ಗೀತಾ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಭವ್ಯ ಗೌಡ (Bhavya Gowda) ಬಿಗ್ ಬಾಸ್ಗೆ ಹೋಗಿ ಬಂದು ತಮ್ಮ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದರು. ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದ ಭವ್ಯ ಫಿನಾಲೆವರೆಗೂ ಬಂದಿದ್ದರು. ಈಗ ಇವರ ಅಭಿಮಾನಿಗಳ ಬಳಗ ದೊಡ್ಡದಾಗಿದೆ. ಬಿಗ್ ಬಾಸ್ ಮುಗಿದ ಬಳಿಕ ಭವ್ಯ ಕಿರುತೆರೆಯಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ. ಯಾವುದೇ ಸೀರಿಯಲ್ ಅಥವಾ ಸಿನಿಮಾ ಒಪ್ಪಿಕೊಂಡ ಬಗ್ಗೆಯೂ ಸುದ್ದಿಯಿಲ್ಲ.
ಆದರೆ, ಸೋಷಿಯಲ್ ಮೀಡಿಯಾದಲ್ಲಿ ಭವ್ಯ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಮೊನ್ನೆಯಷ್ಟೆ ಈವೆಂಟ್ ಒಂದರಲ್ಲಿ ಪ್ರಭುದೇವ ಅವರನ್ನು ಭೇಟಿ ಆಗಿ ಫೋಟೋ ಕ್ಲಿಕ್ಕಿಸಿಗೊಂಡಿದ್ದರು. ಇತ್ತೀಚೆಗಷ್ಟೆ ಇವರು ರಂಜಿತ್ ಅವತ ಎಂಗೇಜ್ಮೆಂಟ್ಗೆ ತೆರಳಿ ಮಜಾ ಮಾಡಿದ್ದರು. ಬಳಿಕ ಅಪ್ಪು ಹುಟ್ಟುಹಬ್ಬದಂದು ಅನುಷಾ ರೈ ಜೊತೆ ಸಮಾದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. ಭವ್ಯ ಅವರು ಕೆಲ ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಮಾತ್ರ ತುಂಬಾ ಕ್ಲೋಸ್ ಇದ್ದಾರೆ. ಅವರ ಜೊತೆ ಫೋಟೋ ಹಂಚಿಕೊಂಡಿರುತ್ತಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತ ಜೊತೆ ಭವ್ಯ ಈವರೆಗೆ ಒಂದೇ ಒಂದು ಫೋಟೋ ಹಂಚಿಕೊಂಡಿರಲಿಲ್ಲ. ಒಳಗಿದ್ದಾಗ ಕೂಡ ಇವರಿಬ್ಬರು ಅಷ್ಟೊಂದು ಕ್ಲೋಸ್ ಎಂಬಂತೆ ಇರಲಿಲ್ಲ. ಆದರೀಗ ಮೊದಲ ಬಾರಿ ಭವ್ಯ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹನುಮಂತು ಜೊತೆ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಹನುಮಂತನ ಜೊತೆ ಒಟ್ಟು ನಾಲ್ಕು ಫೋಟೋ ಹಂಚಿಕೊಂಡಿರುವ ಭವ್ಯ ‘One with smart ಹನುಮ ನಿನ್ನ ಒಳ್ಳೆತನಕೆ ದೇವರು ಒಳ್ಳೆದೆ ಮಾಡ್ಲಿ’ ಎಂದು ಬರೆದುಕೊಂಡಿದ್ದಾರೆ.
ಭವ್ಯ ಗೌಡ ಸದ್ಯ ಯಾವುದೇ ಸೀರಿಯಲ್ನಲ್ಲಿ ನಟಿಸುತ್ತಿಲ್ಲ. ಸಿನಿಮಾ ಆಫರ್ ಬಂದರೂ ಅದಕ್ಕೆ ಒಪ್ಪಿಗೆ ನೀಡಿದ ಬಗ್ಗೆ ಅಪ್ಡೇಟ್ ಇಲ್ಲ. ಬಿಬಿಕೆ 11ನ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಭವ್ಯ ಇದರಲ್ಲೂ ಇಲ್ಲ. ಹೀಗಾಗಿ ಭವ್ಯ ಗೌಡ ಕೆಲವೇ ದಿನಗಳಲ್ಲಿ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡುವ ಸೂಚನೆ ಇದೆ.
Neha Gowda: ವಿಚಿತ್ರ ಹೆಸರಿಡುವ ಈ ಕಾಲದಲ್ಲಿ ನೇಹಾ ಗೌಡ ತನ್ನ ಮಗಳಿಗೆ ಇಟ್ಟ ಹೆಸರೇನು ನೋಡಿ