Neha Gowda: ವಿಚಿತ್ರ ಹೆಸರಿಡುವ ಈ ಕಾಲದಲ್ಲಿ ನೇಹಾ ಗೌಡ ತನ್ನ ಮಗಳಿಗೆ ಇಟ್ಟ ಹೆಸರೇನು ನೋಡಿ
ನೇಹಾ ಗೌಡ-ಚಂದನ್ ಮನೆಯಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಕನ್ನಡದ ಸ್ಟಾರ್ ದಂಪತಿ ತಮ್ಮ ಮುದ್ದಾದ ಮಗಳಿಗೆ ನಾಮಕರಣ ಮಾಡಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಕನ್ನಡಿಗರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರುವ ನೇಹಾ ಗೌಡ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು.

Neha Gowda and Chandan daughter

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ತಮ್ಮ ಮಗುವಿಗೆ ನಾಮಕರಣ ಮಾಡುವಾಗ ಫ್ಯಾನ್ಸಿ ಹೆಸರನ್ನು ಇಡುತ್ತಾರೆ. ಈ ಹೆಸರನ್ನು ಯಾರೂ ಈವರೆಗೆ ಇಟ್ಟಿರಬಾರದು ಎಂದು ಗೂಗಲ್ನಲ್ಲೋ ಅಥವಾ ಇನ್ಯಾವುದೊ ಮೂಲದಿಂದ ಹುಡುಕಿ ನಾಮಕರಣ ಮಾಡುತ್ತಾರೆ. ಎಲ್ಲೂ ಕೇಳಿರದ ಹೆಸರುಗಳನ್ನು ಇಡುವುದು ಈಗ ಟ್ರೆಂಡಿಂಗ್. ಆದರೆ, ಇವೆಲ್ಲದಕ್ಕೆ ವಿರುದ್ಧ ಎಂಬಂತೆ ಕನ್ನಡ ಕಿರುತೆರೆಯ ಗೊಂಬೆ, ಬಿಗ್ ಬಾಸ್ ಬೆಡಗಿ ನೇಹಾ ಗೌಡ ತನ್ನ ಮಗಳಿಗೆ ವಿಶೇಷವಾದ ಸಾಂಪ್ರದಾಯಿಕವಾದ ಹೆಸರನ್ನು ಇಟ್ಟಿದ್ದಾರೆ.
ನೇಹಾ ಗೌಡ-ಚಂದನ್ ಮನೆಯಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಕನ್ನಡದ ಸ್ಟಾರ್ ದಂಪತಿ ತಮ್ಮ ಮುದ್ದಾದ ಮಗಳಿಗೆ ನಾಮಕರಣ ಮಾಡಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಕನ್ನಡಿಗರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರುವ ನೇಹಾ ಗೌಡ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇದೀಗ ತಮ್ಮ ಪುತ್ರಿಯ ನಾಮಕರಣ ಸಮಾರಂಭವನ್ನ ಅದ್ಧೂರಿಯಾಗಿ ನೆರವೇರಿಸಿದ್ದಾರೆ.
ನೇಹಾ ಗೌಡ ಹಾಗೂ ಚಂದನ್ ಈಗಿನ ಟ್ರೆಂಡ್‌ನ್ನೆಲ್ಲಾ ಪಕ್ಕಕ್ಕಿಟ್ಟು ಮಗಳಿಗೆ ಅರ್ಥಪೂರ್ಣ ಹೆಸರಿನ್ನಿಟ್ಟಿದ್ದಾರೆ. ಜ್ಞಾನ, ಸಂಗೀತ, ಬೌದ್ಧಿಕ ವಿಚಾರಗಳನ್ನು ಪೋಷಿಸುವ ಸಾಕ್ಷಾತ್ ಶಾರದ ಮಾತೆಯ ಹೆಸರನ್ನೇ ಮಗಳಿಗೆ ನಾಮಕರಣ ಮಾಡಿದ್ದಾರೆ ನೇಹಾ ಗೌಡ - ಚಂದನ್ ದಂಪತಿ. ತಮ್ಮ ಮಗಳಿಗೆ ಶಾರದ ಎಂದು ಹೆಸರನ್ನಿಟ್ಟಿದ್ದಾರೆ.
ನಟಿ ನೇಹಾ ಗೌಡ ಕುಟುಂಬಸ್ಥರು ಬೆಂಗಳೂರಿನ ಖಾಸಗಿ ಹಾಲ್ವೊಂದರಲ್ಲಿ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಈ ನಾಮಕರಣ ಶಾಸ್ತ್ರದಲ್ಲಿ ಕಿರುತೆರೆಯ ಕಲಾವಿದರು, ಕುಟುಂಬಸ್ಥರು, ಆತ್ಮೀಯರು ಹಾಗೂ ಸ್ನೇಹಿತರು ಭಾಗವಹಿಸಿದ್ದರು. ತಮ್ಮ ಪುತ್ರಿಗೆ ಶಾರದ ಅಂತ ನಾಮಕರಣ ಮಾಡಿರುವ ನೇಹಾ ಗೌಡ - ಚಂದನ್ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲರೂ ಫ್ಯಾನ್ಸಿ ಹೆಸರಿನ ಹಿಂದೆ ಓಡುತ್ತಿದ್ದಾರೆ. ಆದರೆ, ನೀವು ಮಾತ್ರ ಈ ರೀತಿಯ ಒಳ್ಳೆಯ ಹೆಸರನ್ನು ಇಟ್ಟಿದ್ದೀರಿ. ಇದು ನಿಜಕ್ಕೂ ಖುಷಿಯ ವಿಚಾರ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಇನ್ನಷ್ಟು ಮಗಳ ಫೋಟೋ ಹಂಚಿಕೊಳ್ಳಲು ಕೋರಿದ್ದಾರೆ.
Rajath Kishan: ಎಫ್ಐಆರ್ ಆದ್ರೂ ಲಾಂಗ್ ಹಿಡಿದು ರೀಲ್ಸ್ ಮಾಡಿದ ವಿಡಿಯೋವನ್ನು ಇನ್ನೂ ಡಿಲೀಟ್ ಮಾಡದ ರಜತ್