ ಇನ್ನೂ ಬಿಲ್ ಆಗುತ್ತದೆ. ಈಗಾಗಲೇ 3 ಲಕ್ಷ ರೂ. ಖರ್ಚಾಗಿದೆ. ಐಸಿಯು ಅಲ್ಲಿ ಒಂದು ದಿನಕ್ಕೆ 60 ಸಾವಿರ ರೂ. ಬೇಕಂತೆ. ದಯವಿಟ್ಟು ಆ ಹಂತಕ್ಕೆ ಹೋಗದೇ ಇರಲಿ ಎಂದು ನಾನು ಬೇಡಿಕೊಳ್ಳುತ್ತಿದ್ದೇನೆ. ನನ್ನ ತಾಯಿ ಈಗ ನೋಡಿಕೊಳ್ಳುತ್ತಿದ್ದಾರೆ. ನನಗೆ ದಿನದ ಖರ್ಚಿಗೆ ಬೇಕಾದ ಹಣ ಸಿಕ್ಕರೆ ಸಾಕಾಗಿದೆ’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Bhagya Lakshmi Serial: ತಾಂಡವ್-ಶ್ರೇಷ್ಠಾಗೆ ಹಳೆ ಕಂಪನಿಯಲ್ಲೇ ಕೆಲಸ ತೆಗೆಸಿಕೊಟ್ಟ ಭಾಗ್ಯ