BBK 11 Finale, Rajath Kishan: ತಪ್ಪು ಮಾಡೋದು ಸಹಜ ಕಣೊ, ತಿದ್ದಿ ನಡೆಯೋನು ರಜತ ಕಣೊ ಎಂಬ ಬುಜ್ಜಿ
ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಎಂಟರ್ಟೈನ್ಮೆಂಟ್ ಅನ್ನು ಸಹ ರಜತ್ ನೀಡುತ್ತಾ ಬಂದಿದ್ದಾರೆ. ಡೈಲಾಗ್ಗಳನ್ನು ಹೊಡೆದುಕೊಂಡು ತಮಾಷೆ ಮಾಡುತ್ತಿರುತ್ತಾರೆ. ಇದೀಗ ಪ್ರೇಕ್ಷಕ ಪ್ರಭುಗಳ ಮುಂದೆ ಕೂಡ ಡೈಲಾಗ್ ಹೊಡೆದು ಮತ ಕೇಳಿದ್ದಾರೆ.

Rajath Kishan

ಬಿಗ್ ಬಾಸ್ ಸೀಸನ್ 11ರ (Bigg Boss Kannada 11) ಅದ್ಧೂರಿ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೇವಲ ಒಂದು ದಿನಗಳು ಮಾತ್ರ ಉಳಿದಿದೆ. ಇಡೀ ನಾಡಿನ ಕುತೂಹಲ ಹೆಚ್ಚಿಸಿರುವ ಈ ಶೋನ ವಿನ್ನರ್ ಯಾರು?, ಕಪ್ ಯಾರು ಗೆಲ್ಲುತ್ತಾರೆ ಎನ್ನುವುದು ಫಿನಾಲೆಯಲ್ಲಿ ಗೊತ್ತಾಗಲಿದೆ. ಕಳೆದ ಬಿಗ್ ಬಾಸ್ನಂತೆ ಈ ಬಾರಿಯ ಫಿನಾಲೆಗೆ 6 ಸ್ಪರ್ಧಿಗಳು ಉಳಿದುಕೊಂಡಿದ್ದು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಉಗ್ರಂ ಮಂಜು, ತ್ರಿವಿಕ್ರಮ್, ಭವ್ಯಾ ಗೌಡ, ಮೋಕ್ಷಿತಾ ಪೈ, ಹನುಮಂತ ಹಾಗೂ ರಜತ್ ಕಿಶನ್ ನಡುವೆ ಒಬ್ಬರಿಗೆ ಮಾತ್ರ ಆ ಅದೃಷ್ಟ ಒಲಿದು ಬರಲಿದೆ.
ಹೀಗಿರುವಾಗ ಈ ಆರೂ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿನ ತಮ್ಮ ಅನುಭವಗಳನ್ನು ಜನರ ಜೊತೆ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಜರ್ನಿ ಹೇಗಿತ್ತು, ಅಲ್ಲಿನ ಅಡೆತಡೆಗಳು ಏನು, ಯಾರು ಟಾರ್ಗೆಟ್ ಮಾಡಿದರು, ಟಾಸ್ಕ್ಗಳನ್ನು ಹೇಗೆಲ್ಲಾ ಆಡಲಾಯಿತು ಎನ್ನುವ ಮಾಹಿತಿಯನ್ನು ಅಭಿಮಾನಿ ದೇವರುಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ. ನನಗೆ ವೋಟ್ ಮಾಡಿ ಗೆಲ್ಲಿಸಿ ಎಂದು ತಮ್ಮದೇ ಮಾದರಿಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ವೋಟ್ ಕೇಳಿದ್ದಾರೆ.
ಇದಕ್ಕಾಗಿ ಬಿಗ್ ಬಾಸ್ ವೇದಿಕೆ ಕೂಡ ಸಿದ್ಧ ಪಡಿಸಿದ್ದರು. ಗಾರ್ಡರ್ ಏರಿಯಾ ಪೂರ್ತಿ ಅಭಿಮಾನಿಗಳು ತುಂಬಿದ್ದು ತಮ್ಮ ನೆಚ್ಚಿನ ಸ್ಪರ್ಧಿಗಳ ಪೋಸ್ಟರ್ ಹಿಡಿದು ಲವ್ ಯು ತ್ರಿವಿಕ್ರಮ್, ವೋಟ್ ಫಾರ್ ಹನುಮಂತ ಎಂದೆಲ್ಲ ಬರೆದುಕೊಂಡು ಬಂದಿದ್ದಾರೆ. ಫಿನಾಲೆ ಕಂಟೆಸ್ಟೆಂಟ್ಗಳು ಒಬ್ಬೊಬ್ಬರಾಗಿ ಗಾರ್ಡರ್ ಏರಿಯಾದಲ್ಲಿರುವ ಕಟಕಟೆಯಲ್ಲಿ ನಿಂತು ತಮ್ಮ ಜರ್ನಿಯ ಬಗ್ಗೆ ಹೇಳಿ ವೋಟ್ ಮಾಡುವಂತೆ ಕೇಳಿಕೊಳ್ಳಬೇಕು ಎಂದು ಬಿಗ್ ಬಾಸ್ ಹೇಳಿದರು.
ಸುದೀಪ್ ಹೇಳಿರುವಂತೆ ರಜತ್ ಪಕ್ಕಾ ಬಿಗ್ ಬಾಸ್ ಆಟಗಾರ. ಈ ಆಟವನ್ನು ಹೇಗೆ ಆಡಬೇಕು ಎಂಬುದು ಅವರಿಗೆ ಗೊತ್ತು. ಬಿಗ್ ಬಾಸ್ ಮನೆಯಲ್ಲಿ ಯಾರೊಂದಿಗೂ ಸಹ ಅಟ್ಯಾಚ್ಮೆಂಟ್ ಬೆಳೆಸಿಕೊಂಡಿಲ್ಲ. ರಜತ್ ಮೊದಲಿನಿಂದಲೂ ಹೇಳುತ್ತಿರುವುದು ಒಂದೇ ಮಾತು, ನಾನು ನನಗಾಗಿ ಆಡುತ್ತೇನೆ, ನಾನು ಗೆಲ್ಲಲು ಮಾತ್ರ ಆಡುತ್ತೇನೆ, ಬೇರೆಯರನ್ನು ಗೆಲ್ಲಿಸಲು ಅಲ್ಲ ಎಂದು. ಅದಕ್ಕೆ ತಕ್ಕಂತೆ ಅವರು ಆಡುತ್ತಾ ಬಂದಿದ್ದಾರೆ.
ತಪ್ಪು-ಒಪ್ಪುಗಳ ಮೇಳದಲ್ಲಿ ಗೆಲ್ಲೋ ಸ್ಪರ್ಧಿ ಯಾರು?
— Colors Kannada (@ColorsKannada) January 24, 2025
ಬಿಗ್ ಬಾಸ್ ಕನ್ನಡ ಸೀಸನ್ 11 | ಇಂದು ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/MDDQH05sVs
ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಎಂಟರ್ಟೈನ್ಮೆಂಟ್ ಅನ್ನು ಸಹ ರಜತ್ ನೀಡುತ್ತಾ ಬಂದಿದ್ದಾರೆ. ಡೈಲಾಗ್ಗಳನ್ನು ಹೊಡೆದುಕೊಂಡು ತಮಾಷೆ ಮಾಡುತ್ತಿರುತ್ತಾರೆ. ಇದೀಗ ಪ್ರೇಕ್ಷಕ ಪ್ರಭುಗಳ ಮುಂದೆ ಕೂಡ ಡೈಲಾಗ್ ಹೊಡೆದು ಮತ ಕೇಳಿದ್ದಾರೆ. ರಜತ್ ಮಾತನಾಡಿ, ನನ್ನಮ್ಮ ಯಾವಾಗಲೂ ಹೇಳೋರು. ಮಗನೇ ಹಿಂಗೆ ಇರಬೇಡ ಕಣೋ. ಯಾರು ಇಷ್ಟಪಡಲ್ಲ ಅಂತ. ನನ್ನ ಕ್ಯಾರೆಕ್ಟರ್ ನಾನು ಚೇಂಜ್ ಮಾಡಿಕೊಳ್ಳಬೇಕಾ?. ತಪ್ಪುಗಳು ನನ್ನ ಕಡೆಯಿಂದಲೂ ಆಗಿದೆ. ತಪ್ಪು ಮಾಡೋದು ಸಹಜ ಕಣೋ, ತಿದ್ದಿ ನಡೆಯೋನು ರಜತ ಕಣೋ ಎಂದು ಡೈಲಾಗ್ ಹೇಳಿದ್ದಾರೆ. ಇದನ್ನು ಕೇಳಿ ಬಂದಿದ್ದ ಫ್ಯಾನ್ಸ್ ಶಿಳ್ಳೆ ಹೊಡೆದಿದ್ದಾರೆ.