ಝೀ ಕನ್ನಡ ವಾಹಿನಿಯ ಮೂಲಕ ಕರ್ನಾಟಕದ ಜನರ ಮನೆಮನಸ್ಸಿಗೆ ತಲುಪಿದ್ದ, ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮದ ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ (Rakesh Poojary) ದಿಢೀರ್ ಸಾವು ಅವರ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸ್ನೇಹಿತನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಮೇ 12 ರ ಬೆಳಗ್ಗಿನ ಜಾವ ಸುಮಾರು 1.30ಕ್ಕೆ ಬಿಪಿ ಲೋ ಆಗಿ ಕುಸಿದು ಬಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ರಾಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮನೆಗೆ ಆಧಾರವಾಗಿದ್ದ ಮಗ ರಾಕೇಶ್ನನ್ನು ಕಳೆದುಕೊಂಡ ದುಃಖದಲ್ಲಿ ಇಡೀ ಕುಟುಂಬವಿದೆ.
ನಟ ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ಅನೇಕ ಕಲಾವಿದರು ಬಂದಿದ್ದರು. ನಟಿ ನಯನ, ಸೂರ್ಯ ಕುಂದಾಪುರ, ದೀಕ್ಷಿತ್, ಪ್ರವೀಣ್, ದೀಪಿಕಾ, ವಾಣಿ, ಉಮೇಶ್ ಕಿನ್ಮಾರ, ಸೂರಜ್, ಜೀ ಮೆಂಟರ್ ವಿಜಯ್ ಶೆಟ್ಟಿ ಸೇರಿದಂತೆ ಝೀ ಕುಟುಂಬದ ಸಾಕಷ್ಟು ಕಲಾವಿದರು ಗೆಳೆಯನ ಅಂತಿಮ ದರ್ಶನ ಪಡೆದುಕೊಂಡರು. ಇದೀಗ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೇದಿಕೆ ಮೇಲೆ ಕೂಡ ರಾಕೇಶ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ.
ಭರ್ಜರಿ ಬ್ಯಾಚುಲರ್ಸ್ ಸೀಸನ್ 1 ಸ್ಪರ್ಧಿಗಳು ಮರಳಿ ಬ್ಯಾಚುಲರ್ಸ್ ವೇದಿಕೆ ಬಂದಿದ್ದು, ಇದರಲ್ಲಿ ಮರೆಯಾದ ಗೆಳೆಯನಿಗೆ ಟ್ರಿಬ್ಯೂಟ್ ಸಲ್ಲಿಸಿದ್ದಾರೆ ಸ್ನೇಹಿತರು. ಲಾಸ್ಯ, ಆಸಿಯಾ ಬೇಗಮ್, ಅಮೂಲ್ಯ, ಯಶಸ್ವಿನಿ, ಸಂಜನಾ, ರಾಘು, ಐಶ್ವರ್ಯಾ, ನವಾಜ್, ಉಮೇಶ್ ಕಿನ್ನಾಳ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಹಾಸ್ಯ ಕಲಾವಿದ, ಮನರಂಜನೆಗೆ ಮತ್ತೊಂದು ಹೆಸರಾಗಿದ್ದ ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿಗೆ ಗೌರವ ಸಲ್ಲಿಸಲಾಗಿದೆ.
ನಟನ ಅಕಾಲಿಕ ಮರಣಕ್ಕೆ ಇಡೀ ಕಿರುತೆರೆ, ಹಿರಿತೆರೆ ಕಲಾವಿದರು ಕಂಬನಿ ಮಿಡಿದಿದ್ದರು. ಹೀಗಾಗಿ ನಟ ರಾಕೇಶ್ ಪೂಜಾರಿ ಅವರ ಫೋಟೋಗೆ ನಮನ ಸಲ್ಲಿಸಿ ಇಡೀ ವೇದಿಕೆ ಕಣ್ಣೀರು ಹಾಕಿದೆ. ಸದ್ಯ ಝೀ ಕನ್ನಡ ಈ ರಿಯೂನಿಯನ್ ಪ್ರೋಮೋವೊಂದನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವೀಕೆಂಡ್ ಬ್ಯಾಚುಲರ್ಸ್ ರಿಯೂನಿಯನ್ ಸಂಚಿಕೆ ಪ್ರಸಾರ ಕಾಣಲಿದೆ.
Aishwarya Shindogi: ಐಶ್ವರ್ಯಾ ಸಿಂಧೋಗಿ ಖರೀದಿಸಿದ ಹೊಸ ಕಾರು ಹೇಗಿದೆ?: ಇದರ ಬೆಲೆ ಎಷ್ಟು ಗೊತ್ತೇ?