ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮುಗ್ಧ ಮನಸ್ಸಿನ ಸ್ಪರ್ಧಿಯಾಗಿ ಇಡೀ ಕರ್ನಾಟಕದ ಮನೆಮಾತಾದ ಧನರಾಜ್ ಆಚಾರ್ (Dhanraj Achar) ಅಂತಿಮ ಹಂತದಲ್ಲಿ ಎಲಿಮಿನೇಟ್ ಆಗಿ ಆಚೆ ಬಂದರು. ಬಿಬಿಕೆ 11 ಫಿನಾಲೆಗೆ ಒಂದು ವಾರ ಇರುವಾಗ ದೊಡ್ಮನೆಯಿಂದ ಹೊರಬಂದರು. ಹನುಮಂತನ ಜೊತೆಗೆ ಇವರ ಒಡನಾಟ ಕಂಡು ಕರ್ನಾಟಕ ಮಂದಿಯ ಹೃದಯದಲ್ಲಿ ದೋಸ್ತಾ ಎಂಬ ಸ್ಥಾನ ಪಡೆದಿದದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಾಮಾಣಿಕತೆ, ಮುಗ್ಧತೆ ಹಾಗೂ ಕಾಮಿಡಿಯಿಂದಲೇ ಫೇಮಸ್ ಆಗಿದ್ದ ಧನರಾಜ್ ಫಿನಾಲೆ ವಾರಕ್ಕೆ ಎಂಟ್ರಿ ಆಗಬೇಕಿತ್ತು ಎಂದು ಅನೇಕರು ಹೇಳಿದ್ದೂ ಉಂಟು.
ಬಿಗ್ ಬಾಸ್ ಮುಗಿದ ಬಳಿಕ ಇವರು ಬಾಯ್ಸ್ vs ಗರ್ಲ್ಸ್ ಶೋ ನಲ್ಲಿ ನಗುಸಿದರು. ಈಗ ಕ್ವಾಟ್ಲೆ ಕಿಚನ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಮಧ್ಯೆ ಧನು ತಮ್ಮ ಮಗಳು ಪ್ರಸಿದ್ಧಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಹೌದು, ಧನರಾಜ್ ಆಚಾರ್ ದಂಪತಿ ತಮ್ಮ ಮುದ್ದಾದ ಮಗಳು ಪ್ರಸಿದ್ಧಿಯ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಹೆಣ್ಣು ಮಗುವನ್ನ ಧನರಾಜ್ ಆಚಾರ್ - ಪ್ರಜ್ಞಾ ದಂಪತಿ ಬರಮಾಡಿಕೊಂಡಿದ್ದರು.
ಇನ್ನೂ, ಧನರಾಜ್ ಆಚಾರ್ ಮಗಳ ಹುಟ್ಟು ಹಬ್ಬಕ್ಕೆ ಚೈತ್ರಾ ಕುಂದಾಪುರ ದಂಪತಿಯೂ ಬಂದಿದ್ದರು. ಜೊತೆಗೆ ಕುಟುಂಬಸ್ಥರು, ಆಪ್ತರು, ಚಿನ್ನರು ಹಾಜರಿದ್ದರು. ವೇದಿಕೆ ಮೇಲೆ ನಿಂತುಕೊಂಡು ಪ್ರಸಿದ್ಧಿಯ ಬರ್ತ್ ಡೇ ಕೇಕ್ ಕಟ್ ಮಾಡಿಸಲಾಗಿದೆ. ಮಗಳ ಬರ್ತ್‌ಡೇಗೆ ಧನರಾಜ್ ಆಚಾರ್ ಮತ್ತು ಪ್ರಜ್ಞಾ ಕಪ್ಪು ಬಣ್ಣದ ಉಡುಗೆ ತೊಟ್ಟು ಮುದ್ದಾಗಿ ಕಾಣುತ್ತಿದ್ದರು. ಬೇಬಿ ಪ್ರಸಿದ್ಧಿಗೆ ಗೋಲ್ಡನ್ ಬಣ್ಣದ ಫ್ರಾಕ್ ತೊಡಿಸಲಾಗಿತ್ತು. ಸದ್ಯ ಈ ಎಲ್ಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Bhagya Lakshmi Serial: ಗುಂಡಣ್ಣನಿಗೆ ಬಾಕ್ಸಿಂಗ್ ಹೇಳಿ ಕೊಡಲು ಮುಂದಾದ ಆದೀಶ್ವರ್